ICC Awards 2022: ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶಿತರಾಗಿರುವ ಕ್ರಿಕೆಟರುಗಳ ಸಂಪೂರ್ಣ ಪಟ್ಟಿ ಇಲ್ಲಿದೆ
ICC Awards 2022: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2022ರ ಟೆಸ್ಟ್ ಕ್ರಿಕೆಟಿಗರ ಪ್ರಶಸ್ತಿಗೆ ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಒಟ್ಟು ನಾಲ್ವರು ಆಟಗಾರರು ಸ್ಥಾನ ಪಡೆದಿದ್ದಾರೆ. ಆದರೆ ಇದರಲ್ಲಿ ಟೀಮ್ ಇಂಡಿಯಾದ ಯಾವುದೇ ಆಟಗಾರ ಸ್ಥಾನ ಪಡೆದಿಲ್ಲ ಎಂಬುದೇ ಅಚ್ಚರಿ.
ICC Awards 2022: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ವರ್ಷದ (2022) ಕ್ರಿಕೆಟರುಗಳ ಪ್ರಶಸ್ತಿಗಾಗಿ ನಾಮನಿರ್ದೇಶಿತ ಪಟ್ಟಿಯನ್ನು ಪ್ರಕಟಿಸಿದೆ. ಒಟ್ಟು ಒಂಬತ್ತು ವಿಭಾಗಗಳಲ್ಲಿ ಐಸಿಸಿ ವಾರ್ಷಿಕ ಪ್ರಶಸ್ತಿ ನೀಡಲಿದ್ದು, ಈ ಪ್ರಶಸ್ತಿಗಳಿಗೆ ನಾಮನಿರ್ದೇಶಿತರಾಗಿರುವವರಿಗೆ ಕ್ರಿಕೆಟ್ ಅಭಿಮಾನಿಗಳು icc-cricket.com ಮೂಲಕ ವೋಟ್ ಹಾಕಬಹುದು. ಈ ಮೂಲಕ ಆಯಾ ವಿಭಾಗದಲ್ಲಿ ವಿಜೇತರಾದ ಕ್ರಿಕೆಟರುಗಳ ಹೆಸರುಗಳನ್ನು ಜನವರಿ 2023 ರಲ್ಲಿ ಘೋಷಿಸಲಾಗುತ್ತದೆ.
ಐಸಿಸಿ ಪ್ರಶಸ್ತಿಗೆ ನಾಮನಿರ್ದೇಶಿತರ ಸಂಪೂರ್ಣ ಪಟ್ಟಿ ಇಲ್ಲಿದೆ:
ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ- ಸರ್ ಗಾರ್ಫೀಲ್ಡ್ ಸೋಬರ್ಸ್ ಟ್ರೋಫಿಗೆ ನಾಮನಿರ್ದೇಶಿತರು:
- ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
- ಸಿಕಂದರ್ ರಜಾ (ಜಿಂಬಾಬ್ವೆ)
- ಟಿಮ್ ಸೌಥಿ (ನ್ಯೂಜಿಲೆಂಡ್)
- ಬಾಬರ್ ಆಜಂ (ಪಾಕಿಸ್ತಾನ್)
ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ- ರಾಚೆಲ್ ಹೇಹೋ ಫ್ಲಿಂಟ್ ಟ್ರೋಫಿಗೆ ನಾಮನಿರ್ದೇಶಿತರು:
- ಸ್ಮೃತಿ ಮಂಧಾನ (ಭಾರತ)
- ಬೆತ್ ಮೂನಿ (ಆಸ್ಟ್ರೇಲಿಯಾ)
- ನ್ಯಾಟ್ ಸ್ಕಿವರ್ (ಇಂಗ್ಲೆಂಡ್)
- ಅಮೆಲಿಯಾ ಕೆರ್ (ನ್ಯೂಜಿಲೆಂಡ್)
ಐಸಿಸಿ ಪುರುಷರ ವರ್ಷದ ಟೆಸ್ಟ್ ಕ್ರಿಕೆಟಿಗ- ನಾಮನಿರ್ದೇಶಿತರು:
- ಬೆನ್ ಸ್ಟೋಕ್ಸ್ (ಇಂಗ್ಲೆಂಡ್)
- ಜಾನಿ ಬೈರ್ಸ್ಟೋವ್ (ಇಂಗ್ಲೆಂಡ್)
- ಉಸ್ಮಾನ್ ಖ್ವಾಜಾ (ಆಸ್ಟ್ರೇಲಿಯಾ)
- ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ)
ಐಸಿಸಿ ಪುರುಷರ ಏಕದಿನ ವರ್ಷದ ಕ್ರಿಕೆಟಿಗ-ನಾಮನಿರ್ದೇಶಿತರು:
- ಬಾಬರ್ ಆಜಂ (ಪಾಕಿಸ್ತಾನ)
- ಆ್ಯಡಂ ಝಂಪಾ (ಆಸ್ಟ್ರೇಲಿಯಾ)
- ಸಿಕಂದರ್ ರಾಜಾ (ಜಿಂಬಾಬ್ವೆ)
- ಶಾಯ್ ಹೋಪ್ (ವೆಸ್ಟ್ ಇಂಡೀಸ್)
ಐಸಿಸಿ ಮಹಿಳಾ ಏಕದಿನ ವರ್ಷದ ಆಟಗಾರ್ತಿ-ನಾಮನಿರ್ದೇಶಿತರು:
- ಶಬ್ನಿಮ್ ಇಸ್ಮಾಯಿಲ್ (ದಕ್ಷಿಣ ಆಫ್ರಿಕಾ)
- ಅಮೆಲಿಯಾ ಕೆರ್ (ನ್ಯೂಜಿಲೆಂಡ್)
- ನ್ಯಾಟ್ ಸ್ಕಿವರ್ (ಇಂಗ್ಲೆಂಡ್)
- ಅಲಿಸ್ಸಾ ಹೀಲಿ (ಆಸ್ಟ್ರೇಲಿಯಾ)
ಐಸಿಸಿ ಪುರುಷರ ಟಿ20 ವರ್ಷದ ಕ್ರಿಕೆಟಿಗ-ನಾಮನಿರ್ದೇಶಿತರು:
- ಸೂರ್ಯಕುಮಾರ್ ಯಾದವ್ (ಭಾರತ)
- ಸಿಕಂದರ್ ರಾಜಾ (ಜಿಂಬಾಬ್ವೆ)
- ಸ್ಯಾಮ್ ಕರನ್ (ಇಂಗ್ಲೆಂಡ್)
- ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ)
ಐಸಿಸಿ ಮಹಿಳಾ ಟಿ20 ವರ್ಷದ ಆಟಗಾರ್ತಿ-ನಾಮನಿರ್ದೇಶಿತರು:
- ಸ್ಮೃತಿ ಮಂಧಾನ (ಭಾರತ)
- ನಿದಾ ದಾರ್ (ಪಾಕಿಸ್ತಾನ)
- ಸೋಫಿ ಡಿವೈನ್ (ನ್ಯೂಜಿಲೆಂಡ್)
- ತಹ್ಲಿಯಾ ಮೆಕ್‌ಗ್ರಾತ್ (ಆಸ್ಟ್ರೇಲಿಯಾ)
ಇದನ್ನೂ ಓದಿ: IPL 2023: RCB ಪ್ಲೇಯಿಂಗ್ ಇಲೆವೆನ್ನಲ್ಲಿ ಬದಲಾವಣೆ ಕಂಡು ಬರುವುದು ಡೌಟ್, ಏಕೆಂದರೆ…
ಐಸಿಸಿ ಪುರುಷರ ವರ್ಷದ ಉದಯೋನ್ಮುಖ ಕ್ರಿಕೆಟಿಗ- ನಾಮನಿರ್ದೇಶಿತರು:
- ಮಾರ್ಕೊ ಯಾನ್ಸೆನ್ (ದಕ್ಷಿಣ ಆಫ್ರಿಕಾ)
- ಇಬ್ರಾಹಿಂ ಜದ್ರಾನ್ (ಅಫ್ಘಾನಿಸ್ತಾನ)
- ಫಿನ್ ಅಲೆನ್ (ನ್ಯೂಜಿಲೆಂಡ್)
- ಅರ್ಷದೀಪ್ ಸಿಂಗ್ (ಭಾರತ)
ಐಸಿಸಿ ವರ್ಷದ ಮಹಿಳಾ ಉದಯೋನ್ಮುಖ ಆಟಗಾರ್ತಿ:
- ರೇಣುಕಾ ಸಿಂಗ್ (ಭಾರತ)
- ಡಾರ್ಸಿ ಬ್ರೌನ್ (ಆಸ್ಟ್ರೇಲಿಯಾ)
- ಆಲಿಸ್ ಕ್ಯಾಪ್ಸೆ (ಇಂಗ್ಲೆಂಡ್)
- ಯಾಸ್ತಿಕಾ ಭಾಟಿಯಾ (ಭಾರತ)