ಬೌಂಡರಿ ಹೊಡೆದ ಬಳಿಕ ಕಾಣಿಸಿಕೊಂಡ ಎದೆ ನೋವು; ಮೈದಾನದಲ್ಲೇ ಉಸಿರು ಚೆಲ್ಲಿದ ಪ್ರತಿಭಾವಂತ ಕ್ರಿಕೆಟಿಗ

Cricketer Imran Patel: ಪಂದ್ಯ ನಡೆಯುವಾಗಲೇ ಹೃದಯಾಘಾತವಾಗಿ ಪ್ರತಿಭಾವಂತ ಕ್ರಿಕೆಟಿಗನೊಬ್ಬ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ ಜಿಲ್ಲೆಯಲ್ಲಿ ನಡೆದಿದೆ. ಇಮ್ರಾನ್ ಸಿಕಂದರ್ ಪಟೇಲ್ ಮೈದಾನದಲ್ಲಿಯೇ ಸಾವನ್ನಪ್ಪಿರುವ ದುರ್ದೈವಿ ಕ್ರಿಕೆಟಿಗ ಎಂದು ತಿಳಿದುಬಂದಿದೆ.

ಬೌಂಡರಿ ಹೊಡೆದ ಬಳಿಕ ಕಾಣಿಸಿಕೊಂಡ ಎದೆ ನೋವು; ಮೈದಾನದಲ್ಲೇ ಉಸಿರು ಚೆಲ್ಲಿದ ಪ್ರತಿಭಾವಂತ ಕ್ರಿಕೆಟಿಗ
ಇಮ್ರಾನ್ ಸಿಕಂದರ್ ಪಟೇಲ್
Follow us
ಪೃಥ್ವಿಶಂಕರ
|

Updated on:Nov 29, 2024 | 6:36 PM

ಪಂದ್ಯ ನಡೆಯುವಾಗಲೇ ಹೃದಯ ಸ್ತಂಭನವಾಗಿ (Cardiac Arrest) ಪ್ರತಿಭಾವಂತ ಕ್ರಿಕೆಟಿಗನೊಬ್ಬ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಛತ್ರಪತಿ ಸಂಭಾಜಿ ನಗರ ಜಿಲ್ಲೆಯಲ್ಲಿ ನಡೆದಿದೆ. ಇಮ್ರಾನ್ ಸಿಕಂದರ್ ಪಟೇಲ್ ಮೈದಾನದಲ್ಲಿಯೇ ಸಾವನ್ನಪ್ಪಿರುವ ದುರ್ದೈವಿ ಕ್ರಿಕೆಟಿಗ ಎಂದು ತಿಳಿದುಬಂದಿದೆ. ವರದಿಗಳ ಪ್ರಕಾರ, ಗರವಾಡೆ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಲಕ್ಕಿ ಬಿಲ್ಡರ್ಸ್ ಮತ್ತು ಡೆವಲಪರ್ಸ್ ಹಾಗೂ ಯಂಗ್ ಇಲೆವೆನ್ ನಡುವಿನ ಪಂದ್ಯದಲ್ಲಿ 35 ವರ್ಷದ ಇಮ್ರಾನ್ ಲಕ್ಕಿ ಬಿಲ್ಡರ್ಸ್ ತಂಡದವನ್ನು ಪ್ರತಿನಿಧಿಸುವುದರ ಜೊತೆಗೆ ತಂಡದ ನಾಯಕತ್ವವನ್ನು ನಿರ್ವಹಿಸುತ್ತಿದ್ದರು.

ಹೃದಯ ಸ್ತಂಭನಕ್ಕೆ ಬಲಿ

ಈ ಪಂದ್ಯದಲ್ಲಿ ಲಕ್ಕಿ ಬಿಲ್ಡರ್ಸ್ ಪರ ಆಡುತ್ತಿದ್ದ ಇಮ್ರಾನ್ ಪಟೇಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಪಂದ್ಯದ ಆರನೇ ಓವರ್‌ನಲ್ಲಿ ಅವರು ಸತತ ಎರಡು ಬೌಂಡರಿಗಳನ್ನು ಹೊಡೆದರು. ಆದರೆ ಇದಾದ ನಂತರ ಇಮ್ರಾನ್​ಗೆ ಇದ್ದಕ್ಕಿದ್ದಂತೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಇಮ್ರಾನ್, 7ನೇ ಓವರ್​ ಆರಂಭಕ್ಕೂ ಮುನ್ನ ಈ ಬಗ್ಗೆ ಅಂಪೈರ್ ಬಳಿ ಹೇಳಿಕೊಂಡಿದ್ದಾರೆ. ಅವರ ಗಂಭೀರ ಸ್ಥಿತಿಯನ್ನು ಕಂಡು ಮೈದಾನದಲ್ಲಿದ್ದ ಅಂಪೈರ್‌ಗಳು ಕೂಡಲೇ ಆಸ್ಪತ್ರೆಗೆ ತೆರಳುವಂತೆ ಸೂಚಿಸಿದ್ದಾರೆ.

ಇದಾದ ಬಳಿಕ ಇಮ್ರಾನ್ ಮೈದಾನದಿಂದ ಹೊರಗೆ ಹೋಗಲು ಆರಂಭಿಸಿದರಾದರೂ ಬೌಂಡರಿ ತಲುಪಿದ ಕೂಡಲೇ ಏಕಾಏಕಿ ಕೆಳಗೆ ಕುಸಿದು ಬಿದ್ದಿದ್ದಾರೆ. ಇದನ್ನು ಕಂಡು ಎಲ್ಲಾ ಆಟಗಾರರು ಹಾಗೂ ಪಂದ್ಯದ ಅಧಿಕಾರಿಗಳು ಆತಂಕಗೊಂಡು, ಆದಷ್ಟು ಬೇಗ ಇಮ್ರಾನ್ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ತಲುಪಿದ ನಂತರ ವೈದ್ಯರು ಇಮ್ರಾನ್ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಇಮ್ರಾನ್​ಗೆ ಮೂವರು 3 ಹೆಣ್ಣು ಮಕ್ಕಳು

35 ವರ್ಷದ ಇಮ್ರಾನ್​ಗೆ ಮೂವರು ಹೆಣ್ಣು ಮಕ್ಕಳಿದ್ದು, ಅವರ ಮರಣದ ನಂತರ ಇಡೀ ಕುಟುಂಬಕ್ಕೆ ದಿಕ್ಕು ತೋಚದಂತ್ತಾಗಿದೆ. ಪತ್ನಿ, ತಾಯಿ ಸೇರಿದಂತೆ ಇಡೀ ಕುಟುಂಬದಲ್ಲಿ ಶೋಕ ಮಡುಗಟ್ಟಿದೆ. ಇಮ್ರಾನ್ ಸಾವಿನಿಂದ ಸ್ಥಳೀಯ ಆಟಗಾರರು ಸಹ ಆಘಾತಕ್ಕೊಳಗಾಗಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:34 pm, Fri, 29 November 24

ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ