ಮಾರ್ಚ್​ 14ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಲಿರುವ ಟೀಂ ಇಂಡಿಯಾ ಸ್ಟಾರ್ ಆಟಗಾರ

Kuldeep Yadav Wedding: ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾದ ಸ್ಪಿನ್ನರ್ ಕುಲ್ದೀಪ್ ಯಾದವ್ ಮಾರ್ಚ್ 14, 2026 ರಂದು ವಂಶಿಕಾ ಅವರನ್ನು ಮಸ್ಸೂರಿಯ ಸುಂದರ ಗಿರಿಧಾಮದಲ್ಲಿ ವಿವಾಹವಾಗಲಿದ್ದಾರೆ. ಭಾರತದ ಕಾರ್ಯನಿರತ ಕ್ರಿಕೆಟ್ ವೇಳಾಪಟ್ಟಿಯಿಂದ ವಿವಾಹ ಮುಂದೂಡಲಾಗಿತ್ತು. ಲಕ್ನೋದಲ್ಲಿ ಭವ್ಯ ಆರತಕ್ಷತೆ ಆಯೋಜಿಸಲಾಗಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಕ್ರಿಕೆಟ್ ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ.

ಮಾರ್ಚ್​ 14ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಲಿರುವ ಟೀಂ ಇಂಡಿಯಾ ಸ್ಟಾರ್ ಆಟಗಾರ
Kuldeep Yadav

Updated on: Mar 10, 2026 | 7:28 PM

ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ ಮೂರನೇ ಬಾರಿಗೆ ಟಿ20 ವಿಶ್ವಕಪ್ (T20 World Cup) ಎತ್ತಿಹಿಡಿದಿದೆ. ಈ ಸಂಭ್ರಮದೊಂದಿಗೆ ತಂಡದ ಎಲ್ಲಾ ಆಟಗಾರರು ತಮ್ಮ ತಮ್ಮ ಮನೆಗಳತ್ತ ಪ್ರಯಾಣ ಬೆಳೆಸಿದ್ದಾರೆ. ಬಳಿಕ ಎಲ್ಲಾ ಆಟಗಾರರು ಮುಂಬರುವ ಐಪಿಎಲ್​ನಲ್ಲಿ (IPL) ಕಣಕ್ಕಿಳಿಯಲಿದ್ದಾರೆ. ಆದರೆ ಅದಕ್ಕೂ ಮುನ್ನ ಟೀಂ ಇಂಡಿಯಾದ ಆಟಗಾರನೊಬ್ಬನಿಗೆ ಕಂಕಣ ಭಾಗ್ಯ ಕೂಡಿಬಂದಿದ್ದು ವೈಯಕ್ತಿಕ ಜೀವನದಲ್ಲಿ ಹೊಸ ಇನ್ನಿಂಗ್ಸ್ ಪ್ರಾರಂಭಿಸಲಿದ್ದಾರೆ. ತಂಡದ ಸ್ಟಾರ್ ಸ್ಪಿನ್ನರ್ ಕುಲ್ದೀಪ್ ಯಾದವ್ (Kuldeep Yadav) ಮಾರ್ಚ್ 14, 2026 ರಂದು ವಂಶಿಕಾ (Vanshika) ಅವರನ್ನು ವಿವಾಹವಾಗಲಿದ್ದಾರೆ. ವಿವಾಹ ಸಮಾರಂಭವು ಉತ್ತರಾಖಂಡದ ಮುಸ್ಸೂರಿಯ ಸುಂದರ ಗಿರಿಧಾಮದಲ್ಲಿರುವ ಐಷಾರಾಮಿ ರೆಸಾರ್ಟ್‌ನಲ್ಲಿ ನಡೆಯಲಿದೆ. ಈ ವಿಶೇಷ ಸಂದರ್ಭದಲ್ಲಿ ನಿಕಟ ಸಂಬಂಧಿಗಳು ಮತ್ತು ಎರಡೂ ಕುಟುಂಬಗಳ ಆಯ್ದ ಅತಿಥಿಗಳು ಭಾಗವಹಿಸಲಿದ್ದಾರೆ.

ಕುಲ್ದೀಪ್​ಗೆ ಕೂಡಿಬಂತು ಕಂಕಣ ಭಾಗ್ಯ

ಮದುವೆಗೆ ಒಂದು ದಿನ ಮೊದಲು ಮಾರ್ಚ್ 13 ರಂದು ಅರಿಶಿನ ಮತ್ತು ಮೆಹೆಂದಿ ಸಮಾರಂಭವನ್ನು ಆಯೋಜಿಸಲಾಗಿದೆ. ಈ ಸಾಂಪ್ರದಾಯಿಕ ಸಮಾರಂಭದಲ್ಲಿ ಕುಟುಂಬ ಮತ್ತು ಆಪ್ತರು ಭಾಗವಹಿಸಲಿದ್ದಾರೆ. ವಾಸ್ತವವಾಗಿ ಜೂನ್ 4, 2025 ರಂದು ಕುಲ್ದೀಪ್ ಮತ್ತು ವಂಶಿಕಾ ಲಕ್ನೋದ ಹೋಟೆಲ್‌ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಹಾಗೆಯೇ ಇಬ್ಬರ ವಿವಾಹವು ನವೆಂಬರ್ 2025 ಕ್ಕೆ ನಿಗದಿಯಾಗಿತ್ತು. ಆದರೆ ಭಾರತೀಯ ಕ್ರಿಕೆಟ್ ತಂಡದ ಕಾರ್ಯನಿರತ ಕ್ಯಾಲೆಂಡರ್ ಮತ್ತು ಟಿ20 ವಿಶ್ವಕಪ್ ತಂಡದಲ್ಲಿ ಕುಲ್ದೀಪ್ ಅವರ ಆಯ್ಕೆಯಿಂದಾಗಿ, ವಿವಾಹ ದಿನಾಂಕವನ್ನು ಮುಂದೂಡಲಾಯಿತು.

ಸಮಾರಂಭದಲ್ಲಿ ಗಣ್ಯರು ಬಾಗಿ

ಕುಲ್ದೀಪ್ ಯಾದವ್ ಅವರ ತಂದೆ ರಾಮ್‌ಸಿನ್ಹ್ ಯಾದವ್ ಅವರು ಮಾರ್ಚ್ 8 ರಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿ ವಿವಾಹ ಆರತಕ್ಷತೆಗೆ ಹಾಜರಾಗಲು ಆಹ್ವಾನ ನೀಡಿದ್ದಾರೆ. ವಿವಾಹದ ನಂತರ, ಮಾರ್ಚ್ 17 ರಂದು ಲಕ್ನೋದ ಹೋಟೆಲ್ ಸೆಂಟ್ರಮ್‌ನಲ್ಲಿ ಭವ್ಯ ಆರತಕ್ಷತೆ ಏರ್ಪಡಿಸಲಾಗಿದೆ. ಈ ಸಮಾರಂಭದಲ್ಲಿ ಬಿಸಿಸಿಐ ಮತ್ತು ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್‌ನ ಅಧಿಕಾರಿಗಳು, ಭಾರತೀಯ ಕ್ರಿಕೆಟ್ ತಂಡದ ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಮತ್ತು ಇತರ ಅತಿಥಿಗಳು ಭಾಗವಹಿಸಬಹುದು.

Team India: ಕಳೆದ 21 ತಿಂಗಳಲ್ಲಿ 365 ಕೋಟಿ ರೂ. ಬಹುಮಾನ ಗೆದ್ದ ಟೀಂ ಇಂಡಿಯಾ

ಕುಲ್ದೀಪ್ ವೃತ್ತಿಜೀವನ

ಕುಲ್ದೀಪ್ ಯಾದವ್ ಭಾರತ ಟಿ20 ವಿಶ್ವಕಪ್ ತಂಡದಲ್ಲಿದ್ದರು. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಅವಕಾಶ ಪಡೆದಿದ್ದ ಕುಲ್ದೀಪ್ ಕೇವಲ 14 ರನ್‌ ನೀಡಿ ಒಂದು ವಿಕೆಟ್ ಪಡೆದಿದ್ದರು. ಆದರೆ ಈ ಪಂದ್ಯದ ನಂತರ ಕುಲ್ದೀಪ್​ಗೆ ಆಡುವ ಅವಕಾಶ ಸಿಗಲಿಲ್ಲ ಆದಾಗ್ಯೂ ಕುಲ್ದೀಪ್ ಯಾದವ್ ಮೂರು ಸ್ವರೂಪಗಳಲ್ಲಿ 191 ಪಂದ್ಯಗಳನ್ನು ಆಡಿದ್ದು, 22.50 ಸರಾಸರಿ ಮತ್ತು 4.84 ರ ಎಕಾನಮಿ ದರದಲ್ಲಿ 365 ವಿಕೆಟ್‌ಗಳನ್ನು ಪಡೆದಿದ್ದಾರೆ. 31 ವರ್ಷದ ಕುಲ್ದೀಪ್ ಯಾದವ್ ಇದುವರೆಗೆ 9 ಬಾರಿ ಐದು ಅಥವಾ ಅದಕ್ಕಿಂತ ಹೆಚ್ಚು ವಿಕೆಟ್‌ಗಳನ್ನು ಪಡೆದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us