Updated on: Jul 04, 2021 | 7:56 AM
ಭಾರತೀಯ ಪುರುಷರ ತಂಡದಂತೆಯೇ, ಭಾರತೀಯ ಮಹಿಳಾ ಕ್ರಿಕೆಟ್ ತಂಡವು ಪ್ರಸ್ತುತ ಇಂಗ್ಲೆಂಡ್ ಪ್ರವಾಸದಲ್ಲಿದೆ. ಏಕೈಕ ಟೆಸ್ಟ್ ಪಂದ್ಯದ ಡ್ರಾ ನಂತರ, ಭಾರತ ಮತ್ತು ಇಂಗ್ಲೆಂಡ್ ನಡುವೆ ಏಕದಿನ ಸರಣಿಯನ್ನು ಆಡಲಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ, ಬ್ಯಾಟಿಂಗ್ ಸಾಧನೆ ಕಳಪೆಯಿಂದಾಗಿ ಭಾರತ ಸೋತಿದೆ. ಆದರೆ ಮಹಿಳಾ ತಂಡದ ನಾಯಕಿ ಮಿಥಾಲಿ ರಾಜ್ ಆಂಗ್ಲರ ನಾಡಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿದಂತೆ ಅನೇಕ ಅನುಭವಿಗಳನ್ನು ಮೀರಿಸಿ ವಿಶಿಷ್ಠ ದಾಖಲೆ ಬರೆದಿದ್ದಾರೆ.
ಮಿಥಾಲಿ ಮೊದಲ ಏಕದಿನ ಪಂದ್ಯದಲ್ಲಿ 72 ಮತ್ತು ಎರಡನೇ ಏಕದಿನ ಪಂದ್ಯದಲ್ಲಿ 59 ರನ್ ಗಳಿಸಿದರು. ಈ ಎರಡು ಅರ್ಧಶತಕಗಳು ಸೇರಿದಂತೆ ಮಿಥಾಲಿ ಇಂಗ್ಲೆಂಡ್‌ನಲ್ಲಿ 14 ಬಾರಿ 50 ಕ್ಕಿಂತ ಹೆಚ್ಚು ರನ್ ಗಳಿಸಿದ ದಾಖಲೆ ಮಾಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಇದುವರೆಗೆ 40 ಏಕದಿನ ಪಂದ್ಯಗಳನ್ನು ಆಡಿದ್ದು, 2 ಶತಕಗಳು ಮತ್ತು 12 ಅರ್ಧಶತಕಗಳನ್ನು ಗಳಿಸಿದ್ದಾರೆ.
ಟಿ20 ವಿಶ್ವಕಪ್ ಶುರುವಾದ ಬೆನ್ನಲ್ಲೇ ಹೊದ ದಾಖಲೆಗಳು ನಿರ್ಮಾಣವಾಗುತ್ತಿದೆ. ಈ ಬಾರಿ ಕೂಡ ಹಲವು ದಾಖಲೆಗಳು ನಿರ್ನಾಮವಾಗುವ ಸಾಧ್ಯತೆಯಿದ್ದು, ಅದರಲ್ಲೊಂದು ರೋಹಿತ್ ಶರ್ಮಾ ಬ್ಯಾಟ್ನಿಂದ ರೆಕಾರ್ಡ್ ಕ್ರಿಯೇಟ್ ಆಗುವ ನಿರೀಕ್ಷೆಯಿದೆ.
ಹಿರಿಯ ಬ್ಯಾಟ್ಸ್‌ಮನ್ ರಾಹುಲ್ ದ್ರಾವಿಡ್ ಮೂರನೇ ಸ್ಥಾನದಲ್ಲಿದ್ದಾರೆ. ಅವರು 50 ಕ್ಕೂ ಹೆಚ್ಚು ರನ್ಗಳನ್ನು 13 ಬಾರಿ ಗಳಿಸಿದ್ದಾರೆ. 2 ಶತಕಗಳು ಮತ್ತು 11 ಅರ್ಧಶತಕಗಳು ಇದರಲ್ಲಿ ಒಳಗೊಂಡಿವೆ.
ಇವರ ನಂತರ ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇದ್ದಾರೆ. ಇಂಗ್ಲೆಂಡ್‌ನಲ್ಲಿ ನಡೆದ 31 ಪಂದ್ಯಗಳಲ್ಲಿ ಕೊಹ್ಲಿ 13 ಬಾರಿ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದು ಕೇವಲ 1 ಶತಕ ಮತ್ತು 12 ಅರ್ಧಶತಕಗಳನ್ನು ಒಳಗೊಂಡಿದೆ.
ಟೀಮ್ ಇಂಡಿಯಾ ಓಪನರ್ ಶಿಖರ್ ಧವನ್ ಕೂಡ ಈ ಪಟ್ಟಿಯಲ್ಲಿದ್ದಾರೆ. ಕೊಹ್ಲಿ ನಂತರ ಓಪನರ್ ಶಿಖರ್ ಧವನ್ ಕೊನೆಯ ಸ್ಥಾನದಲ್ಲಿದ್ದಾರೆ. ಧವನ್ 8 ಏಕದಿನ ಪಂದ್ಯಗಳಲ್ಲಿ ಇಂಗ್ಲೆಂಡ್ ಪರ 50 ಕ್ಕೂ ಹೆಚ್ಚು ರನ್ ಗಳಿಸಿದ್ದಾರೆ. ಇದು 4 ಶತಕ ಮತ್ತು 4 ಅರ್ಧಶತಕಗಳನ್ನು ಒಳಗೊಂಡಿದೆ.