IPL 2021: ಪೊಲಾರ್ಡ್ ಮಾಡಿದ ತಪ್ಪಿಗೆ 12 ಲಕ್ಷ ರೂ. ದಂಡ ಕಟ್ಟಿದ ರೋಹಿತ್​! ಡೆಲ್ಲಿ ವಿರುದ್ಧವೇ ಸಂಕಷ್ಟಕ್ಕಿಡಾದ ಧೋನಿ, ರೋಹಿತ್

IPL 2021 : ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಮಾಡಿದ ಮೊದಲ ತಪ್ಪು ಇದಾಗಿದ್ದು, ಐಪಿಎಲ್ ನೀತಿ ಸಂಹಿತೆಯ ಪ್ರಕಾರ ರೋಹಿತ್ ಶರ್ಮಾ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ.

IPL 2021: ಪೊಲಾರ್ಡ್ ಮಾಡಿದ ತಪ್ಪಿಗೆ 12 ಲಕ್ಷ ರೂ. ದಂಡ ಕಟ್ಟಿದ ರೋಹಿತ್​! ಡೆಲ್ಲಿ ವಿರುದ್ಧವೇ ಸಂಕಷ್ಟಕ್ಕಿಡಾದ ಧೋನಿ, ರೋಹಿತ್
ರೋಹಿತ್ ಶರ್ಮಾ
Follow us
ಪೃಥ್ವಿಶಂಕರ
|

Updated on: Apr 21, 2021 | 2:46 PM

ಮಂಗಳವಾರ ಆಡಿದ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯದಲ್ಲಿ ದಾಖಲೆಯ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸೋಲನ್ನು ಎದುರಿಸಬೇಕಾಯಿತು. ಮುಂಬೈ ತಂಡವನ್ನು ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ನೇತೃತ್ವದ ದೆಹಲಿ ಕ್ಯಾಪಿಟಲ್ಸ್ ತಂಡ 6 ವಿಕೆಟ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ ಮುಂಬೈ ಬ್ಯಾಟ್ಸ್‌ಮನ್‌ಗಳು ಮತ್ತೊಮ್ಮೆ ನಿರೀಕ್ಷೆಗಿಂತ ಕಡಿಮೆ ಪ್ರದರ್ಶನ ನೀಡಿದರು, ಆದರೆ ಪ್ರತಿ ಬಾರಿಯಂತೆ ಈ ಬಾರಿಯೂ ಬೌಲರ್‌ಗಳು ಕೊನೆಯವರೆಗೂ ಗೆಲುವಿಗಾಗಿ ಹೋರಾಡಿದರು. ಆದರೆ, ಈ ಬಾರಿ ಅವರು ಯಶಸ್ವಿಯಾಗಲು ಸಾಧ್ಯವಾಗಲಿಲ್ಲ. ಆದರಿಂದ ಮುಂಬೈ ಇಂಡಿಯನ್ಸ್ ಈ ಪಂದ್ಯದಲ್ಲಿ ಸೋಲಬೇಕಾಯಿತು. ಆದರೆ ಮುಂಬೈಗೆ ಸೋಲಿನ ಕಹಿಯ ಜೊತೆ ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. ತಂಡದ ನಾಯಕ ರೋಹಿತ್ ಶರ್ಮಾ ಕೂಡ ಈ ಘಟನೆಯಿಂದ ಆಘಾತಕ್ಕೊಳಗಾಗಿದ್ದಾರೆ. ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ತಂಡವು ಅಂತಹ ತಪ್ಪನ್ನು ಮಾಡಿದ್ದು, ಮುಂದಿನ ಪಂದ್ಯಗಳಲ್ಲಿ ನಾಯಕನಿಗೆ ತೊಂದರೆಯಾಗಲಿದೆ ಮತ್ತು ಈ ತಪ್ಪು ಮುಂದುವರಿದರೆ, ರೋಹಿತ್ ಶರ್ಮಾ ಅವರನ್ನು ಪಂದ್ಯಕ್ಕೆ ಅಮಾನತುಗೊಳಿಸಬಹುದು.

ಪೊಲಾರ್ಡ್ ಮಾಡಿದ ತಪ್ಪಿಗೆ 12 ಲಕ್ಷ ರೂ. ದಂಡ ಕಟ್ಟಿದ ರೋಹಿತ್ ವಾಸ್ತವವಾಗಿ, ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಆಡಿದ ಈ ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ಅವರ ತಂಡವು ನಿಧಾನವಾಗಿ ಓವರ್ ಮಾಡಿದ ಆರೋಪದಲ್ಲಿ ಸಿಕ್ಕಿಬಿದ್ದಿದೆ. ನಿಗದಿತ ಸಮಯದಲ್ಲಿ ಸಂಪೂರ್ಣ 20 ಓವರ್‌ಗಳನ್ನು ಪೂರ್ಣಗೊಳಿಸುವುದು ತಂಡದ ನಾಯಕನ ಜವಾಬ್ದಾರಿಯಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಸಣ್ಣ ಗಾಯದಿಂದಾಗಿ, ರೋಹಿತ್ ಹೆಚ್ಚಿನ ಸಮಯದವರೆಗೆ ಮೈದಾನದಿಂದ ಹೊರಗುಳಿದಿದ್ದರು ಮತ್ತು ಅವರ ಸ್ಥಾನವನ್ನು ಪೊಲಾರ್ಡ್ ವಹಿಸಿಕೊಂಡರು. ಆದರೆ ರೋಹಿತ್‌ಗೆ ಶಿಕ್ಷೆ ಮಾತ್ರ ಸಿಕ್ಕಿತು. ನಿಧಾನಗತಿಯಓವರ್​ನಿಂದಾಗಿ ರೋಹಿತ್ ಶರ್ಮಾ ಅವರಿಗೆ 12 ಲಕ್ಷ ರೂ ದಂಡ ವಿಧಿಸಲಾಗಿದೆ.

ರೋಹಿತ್‌ಗಿಂತ ಮೊದಲು ಧೋನಿ ಕೂಡ ಈ ತಪ್ಪನ್ನು ಮಾಡಿದ್ದಾರೆ ಈ ಆವೃತ್ತಿಯಲ್ಲಿ ಮುಂಬೈ ಇಂಡಿಯನ್ಸ್ ಮಾಡಿದ ಮೊದಲ ತಪ್ಪು ಇದಾಗಿದ್ದು, ಐಪಿಎಲ್ ನೀತಿ ಸಂಹಿತೆಯ ಪ್ರಕಾರ ರೋಹಿತ್ ಶರ್ಮಾ ಅವರಿಗೆ 12 ಲಕ್ಷ ರೂ. ದಂಡ ವಿಧಿಸಲಾಗಿದೆ. ಈ ತಪ್ಪನ್ನು ನಿರಂತರವಾಗಿ ಮಾಡಿದರೆ, ಮುಂಬೈ ಇಂಡಿಯನ್ಸ್ ತಂಡದ ನಾಯಕ ಕೂಡ ಒಂದು ಪಂದ್ಯಕ್ಕೆ ಅಮಾನತುಗೊಳ್ಳಬೇಕಾಗುತ್ತದೆ. ಈ ಆವೃತ್ತಿಯಲ್ಲಿ ನಿಧಾನವಾಗಿ ಓವರ್​ ಮುಗಿಸಿದಕ್ಕಾಗಿ ದಂಡ ಪಡೆದ ಏಕೈಕ ನಾಯಕ ರೋಹಿತ್ ಶರ್ಮಾ ಅಲ್ಲ. ಬದಲಿಗೆ, ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ, ನಿಧಾನಗತಿಯ ಓವರ್ನಿಂದಾಗಿ 12 ಲಕ್ಷ ರೂ. ಈ ಇಬ್ಬರ ನಡುವಿನ ಸಾಮಾನ್ಯ ವಿಷಯವೆಂದರೆ ರೋಹಿತ್ ಶರ್ಮಾ ಮತ್ತು ಎಂ.ಎಸ್. ಧೋನಿ ಇಬ್ಬರಿಗೂ ದೆಹಲಿ ತಂಡದ ವಿರುದ್ಧ ನಿಧಾನಗತಿಯ ಓವರ್ನಿಂದಾಗಿ ದಂಡ ವಿಧಿಸಲಾಗಿದೆ.

ರೋಹಿತ್ ಅವರಂತೆ ಧೋನಿ ಅವರು ದೆಹಲಿ ವಿರುದ್ಧದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ತಂಡದ ಓವರ್‌ಗಳನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಆದರೆ, ರೋಹಿತ್ ಗಾಯದಿಂದಾಗಿ ಇನ್ನಿಂಗ್ಸ್ ಆರಂಭದಲ್ಲಿ ಮೈದಾನದಿಂದ ಹೊರನಡೆದಿದ್ದರಿಂದ ಮತ್ತು ಪೊಲ್ಲಾರ್ಡ್ ಅವರ ಅನುಪಸ್ಥಿತಿಯಲ್ಲಿ ನಾಯಕನಾಗಿದ್ದರಿಂದ ಈ ಸಂದರ್ಭದಲ್ಲಿ ಸ್ವಲ್ಪ ದುರದೃಷ್ಟಕರವಾಗಿತ್ತು. ಈ ರೀತಿಯಾಗಿ, ಪೊಲಾರ್ಡ್ ಮಾಡಿದ ತಪ್ಪಿಗೆ ರೋಹಿತ್‌ಗೆ ಶಿಕ್ಷೆ ದೊರೆತರೂ ಅದು ತಪ್ಪಾಗಲಾರದು ಎಂದು ಹೇಳಬೇಕು.

ಇದನ್ನೂ ಓದಿ:DC vs MI, IPL 2021 Match 13 Result: ಮುಂಬೈ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ಗೆ ಸುಲಭ ಜಯ

ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಜೆಡಿಎಸ್ ಸಭೆಗೂ ಹೋಗಲ್ಲ, ಸಂಘಟನೆಗೂ ಬರಲ್ಲ: ಜಿಟಿ ದೇವೇಗೌಡ ಖಡಕ್ ಮಾತು
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಸಿದ್ದರಾಮಯ್ಯ, ನಾನು ಪಕ್ಷ ಹೇಳಿದಂತೆ ಸರ್ಕಾರ ನಡೆಸುತ್ತೇವೆ: ಶಿವಕುಮಾರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ಕಾಂಗ್ರೆಸ್ ಮುಖಂಡರಿಗೆ ಹೈಕಮಾಂಡ್ ನೀಡುವ ಆದೇಶವೇ ಅಂತಿಮ: ಪರಮೇಶ್ವರ್
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ನಕ್ಸಲ್ ನಾಯಕ ವಿಕ್ರಂಗೌಡನ ಎನ್ಕೌಂಟರ್ ಸಹ ಸಂಶಯ ಹುಟ್ಟಿಸುತ್ತಿದೆ: ಅಣ್ಣಾಮಲೈ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ
ಮುಡಾ ಅಧಿಕಾರಿಗಳು ತಾಯಿಯ ಒಡಲನ್ನು ಬಗೆಯುತ್ತಿದ್ದಾರೆ: ಸ್ನೇಹಮಯಿ ಕೃಷ್ಣ