IPL 2021: ಐಪಿಎಲ್​​ನಲ್ಲಿ 6000 ರನ್ ಪೂರೈಸಿದ ರನ್ ಸಾಮ್ರಾಟ ವಿರಾಟ್ ಕೊಹ್ಲಿ.. ಫೋಟೋ ನೋಡಿ

IPL 2021: ವಿರಾಟ್ ಕೊಹ್ಲಿ ಈಗ ಟಿ 20 ಯಲ್ಲಿ 10 ಸಾವಿರ ರನ್ ಗಳಿಸಲು 126 ರನ್ ದೂರದಲ್ಲಿದ್ದಾರೆ. ಕೊಹ್ಲಿ 308 ಟಿ 20 ಪಂದ್ಯಗಳಲ್ಲಿ 9,874 ರನ್ ಗಳಿಸಿದ್ದಾರೆ.

  • TV9 Web Team
  • Published On - 15:06 PM, 23 Apr 2021
1/5
ಐಪಿಎಲ್ 2021 ರ ಆರಂಭಿಕ ಪಂದ್ಯಗಳಲ್ಲಿ ಅಬ್ಬರ ತೋರದ ಕೊಹ್ಲಿ ಬ್ಯಾಟ್ ಅಂತಿಮವಾಗಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಘರ್ಜೀಸಿದೆ. ಕೊಹ್ಲಿ ಅದ್ಭುತ ಅರ್ಧಶತಕದೊಂದಿಗೆ ತಂಡವನ್ನು ಗೆಲುವಿನತ್ತ ಕೊಂಡೊಯ್ದರು ಮಾತ್ರವಲ್ಲದೆ, ಲೀಗ್‌ನಲ್ಲಿ ಇದುವರೆಗೆ ಯಾರೂ ಮಾಡದ ಸಾಧನೆಯನ್ನು ಸಹ ತೋರಿಸಿದರು.
2/5
ರಾಜಸ್ಥಾನ್ ರಾಯಲ್ಸ್ ವಿರುದ್ಧ ಅಜೇಯ ಅರ್ಧಶತಕ ಗಳಿಸುವ ಮೂಲಕ ಕೊಹ್ಲಿ ಐಪಿಎಲ್‌ನಲ್ಲಿ ತಮ್ಮ 6000 ರನ್ಗಳನ್ನು ಪೂರ್ಣಗೊಳಿಸಿದರು. 6000 ರನ್ ಪೂರೈಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾದರು. ಕ್ರಿಸ್ ಮೋರಿಸ್ ಅವರ ಎಸೆತಕ್ಕೆ ಬೌಂಡರಿ ಬಾರಿಸುವ ಮೂಲಕ ಕೊಹ್ಲಿ ಈ ಸಾಧನೆ ಮಾಡಿದರು. ಈ ಪಂದ್ಯದ ಮೊದಲು, ಕೊಹ್ಲಿ ಅವರ ಹೆಸರಿನಲ್ಲಿ 5,946 ರನ್ ಗಳಿದ್ದವು.
3/5
ಕೊಹ್ಲಿ ಈಗಾಗಲೇ ಐಪಿಎಲ್‌ನಲ್ಲಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್. ಕೊಹ್ಲಿ ಈಗ 196 ಪಂದ್ಯಗಳಲ್ಲಿ 38.35 ರ ಸರಾಸರಿಯಲ್ಲಿ 6021 ರನ್ ಮತ್ತು ಐಪಿಎಲ್‌ನಲ್ಲಿ 130.69 ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಇದು ಅವರ ಐದು ಶತಕಗಳು ಮತ್ತು 40 ಅರ್ಧಶತಕಗಳನ್ನು ಒಳಗೊಂಡಿದೆ.
4/5
5/5
ರಾಜಸ್ಥಾನ್ ರಾಯಲ್ಸ್ ಆರ್‌ಸಿಬಿಗೆ 178 ರನ್ ಗಳಿಸುವ ಗುರಿ ನೀಡಿತು. ಕ್ಯಾಪ್ಟನ್ ಕೊಹ್ಲಿ ದೇವದತ್ ಪಡಿಕ್ಕಲ್ (101 ನಾಟ್ ಔಟ್) ಅವರೊಂದಿಗೆ 181 ರನ್‌ಗಳ ಮುರಿಯದ ಪಾಲುದಾರಿಕೆಯನ್ನು ಹಂಚಿಕೊಂಡರು, ಆರ್‌ಸಿಬಿಗೆ 10 ವಿಕೆಟ್‌ಗಳ ಗೆಲುವು ತಂದುಕೊಟ್ಟರು.