IPL 2022: ಫಾಫ್ಗೆ ನಾಯಕತ್ವ, ಈ ಸಲ ಕಪ್ ನಮ್ದೆ ಎಂದ ಎಬಿ ಡಿವಿಲಿಯರ್ಸ್
IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್ವುಡ್.
ಐಪಿಎಲ್ ಸೀಸನ್ 15 ಗಾಗಿ (IPL 2022) ಆರ್ಸಿಬಿ (RCB) ತಂಡದ ನಾಯಕನನ್ನು ಆಯ್ಕೆ ಮಾಡಲಾಗಿದೆ. ನಿರೀಕ್ಷೆಯಂತೆ ಅನುಭವಿ ಆಟಗಾರ ಫಾಫ್ ಡುಪ್ಲೆಸಿಸ್ಗೆ (Faf du plessis) ನಾಯಕನ ಪಟ್ಟ ಒಲಿದಿದೆ. ದಕ್ಷಿಣ ಆಫ್ರಿಕಾ ತಂಡವನ್ನು ಮುನ್ನಡೆಸಿದ ಅನುಭವ ಹೊಂದಿರುವ ಫಾಫ್ ಇದೇ ಮೊದಲ ಬಾರಿಗೆ ಐಪಿಎಲ್ನಲ್ಲಿ ತಂಡವನ್ನು ಮುನ್ನಡೆಸಲಿದ್ದಾರೆ. ಇತ್ತ ಫಾಫ್ ಡುಪ್ಲೆಸಿಸ್ಗೆ ನಾಯಕನ ಪಟ್ಟ ಸಿಗುತ್ತಿದ್ದಂತೆ ಆರ್ಸಿಬಿ ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ವಿಶೇಷ ಸಂದೇಶ ಕಳುಹಿಸಿದ್ದಾರೆ.
ಹೊಸ ಸೀಸನ್ನಲ್ಲಿ ಹೊಸ ಚಾಲೆಂಜ್. ಈ ಬಾರಿ ತಂಡದಲ್ಲಿ ಕೆಲ ಬದಲಾವಣೆಯಾಗಿದೆ. ಅದರಲ್ಲೂ ದೊಡ್ಡ ಬದಲಾವಣೆ ಎಂದರೆ ಹೊಸ ನಾಯಕ. ನಾಯಕನ ಸ್ಥಾನಕ್ಕೆ ನನ್ನ ಗೆಳೆಯನಿಗಿಂತ ಉತ್ತಮ ಆಯ್ಕೆ ಮತ್ತೊಂದಿಲ್ಲ. ಹೌದು, ಫಾಫ್ ಡುಪ್ಲೆಸಿಸ್ ಆಯ್ಕೆಯೇನು ನನಗೆ ಆಶ್ಚರ್ಯ ಉಂಟು ಮಾಡಿಲ್ಲ. ಏಕೆಂದರೆ ಈತ ಅದ್ಭುತ ನಾಯಕ. ತಂಡವನ್ನು ಮುನ್ನಡೆಸಲು ಪರಿಪೂರ್ಣ ವ್ಯಕ್ತಿ. ಅಧ್ಬುತ ಕಾರ್ಯತಂತ್ರ ಹೊಂದಿರುವ ಆಟಗಾರ. ಖಂಡಿತವಾಗಿಯೂ ಈ ಸಲ ಫಾಫ್ ಅತ್ಯುತ್ತಮವಾಗಿ ತನ್ನ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಆಲ್ ದಿ ಬೆಸ್ಟ್ ಫಾಫ್ ಡುಪ್ಲೆಸಿಸ್, ಆಲ್ ದಿ ಆರ್ಸಿಬಿ…ಈ ಸಲ ಕಪ್ ನಮ್ದೆ ಎಂದು ಎಬಿ ಡಿವಿಲಿಯರ್ಸ್ ವಿಶೇಷ ಸಂದೇಶ ರವಾನಿಸಿದ್ದಾರೆ.
“He’s an amazing leader and the perfect man for the job” – @ABdeVilliers17 sends a heartfelt message to our new captain @faf1307. ?❤️#PlayBold #RCBUnbox #UnboxTheBold #IPL2022 #RCBCaptain pic.twitter.com/UB8XRx54eB
— Royal Challengers Bangalore (@RCBTweets) March 12, 2022
ಈ ಮೂಲಕ ಫಾಫ್ ಡುಪ್ಲೆಸಿಸ್ ಅವರ ನಾಯಕತ್ವದಲ್ಲಿ ಆರ್ಸಿಬಿ ತಂಡವು ಚಾಂಪಿಯನ್ ಪಟ್ಟ ಅಲಂಕರಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ ಎಬಿ ಡಿವಿಲಿಯರ್ಸ್. ಮಾರ್ಚ್ 27 ರಂದು ಆರ್ಸಿಬಿ ತಂಡವು ತನ್ನ ಮೊದಲ ಪಂದ್ಯವನ್ನು ಪಂಜಾಬ್ ಕಿಂಗ್ಸ್ ವಿರುದ್ ಆಡಲಿದೆ. ಈ ಪಂದ್ಯದೊಂದಿಗೆ ಫಾಫ್ ಡುಪ್ಲೆಸಿಸ್ ನಾಯಕನಾಗಿ ಪದಾರ್ಪಣೆ ಮಾಡಲಿದ್ದಾರೆ. ಇದರೊಂದಿಗೆ ಆರ್ಸಿಬಿ ತಂಡವನ್ನು ಮುನ್ನಡೆಸಲಿರುವ 7ನೇ ನಾಯಕ ಎನಿಸಿಕೊಳ್ಳಲಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ: ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಮೊಹಮ್ಮದ್ ಸಿರಾಜ್, ಫಾಫ್ ಡು ಪ್ಲೆಸಿಸ್, ಹರ್ಷಲ್ ಪಟೇಲ್, ವನಿಂದು ಹಸರಂಗ, ದಿನೇಶ್ ಕಾರ್ತಿಕ್, ಜೋಶ್ ಹ್ಯಾಝಲ್ವುಡ್, ಶಹಬಾಜ್ ಅಹ್ಮದ್, ಅನುಜ್ ರಾವತ್, ಆಕಾಶ್ ದೀಪ್, ಮಹಿಪಾಲ್ ಲೊಮ್ರೋರ್, ಫಿನ್ ಅಲೆನ್, ಶೆರ್ಫೇನ್ ರುದರ್‌ಫೋರ್ಡ್, ಜೇಸನ್ ಬೆಹ್ರೆನ್‌ಡಾರ್ಫ್, ಸುಯಶ್ ಪ್ರಭುದೇಸ್, ಚಮಾ ಮಿಲಿಂದ್, ಕರ್ಣ್ ಶರ್ಮಾ, ಸಿದ್ಧಾರ್ಥ್ ಕೌಲ್, ಲವ್ನೀತ್ ಸಿಸೋಡಿಯಾ, ಡೇವಿಡ್ ವಿಲ್ಲಿ
ಇದನ್ನೂ ಓದಿ: IPL 2022: ಐಪಿಎಲ್ಗೆ ಕಂಬ್ಯಾಕ್ ಮಾಡಬಲ್ಲ 5 ಆಟಗಾರರು..!
ಇದನ್ನೂ ಓದಿ: Ab de villiers: IPL ನಲ್ಲಿ ಎಬಿಡಿ ಹೆಸರಿನಲ್ಲಿರುವ ಅಪರೂಪದ ದಾಖಲೆಗಳಿವು..!
ಇದನ್ನೂ ಓದಿ: IPL ಇತಿಹಾಸದಲ್ಲೇ ಹೊಸ ದಾಖಲೆ ಬರೆದ ಆರೋನ್ ಫಿಂಚ್
(IPL 2022: AB de Villiers says Ee saal cup namade)