IPL 2022: ಬದಲಿ ಆಟಗಾರನಾಗಿ ಐಪಿಎಲ್​ಗೆ ಎಂಟ್ರಿ ಕೊಟ್ಟ ಆಸ್ಟ್ರೇಲಿಯಾ ಆಟಗಾರ

| Updated By: ಝಾಹಿರ್ ಯೂಸುಫ್

Updated on: Mar 23, 2022 | 10:19 PM

IPL 2022: ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀಗಿದೆ: ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ರವಿ ಬಿಷ್ಣೋಯ್, ಅವೇಶ್ ಖಾನ್, ದುಷ್ಮಂತ ಚಮೀರಾ

IPL 2022: ಬದಲಿ ಆಟಗಾರನಾಗಿ ಐಪಿಎಲ್​ಗೆ ಎಂಟ್ರಿ ಕೊಟ್ಟ ಆಸ್ಟ್ರೇಲಿಯಾ ಆಟಗಾರ
andrew tye
Follow us on

ಐಪಿಎಲ್​ ಸೀಸನ್ 15 ಗಾಗಿ (IPL 2022) ಲಕ್ನೋ ಸೂಪರ್ ಜೈಂಟ್ಸ್ (LSG) ತಂಡವು ಭರ್ಜರಿ ತಯಾರಿಯಲ್ಲಿದೆ. ಇದರ ನಡುವೆ ತಂಡದಲ್ಲಿದ್ದ ಇಂಗ್ಲೆಂಡ್ ಆಲ್​ರೌಂಡರ್ ಮಾರ್ಕ್​ ವುಡ್ ಟೂರ್ನಿಯಿಂದ ಹಿಂದೆ ಸರಿದಿದ್ದಾರೆ. ಇದೀಗ ಲಕ್ನೋ ಸೂಪರ್ ಜೈಂಟ್ಸ್​ ತಂಡವು ಮಾರ್ಕ್​ ವುಡ್ ಬದಲಿ ಆಟಗಾರನನ್ನು ಆಯ್ಕೆ ಮಾಡಿಕೊಂಡಿದೆ. ಆಸ್ಟ್ರೇಲಿಯಾದ ಆಲ್​ರೌಂಡರ್ ಆಂಡ್ರ್ಯೂ ಟೈ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಈ ಹಿಂದೆ ಐಪಿಎಲ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​, ಗುಜರಾತ್ ಲಯನ್ಸ್, ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಕಾಣಿಸಿಕೊಂಡಿದ್ದಆಂಡ್ರ್ಯೂ ಟೈ ಅವರನ್ನು ಈ ಬಾರಿ ಯಾವುದೇ ತಂಡದ ಖರೀದಿಸಿರಲಿಲ್ಲ. ಇದೀಗ ಮಾರ್ಕ್​ ವುಡ್ ಬದಲಿ ಆಟಗಾರನಾಗಿ ಲಕ್ನೋ ತಂಡದಲ್ಲಿ ಅವಕಾಶ ಪಡೆದಿದ್ದಾರೆ.

ಕಳೆದ ತಿಂಗಳು ಬೆಂಗಳೂರಿನಲ್ಲಿ ನಡೆದ ಐಪಿಎಲ್ ಮೆಗಾ ಹರಾಜಿನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮಾರ್ಕ್​ ವುಡ್‌ ಅವರನ್ನು ಬರೋಬ್ಬರಿ 7.5 ಕೋಟಿ ರೂ. ನೀಡಿ ಖರೀದಿಸಿತ್ತು. ಆದರೆ ಕಳೆದ ವಾರ ನಾರ್ತ್ ಸೌಂಡ್‌ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್‌ನಲ್ಲಿ ಬಲ ಮೊಣಕೈ ಗಾಯದಿಂದಾಗಿ ಮಾರ್ಕ್​ ವುಡ್ ಐಪಿಎಲ್​ನಿಂದ ಹಿಂದೆ ಸರಿದಿದ್ದರು. ಇದಾದ ಬಳಿಕ ಲಕ್ನೋ ಫ್ರಾಂಚೈಸಿ ಬಾಂಗ್ಲಾದೇಶದ ಯುವ ವೇಗಿ ತಸ್ಕೀನ್ ಅಹ್ಮದ್ ಅವರನ್ನು ಸಂಪರ್ಕಿಸಿತ್ತು. ಆದರೆ ತಸ್ಕೀನ್ ಅವರಿಗೆ ಬಾಂಗ್ಲಾ ಕ್ರಿಕೆಟ್ ಮಂಡಳಿ ಐಪಿಎಲ್​ ಆಡಲು ಎನ್​ಒಸಿ ನೀಡಲು ನಿರಾಕರಿಸಿದೆ. ಹೀಗಾಗಿ ಲಕ್ನೋ ಸೂಪರ್ ಜೈಂಟ್ಸ್ ಇದೀಗ ಆಸ್ಟ್ರೇಲಿಯಾ ಆಲ್​ರೌಂಡರ್ ಅನ್ನು ಖರೀದಿಸಿದೆ.

ಐಪಿಎಲ್​ನಲ್ಲಿ ಇದುವರೆಗೆ 27 ಪಂದ್ಯಗಳನ್ನಾಡಿರುವ ಟೈ ಒಟ್ಟು 40 ವಿಕೆಟ್ ಕಬಳಿಸಿದ್ದಾರೆ. ಹಾಗೆಯೇ ಆಸ್ಟ್ರೇಲಿಯಾ ಪರ 32 ಟಿ20 ಪಂದ್ಯಗಳಲ್ಲಿ 47 ವಿಕೆಟ್‌ಗಳನ್ನು ಪಡೆದಿದ್ದಾರೆ. ಇದೀಗ 35 ವರ್ಷದ ಅನುಭವಿ ಆಲ್​ರೌಂಡರ್ ಅನ್ನು ಲಕ್ನೋ ತಂಡವು ಬದಲಿ ಆಟಗಾರನಾಗಿ ಆಯ್ಕೆ ಮಾಡಿಕೊಂಡಿದೆ.

ಲಕ್ನೋ ಸೂಪರ್ ಜೈಂಟ್ಸ್ ತಂಡ ಹೀಗಿದೆ:
ಕೆಎಲ್ ರಾಹುಲ್ (ನಾಯಕ), ಕ್ವಿಂಟನ್ ಡಿ ಕಾಕ್, ಮನೀಶ್ ಪಾಂಡೆ, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ಜೇಸನ್ ಹೋಲ್ಡರ್, ಕೆ ಗೌತಮ್, ರವಿ ಬಿಷ್ಣೋಯ್, ಅವೇಶ್ ಖಾನ್, ದುಷ್ಮಂತ ಚಮೀರಾ, ಅಂಕಿತ್ ರಾಜ್‌ಪೂತ್, ಶಹಬಾಜ್ ನದೀಮ್, ಮನನ್ ವೋಹ್ರಾ, ಮೊಹ್ಸಿನ್ ಬದೋನಿ, ಕರಣ್ ಶರ್ಮಾ, ಮಯಾಂಕ್ ಯಾದವ್, ಕೈಲ್ ಮೇಯರ್ಸ್, ಕೆ ಗೌತಮ್, ಎವಿನ್ ಲೂಯಿಸ್, ಆಂಡ್ರ್ಯೂ ಟೈ

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?