AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: KKR ತಂಡಕ್ಕೆ ಬಿಗ್ ಶಾಕ್: 5 ಪಂದ್ಯಗಳಿಗೆ ಇಬ್ಬರು ಸ್ಟಾರ್ ಆಟಗಾರರು ಅಲಭ್ಯ

IPL 2022: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀಗಿದೆ: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ

IPL 2022: KKR ತಂಡಕ್ಕೆ ಬಿಗ್ ಶಾಕ್: 5 ಪಂದ್ಯಗಳಿಗೆ ಇಬ್ಬರು ಸ್ಟಾರ್ ಆಟಗಾರರು ಅಲಭ್ಯ
KKR
TV9 Web
| Edited By: |

Updated on: Mar 23, 2022 | 6:46 PM

Share

ಐಪಿಎಲ್ 2022ರ ಆರಂಭಕ್ಕೂ ಮುನ್ನವೇ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡ ಭಾರಿ ಹಿನ್ನಡೆ ಅನುಭವಿಸಿದೆ. ತಂಡದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಮತ್ತು ಬ್ಯಾಟ್ಸ್‌ಮನ್ ಆರೋನ್ ಫಿಂಚ್ ಮೊದಲ ಐದು ಪಂದ್ಯಗಳಿಂದ ಹೊರಗುಳಿದಿದ್ದಾರೆ. ಕೆಕೆಆರ್‌ನ ಮೆಂಟರ್ ಡೇವಿಡ್ ಹಸ್ಸಿ ಬುಧವಾರ ನಡೆದ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಇದನ್ನು ಖಚಿತಪಡಿಸಿದ್ದಾರೆ. ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ಕಮ್ಮಿನ್ಸ್ ಅವರನ್ನು 7.25 ಕೋಟಿ ರೂಪಾಯಿಗೆ ಖರೀದಿಸಿತು. ಹಾಗೆಯೇ ಕೆಕೆಆರ್​ ತಂಡದಿಂದ ಹೊರನಡೆದಿರುವ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಬದಲಿಗೆ ಫಿಂಚ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ . ಫಿಂಚ್ ಅವರನ್ನು ಕೆಕೆಆರ್ 1.50 ಕೋಟಿ ರೂ.ಗೆ ಆಯ್ಕೆ ಮಾಡಿಕೊಂಡಿದೆ. ಆದರೆ ಈಗ ಈ ಇಬ್ಬರೂ ಮ್ಯಾಚ್ ವಿನ್ನರ್ ಆಟಗಾರರು ಮೊದಲ 5 ಪಂದ್ಯಗಳಿಗೆ ಲಭ್ಯರಿರುವುದಿಲ್ಲ. ಇದು ಐಪಿಎಲ್​ನ ಮೊದಲಾರ್ಧದಲ್ಲಿ ಕೆಕೆಆರ್‌ ತಂಡದ ಪಾಲಿಗೆ ಹಿನ್ನಡೆಯಾಗಲಿದೆ.

ಈ ಬಗ್ಗೆ ಮಾತನಾಡಿರುವ ಕೆಕೆಆರ್ ತಂಡದ ಮೆಂಟರ್ ಡೇವಿಡ್ ಹಸ್ಸಿ, ‘ ಫಿಂಚ್ ಹಾಗೂ ಕಮಿನ್ಸ್​ ಅವರ ಅನುಪಸ್ಥಿತಿಯು ನಮಗೆ ಕಳವಳದ ವಿಷಯವಾಗಿದೆ. ಪ್ರತಿ ತಂಡವು ತಮ್ಮ ಅತ್ಯುತ್ತಮ ಆಟಗಾರರೊಂದಿಗೆ ಕಣಕ್ಕಿಳಿಯಲು ಬಯಸುತ್ತದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗಿಂತ ಯಾವುದೂ ದೊಡ್ಡದಾಗಬಾರದು. ಪ್ರತಿಯೊಬ್ಬ ಆಟಗಾರನೂ ತನ್ನ ದೇಶಕ್ಕಾಗಿ ಕ್ರಿಕೆಟ್ ಆಡಲು ಬಯಸುತ್ತಾನೆ. ಹಾಗಾಗಿ ಅವರಿಗೆ ಕೆಲವು ಜವಾಬ್ದಾರಿಗಳಿವೆ. ಕಮ್ಮಿನ್ಸ್ ಮತ್ತು ಫಿಂಚ್ ಮೊದಲ ಐದು ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ನಾನು ಭಾವಿಸುತ್ತೇನೆ ಎಂದು ತಿಳಿಸಿದ್ದಾರೆ.

ಸದ್ಯ ಆಸ್ಟ್ರೇಲಿಯಾ ತಂಡವು ಪಾಕಿಸ್ತಾನ ಪ್ರವಾಸದಲ್ಲಿದೆ. ಉಭಯ ದೇಶಗಳ ನಡುವೆ ಲಾಹೋರ್‌ನಲ್ಲಿ ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ನಡೆಯುತ್ತಿದೆ. ಇದರಲ್ಲಿ ಪ್ಯಾಟ್ ಕಮಿನ್ಸ್ ತಂಡದ ನಾಯಕರಾಗಿದ್ದಾರೆ. ಅದೇ ಸಮಯದಲ್ಲಿ, ಇದರ ನಂತರ ಉಭಯ ದೇಶಗಳ ನಡುವೆ 3 ODI ಮತ್ತು ಒಂದು T20 ಪಂದ್ಯ ಕೂಡ ನಡೆಯಲಿದೆ. ಏಕದಿನ ಮತ್ತು ಟಿ20 ತಂಡಗಳಿಗೆ ಫಿಂಚ್ ನಾಯಕತ್ವ ವಹಿಸಲಿದ್ದಾರೆ. ಏಕದಿನ ಸರಣಿಯ ಮೊದಲ ಪಂದ್ಯ ಮಾರ್ಚ್ 29 ರಂದು ನಡೆಯಲಿದೆ. ಪ್ರಸ್ತುತ ಪಾಕಿಸ್ತಾನದ ಆಸ್ಟ್ರೇಲಿಯಾ ಪ್ರವಾಸವು ಏಪ್ರಿಲ್ 5 ರಂದು ಕೊನೆಗೊಳ್ಳಲಿದೆ.

ಇದಾದ ಬಳಿಕ ಕಮಿನ್ಸ್ ಮತ್ತು ಫಿಂಚ್ ಐಪಿಎಲ್‌ಗಾಗಿ ಭಾರತಕ್ಕೆ ಬರಲಿದ್ದಾರೆ. ಆದರೆ ಇಬ್ಬರೂ ಕೆಕೆಆರ್‌ಗೆ ಸೇರುವ ಮೊದಲು, 3 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಬೇಕಾಗುತ್ತದೆ. ಇದರ ನಂತರ, ಅವರು ತಂಡದ ಬಯೋ-ಬಬಲ್‌ಗೆ ಸೇರಲಿದ್ದಾರೆ. ಅಂದರೆ, ಏಪ್ರಿಲ್ 8ರ ನಂತರ ತಂಡವನ್ನು ಸೇರಿಕೊಳ್ಳಬಹುದು. ಕೆಕೆಆರ್ ತಂಡವು ಏಪ್ರಿಲ್ 10 ರಂದು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಐದನೇ ಪಂದ್ಯವನ್ನು ಆಡಲಿದೆ. ಈ ಪಂದ್ಯದಲ್ಲಿ ಆರೋನ್ ಫಿಂಚ್ ಹಾಗೂ ಪ್ಯಾಟ್ ಕಮಿನ್ಸ್ ಆಡುವ ನಿರೀಕ್ಷೆಯಿದೆ.

ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಹೀಗಿದೆ: ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್, ಅಜಿಂಕ್ಯ ರಹಾನೆ, ರಿಂಕು ಸಿಂಗ್, ಆಂಡ್ರೆ ರಸೆಲ್, ಸುನಿಲ್ ನರೈನ್, ಪ್ಯಾಟ್ ಕಮ್ಮಿನ್ಸ್, ಶಿವಂ ಮಾವಿ, ವರುಣ್ ಚಕ್ರವರ್ತಿ, ಸ್ಯಾಮ್ ಬಿಲ್ಲಿಂಗ್ಸ್, ಅನುಕುಲ್ ರಾಯ್, ರಸಿಖ್ ಸಲಾಮ್, ಅಭಿಜಿತ್ ಸಿಂಗ್ , ರಮೇಶ್ ಕುಮಾರ್, ಅಶೋಕ್ ಶರ್ಮಾ, ಟಿಮ್ ಸೌಥಿ, ಆರೋನ್ ಫಿಂಚ್, ಮೊಹಮ್ಮದ್ ನಬಿ, ಉಮೇಶ್ ಯಾದವ್, ಬಿ ಇಂದ್ರಜಿತ್, ಚಾಮಿಕಾ ಕರುಣಾರತ್ನೆ.

(IPL 2022: Pat Cummins And Aaron Finch To Miss First 5 Matches For KKR)