IPL 2022 Auction: 2.60 ಕೋಟಿಗೆ ಗುಜರಾತ್ ತಂಡಕ್ಕೆ ಕನ್ನಡಿಗ..!
IPL 2022 Auction: ಗುಜರಾತ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಇರಲಿದ್ದಾರೆ. ಜೊತೆಗೆ ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ರಶೀದ್ ಖಾನ್ ಹಾಗೂ ಶುಭ್ಮನ್ ಗಿಲ್ ಅವರನ್ನು ಕೂಡ ಗುಜರಾತ್ ಟೈಟನ್ಸ್ ತಂಡವು ಆಯ್ಕೆ ಮಾಡಿಕೊಂಡಿದೆ.
ಐಪಿಎಲ್ ಸೀಸನ್ 15 ಮೆಗಾ ಹರಾಜು ಭರದಿಂದ ಸಾಗುತ್ತಿದೆ. ಈಗಾಗಲೇ 50 ಕ್ಕೂ ಅಧಿಕ ಆಟಗಾರರ ಹರಾಜು ಮುಗಿದಿದೆ. ಅದರಂತೆ ಇದೀಗ ಕರ್ನಾಟಕದ ಆಟಗಾರ ಅಭಿನವ್ ಮನೋಹರ್ ಕೂಡ ಹರಾಜಾಗಿದ್ದಾರೆ. ಬರೋಬ್ಬರಿ 2.60 ಕೋಟಿಗೆ ಅಭಿನವ್ ಮನೋಹರ್ ಅವರನ್ನು ಗುಜರಾತ್ ಟೈಟನ್ಸ್ ತಂಡವು ಖರೀದಿಸಿದೆ. ಕರ್ನಾಟಕ ಪರ ಸೈಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಮನೋಹರ್ ಈ ಬಾರಿ ಹಲವು ಫ್ರಾಂಚೈಸಿಗಳ ಗಮನ ಸೆಳೆದಿದ್ದರು. ಇದೀಗ ನಿರೀಕ್ಷೆಯಂತೆ ಅತ್ಯುತ್ತಮ ಮೊತ್ತಕ್ಕೆ ಹರಾಜಾಗಿದ್ದಾರೆ.
ಇನ್ನು ಗುಜರಾತ್ ತಂಡದ ನಾಯಕರಾಗಿ ಹಾರ್ದಿಕ್ ಪಾಂಡ್ಯ ಇರಲಿದ್ದಾರೆ. ಜೊತೆಗೆ ಸ್ಪೆಷಲ್ ಪಿಕ್ ಆಯ್ಕೆಯ ಮೂಲಕ ರಶೀದ್ ಖಾನ್ ಹಾಗೂ ಶುಭ್ಮನ್ ಗಿಲ್ ಅವರನ್ನು ಕೂಡ ಗುಜರಾತ್ ಟೈಟನ್ಸ್ ತಂಡವು ಆಯ್ಕೆ ಮಾಡಿಕೊಂಡಿದೆ. ಇನ್ನು ಮೆಗಾ ಹರಾಜಿನ ಮೂಲಕ ಲಾಕಿ ಫರ್ಗುಸನ್ (10 ಕೋಟಿ), ಜೇಸನ್ ರಾಯ್ (2 ಕೋಟಿ), ಮೊಹಮ್ಮದ್ ಶಮಿ (6.25 ಕೋಟಿ) ಅವರನ್ನು ಆಯ್ಕೆ ಮಾಡಿಕೊಂಡಿದೆ.
ಇದುವರೆಗೆ ಹರಾಜಾಗಿರುವ ಆಟಗಾರರ ಪಟ್ಟಿ:
1) ಶಿಖರ್ ಧವನ್ – ಪಂಜಾಬ್ ಕಿಂಗ್ಸ್ – 8.25 ಕೋಟಿ ರೂ
2) ರವಿಚಂದ್ರನ್ ಅಶ್ವಿನ್ – ರಾಜಸ್ಥಾನ್ ರಾಯಲ್ಸ್ – 5 ಕೋಟಿ ರೂ
3) ಪ್ಯಾಟ್ ಕಮ್ಮಿನ್ಸ್ – ಕೋಲ್ಕತ್ತಾ ನೈಟ್ ರೈಡರ್ಸ್ – 7.25 ಕೋಟಿ ರೂ
4) ಕಗಿಸೊ ರಬಾಡ – ಪಂಜಾಬ್ ಕಿಂಗ್ಸ್ – 9.25 ಕೋಟಿ ರೂ
5) ಟ್ರೆಂಟ್ ಬೌಲ್ಟ್ – ರಾಜಸ್ಥಾನ್ ರಾಯಲ್ಸ್ – 8 ಕೋಟಿ ರೂ
6) ಶ್ರೇಯಸ್ ಅಯ್ಯರ್ – ಕೋಲ್ಕತ್ತಾ ನೈಟ್ ರೈಡರ್ಸ್ – ರೂ 12.25 ಕೋಟಿ
7) ಮೊಹಮ್ಮದ್ ಶಮಿ – ಗುಜರಾತ್ ಟೈಟಾನ್ಸ್ – ರೂ. 6.25 ಕೋಟಿ
8) ಫಾಫ್ ಡು ಪ್ಲೆಸಿಸ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 7 ಕೋಟಿ ರೂ
9) ಕ್ವಿಂಟನ್ ಡಿ ಕಾಕ್ – ಲಕ್ನೋ ಸೂಪರ್ ಜೈಂಟ್ಸ್ – ರೂ 6.75 ಕೋಟಿ
10) ಡೇವಿಡ್ ವಾರ್ನರ್ – ಡೆಲ್ಲಿ ಕ್ಯಾಪಿಟಲ್ಸ್ – 6.25 ಕೋಟಿ ರೂ
11) ಮನೀಶ್ ಪಾಂಡೆ – ಲಕ್ನೋ ಸೂಪರ್ ಜೈಂಟ್ಸ್ – ರೂ 4.60 ಕೋಟಿ
12) ಶಿಮ್ರಾನ್ ಹೆಟ್ಮೆಯರ್ – ರಾಜಸ್ಥಾನ್ ರಾಯಲ್ಸ್ – ರೂ 8.50 ಕೋಟಿ
13) ರಾಬಿನ್ ಉತ್ತಪ್ಪ – ಚೆನ್ನೈ ಸೂಪರ್ ಕಿಂಗ್ಸ್ – 2 ಕೋಟಿ ರೂ
14) ಜೇಸನ್ ರಾಯ್ – ಗುಜರಾತ್ ಟೈಟಾನ್ಸ್ – 2 ಕೋಟಿ ರೂ
15) ಡೇವಿಡ್ ಮಿಲ್ಲರ್ – ಯಾರು ಕೂಡ ಖರೀದಿಸಿಲ್ಲ
16) ದೇವದತ್ ಪಡಿಕ್ಕಲ್ – ರಾಜಸ್ಥಾನ್ ರಾಯಲ್ಸ್ – ರೂ 7.75 ಕೋಟಿ
17) ಸುರೇಶ್ ರೈನಾ – ಯಾರು ಕೂಡ ಖರೀದಿಸಿಲ್ಲ
18) ಸ್ಟೀವ್ ಸ್ಮಿತ್ – ಯಾರು ಕೂಡ ಖರೀದಿಸಿಲ್ಲ
19) ಡ್ವೇನ್ ಬ್ರಾವೋ – ಚೆನ್ನೈ ಸೂಪರ್ ಕಿಂಗ್ಸ್ – 4.40 ಕೋಟಿ ರೂ
20) ನಿತೀಶ್ ರಾಣಾ – ಕೋಲ್ಕತ್ತಾ ನೈಟ್ ರೈಡರ್ಸ್ – 8 ಕೋಟಿ ರೂ
21) ಜೇಸನ್ ಹೋಲ್ಡರ್ – ಲಕ್ನೋ ಸೂಪರ್ ಜೈಂಟ್ಸ್ – ರೂ 8.75 ಕೋಟಿ
22) ಶಾಕಿಬ್ ಅಲ್ ಹಸನ್ – ಯಾರು ಕೂಡ ಖರೀದಿಸಿಲ್ಲ
23) ಹರ್ಷಲ್ ಪಟೇಲ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 10.75 ಕೋಟಿ ರೂ.
24) ದೀಪಕ್ ಹೂಡಾ – ಲಕ್ನೋ ಸೂಪರ್ ಜೈಂಟ್ಸ್ – ರೂ 5.75 ಕೋಟಿ
25) ವನಿಂದು ಹಸರಂಗ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 10.75 ಕೋಟಿ ರೂ.
26) ವಾಷಿಂಗ್ಟನ್ ಸುಂದರ್ – ಸನ್ ರೈಸರ್ಸ್ ಹೈದರಾಬಾದ್ – 8.75 ಕೋಟಿ ರೂ
27) ಕೃನಾಲ್ ಪಾಂಡ್ಯ – ಲಕ್ನೋ ಸೂಪರ್ ಜೈಂಟ್ಸ್ – ರೂ 8.25 ಕೋಟಿ
28) ಮಿಚೆಲ್ ಮಾರ್ಷ್ – ಡೆಲ್ಲಿ ಕ್ಯಾಪಿಟಲ್ಸ್ – 6.50 ಕೋಟಿ ರೂ
29) ಮೊಹಮ್ಮದ್ ನಬಿ – ಯಾರು ಕೂಡ ಖರೀದಿಸಿಲ್ಲ
30) ಮ್ಯಾಥ್ಯೂ ವೇಡ್ – ಯಾರು ಕೂಡ ಖರೀದಿಸಿಲ್ಲ
31) ಅಂಬಟಿ ರಾಯುಡು – ಚೆನ್ನೈ ಸೂಪರ್ ಕಿಂಗ್ಸ್ – 6.75 ಕೋಟಿ ರೂ
32) ಇಶಾನ್ ಕಿಶನ್ – ಮುಂಬೈ ಇಂಡಿಯನ್ಸ್ – 15.25 ಕೋಟಿ ರೂ
33) ಜಾನಿ ಬೈರ್‌ಸ್ಟೋ – ಪಂಜಾಬ್ ಕಿಂಗ್ಸ್ – 6.75 ಕೋಟಿ ರೂ
34) ದಿನೇಶ್ ಕಾರ್ತಿಕ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – 5.50 ಕೋಟಿ ರೂ
35) ವೃದ್ಧಿಮಾನ್ ಸಹಾ – ಯಾರು ಕೂಡ ಖರೀದಿಸಿಲ್ಲ
36) ಸ್ಯಾಮ್ ಬಿಲ್ಲಿಂಗ್ಸ್ – ಯಾರು ಕೂಡ ಖರೀದಿಸಿಲ್ಲ
37) ನಿಕೋಲಸ್ ಪೂರನ್ – ಸನ್ ರೈಸರ್ಸ್ ಹೈದರಾಬಾದ್ – 10.75 ಕೋಟಿ ರೂ
38) ಟಿ ನಟರಾಜನ್ – ಸನ್ ರೈಸರ್ಸ್ ಹೈದರಾಬಾದ್ – 4 ಕೋಟಿ ರೂ
39) ದೀಪಕ್ ಚಹಾರ್ – ಚೆನ್ನೈ ಸೂಪರ್ ಕಿಂಗ್ಸ್ – 14 ಕೋಟಿ ರೂ
40) ಉಮೇಶ್ ಯಾದವ್ – ಯಾರು ಕೂಡ ಖರೀದಿಸಿಲ್ಲ
41) ಪ್ರಸಿದ್ಧ್ ಕೃಷ್ಣ – ರಾಜಸ್ಥಾನ್ ರಾಯಲ್ಸ್ – 10 ಕೋಟಿ ರೂ
42) ಲಾಕಿ ಫರ್ಗುಸನ್ – ಗುಜರಾತ್ ಟೈಟಾನ್ಸ್ – 10 ಕೋಟಿ ರೂ
43) ಜೋಶ್ ಹ್ಯಾಜಲ್‌ವುಡ್ – ರಾಯಲ್ ಚಾಲೆಂಜರ್ಸ್ ಬೆಂಗಳೂರು – ರೂ 7.75 ಕೋಟಿ
44) ಮಾರ್ಕ್ ವುಡ್ – ಲಕ್ನೋ ಸೂಪರ್ ಜೈಂಟ್ಸ್ – 7.50 ಕೋಟಿ ರೂ
45) ಭುವನೇಶ್ವರ್ ಕುಮಾರ್ – ಸನ್ ರೈಸರ್ಸ್ ಹೈದರಾಬಾದ್ – 4.20 ಕೋಟಿ ರೂ
46) ಶಾರ್ದೂಲ್ ಠಾಕೂರ್ – ದೆಹಲಿ ಕ್ಯಾಪಿಟಲ್ಸ್ – 10.75 ಕೋಟಿ ರೂ
47) ಮುಸ್ತಫಿಜುರ್ ರೆಹಮಾನ್ – ದೆಹಲಿ ಕ್ಯಾಪಿಟಲ್ಸ್ – 2 ಕೋಟಿ ರೂ
48) ಆದಿಲ್ ರಶೀದ್ – ಯಾರು ಕೂಡ ಖರೀದಿಸಿಲ್ಲ
49) ಮುಜೀಬ್ ಜದ್ರಾನ್ – ಯಾರು ಕೂಡ ಖರೀದಿಸಿಲ್ಲ
50) ಇಮ್ರಾನ್ ತಾಹಿರ್ – ಯಾರು ಕೂಡ ಖರೀದಿಸಿಲ್ಲ
51) ಕುಲದೀಪ್ ಯಾದವ್ – ದೆಹಲಿ ಕ್ಯಾಪಿಟಲ್ಸ್ – 2 ಕೋಟಿ ರೂ
52) ಆಡಮ್ ಝಂಪಾ – ಯಾರು ಕೂಡ ಖರೀದಿಸಿಲ್ಲ
52) ರಾಹುಲ್ ಚಹರ್- ಪಂಜಾಬ್ ಕಿಂಗ್ಸ್- 5.25 ಕೋಟಿ ರೂ
53) ಯುಜುವೇಂದ್ರ ಚಹಲ್- ರಾಜಸ್ಥಾನ್ ರಾಯಲ್ಸ್- 6.50 ಕೋಟಿ ರೂ.
54) ಅಮಿತ್ ಮಿಶ್ರಾ- ಯಾರು ಕೂಡ ಖರೀದಿಸಿಲ್ಲ
IPL 2022 Auction: Abhinav Manohar is sold to Gujarat Titans