AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ಸೋಲಿನ ಸುಳಿಯಲ್ಲಿರುವ ಡೆಲ್ಲಿ ತಂಡಕ್ಕೆ ಕೊರೊನಾ ಕಾಟ; ತಂಡದ ಮತ್ತೊಬ್ಬ ಆಟಗಾರನಲ್ಲಿ ಸೋಂಕು ಪತ್ತೆ!

IPL 2022: ದೆಹಲಿ ಕ್ಯಾಪಿಟಲ್ಸ್‌ನ 6 ಆಟಗಾರರು ಕೊರೊನಾ ಹಿಡಿತಕ್ಕೆ ಸಿಲುಕಿದ್ದಾರೆ. ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಮೊದಲು ಕೊರೊನಾ ಸೋಂಕಿಗೆ ತುತ್ತಾದರು. ಅವರ ನಂತರ ಇತರ ಸಹಾಯಕ ಸಿಬ್ಬಂದಿಗಳು ಸಹ ಪಾಸಿಟಿವ್ ಎಂಬ ವರದಿ ಹೊರಬಿತ್ತು.

IPL 2022: ಸೋಲಿನ ಸುಳಿಯಲ್ಲಿರುವ ಡೆಲ್ಲಿ ತಂಡಕ್ಕೆ ಕೊರೊನಾ ಕಾಟ; ತಂಡದ ಮತ್ತೊಬ್ಬ ಆಟಗಾರನಲ್ಲಿ ಸೋಂಕು ಪತ್ತೆ!
ಡೆಲ್ಲಿ ತಂಡ
TV9 Web
| Edited By: |

Updated on: Apr 20, 2022 | 5:37 PM

Share

ಇಂಡಿಯನ್ ಪ್ರೀಮಿಯರ್ ಲೀಗ್ (IPL 2022) ನ 32 ನೇ ಪಂದ್ಯ ನಡೆಯಲಿದೆಯೇ ಅಥವಾ ಇಲ್ಲವೇ? ಈ ಪ್ರಶ್ನೆ ಈಗ ಪ್ರತಿಯೊಬ್ಬ ಅಭಿಮಾನಿಯ ಮನಸ್ಸಿನಲ್ಲಿದೆ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್‌ನ ಇನ್ನೊಬ್ಬ ಆಟಗಾರನಿಗೆ ಕೊರೊನಾ ಪಾಸಿಟಿವ್ (Corona positive) ಎಂದು ಕಂಡುಬಂದಿದೆ. ಮಾಧ್ಯಮ ವರದಿಗಳ ಪ್ರಕಾರ, ದೆಹಲಿ ಕ್ಯಾಪಿಟಲ್ಸ್‌ನ ಮತ್ತೊಬ್ಬ ವಿದೇಶಿ ಆಟಗಾರ ಕೊರೊನಾ ಹಿಡಿತಕ್ಕೆ ಸಿಲುಕಿದ್ದಾರೆ. ಮಂಗಳವಾರ ಇತರ ಆಟಗಾರರೊಂದಿಗೆ ತರಬೇತಿ ಪಡೆದ ಆಟಗಾರನ ಹೆಸರನ್ನು ಟಿಮ್ ಸೀಫರ್ಟ್ ಎಂದು ಹೇಳಲಾಗುತ್ತಿದೆ. ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ನಡುವಿನ ಪಂದ್ಯ (DC vs PBKS) ಮುಂಬೈನ ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆಯಲಿದ್ದು ಈ ಪಂದ್ಯಕ್ಕೆ ಕೆಲವು ಗಂಟೆಗಳ ಮೊದಲು ಟಿಮ್ ಸೀಫರ್ಟ್ ಅವರ ಕೋವಿಡ್ ವರದಿಯು ಪಾಸಿಟಿವ್ ಬಂದಿದೆ.

ಇಂಡಿಯನ್ ಎಕ್ಸ್‌ಪ್ರೆಸ್ ವರದಿಯ ಪ್ರಕಾರ, ವಿದೇಶಿ ಆಟಗಾರನಿಗೆ ಕೋವಿಡ್ ಪಾಸಿಟಿವ್ ಆದ ನಂತರ, ಬಿಸಿಸಿಐ ದೆಹಲಿ ಕ್ಯಾಪಿಟಲ್ಸ್‌ನ ಎಲ್ಲಾ ಆಟಗಾರರನ್ನು ಹೋಟೆಲ್ ಕೋಣೆಯಲ್ಲಿ ಕ್ವಾರಂಟೈನ್ ಮಾಡುವಂತೆ ಕೇಳಿಕೊಂಡಿದೆ. ಬಿಸಿಸಿಐ ಈ ತಂಡದ ಎಲ್ಲ ಆಟಗಾರರಿಗೆ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಲಿದೆ. ಪ್ರತಿ ಆಟಗಾರನ ಕೋಣೆಗೆ ಹೋಗುವ ಮೂಲಕ ಅವರ ಮಾದರಿಯನ್ನು ತೆಗೆದುಕೊಳ್ಳಲಾಗುತ್ತದೆ. ಆರ್‌ಟಿ-ಪಿಸಿಆರ್ ವರದಿ ನೆಗೆಟಿವ್ ಬಂದ ಆಟಗಾರರನ್ನು ಮಾತ್ರ ಆಡುವ XI ನಲ್ಲಿ ಸೇರಿಸಿಕೊಳ್ಳಲು ದೆಹಲಿಗೆ ಸಾಧ್ಯವಾಗುತ್ತದೆ.

ದೆಹಲಿ ಕ್ಯಾಪಿಟಲ್ಸ್‌ನ 6 ಸದಸ್ಯರು ಕೊರೊನಾಗೆ ತುತ್ತಾಗಿದ್ದಾರೆ ದೆಹಲಿ ಕ್ಯಾಪಿಟಲ್ಸ್‌ನ 6 ಆಟಗಾರರು ಕೊರೊನಾ ಹಿಡಿತಕ್ಕೆ ಸಿಲುಕಿದ್ದಾರೆ. ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ಮೊದಲು ಕೊರೊನಾ ಸೋಂಕಿಗೆ ತುತ್ತಾದರು. ಅವರ ನಂತರ ಇತರ ಸಹಾಯಕ ಸಿಬ್ಬಂದಿಗಳು ಸಹ ಪಾಸಿಟಿವ್ ಎಂಬ ವರದಿ ಹೊರಬಿತ್ತು. ಇದರಲ್ಲಿ ತಂಡದ ಮಸಾಜ್ ಸ್ಪೆಷಲಿಸ್ಟ್ ಮತ್ತು ವೈದ್ಯರೂ ಸೇರಿದ್ದಾರೆ. ಆಲ್‌ರೌಂಡರ್ ಮಿಚೆಲ್ ಮಾರ್ಷ್ ಕೂಡ ಕೊರೊನಾದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ದೆಹಲಿ ತಂಡದಲ್ಲಿ ಕೊರೊನಾ ದಾಳಿಯ ನಂತರ, ಬಿಸಿಸಿಐ ಈ ಪಂದ್ಯದ ಸ್ಥಳವನ್ನು ಬದಲಾಯಿಸಿದೆ . ಈ ಮೊದಲು ಪುಣೆಯ ಎಂಸಿಎ ಸ್ಟೇಡಿಯಂನಲ್ಲಿ ಪಂದ್ಯ ನಡೆಯಬೇಕಿತ್ತು ಆದರೆ ಬ್ರೆಬೋರ್ನ್ ಸ್ಟೇಡಿಯಂಗೆ ಸ್ಥಳಾಂತರಿಸಲಾಗಿತ್ತು. ಇದೀಗ ಪಂದ್ಯಕ್ಕೂ ಮುನ್ನ ಮತ್ತೊಮ್ಮೆ ದೆಹಲಿಯ ಮತ್ತೊಬ್ಬ ಆಟಗಾರನಿಗೆ ಕೋವಿಡ್ ಪಾಸಿಟಿವ್ ಕಂಡು ಬಂದಿದೆ. ಅಂದಹಾಗೆ, ವರದಿಗಳ ಪ್ರಕಾರ, ಈ ಪಂದ್ಯವು ನಿಗಧಿಯಂತೆ ನಡೆಯಲಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ದೆಹಲಿ ಮತ್ತು ಪಂಜಾಬ್​ಗೆ ಮಹತ್ವದ ಪಂದ್ಯ ಡೆಲ್ಲಿ ಮತ್ತು ಪಂಜಾಬ್ ಕಿಂಗ್ಸ್‌ಗೆ ಈ ಪಂದ್ಯ ಮಹತ್ವದ್ದಾಗಿದೆ. ಟೂರ್ನಿಯಲ್ಲಿ ಉತ್ತಮ ಆರಂಭ ಪಡೆದ ಎರಡೂ ತಂಡಗಳು ನಂತರದ ಪಂದ್ಯಗಳಲ್ಲಿ ಸೋಲಿನಿಂದ ತತ್ತರಿಸಿವೆ. ಪಂಜಾಬ್ ಕಿಂಗ್ಸ್ 6 ಪಂದ್ಯಗಳಲ್ಲಿ 3 ಗೆಲುವು ಮತ್ತು 3 ಸೋಲುಗಳೊಂದಿಗೆ 7 ನೇ ಸ್ಥಾನದಲ್ಲಿದ್ದರೆ ಡೆಲ್ಲಿ ಕ್ಯಾಪಿಟಲ್ಸ್ 2 ಗೆಲುವು ಮತ್ತು 3 ಸೋಲು ಅವರ ಖಾತೆಯಲ್ಲಿದೆ. ದೆಹಲಿ ಅಂಕಪಟ್ಟಿಯಲ್ಲಿ 8ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:KL Rahul- Athiya Shetty Wedding:ಸಪ್ತಪದಿ ತುಳಿಯಲು ಮುಂದಾದ ರಾಹುಲ್- ಅಥಿಯಾ ಜೋಡಿ! ಮದುವೆ ಯಾವಾಗ?