ಐಪಿಎಲ್ನ 13ನೇ (IPL 2022) ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಜಯ ಸಾಧಿಸಿದೆ. ಆರ್ಆರ್ ತಂಡ ನೀಡಿದ 170 ರನ್ಗಳ ಟಾರ್ಗೆಟ್ ಬೆನ್ನತ್ತಿದ ಆರ್ಸಿಬಿ 19.1 ಓವರ್ನಲ್ಲಿ ಗುರಿ ಮುಟ್ಟುವ ಮೂಲಕ 4 ವಿಕೆಟ್ಗಳ ಗೆಲುವು ತನ್ನದಾಗಿಸಿಕೊಂಡಿತು. ವಿಶೇಷ ಎಂದರೆ ಈ ಪಂದ್ಯದಲ್ಲಿ ಆರ್ಸಿಬಿ ಗೆದ್ದರೂ ಆರ್ಸಿಬಿ ತಂಡದ ಮಾಜಿ ಸ್ಪಿನ್ನರ್ ಯಜುವೇಂದ್ರ ಚಹಲ್ ಅತ್ಯುತ್ತಮವಾಗಿ ಬೌಲಿಂಗ್ ಮಾಡಿದ್ದರು. 4 ಓವರ್ ಬೌಲಿಂಗ್ ಮಾಡಿದ್ದ ಚಹಲ್ ಕೇವಲ 15 ರನ್ ನೀಡಿ 2 ವಿಕೆಟ್ ಪಡೆದಿದ್ದರು. ಅಷ್ಟೇ ಅಲ್ಲದೆ ವಿರಾಟ್ ಕೊಹ್ಲಿಯನ್ನು ರನೌಟ್ ಮಾಡಿ ಮಿಂಚಿದ್ದರು.
ಇತ್ತ ಚಹಲ್ ವಿಕೆಟ್ ಪಡೆಯುತ್ತಿದ್ದಂತೆ ಅತ್ತ ಪತ್ನ ಧನಶ್ರೀ ವರ್ಮಾ ಮೈಮರೆತು ಸಂಭ್ರಮಿಸಿದ್ದರು. ವಿರಾಟ್ ಕೊಹ್ಲಿಯನ್ನು ರನೌಟ್ ಮಾಡಿದ್ದ ಚಹಲ್ ಮರು ಎಸೆತದಲ್ಲೇ ಡೇವಿಡ್ ವಿಲ್ಲಿಯನ್ನು ಕ್ಲೀನ್ ಬೌಲ್ಡ್ ಮಾಡಿದ್ದರು. ಈ ಖುಷಿಯಲ್ಲಿ ಗ್ಯಾಲರಿಯಲ್ಲಿ ಚಹಲ್ ಅವರ ಪತ್ನಿ ಧನಶ್ರೀ ವರ್ಮಾ ಕುಣಿದು ಕುಪ್ಪಳಿಸುತ್ತಿರುವ ವಿಡಿಯೋವನ್ನು ಕ್ಯಾಮೆರಾಮ್ಯಾನ್ ಸೆರೆಹಿಡಿದಿದ್ದರು.
ಇದೀಗ ಧನಶ್ರೀ ವರ್ಮಾ ಅವರ ಸಂಭ್ರಮದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ನಾನಾ ಕಾಮೆಂಟ್ಗಳು ಮೂಡಿಬಂದಿದ್ದು, ಅನೇಕರು ಹೆಂಡತಿ ಅಂದರೆ ಹಿಂಗಿರಬೇಕು ಎಂದಿದ್ದಾರೆ. ಇನ್ನೊಬ್ಬರು ಆರ್ಸಿಬಿ ಕೈಬಿಟ್ಟಿದ್ದಕ್ಕೆ ಚಹಲ್ಗಿಂತ ಕೋಪ ಧನಶ್ರೀ ವರ್ಮಾಗೆ ಇರುವಂತಿದೆ. ಅದಕ್ಕೆ ಈ ಸಂಭ್ರಮ ಎಂದು ಪ್ರತಿಕ್ರಿಯಿಸಿದ್ದಾರೆ.
Biwi Ho To Aisi ???
Dhanashree’s reaction when Yuvi bowls out Willey ? #IPL2022 pic.twitter.com/51YLwAXAHP— Amit ? (@AmitMovieHolic) April 6, 2022
ಒಟ್ಟಿನಲ್ಲಿ ಆರ್ಸಿಬಿ ವಿರುದ್ದವೇ ಭರ್ಜರಿ ಬೌಲಿಂಗ್ ಪ್ರದರ್ಶನ ನೀಡುವ ಮೂಲಕ ಯುಜುವೇಂದ್ರ ಚಹಲ್ ಮಿಂಚಿದ್ದಾರೆ. ಅತ್ತ ಚಹಲ್ ಅವರನ್ನು ಗ್ಯಾಲರಿಯಲ್ಲಿ ಕೂತು, ಕುಣಿದು ಕುಪ್ಪಳಿಸಿ ಬೆಂಬಲಿಸುವ ಮೂಲಕ ಧನಶ್ರೀ ವರ್ಮಾ ಕೂಡ ಎಲ್ಲರ ಗಮನ ಸೆಳೆದಿದ್ದಾರೆ.
ಇದನ್ನೂ ಓದಿ: IPL 2022: ಐಪಿಎಲ್ನ ಮೊದಲ ವಾರದಲ್ಲಿ ನಿರ್ಮಾಣವಾದ ದಾಖಲೆಗಳಿವು..!
ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್
(IPL 2022: Dhanashree Verma’s crazy celebration goes VIRAL)