IPL 2022: ನಮಗೆ ಸೋಲೇ ಇಲ್ಲ…ಗುಜರಾತ್ ಟೈಟನ್ಸ್ ಕೋಚ್ ನೆಹ್ರಾ ಭರ್ಜರಿ ಡ್ಯಾನ್ಸ್
IPL 2022: ಗುಜರಾತ್ ಟೈಟನ್ಸ್ (GT): ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಹಮಾನುಲ್ಲಾ ಗುರ್ಬಾಜ್, ವೃದ್ಧಿಮಾನ್ ಸಹಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಡೊಮಿನಿಕ್ ಡ್ರೇಕ್ಸ್, ರಶೀದ್ ಖಾನ್.
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ (IPL 2022) ಸೀಸನ್ನಲ್ಲಿ ಭರ್ಜರಿ ಪೈಪೋಟಿ ಕಂಡು ಬರುತ್ತಿದೆ. ಈ ಬಾರಿ ಸೇರ್ಪಡೆಯಾಗಿರುವ 2 ಹೊಸ ತಂಡಗಳಾದ ಲಕ್ನೋ ಸೂಪರ್‌ಜೈಂಟ್ಸ್ ಮತ್ತು ಗುಜರಾತ್ ಟೈಟನ್ಸ್ ಕೂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಅದರಲ್ಲೂ ಗುಜರಾತ್ ಟೈಟನ್ಸ್ ತಂಡವು ಆಡಿರುವ ಮೊದಲ ಎರಡೂ ಪಂದ್ಯಗಳಲ್ಲೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಹೊಸ ನಾಯಕನಾಗಿ ಹಾರ್ದಿಕ್ ಪಾಂಡ್ಯ ಮಿಂಚುತ್ತಿದ್ದರೆ, ಕೋಚ್ ಆಗಿ ಟೀಮ್ ಇಂಡಿಯಾ ಮಾಜಿ ಆಟಗಾರ ಆಶಿಶ್ ನೆಹ್ರಾ ಯಶಸ್ವಿಯಾಗಿದ್ದಾರೆ. ಇತ್ತ ಉತ್ತಮ ಆರಂಭ ಪಡೆದಿರುವ ಗುಜರಾತ್ ಟೈಟನ್ಸ್ ತಂಡವು ರಿಲ್ಯಾಕ್ಸ್ ಮೂಡಿನಲ್ಲಿದೆ.
ಸದ್ಯ ಗುಜರಾತ್ ಟೈಟನ್ಸ್ ತಂಡವು ಮುಂದಿನ ಪಂದ್ಯಕ್ಕಾಗಿ ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ. ಇದೇ ವೇಳೆ ಕೋಚ್ ಆಶಿಶ್ ನೆಹ್ರಾ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಸೆರೆ ಹಿಡಿಯಲಾಗಿದೆ. ಯಾವುದೇ ಚಿಂತೆಯಿಲ್ಲದೆ ಅಭ್ಯಾಸ ವೇಳೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವನ್ನು ಗುಜರಾತ್ ಟೈಟನ್ಸ್ ತಂಡವು ತನ್ನ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದೆ.
ಈ ವಿಡಿಯೋ ನಾನಾ ರೀತಿಯ ಪ್ರಕ್ರಿಯೆಗಳು ಬಂದಿದ್ದು, ಬಹುತೇಕರು ನಮಗೆ ಸೋಲೇ ಇಲ್ಲ ಎಂಬ ಖುಷಿಯಲ್ಲಿ ಗುಜರಾತ್ ಟೈಟನ್ಸ್ ಕೋಚ್ ಗೆಲುವಿನ ಅಲೆಯಲ್ಲಿ ತೇಲುತ್ತಿದ್ದಾರೆ ಎಂದು ಕಮೆಂಟಿಸಿದ್ದಾರೆ.
Nehra Ji ka ????? in full ?????!??#SeasonOfFirsts #AavaDe #TATAIPL
[?: International Gujarati/IQ] pic.twitter.com/ksNkPs9Wt7
— Gujarat Titans (@gujarat_titans) April 5, 2022
ಇದಕ್ಕೂ ಮುನ್ನ ಆಶಿಶ್ ನೆಹ್ರಾ ಅವರ ಫೋಟೋ ವೈರಲ್ ಆಗಿತ್ತು. ಒಂದು ಪೇಪರ್‌ನೊಂದಿಗೆ ಮೈದಾನದಲ್ಲಿ ಕುಳಿತಿರುವುದು ಈ ಫೋಟೋದಲ್ಲಿ ಕಾಣಬಹುದು. ಎಲ್ಲಾ ತಂಡಗಳು ಲಾಪ್ಟಾಪ್ಗಳೊಂದಿಗೆ ಪ್ಲ್ಯಾನ್ ರೂಪಿಸುತ್ತಿದ್ದರೆ, ನೆಹ್ರಾ ಮಾತ್ರ ಹಳೆಯ ಸ್ಟ್ರೈಲ್ನಲ್ಲೇ ಪ್ಲ್ಯಾನ್ ರೂಪಿಸಿ ಗೆಲ್ಲುತ್ತಿದ್ದಾರೆ ಎಂದು ಅನೇಕರು ಕಿಚಾಯಿಸಿದ್ದರು. ಇದೀಗ ಡ್ಯಾನ್ಸ್ ಮೂಲಕ ಆಶಿಶ್ ನೆಹ್ರಾ ಮತ್ತೊಮ್ಮೆ ವೈರಲ್ ಆಗಿದ್ದಾರೆ.
ಈಗಾಗಲೇ ಎರಡು ಪಂದ್ಯಗಳನ್ನು ಗೆದ್ದಿರುವ ಗುಜರಾತ್ ಟೈಟನ್ಸ್ ತಂಡವು ತನ್ನ ಮುಂದಿನ ಪಂದ್ಯವನ್ನು ಏಪ್ರಿಲ್ 8 ರಂದು ಆಡಲಿದೆ. ಪಂಜಾಬ್ ಕಿಂಗ್ಸ್ ವಿರುದ್ದ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿದೆ ಗುಜರಾತ್ ಟೈಟನ್ಸ್.
ಗುಜರಾತ್ ಟೈಟನ್ಸ್ (GT): ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ರಹಮಾನುಲ್ಲಾ ಗುರ್ಬಾಜ್, ವೃದ್ಧಿಮಾನ್ ಸಹಾ, ಅಭಿನವ್ ಮನೋಹರ್, ವಿಜಯ್ ಶಂಕರ್, ರಾಹುಲ್ ತೆವಾಟಿಯಾ, ಡೊಮಿನಿಕ್ ಡ್ರೇಕ್ಸ್, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಯಶ್ ದಯಾಳ್, ಜಯಂತ್ ಯಾದವ್, ಆರ್ ಸಾಯಿ ಕಿಶೋರ್, ನೂರ್ ಅಹ್ಮದ್, ಅಲ್ಜಾರಿ ಜೋಸೆಫ್, ಪ್ರದೀಪ್ ಸಾಂಗ್ವಾನ್, ಡೇವಿಡ್ ಮಿಲ್ಲರ್, ಮ್ಯಾಥ್ಯೂ ವೇಡ್, ಗುರುಕೀರತ್ ಸಿಂಗ್, ಬಿ ಸಾಯಿ ಸುದರ್ಶನ್.
ಇದನ್ನೂ ಓದಿ: KL Rahul: ಟಿ20 ಕ್ರಿಕೆಟ್ನಲ್ಲಿ ಮತ್ತೊಂದು ಸಾಧನೆ ಮಾಡಿದ ಕೆಎಲ್ ರಾಹುಲ್