IPL 2022: ಕೆಎಲ್ ರಾಹುಲ್ ಬೌಲ್ಡ್ ಹಿಂದಿದೆ ಇಬ್ಬರು ನ್ಯೂಜಿಲೆಂಡ್ ಆಟಗಾರರ ಮಾಸ್ಟರ್ ಪ್ಲ್ಯಾನ್

| Updated By: ಝಾಹಿರ್ ಯೂಸುಫ್

Updated on: Apr 11, 2022 | 5:10 PM

IPL 2022: ನ್ಯೂಜಿಲೆಂಡ್ ಆಟಗಾರರ ಈ ಮಾಸ್ಟರ್​ ಪ್ಲ್ಯಾನ್​ನಿಂದಾಗಿ ಕೆಎಲ್ ರಾಹುಲ್ ಇನಿಂಗ್ಸ್​ನ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗಿ ಹೊರನಡೆದಿದ್ದರು. ಇದು ಲಕ್ನೋ ತಂಡದ ಪಾಲಿಗೂ ದುಬಾರಿಯಾಯಿತು.

IPL 2022: ಕೆಎಲ್ ರಾಹುಲ್ ಬೌಲ್ಡ್ ಹಿಂದಿದೆ ಇಬ್ಬರು ನ್ಯೂಜಿಲೆಂಡ್ ಆಟಗಾರರ ಮಾಸ್ಟರ್ ಪ್ಲ್ಯಾನ್
KL Rahul
Follow us on

IPL 2022: ಐಪಿಎಲ್​ ಸೀಸನ್ 15 ನಲ್ಲಿ ಕೆಎಲ್ ರಾಹುಲ್ (KL Rahul) ಎರಡು ಬಾರಿ ಶೂನ್ಯಕ್ಕೆ ಔಟಾಗಿದ್ದಾರೆ. ಮೊದಲ ಬಾರಿಗೆ ಗುಜರಾತ್ ಟೈಟನ್ಸ್ ವೇಗಿ ಮೊಹಮ್ಮದ್ ಶಮಿ ಎಸೆತದಲ್ಲಿ ಔಟಾದರೆ, 2ನೇ ಬಾರಿ ರಾಜಸ್ಥಾನ್ ರಾಯಲ್ಸ್ ವೇಗಿ ಟ್ರೆಂಟ್ ಬೌಲ್ಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಅದು ಕೂಡ ಪಂದ್ಯದ ಮೊದಲ ಎಸೆತದಲ್ಲಿ ಎಂಬುದು ವಿಶೇಷ. ಈ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡವು 6 ವಿಕೆಟ್​ ನಷ್ಟಕ್ಕೆ 165 ರನ್ ಕಲೆಹಾಕಿತು. ಈ ಸ್ಪರ್ಧಾತ್ಮಕ ಗುರಿ ಬೆನ್ನತ್ತಲು ಕೆಎಲ್ ರಾಹುಲ್ ಹಾಗೂ ಕ್ವಿಂಟನ್ ಡಿಕಾಕ್ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಇತ್ತ ರಾಜಸ್ಥಾನ್ ರಾಯಲ್ಸ್ ನಾಯಕ ಸಂಜು ಸ್ಯಾಮ್ಸನ್ ಮೊದಲ ಓವರ್​ಗೆ ಚೆಂಡನ್ನು ಟ್ರೆಂಟ್ ಬೌಲ್ಟ್ ಕೈಗಿತ್ತರು.

ಮೊದಲ ಎಸೆತದಲ್ಲೇ ಕೆಎಲ್ ರಾಹುಲ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿ ಟ್ರೆಂಟ್ ಬೌಲ್ಟ್ ವಿಶೇಷ ರೀತಿಯಲ್ಲಿ ಸಂಭ್ರಮಿಸಿದ್ದರು. ಅದು ಕೂಡ ಡಗೌಟ್​ನತ್ತ ಕೈ ತೋರಿಸುವ ಮೂಲಕ ಎಂಬುದು ವಿಶೇಷ. ಇದಕ್ಕೆ ಕಾರಣವೇನು ಎಂಬುದನ್ನು ಖುದ್ದು ಟ್ರೆಂಟ್ ಬೌಲ್ಟ್ ಬಹಿರಂಗಪಡಿಸಿದ್ದಾರೆ. ಕೆಎಲ್ ರಾಹುಲ್ ಐಪಿಎಲ್​ನ ಅತ್ಯುತ್ತಮ ಬ್ಯಾಟ್ಸ್​ಮನ್​ಗಳಲ್ಲಿ ಒಬ್ಬರು. ಈ ಬಾರಿ ಕೂಡ ಅದ್ಭುತ ಪ್ರದರ್ಶನ ಮುಂದುವರೆಸಿದ್ದಾರೆ. ಹೀಗಾಗಿ ಅವರ ವಿಕೆಟ್ ನಮಗೆ ಬಹಳ ಮುಖ್ಯ. ಇದಕ್ಕಾಗಿ ನಾವು ವಿಶೇಷ ರೀತಿಯಲ್ಲಿ ಪ್ಲ್ಯಾನ್ ರೂಪಿಸಿದ್ದೆವು.

ಅಲ್ಲದೆ ಕೆಎಲ್ ರಾಹುಲ್​ ವಿಕೆಟ್ ಪಡೆಯಲು ರಾಜಸ್ಥಾನ್ ರಾಯಲ್ಸ್ ತಂಡದಲ್ಲಿರುವ ನ್ಯೂಜಿಲೆಂಡ್ ಆಲ್​ರೌಂಡರ್ ಜಿಮ್ಮಿ ನೀಶಮ್ ಜೊತೆ ನಾನು ಚರ್ಚಿಸಿದ್ದೆ. ಅದರಂತೆ ನಾವಿಬ್ಬರೂ ಬೌಲಿಂಗ್ ಲೈನಪ್ ಹಾಗೂ ಕೆಎಲ್ ರಾಹುಲ್ ಅವರ ಬ್ಯಾಟಿಂಗ್ ಸ್ಟೈಲ್ ಅನ್ನು ಚೆನ್ನಾಗಿ ಕರಗತ ಮಾಡಿಕೊಂಡೆವು. ಅದರಲ್ಲೂ ಜಿಮ್ಮಿ ನೀಶಮ್ ನನಗೆ ಬೌಲಿಂಗ್ ಲೈನ್ ಬದಲಿಸಲು ಸೂಚಿಸಿದ್ದರು. ಅಲ್ಲದೆ ಹೀಗೆ ಮಾಡುವುದರಿಂದ ರಾಹುಲ್ ವಿಕೆಟ್ ಪಡೆಯಬಹುದೆಂದು ಐಡಿಯಾ ಕೊಟ್ಟರು.

ಅದರಂತೆ ನಾನು ವಿಕೆಟ್ ಟು ವಿಕೆಟ್ ಬೌಲ್ ಮಾಡದೇ ರೌಂಡ್ ದಿ ವಿಕೆಟ್ ಬೌಲಿಂಗ್ ಮಾಡಿದೆ. ಜಿಮ್ಮಿ ನೀಶಮ್ ಅವರ ಮಾಸ್ಟರ್ ಪ್ಲ್ಯಾನ್ ವರ್ಕ್​ ಆಯಿತು. ಕೆಎಲ್ ರಾಹುಲ್ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆದರು. ಹೀಗಾಗಿ ನಾನು ಕೆಎಲ್ ರಾಹುಲ್ ವಿಕೆಟ್ ಸಿಕ್ಕಾಗ ಡಗೌಟ್​ನಲ್ಲಿ ಕೂತಿದ್ದ ಜಿಮ್ಮಿ ನೀಶಮ್​ನತ್ತ ಬೆರಳು ತೋರಿಸಿ ಸಂಭ್ರಮಿಸಿದ್ದೆ ಎಂದು ಟ್ರೆಂಟ್ ಬೌಲ್ಟ್ ಹೇಳಿದ್ದಾರೆ.

ಒಟ್ಟಿನಲ್ಲಿ ನ್ಯೂಜಿಲೆಂಡ್ ಆಟಗಾರರ ಈ ಮಾಸ್ಟರ್​ ಪ್ಲ್ಯಾನ್​ನಿಂದಾಗಿ ಕೆಎಲ್ ರಾಹುಲ್ ಇನಿಂಗ್ಸ್​ನ ಮೊದಲ ಎಸೆತದಲ್ಲೇ ಕ್ಲೀನ್ ಬೌಲ್ಡ್ ಆಗಿ ಹೊರನಡೆದಿದ್ದರು. ಇದು ಲಕ್ನೋ ತಂಡದ ಪಾಲಿಗೂ ದುಬಾರಿಯಾಯಿತು. ಏಕೆಂದರೆ ಆರಂಭಿಕ ಆಘಾತಕ್ಕೆ ಒಳಗಾದ ಲಕ್ನೋ ಆ ಬಳಿಕ ಚೇತರಿಸಿಕೊಂಡಿಲ್ಲ. ಅಂತಿಮವಾಗಿ 3 ರನ್​ಗಳಿಂದ ಸೋಲನುಭವಿಸಿತು.

 

ಇದನ್ನೂ ಓದಿ: Virat Kohli: ಐಪಿಎಲ್​ ಇತಿಹಾಸದಲ್ಲೇ ಯಾರೂ ಮಾಡಿರದ ದಾಖಲೆ ಬರೆದ ಕಿಂಗ್ ಕೊಹ್ಲಿ

ಇದನ್ನೂ ಓದಿ: Prithvi Shaw: ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಸೆಹ್ವಾಗ್ ದಾಖಲೆ ಸರಿಗಟ್ಟಿದ ಪೃಥ್ವಿ ಶಾ