Lucknow Super Giants logo: ಲೋಗೋ ಅನಾವರಣಗೊಳಿಸಿದ ಲಕ್ನೋ ಸೂಪರ್ ಜೈಂಟ್ಸ್
IPL 2022 Lucknow Super Giants logo: ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದು, ಜೊತೆಗೆ ಆಸ್ಟ್ರೇಲಿಯಾ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಹಾಗೂ ರವಿ ಬಿಷ್ನೋಯ್ ಅವರನ್ನು ಲಕ್ನೋ ಫ್ರಾಂಚೈಸಿ ಸ್ಪೆಷಲ್ ಪಿಕ್ ಮೂಲಕ ಆಯ್ಕೆ ಮಾಡಿಕೊಂಡಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಲೀಗ್ ಐಪಿಎಲ್ (IPL 2022 ) ನ ಮುಂದಿನ ಸೀಸನ್ನಲ್ಲಿ ಹೊಸ ಎರಡು ತಂಡಗಳು ಕಾಣಿಸಿಕೊಳ್ಳಲಿದೆ. ಅದರಂತೆ ಈಗಾಗಲೇ ಲಕ್ನೋ ಫ್ರಾಂಚೈಸಿ ತಂಡಕ್ಕೆ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants) ಎಂದು ಹೆಸರಿಟ್ಟಿದ್ದಾರೆ. ಇದಾಗ್ಯೂ ಅಹಮದಾಬಾದ್ ತಂಡ ಇನ್ನೂ ಕೂಡ ಹೆಸರು ಫೈನಲ್ ಮಾಡಿಲ್ಲ. ಇದೀಗ ಲಕ್ನೋ ಸೂಪರ್ ಜೈಂಟ್ಸ್ (Lucknow Super Giants logo) ತನ್ನ ಲೋಗೋವನ್ನು ಕೂಡ ಅನಾವರಣಗೊಳಿಸುವ ಮೂಲಕ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಆರ್‌ಪಿ ಸಂಜೀವ್ ಗೋಯೆಂಕಾ ಒಡೆತನದ ಲಕ್ನೋ ತಂಡವು ತನ್ನ ಲಾಂಛನದಲ್ಲಿ ಬ್ಯಾಟ್ ಮತ್ತು ಬಾಲ್ಗಳ ಸಿಂಬಲ್ಗಳನ್ನು ಬಳಸಿದ್ದು, ಅದರ ಮೇಲೆ ಗರುಡಾಕಾರದಲ್ಲಿ ತ್ರಿವರ್ಣ ಗರಿಗಳನ್ನು ಚಿತ್ರಿಸಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ಹಂಚಿಕೊಂಡಿರುವ ಲೋಗೋ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಹೊಸ ಲೋಗೋ ಪ್ರಾಚೀನ ಭಾರತದ ಪುರಾಣಗಳಿಂದ ಪ್ರೇರಿತವಾಗಿದೆ ಎಂದು ಸಂದೇಶದಲ್ಲಿ ತಿಳಿಸಲಾಗಿದೆ. ಈ ಲೋಗೋದಲ್ಲಿ ಬಳಸಲಾಗಿರುವ ಗರುಡಾಕೃತಿ ವೇಗವನ್ನು ಮತ್ತು ಶಕ್ತಿಯನ್ನು ಪ್ರತಿನಿಧಿಸಲಾಗಿದೆ. ತ್ರಿವರ್ಣ ರೆಕ್ಕೆಗಳು ಲಕ್ನೋ ಸೂಪರ್ ಜೈಂಟ್ಸ್‌ನ ಪ್ಯಾನ್-ಇಂಡಿಯಾ ತಂಡದ ಸಂಕೇತ. ಹೀಗಾಗಿ ಇದು ಪ್ರತಿಯೊಬ್ಬ ಭಾರತೀಯರ ತಂಡ ಎಂದು ಲಕ್ನೋ ಫ್ರಾಂಚೈಸಿ ಹೇಳಿಕೊಂಡಿದೆ. ಹಾಗೆಯೇ ಕ್ರಿಕೆಟ್ ಆಟವನ್ನು ಸೂಚಿಸಲು ನೀಲಿ ಬಣ್ಣದ ಬ್ಯಾಟ್ ನೀಡಲಾಗಿದ್ದು, ಅದರಲ್ಲಿ ಕೆಂಪು ಚೆಂಡಿನ ವಿನ್ಯಾಸ ಚಿತ್ರಿಸಲಾಗಿದೆ. ಇದು ಮಂಗಳಕರವಾದ ‘ಜಯ ತಿಲಕ’ ವನ್ನು ಪ್ರತಿನಿಧಿಸುತ್ತದೆ ಎಂದು ತಿಳಿಸಲಾಗಿದೆ.
ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿ ಕೆಎಲ್ ರಾಹುಲ್ ಕಾಣಿಸಿಕೊಳ್ಳಲಿದ್ದು, ಜೊತೆಗೆ ಆಸ್ಟ್ರೇಲಿಯಾ ಆಲ್ರೌಂಡರ್ ಮಾರ್ಕಸ್ ಸ್ಟೊಯಿನಿಸ್ ಹಾಗೂ ರವಿ ಬಿಷ್ನೋಯ್ ಅವರನ್ನು ಲಕ್ನೋ ಫ್ರಾಂಚೈಸಿ ಸ್ಪೆಷಲ್ ಪಿಕ್ ಮೂಲಕ ಆಯ್ಕೆ ಮಾಡಿಕೊಂಡಿದೆ.
ಐಪಿಎಲ್ ಮೆಗಾ ಹರಾಜು ಫೆಬ್ರವರಿ 12 ಮತ್ತು 13 ರಂದು ಬೆಂಗಳೂರಿನಲ್ಲಿ ನಡೆಯಲಿದ್ದು, ಬಿಡ್ಡಿಂಗ್ಗಾಗಿ ಈಗಾಗಲೇ ಲಕ್ನೋ ಪ್ರಾಂಚೈಸಿ ಕಾರ್ಯತಂತ್ರಗಳನ್ನು ರೂಪಿಸುತ್ತಿದೆ. ಈ ಮೂಲಕ ಬಲಿಷ್ಠ ತಂಡ ಕಟ್ಟುವ ಇರಾದೆಯಲ್ಲಿದ್ದಾರೆ ಉದ್ಯಮಿ ಸಂಜೀವ್ ಗೊಯೇಂಕಾ.
Soaring towards greatness. ??
Lucknow Super Giants is all set to stretch its wings. ? Prepare for greatness! ??#LucknowSuperGiants #IPL pic.twitter.com/kqmkyZX6Yi
— Lucknow Super Giants (@LucknowIPL) January 31, 2022
ಐಪಿಎಲ್ ಮೆಗಾ ಹರಾಜಿಗೆ ಲಭ್ಯವಿರುವ ಸ್ಟಾರ್ ಆಟಗಾರರ ಪಟ್ಟಿ ಹೀಗಿದೆ:
2 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರು:
ಆರ್. ಅಶ್ವಿನ್, ಯುಜ್ವೇಂದ್ರ ಚಹಾಲ್, ದೀಪಕ್ ಚಹಾರ್, ಶಿಖರ್ ಧವನ್, ಶ್ರೇಯಸ್ ಅಯ್ಯರ್, ಮೊಹಮ್ಮದ್ ಶಮಿ, ದೇವದತ್ ಪಡಿಕ್ಕಲ್, ಕ್ರುನಾಲ್ ಪಾಂಡ್ಯ, ಹರ್ಷಲ್ ಪಟೇಲ್, ಸುರೇಶ್ ರೈನಾ, ಅಂಬಟಿ ರಾಯುಡು, ಶಾರ್ದೂಲ್ ಥಾಕೂರ್, ರಾಬಿನ್ ಉತ್ತಪ್ಪ, ಉಮೇಶ್ ಯಾದವ್, ದಿನೇಶ್ ಕಾರ್ತಿಕ್, ಇಶಾನ್ ಕಿಶನ್, ಭುವನೇಶ್ವರ್ ಕುಮಾರ್, ಮುಜೀಬ್ ಝರ್ದನ್, ಆಸ್ಟನ್ ಅಗರ್, ನಥನ್ ಕಲ್ಟರ್ ನೈಲ್, ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಜ್ಲೆವುಡ್, ಮಿಚೆಲ್ ಮಾರ್ಶ್, ಸ್ಟೀವ್ ಸ್ಮಿತ್, ಮ್ಯಾಥ್ಯೂ ವೇಡ್, ಡೇವಿಡ್ ವಾರ್ನರ್, ಆ್ಯಡಂ ಝಂಪಾ, ಶಕಿಬ್ ಅಲ್ ಹಸನ್, ಮುಸ್ತಫಿಜುರ್ ರೆಹ್ಮಾನ್, ಸ್ಯಾಮ್ ಬಿಲ್ಲಿಂಗ್ಸ್, ಸಖೀಬ್ ಮೊಹಮ್ಮದ್, ಕ್ರಿಸ್ ಜೋರ್ಡನ್, ಗ್ರೈಗ್ ಓವರ್ಟನ್, ಆದಿಲ್ ರಶೀದ್, ಜೇಸನ್ ರಾಯ್, ಜೇಮ್ಸ್ ವಿನ್ಸ್, ಡೇವಿಡ್ ವಿಲ್ಲೆ, ಮಾರ್ಕ್ ವುಡ್, ಟ್ರೆಂಟ್ ಬೌಲ್ಟ್, ಲೂಕಿ ಫರ್ಗುಸನ್, ಕ್ವಿಂಟನ್ ಡಿಕಾಕ್, ಮರ್ಚೆಂಟ್ ಲ್ಯಾಂಗ್, ಫಾಫ್ ಡುಪ್ಲೆಸಿಸ್, ಕಗಿಸೊ ರಬಾಡ, ಇಮ್ರಾನ್ ತಾಹೀರ್, ಫಾಬಿನ್ ಅಲೆನ್, ಡ್ವೇನ್ ಬ್ರಾವೋ, ಎವಿನ್ ಲೆವಿಸ್, ಓಡೆನ್ ಸ್ಮಿತ್.
1.5 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರು:
ಅಮಿತ್ ಮಿಶ್ರಾ, ಇಶಾಂತ್ ಶರ್ಮಾ, ವಾಷಿಂಗ್ಟನ್ ಸುಂದರ್, ಆ್ಯರೋನ್ ಫಿಂಚ್, ಕ್ರಿಸ್ ಲಿನ್, ನೇಥನ್ ಲ್ಯಾನ್, ಕೇನ್ ರಿಚರ್ಡಸನ್, ಜಾನಿ ಬೈರ್ಸ್ಟೋ, ಅಲೆಕ್ಸ್ ಹೇಲ್ಸ್, ಇಯಾನ್ ಮಾರ್ಗನ್, ಡೇವಿಡ್ ಮಲನ್, ಆ್ಯಡಂ ಮಿಲ್ನೆ, ಕಾಲಿನ್ ಮುನ್ರೊ, ಜಿಮ್ಮಿ ನೀಶಮ್, ಗ್ಲೆನ್ ಫಿಲಿಪ್ಸ್, ಟಿಮ್ ಸೌಥೀ, ಕಾಲಿನ್ ಇನ್ಗ್ರಾಮ್, ಶಿಮ್ರೋನ್ ಹೆಟ್ಮೇರ್, ಜೇಸನ್ ಹೋಲ್ಡರ್, ನಿಕೋಲಸ್ ಪೂರನ್.
1 ಕೋಟಿ ಮೂಲಬೆಲೆ ಹೊಂದಿರುವ ಆಟಗಾರರು:
ಮನೀಶ್ ಪಾಂಡೆ, ಪಿಯೂಶ್ ಚಾವ್ಲಾ, ಪ್ರಸಿದ್ಧ್ ಕೃಷ್ಣ, ಟಿ. ನಟರಾಜನ್, ಅಜಿಂಕ್ಯಾ ರಹಾನೆ, ನಿತೀಶ್ ರಾಣ, ವೃದ್ದಿಮಾನ್ ಸಾಹ, ಕೇದರ್ ಜಾಧವ್, ಕುಲ್ದೀಪ್ ಯಾದವ್, ಜಯಂತ್ ಯಾದವ್, ಮೊಹಮ್ಮದ್ ನಬಿ, ಜೇಮ್ಸ್ ಫಾಲ್ಕನರ್, ಮೋಸಿಸ್ ಹೆನ್ರಿಕ್ಯೂಸ್, ಮಾರ್ನಸ್ ಲಾಬುಶೇನ್, ರಿಲೆ ಮೆರೆಡಿತ್, ಜೋಶ್ ಫಿಲಿಪ್, ಲ್ಯಾಮ್ ಲಿವಿಂಗ್ಸ್ಟೋನ್, ಟೈಮಲ್ ಮಿಲ್ಸ್, ಆ್ಯಡಂ ಮರ್ಕಮ್, ರಿಲಿ ರೊಸ್ಸೋ, ತಬ್ರೈಸ್ ಶಂಸಿ, ರಾಸ್ಸಿ ವಾನ್ ಡೇರ್ ಡ್ಸೆನ್, ವಾನಿಂದು ಹಸರಂಗ, ರೋಸ್ಟನ್ ಚೇಸ್, ಶೆರ್ಫಾನ್ ರುಥರ್ಫಾರ್ಡ್, ಡಾರ್ಸಿ ಶಾರ್ಟ್, ಆ್ಯಂಡ್ರೊ ಟೈ, ಡೇನ್ ಲಾರೆನ್ಸ್, ಓಲಿ ಪೋಪ್, ಡೆವೋನ್ ಕಾನ್ವೇ, ಕಾಲಿನ್ ಗ್ರ್ಯಾಂಡ್ಹೋಮ್, ಮಿಚೆಲ್ ಸ್ಯಾಂಟ್ನರ್.
ಇದನ್ನೂ ಓದಿ: IND vs WI: ದಕ್ಷಿಣ ಆಫ್ರಿಕಾ ವಿರುದ್ದದ ಸರಣಿಯಲ್ಲಿದ್ದ 5 ಆಟಗಾರರು ಟೀಮ್ ಇಂಡಿಯಾದಿಂದ ಔಟ್..!
ಇದನ್ನೂ ಓದಿ: ICC ODI Rankings: ಐಸಿಸಿ ಏಕದಿನ ರ‍್ಯಾಕಿಂಗ್ ಪಟ್ಟಿ ಪ್ರಕಟ: ಕೊಹ್ಲಿ-ರೋಹಿತ್ ನಡುವೆ ಪೈಪೋಟಿ
ಇದನ್ನೂ ಓದಿ: IPL 2022 Auction: ಲಕ್ನೋ ತಂಡದ ಮೊದಲ ಟಾರ್ಗೆಟ್ ಯಾರು ಎಂಬುದನ್ನು ಬಹಿರಂಗಪಡಿಸಿದ ರಾಹುಲ್
(IPL 2022: Lucknow Super Giants unveils team logo)
Published On - 6:26 pm, Mon, 31 January 22