IPL 2022: CSK ತಂಡಕ್ಕೆ ಜೂನಿಯರ್ ಮಾಲಿಂಗ ಎಂಟ್ರಿ
IPL 2022 Matheesha Pathirana: ಪತಿರಾನ ಇನ್ನೂ ಸೀನಿಯರ್ ಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ.ಒಂದು ಲಿಸ್ಟ್ ಎ ಮತ್ತು ಎರಡು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ.
IPL 2022: ಐಪಿಎಲ್ 2022 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಮತ್ತೊಂದು ಹಿನ್ನಡೆ ಅನುಭವಿಸಿದೆ . ತಂಡದ ವೇಗದ ಬೌಲರ್ ಆ್ಯಡಂ ಮಿಲ್ನ್ (Adam Milne) ಟೂರ್ನಿಯಿಂದ ಹೊರಗುಳಿದಿದ್ದಾರೆ. ಮಂಡಿರಜ್ಜು ಗಾಯದಿಂದ ಬಳಲುತ್ತಿರುವ ಮಿಲ್ನ್ ಬದಲಿಗೆ ಸಿಎಸ್‌ಕೆ ತಂಡವು ಶ್ರೀಲಂಕಾದ ಯುವ ಬೌಲರ್ ಮಥೀಶ ಪತಿರಾನ (Matheesha Pathirana) ಅವರನ್ನು ಆಯ್ಕೆ ಮಾಡಿಕೊಂಡಿದೆ . 19 ವರ್ಷದ ಬಲಗೈ ಮಧ್ಯಮ ವೇಗಿ ಪತಿರಾನ ಅವರ ಬೌಲಿಂಗ್ ಶೈಲಿಯು ಲಸಿತ್ ಮಾಲಿಂಗ ಅವರನ್ನು ಹೋಲುತ್ತದೆ. ಹೀಗಾಗಿ ಮಥೀಶ ಜೂನಿಯರ್ ಮಾಲಿಂಗ ಎಂದೇ ಖ್ಯಾತಿ ಪಡೆದಿದ್ದಾರೆ.
19 ವರ್ಷದೊಳಗಿನವರ 2020ರ ವಿಶ್ವಕಪ್ ಮತ್ತು 2022 ವಿಶ್ವಕಪ್‌ನಲ್ಲಿ ಮಥೀಶಾ ಪತಿರಾನಾ ಶ್ರೀಲಂಕಾ ತಂಡದ ಭಾಗವಾಗಿದ್ದರು. 2022 ರ 19 ವರ್ಷದೊಳಗಿನವರ ವಿಶ್ವಕಪ್‌ನಲ್ಲಿ, ಅವರು ನಾಲ್ಕು ಪಂದ್ಯಗಳಲ್ಲಿ 27.28 ಸರಾಸರಿಯಲ್ಲಿ ಏಳು ವಿಕೆಟ್‌ಗಳನ್ನು ಪಡೆದು ಮಿಂಚಿದ್ದರು. ಅಲ್ಲದೆ ಅವರ ಎಕನಾಮಿ ರೇಟ್ ಕೇವಲ 6.16 ಆಗಿತ್ತು. ಯಾರ್ಕರ್ ಎಸೆಯುವ ಸಾಮರ್ಥ್ಯ ಹೊಂದಿರುವ ಪತಿರಾನ ಅವರು ಇದೀಗ 20 ಲಕ್ಷ ರೂ.ಗೆ ಸಿಎಸ್‌ಕೆ ತಂಡದ ಭಾಗವಾಗಿದ್ದಾರೆ.
ಸಿಎಸ್‌ಕೆ ರಾಡಾರ್‌ನಲ್ಲಿದ್ದ ಪತಿರಾನ: ಪತಿರಾನ ಇನ್ನೂ ಸೀನಿಯರ್ ಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನು ಆಡಿಲ್ಲ.ಒಂದು ಲಿಸ್ಟ್ ಎ ಮತ್ತು ಎರಡು ಟಿ20 ಪಂದ್ಯಗಳನ್ನು ಮಾತ್ರ ಆಡಿದ್ದಾರೆ. ಇದಾಗ್ಯೂ ಅವರು ಸಿಎಸ್‌ಕೆ ತಂಡದ ರಾಡಾರ್‌ನಲ್ಲಿದ್ದರು. ಈ ಬಾರಿ ಸಿಎಸ್‌ಕೆ ತಂಡವು ಮಹೇಶ್ ತೀಕ್ಷಣ ಜೊತೆಗೆ ಪತಿರಾನ ಅವರನ್ನು ಮೀಸಲು ಆಟಗಾರನಾಗಿ ತಮ್ಮೊಂದಿಗೆ ಇಟ್ಟುಕೊಂಡಿತ್ತು. ಇದೀಗ ಆ್ಯಡಂ ಮಿಲ್ನ್ ಹೊರಬೀಳುತ್ತಿದ್ದಂರೆ ಅವಕಾಶ ಸಿಕ್ಕಿದೆ.
A video of Matheesha Pathirana from his debut game for Trinity College in Kandy in September 2019. New Lasith Malinga? Can he make a mark in ICC Under-19 World Cup? #U19WC @mufaddal_vohra @FarziCricketer @karthik_jammy @im_yash2307 https://t.co/32WSnHxdmq pic.twitter.com/6wOO9BFsy0
— Subhayan Chakraborty (@CricSubhayan) January 19, 2020
ಆ್ಯಡಂ ಮಿಲ್ನ್ ಔಟ್: ಆ್ಯಡಂ ಮಿಲ್ನ್ ನ್ಯೂಜಿಲೆಂಡ್ ತಂಡ ವೇಗದ ಬೌಲರ್. ಈ ಬಾರಿಯ ಐಪಿಎಲ್ನಲ್ಲಿ KKR ವಿರುದ್ಧದ ಪಂದ್ಯದಲ್ಲಿ, CSK ಪ್ಲೇಯಿಂಗ್ 11 ನಲ್ಲಿ ಕಾಣಿಸಿಕೊಂಡಿದ್ದರು. ಈ ವೇಳೆ ಗಾಯಗೊಂಡಿದ್ದ ಮಿಲ್ನ್ ಕೇವಲ 2.3 ಓವರ್ ಬೌಲ್ ಮಾತ್ರ ಮಾಡಿದ್ದರು. ಇದೀಗ ಗಾಯದಿಂದ ಚೇತರಿಸಿಕೊಳ್ಳದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಇದರೊಂದಿಗೆ ಸಿಎಸ್‌ಕೆ ತಂಡದಿಂದ ಇಬ್ಬರು ಆಟಗಾರರು ಹೊರಬಿದ್ದಂತಾಗಿದೆ. ಇದಕ್ಕೂ ಮುನ್ನ ದೀಪಕ್ ಚಹರ್ ಗಾಯಗೊಂಡು ಟೂರ್ನಿಯಿಂದ ಹಿಂದೆ ಸರಿದಿದ್ದರು. ಇದಾಗ್ಯೂ ಚಹರ್ ಅವರ ಬದಲಿ ಆಟಗಾರನನ್ನು ಸಿಎಸ್‌ಕೆ ಇನ್ನೂ ಕೂಡ ಆಯ್ಕೆ ಮಾಡಿಕೊಂಡಿಲ್ಲ.
ಇದನ್ನೂ ಓದಿ: KL Rahul: ಶತಕದ ಪಂದ್ಯದಲ್ಲಿ ಸೆಂಚುರಿ ಸಿಡಿಸಿ ದಾಖಲೆ ಬರೆದ ಕೆಎಲ್ ರಾಹುಲ್
ಇದನ್ನೂ ಓದಿ: IPL 2022: ತೂಫಾನ್ ಜೋಡಿ: ಹೊಸ ದಾಖಲೆ ಬರೆದ ಶಹಬಾಜ್-ಡಿಕೆ