IPL 2022: RCB ತಂಡದ ಆರಂಭಿಕ ಜೋಡಿ ಫಿಕ್ಸ್..!

| Updated By: ಝಾಹಿರ್ ಯೂಸುಫ್

Updated on: Mar 24, 2022 | 3:58 PM

IPL 2022: ಆರ್​ಸಿಬಿ ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್,

IPL 2022: RCB ತಂಡದ ಆರಂಭಿಕ ಜೋಡಿ ಫಿಕ್ಸ್..!
RCB
Follow us on

ಐಪಿಎಲ್ ಸೀಸನ್ 15 (IPL 2022) ಆರ್​ಸಿಬಿ (RCB) ತಂಡವು ಭರ್ಜರಿ ಅಭ್ಯಾಸವನ್ನು ಮುಂದುವರೆಸಿದೆ. ಮೊದಲ ಇಂಟ್ರಾ ಸ್ಕ್ವಾಡ್ ಪಂದ್ಯದಲ್ಲಿ ಆರ್​ಸಿಬಿ ಕೋಚ್ ಸಂಜಯ್ ಬಂಗಾರ್ ಆಟಗಾರರಿಗೆ ವಿಶೇಷ ಟಾರ್ಗೆಟ್​ಗಳನ್ನು ನೀಡಿದ್ದರು. ಅದರಂತೆ ಮೊದಲ 10 ಓವರ್​ಗಳಲ್ಲಿ 80 ರಿಂದ 90 ರನ್​ಗಳ ಟಾರ್ಗೆಟ್ ನೀಡಲಾಗಿತ್ತು. ಈ ವೇಳೆ ಆರ್​ಸಿಬಿ ಕಣಕ್ಕಿಳಿಸಿದ್ದು ಫಾಫ್ ಡುಪ್ಲೆಸಿಸ್ ಹಾಗೂ ಯುವ ಎಡಗೈ ಬ್ಯಾಟ್ಸ್​ಮನ್ ಅನೂಜ್ ರಾವತ್ ಅವರನ್ನು ಎಂಬುದು ವಿಶೇಷ. ಅಂದರೆ ಆರ್​ಸಿಬಿ ಪರ ಫಾಫ್ ಡುಪ್ಲೆಸಿಸ್​ ಆರಂಭಿಕನಾಗಿ ಆಡುವುದು ಖಚಿತ. ಆದರೆ ಜೊತೆಗಾರ ಯಾರಾಗಲಿದ್ದಾರೆ ಎಂಬ ಪ್ರಶ್ನೆಗೆ ಸದ್ಯದ ಉತ್ತರ ಅನೂಜ್ ರಾವತ್.

ಏಕೆಂದರೆ ಕೋಚ್ ನೀಡಿದ 90 ರನ್​ಗಳ ಟಾರ್ಗೆಟ್ ಅನ್ನು ಅನೂಜ್ ಹಾಗೂ ಡುಪ್ಲೆಸಿಸ್ ಜೋಡಿ ಚೇಸ್ ಮಾಡಿದೆ. ಅಷ್ಟೇ ಅಲ್ಲದೆ ಮೊದಲ 10 ಓವರ್​ಗಳಲ್ಲಿ 117 ರನ್​ ಬಾರಿಸಿದ್ದಾರೆ. ಈ ಮೂಲಕ ಸ್ಪೋಟಕ ಆರಂಭ ನೀಡಿದ್ದರು. ಈ ವೇಳೆ ಡುಪ್ಲೆಸಿಸ್ 77 ರನ್​ ಬಾರಿಸಿದರೆ, ಅನೂಜ್ 44 ರನ್ ಬಾರಿಸಿ 10ನೇ ಓವರ್​ನಲ್ಲಿ ಔಟಾಗಿದ್ದರು.

ಇನ್ನು ಮತ್ತೊಂದು ಪಂದ್ಯದಲ್ಲೂ ಸಂಜಯ್ ಬಂಗಾರ್ ಅನೂಜ್ ರಾವತ್ ಅವರನ್ನೇ ಡುಪ್ಲೆಸಿಸ್ ಜೊತೆ ಆರಂಭಿಕನಾಗಿ ಕಣಕ್ಕಿಳಿಸಿದ್ದಾರೆ. ಈ ವೇಳೆ ಕೂಡ ಡುಪ್ಲೆಸಿಸ್​ ಹಾಗೂ ಅನೂಜ್ ಜೋಡಿ ಮೊದಲ ವಿಕೆಟ್​ಗೆ 100 ರನ್​ಗಳ ಜೊತೆಯಾಟವಾಡಿದ್ದಾರೆ. ಬ್ಯಾಕ್ ಟು ಬ್ಯಾಕ್ ಇದೇ ಜೋಡಿಯನ್ನೇ ಆರಂಭಿಕರಾಗಿ ಆಡಿಸುತ್ತಿರುವುದರಿಂದ ಈ ಸಲ ಆರ್​ಸಿಬಿ ಪರ ಅನೂಜ್ ರಾವತ್ ಹಾಗೂ ಫಾಫ್ ಡುಪ್ಲೆಸಿಸ್ ಓಪನರ್ಸ್ ಆಗಿ ಕಣಕ್ಕಿಳಿಯಲಿದ್ದಾರೆ ಎನ್ನಬಹುದು.

ಏಕೆಂದರೆ ಕಳೆದ ಸೀಸನ್​ನಲ್ಲೂ ಆರ್​ಸಿಬಿ ತಂಡವು ದೇವದತ್ ಪಡಿಕ್ಕಲ್ ಹಾಗೂ ವಿರಾಟ್ ಕೊಹ್ಲಿಯನ್ನು ಆರಂಭಿಕರಾಗಿ ಆಡಿಸಿತ್ತು. ಇಲ್ಲಿ ಪಡಿಕ್ಕಲ್ ಎಡಗೈ ಬ್ಯಾಟ್ಸ್​ಮನ್ ಆಗಿದ್ದರೆ, ಕೊಹ್ಲಿ ಬಲಗೈ ದಾಂಡಿಗನಾಗಿ ಕಣಕ್ಕಿಳಿದಿದ್ದರು. ಆಗ ಆರ್​ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದದ್ದು ಇದೇ ಸಂಜಯ್ ಬಂಗಾರ್. ಇದೀಗ ಮತ್ತೊಮ್ಮೆ ಎಡಗೈ ದಾಂಡಿಗ ಅನೂಜ್ ರಾವತ್ ಹಾಗೂ ಬಲಗೈ ಬ್ಯಾಟ್ಸ್​ಮನ್ ಫಾಫ್ ಡುಪ್ಲೆಸಿಸ್ ಅವರನ್ನು ಅಭ್ಯಾಸ ಪಂದ್ಯಗಳಲ್ಲಿ ಆರಂಭಿಕರಾಗಿ ಆಡಿಸುತ್ತಿದ್ದಾರೆ. ಈ ಜೋಡಿ ಮೊದಲೆರಡು ಪಂದ್ಯಗಳಲ್ಲೂ ಯಶಸ್ವಿಯಾಗಿದ್ದಾರೆ.

ಹೀಗಾಗಿ ಆರ್​ಸಿಬಿ ಪರ ಅನುಭವಿ ಆರಂಭಿಕ ಆಟಗಾರ ಫಾಫ್ ಡುಪ್ಲೆಸಿಸ್ ಹಾಗೂ ಯುವ ಎಡಗೈ ಆಟಗಾರ ಅನೂಜ್ ರಾವತ್ ಆರಂಭಿಕರಾಗಿ ಆಡಲಿದ್ದಾರೆ ಎಂದೇ ಹೇಳಬಹುದು. ಇನ್ನು ವಿರಾಟ್ ಕೊಹ್ಲಿ ಮೂರನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳಬಹುದು. ನಾಲ್ಕನೇ ಕ್ರಮಾಂಕದಲ್ಲಿ ಮಹಿಪಾಲ್ ಲೋಮ್ರರ್ ಅಥವಾ ಶೆರ್ಫಾನ್ ರುದರ್​ಫೋರ್ಡ್​ಗೆ ಅವಕಾಶ ಸಿಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಐಪಿಎಲ್ ಆರಂಭಕ್ಕೆ ದಿನಗಳು ಮಾತ್ರ ಉಳಿದಿರುವಾಗ ಆರ್​ಸಿಬಿ ಭರ್ಜರಿ ಪ್ಲ್ಯಾನ್​ನೊಂದಿಗೆ ಪ್ಲೇಯಿಂಗ್ 11 ಸೆಟ್ ಮಾಡುತ್ತಿದೆ.

ಆರ್​ಸಿಬಿ ತಂಡ ಹೀಗಿದೆ: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ಅನುಜ್ ರಾವತ್, ದಿನೇಶ್ ಕಾರ್ತಿಕ್, ಶಹಬಾಜ್ ಅಹ್ಮದ್, ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಝಲ್​ವುಡ್, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್, ಸುಯಶ್ ಪ್ರಭುದೇಸಾಯಿ, ಲುವ್ನಿತ್ ಸಿಸೋಡಿಯಾ, ಅನೀಶ್ವರ್ ಗೌತಮ್, ಕರ್ಣ್ ಶರ್ಮಾ, ಜೇಸನ್ ಬೆಹ್ರೆಡ್ರಾರ್ಫ್, ಸಿದ್ದಾರ್ಥ್ ಕೌಲ್, ಚಾಮಾ ಮಿಲಿಂದ್, ಮಹಿಪಾಲ್ ಲೊಮ್ರೋರ್, ಶೆರ್ಫೇನ್ ರುದರ್‌ಫೋರ್ಡ್, ಫಿನ್ ಅಲೆನ್, ಡೇವಿಡ್ ವಿಲ್ಲಿ.

 

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅಂದು ಪರ್ಪಲ್ ಕ್ಯಾಪ್ ವಿನ್ನರ್, ಇಂದು ನೆಟ್ ಬೌಲರ್..!

ಇದನ್ನೂ ಓದಿ: IPL 2022: ಐಪಿಎಲ್​ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್​ಗಳು ಇವರೇ..!

ಇದನ್ನೂ ಓದಿ: IPL 2022: ಐಪಿಎಲ್ ಪಂದ್ಯವೊಂದರಲ್ಲಿ ಅತೀ ಹೆಚ್ಚು ಸಿಕ್ಸ್​ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?