IPL 2022: ಐಪಿಎಲ್ ಸೀಸನ್ 15 ರಲ್ಲಿ ಆರ್ಸಿಬಿ (RCB) ತಂಡಕ್ಕೆ ಇನ್ನು ಕೇವಲ ಒಂದು ಪಂದ್ಯ ಮಾತ್ರವಿದೆ. ಈ ಪಂದ್ಯದಲ್ಲಿ ಗೆಲ್ಲುವ ಮೂಲಕ ಆರ್ಸಿಬಿ ಪ್ಲೇಆಫ್ಗೆ ಪ್ರವೇಶಿಸಬಹುದು. ಆದರೆ ಅತ್ತ ಪ್ಲೇಆಫ್ ರೇಸ್ನಲ್ಲಿದ್ದ ಮೂರು ತಂಡಗಳಲ್ಲಿ ಒಂದು ತಂಡವು ಸೋತಿರುವುದು ಇದೀಗ ಆರ್ಸಿಬಿ ತಂಡಕ್ಕೆ ಪ್ಲಸ್ ಪಾಯಿಂಟ್ ಅಗಿದೆ. ಏಕೆಂದರೆ ಈ ಹಿಂದೆ ಪ್ಲೇಆಫ್ ರೇಸ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ , ಪಂಜಾಬ್ ಕಿಂಗ್ಸ್ ಹಾಗೂ ಸನ್ರೈಸರ್ಸ್ ಹೈದರಾಬಾದ್ ತಂಡಗಳಿದ್ದವು. ಆದರೆ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ದ ಸೋಲುವ ಮೂಲಕ ಇದೀಗ ಎಸ್ಆರ್ಹೆಚ್ ತಂಡವು ಪ್ಲೇಆಫ್ ರೇಸ್ನಿಂದ ಬಹುತೇಕ ಹೊರಬಿದ್ದಿದೆ.
ಏಕೆಂದರೆ ಎಸ್ಆರ್ಹೆಚ್ ತಂಡಕ್ಕೆ ಇನ್ನು ಉಳಿದಿರುವುದು ಕೇವಲ 2 ಪಂದ್ಯ ಮಾತ್ರ. ಈ ಎರಡು ಪಂದ್ಯಗಳಲ್ಲಿ ಗೆದ್ದರೂ ಎಸ್ಆರ್ಹೆಚ್ ಪಾಯಿಂಟ್ 14 ಆಗಲಿದೆ. ಆದರೆ ಅತ್ತ ಆರ್ಸಿಬಿ ತಂಡವು ಮುಂದಿನ ಪಂದ್ಯದಲ್ಲಿ ಗೆದ್ದರೆ 16 ಪಾಯಿಂಟ್ಸ್ ಗಳಿಸಲಿದೆ. ಈ ಮೂಲಕ ಪ್ಲೇಆಫ್ ಪ್ರವೇಶಿಸಬಹುದು. ಇತ್ತ ಎಸ್ಆರ್ಹೆಚ್ ತಂಡವು ಕೆಕೆಆರ್ ವಿರುದ್ದ ಸೋಲುವುದರೊಂದಿಗೆ ಆರ್ಸಿಬಿಗೆ ಪ್ಲೇಆಫ್ ರೇಸ್ನಿಂದ ಒಂದು ತಂಡದ ಪೈಪೋಟಿ ಕಡಿಮೆಯಾಗಿದೆ.
ಆದರೆ ಆರ್ಸಿಬಿ ತಂಡವು ಪಾಯಿಂಟ್ಸ್ ಟೇಬಲ್ನಲ್ಲಿ 16 ಪಾಯಿಂಟ್ಸ್ ಪಡೆದರೂ ಪ್ಲೇಆಫ್ ಕನ್ಫರ್ಮ್ ಆಗುವುದಿಲ್ಲ. ಏಕೆಂದರೆ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳಿಗೂ 16 ಪಾಯಿಂಟ್ಸ್ಗಳಿಸುವ ಅವಕಾಶವಿದೆ. ಹೀಗಾಗಿ ಈ ಎರಡು ತಂಡಗಳು ಹೆಚ್ಚಿನ್ ರನ್ ರೇಟ್ನೊಂದಿಗೆ ಮುಂದಿನ ಪಂದ್ಯಗಳನ್ನು ಗೆದ್ದುಕೊಂಡರೆ ನಾಲ್ಕನೇ ಸ್ಥಾನಕ್ಕೇರಬಹುದು. ಇದರೊಂದಿಗೆ ಆರ್ಸಿಬಿ ತಂಡವು ಪ್ಲೇಆಫ್ನಿಂದ ಹೊರಬೀಳಬಹುದು.
ಆರ್ಸಿಬಿ ತಂಡವು ತನ್ನ ಕೊನೆಯ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ದ ಆಡಲಿದ್ದು, ಈ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ನೆಟ್ ರನ್ ರೇಟ್ ಹೆಚ್ಚಿಸಿಕೊಳ್ಳಬೇಕು. ಇದಕ್ಕೂ ಮುನ್ನ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಂದಿನ ಪಂದ್ಯದಲ್ಲಿ ಸೋತರೆ ನೆಟ್ ರನ್ ರೇಟ್ ಅವಶ್ಯಕತೆಯಿಲ್ಲದೆ ಆರ್ಸಿಬಿಗೆ ಪ್ಲೇಆಫ್ ಪ್ರವೇಶಿಸುವ ಅವಕಾಶವಿದೆ.
ಅಂದರೆ ಗುಜರಾತ್ ಟೈಟನ್ಸ್ ವಿರುದ್ದದ ಗೆಲುವಿನೊಂದಿಗೆ ಆರ್ಸಿಬಿ ತಂಡದ ಪ್ಲೇಆಫ್ ನಿರ್ಧಾರವಾಗಲಿದೆ. ಆದರೆ ಇತ್ತ ಪಂಜಾಬ್ ಕಿಂಗ್ಸ್ ಅಥವಾ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಲ್ಲಿ ಒಂದು ತಂಡವು 16 ಪಾಯಿಂಟ್ಸ್ ಕಲೆಹಾಕಿದರೆ ಆರ್ಸಿಬಿ ತಂಡದ ಸ್ಥಾನಕ್ಕೆ ಕುತ್ತು ಬರಬಹುದು. ಏಕೆಂದರೆ ಆರ್ಸಿಬಿ ತಂಡದ ನೆಟ್ ರನ್ ರೇಟ್ ಮೈನಸ್ (-0.323) ಇದ್ದು ಉಳಿದ ತಂಡಗಳ ನೆಟ್ ರನ್ ರೇಟ್ ಪ್ಲಸ್ನಲ್ಲಿದೆ. ಹೀಗಾಗಿ ಗುಜರಾತ್ ಟೈಟನ್ಸ್ ವಿರುದ್ದ ಗೆಲುವಿನ ಜೊತೆ ಆರ್ಸಿಬಿ ತಂಡವು ಉತ್ತಮ ನೆಟ್ ರನ್ ರೇಟ್ ಕೂಡ ಸಂಪಾದಿಸಬೇಕಿದೆ.
ಹೆಚ್ಚಿನ IPL 2022 ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:49 pm, Sun, 15 May 22