S Sreesanth: ಕಪಾಳಕ್ಕೆ ಯಾಕೆ ಹೊಡೆದ್ರು ಎಂಬುದು ಇನ್ನೂ ಕೂಡ ಗೊತ್ತಿಲ್ಲ..!
Harbhajan Singh vs S Sreesanth: ಸ್ಪಾಟ್ ಫಿಕ್ಸಿಂಗ್ ನಂತರ ಎಸ್ ಶ್ರೀಶಾಂತ್ ದೇಶೀಯ ಕ್ರಿಕೆಟ್‌ಗೆ ಮರಳಿದ್ದರು. ಅಲ್ಲದೆ ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡುವ ಅವಕಾಶ ಸಿಕ್ಕಿತು. ಐಪಿಎಲ್ 2022 ರ ಹರಾಜಿಗೂ ಹೆಸರು ನೀಡಿದ್ದರು.
2008 ರ ಐಪಿಎಲ್ ಅಂದರೆ ಚೊಚ್ಚಲ ಐಪಿಎಲ್ ಸೀಸನ್ ಹಲವು ಘಟನೆಗಳಿಗೆ ಸಾಕ್ಷಿಯಾಗಿತ್ತು. ಅದರಲ್ಲೂ ಸಖತ್ ಸುದ್ದಿಯಾಗಿದ್ದು, ಇಂದಿಗೂ ಕರಾಳ ಘಟನೆಯಾಗಿ ಉಳಿದುಕೊಂಡಿದ್ದು ಶ್ರೀಶಾಂತ್ ಅವರಿಗೆ ಹರ್ಭಜನ್ ಸಿಂಗ್ ಮಾಡಿದ ಕಪಾಳ ಮೋಕ್ಷ. ಮುಂಬೈ ಇಂಡಿಯನ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವಣ ಪಂದ್ಯದ ಬಳಿಕ ಶ್ರೀಶಾಂತ್ಗೆ ಭಜ್ಜಿ ಕಪಾಳಕ್ಕೆ ಹೊಡೆದಿದ್ದರು. ಇದಾಗಿ 14 ವರ್ಷಗಳು ಕಳೆದರೂ ಅಂದು ಹರ್ಭಜನ್ ಸಿಂಗ್ ಯಾಕಾಗಿ ಹೊಡೆದಿದ್ದಾರೆ ಎಂಬುದು ಇನ್ನೂ ಕೂಡ ಗೊತ್ತಿಲ್ಲ ಎಂದಿದ್ದಾರೆ ಶ್ರೀಶಾಂತ್.
ಚೊಚ್ಚಲ ಐಪಿಎಲ್ ವೇಳೆ ಪಂಜಾಬ್ ಕಿಂಗ್ಸ್ ಪರ ಆಡುತ್ತಿದ್ದ ಶ್ರೀಶಾಂತ್ ಅವರನ್ನು ಭಾರತದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಕಪಾಳಮೋಕ್ಷ ಮಾಡಿದ್ದರು. ಆಗ ಭಜ್ಜಿ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದರು. ಆ ಘಟನೆಯನ್ನು ನೆನಪಿಸಿಕೊಂಡ ಎಸ್ ಶ್ರೀಶಾಂತ್, ಹರ್ಭಜನ್ ಸಿಂಗ್ ನನಗೆ ಏಕೆ ಕಪಾಳಮೋಕ್ಷ ಮಾಡಿದರು ಎಂಬುದು ನನಗೆ ಇಲ್ಲಿಯವರೆಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ನಾನು ಕಳೆದ 2 ವರ್ಷಗಳಿಂದ ಐಪಿಎಲ್‌ನಲ್ಲಿ ಪುನರಾಗಮನ ಮಾಡಲು ಪ್ರಯತ್ನಿಸುತ್ತಿದ್ದೇನೆ. ಆದರೆ ವಯಸ್ಸಿನ ಕಾರಣ ಇದು ಸಾಧ್ಯವಾಗಲಿಲ್ಲ. ಎಲ್ಲ ಫ್ರಾಂಚೈಸಿಗಳು ಯುವ ಆಟಗಾರರಿಗೆ ಅವಕಾಶ ನೀಡುತ್ತಿದ್ದು, ಅವರೂ ಉತ್ತಮ ಪ್ರದರ್ಶನ ನೀಡುತ್ತಿರುವುದು ಸಂತಸ ತಂದಿದೆ.
ಸ್ಪಾಟ್ ಫಿಕ್ಸಿಂಗ್ ನಂತರ ಎಸ್ ಶ್ರೀಶಾಂತ್ ದೇಶೀಯ ಕ್ರಿಕೆಟ್‌ಗೆ ಮರಳಿದ್ದರು. ಅಲ್ಲದೆ ರಣಜಿ ಟ್ರೋಫಿಯಲ್ಲಿ ಕೇರಳ ಪರ ಆಡುವ ಅವಕಾಶ ಸಿಕ್ಕಿತು. ಐಪಿಎಲ್ 2022 ರ ಹರಾಜು ಪಟ್ಟಿಯಲ್ಲೂ ಹೆಸರು ನೀಡಿದ್ದರು. ಆದರೆ ಯಾವ ತಂಡವೂ ಅವರನ್ನು ಖರೀದಿಸಿಲ್ಲ. ಇದಾದ ಬಳಿಕ ಇತ್ತೀಚೆಗೆ ನಿವೃತ್ತಿ ಘೋಷಿಸಿದ್ದರು. ಆದರೆ, 2-3 ವರ್ಷಗಳ ಕಾಲ ಸ್ಥಳೀಯ ಟೂರ್ನಿಗಳಲ್ಲಿ ಆಡುವುದನ್ನು ಮುಂದುವರಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. 2007ರಲ್ಲಿ ಟಿ20 ವಿಶ್ವಕಪ್ ಮತ್ತು 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದ ಭಾರತ ತಂಡದ ಭಾಗವಾಗಿದ್ದರು. ಆದರೆ 2013ರಲ್ಲಿ ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣ ಅವರ ವೃತ್ತಿಜೀವನಕ್ಕೆ ಬ್ರೇಕ್ ಹಾಕಿತ್ತು. ಬಿಸಿಸಿಐ ಅವರಿಗೆ ಆಜೀವ ನಿಷೇಧ ಹೇರಿತ್ತು. ಆ ಬಳಿಕ ನ್ಯಾಯಾಲಯ ಅವರ ಮೇಲಿನ ನಿಷೇಧವನ್ನು 7 ವರ್ಷಕ್ಕೆ ಇಳಿಸಿತು. ಇದಾದ ಬಳಿಕ ದೇಶೀಯ ಅಂಗಳಕ್ಕೆ ಮರಳಿದ್ದ ಶ್ರೀಶಾಂತ್ ಐಪಿಎಲ್ಗೆ ಕಂಬ್ಯಾಕ್ ಮಾಡುವ ಇರಾದೆಯಲ್ಲಿದ್ದರು. ಆದರೆ ಅವರನ್ನು ಯಾವುದೇ ತಂಡ ಖರೀದಿಸಿರಲಿಲ್ಲ.
ಹರ್ಭಜನ್‌ಗೆ ನಿಷೇಧ: 2008 ರ ಕಪಾಳ ಮೋಕ್ಷ ಪ್ರಕರಣ ಹಿನ್ನೆಲೆಯಲ್ಲಿ ಹರ್ಭಜನ್ ಸಿಂಗ್ ಅವರನ್ನು ಇಡೀ ಸೀಸನ್ನಿಂದ ಹೊರಹಾಕಲಾಯಿತು. ತನಿಖೆಯ ನಂತರ, ಮಂಡಳಿಯು ಅವರನ್ನು 5 ಏಕದಿನ ಪಂದ್ಯಗಳಿಗೆ ನಿಷೇಧಿಸಿತು. ಆದರೆ, ಶ್ರೀಶಾಂತ್ ಯಾವುದೇ ದೂರು ನೀಡಲು ನಿರಾಕರಿಸಿದ್ದರು. ಅಲ್ಲದೆ ಹರ್ಭಜನ್ ಸಿಂಗ್ ನನ್ನ ಅಣ್ಣನಿದ್ದಂತೆ ಎಂದಿದ್ದರು. ಹೀಗಾಗಿ ಈ ಪ್ರಕರಣವನ್ನು ಆ ಬಳಿಕ ಕೈ ಬಿಡಲಾಗಿತ್ತು.
ಇದನ್ನೂ ಓದಿ: Hardik Pandya: ಪಾಂಡ್ಯ ಪವರ್: ಸಿಕ್ಸ್ ಸಿಡಿಸಿ ದಾಖಲೆ ಬರೆದ ಹಾರ್ದಿಕ್
ಇದನ್ನೂ ಓದಿ: ಐಪಿಎಲ್‌ನಲ್ಲಿ ಅತೀ ವೇಗವಾಗಿ ಅರ್ಧಶತಕ ಬಾರಿಸಿದ 10 ಬ್ಯಾಟರ್ಗಳು ಯಾರು ಗೊತ್ತಾ?