AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2022: ವಾಂಖೆಡೆ ಪಿಚ್, ಇಲ್ಲಿ ಚೇಸಿಂಗ್ ತಂಡ ಮಾತ್ರ ಗೆಲ್ಲುತ್ತಾ? ಇಲ್ಲಿದೆ ಅಚ್ಚರಿಯ ಅಂಕಿ ಅಂಶ

IPL 2022: ಕಳೆದ ಸೀಸನ್​ ಐಪಿಎಲ್​ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಲಾಗಿತ್ತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಅಂದರೆ 6 ತಂಡಗಳು ಚೇಸಿಂಗ್ ಮಾಡಿ ಗೆದ್ದಿದೆ.

IPL 2022: ವಾಂಖೆಡೆ ಪಿಚ್, ಇಲ್ಲಿ ಚೇಸಿಂಗ್ ತಂಡ ಮಾತ್ರ ಗೆಲ್ಲುತ್ತಾ? ಇಲ್ಲಿದೆ ಅಚ್ಚರಿಯ ಅಂಕಿ ಅಂಶ
Wankhede Stadium
TV9 Web
| Updated By: ಝಾಹಿರ್ ಯೂಸುಫ್|

Updated on: Mar 26, 2022 | 4:38 PM

Share

ಐಪಿಎಲ್​ ಸೀಸನ್ 15 ನ (IPL 2022) ಉದ್ಘಾಟನಾ ಪಂದ್ಯಕ್ಕೆ ಮುಂಬೈನ ವಾಂಖೆಡೆ ಸ್ಟೇಡಿಯಂ ಸಾಕ್ಷಿಯಾಗಲಿದೆ. ವಿಶೇಷ ಎಂದರೆ ಈ ಬಾರಿಯ ಐಪಿಎಲ್​ನ ಲೀಗ್ ಹಂತದ ಪಂದ್ಯಗಳು ಮುಂಬೈ ಹಾಗೂ ಪುಣೆಯಲ್ಲಿ ನಡೆಯಲಿದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು, ಬ್ರಬೋರ್ನ್ ಸ್ಟೇಡಿಯಂ (CCI)ನಲ್ಲಿ 15 ಪಂದ್ಯಗಳು, ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ 20 ಪಂದ್ಯಗಳು ಹಾಗೂ ಪುಣೆಯ ಎಂಸಿಎ ಅಂತರಾಷ್ಟ್ರೀಯ ಕ್ರೀಡಾಂಗಣದಲ್ಲಿನ 15 ಪಂದ್ಯಗಳು ನಡೆಯಲಿದೆ. ಅದರಲ್ಲೂ ವಾಂಖೆಡೆ ಸ್ಟೇಡಿಯಂನಲ್ಲಿ 20 ಪಂದ್ಯಗಳು ನಡೆಯುತ್ತಿರುವುದರಿಂದ ಕ್ರಿಕೆಟ್ ಪ್ರೇಮಿಗಳು ಕುತೂಹಲ ಮೂಡಿಸಿದೆ. ಏಕೆಂದರೆ ಹೇಳಿ ಕೇಳಿ ವಾಂಖೆಡೆ ಸ್ಟೇಡಿಯಂ ಚೇಸಿಂಗ್ ಪಿಚ್ ಎಂಬ ಮಾತಿದೆ. ಇದಕ್ಕೆ ಅಂಕಿ ಅಂಶಗಳು ಕೂಡ ಕೂಡ ಸಿಗುತ್ತವೆ.

ಉದಾಹರಣಗೆ, ಕಳೆದ ಸೀಸನ್​ ಐಪಿಎಲ್​ನಲ್ಲಿ ವಾಂಖೆಡೆ ಸ್ಟೇಡಿಯಂನಲ್ಲಿ ಒಟ್ಟು 10 ಪಂದ್ಯಗಳನ್ನು ಆಡಲಾಗಿತ್ತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿದ್ದು ಕೇವಲ 4 ಪಂದ್ಯಗಳಲ್ಲಿ ಮಾತ್ರ. ಅಂದರೆ 6 ತಂಡಗಳು ಚೇಸಿಂಗ್ ಮಾಡಿ ಗೆದ್ದಿದೆ. ಇನ್ನು ಕಳೆದ ಸೀಸನ್​ನಲ್ಲಿ ಇದೇ ಮೈದಾನದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್​ 221 ರನ್​ ಬಾರಿಸಿತ್ತು. ಇದನ್ನು ಚೇಸ್ ಮಾಡಿ ರಾಜಸ್ತಾನ್ ರಾಯಲ್ಸ್ 217 ರನ್​ಗಳಿಸಿದ್ದು ಗರಿಷ್ಠ ಸ್ಕೋರ್​ಗಳಾಗಿವೆ. ಆದರೆ ಇದೇ ಮೈದಾನದಲ್ಲಿ ಪಂಜಾಬ್ ಕಿಂಗ್ಸ್ ಕೇವಲ 106 ರನ್​ಗಳಿಸಷ್ಟೇ ಶಕ್ತರಾಗಿದ್ದರು. ಹಾಗೆಯೇ ಆರ್​ಸಿಬಿ ಕೂಡ ಚೇಸ್ ಮಾಡಲು ಹೋಗಿ ಕೇವಲ 122 ರನ್​ಗಳಿಗೆ ಹೋರಾಟ ನಿಲ್ಲಿಸಿತ್ತು. ಅಂದರೆ ಈ ಮೈದಾನದಲ್ಲಿ ಬೌಲಿಂಗ್ ಕೂಡ ನಡೆಯುತ್ತೆ ಎಂಬುದು ಸ್ಪಷ್ಟ.

ಇನ್ನು ಇಲ್ಲಿ ಆಡಲಾದ ಅಂತಾರಾಷ್ಟ್ರೀಯ ಪಂದ್ಯಗಳ ಅಂಕಿ ಅಂಶವನ್ನು ತೆಗೆದುಕೊಂಡರೆ 7 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿ ತಂಡ 2 ಬಾರಿ ಮಾತ್ರ ಗೆಲುವು ದಾಖಲಿಸಿದೆ. ಅಂದರೆ ಚೇಸಿಂಗ್​ನಲ್ಲಿ 5 ಬಾರಿ ಎದುರಾಳಿ ಗೆದ್ದಿದೆ. ಇಲ್ಲಿಗೆ ವಾಂಖೆಡೆ ಸ್ಟೇಡಿಯಂ ಚೇಸಿಂಗ್ ಪಿಚ್​ ಎಂಬುದು ಕನ್​ಫರ್ಮ್​ ಎಂದು ನೀವು ಹೇಳುವುದಾದರೆ, ಮತ್ತೊಂದು ಅಂಕಿ ಅಂಶ ಕೂಡ ಸಿಗುತ್ತೆ.

ಅದೇನೆಂದರೆ ವಾಂಖೆಡೆ ಸ್ಟೇಡಿಯಂನಲ್ಲಿ ಇದುವರೆಗೆ 81 ಐಪಿಎಲ್​ ಪಂದ್ಯಗಳನ್ನು ಆಡಲಾಗಿದೆ. ಆದರೆ ಈ ವೇಳೆ ಚೇಸಿಂಗ್ ತಂಡ ಗೆದ್ದಿರುವುದು 41 ಬಾರಿ ಮಾತ್ರ. ಅಂದರೆ ಉಳಿದ 40 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿ ತಂಡವೇ ಗೆದ್ದಿದೆ. ಅಂದರೆ ಈ ಪಿಚ್​ನ ಒಟ್ಟಾರೆ ಫಲಿತಾಂಶ ಸಮಬಲ ಹೊಂದಿದೆ ಎಂದೇ ಹೇಳಬಹುದು.

ಇಲ್ಲಿ ಮತ್ತೊಂದು ಅಚ್ಚರಿಯ ಅಂಶವೆಂದರೆ ಇದೇ ಮೈದಾನದಲ್ಲಿ ಆರ್​ಸಿಬಿ ತಂಡವು ಮುಂಬೈ ಇಂಡಿಯನ್ಸ್ ವಿರುದ್ದ 235 ರನ್ ಬಾರಿಸಿ ದಾಖಲೆ ನಿರ್ಮಿಸಿತ್ತು. ಮತ್ತೊಂದೆಡೆ ಇದೇ ಮೈದಾನದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು ಮುಂಬೈ ಇಂಡಿಯನ್ಸ್ ವಿರುದ್ದ ಕೇವಲ 67 ರನ್​ಗಳಿಗೆ ಆಲೌಟ್ ಕೂಡ ಆಗಿತ್ತು.

ಅಂದರೆ ಒಟ್ಟಾರೆ ವಾಂಖೆಡೆ ಮೈದಾನದ ಫಲಿತಾಂಶವನ್ನು ಗಮನಿಸಿದರೆ ಮೊದಲು ಬ್ಯಾಟ್ ಮಾಡಿದ ತಂಡ 40 ಪಂದ್ಯಗಳಲ್ಲಿ ಜಯ ಸಾಧಿಸಿದ್ರೆ, ಚೇಸಿಂಗ್ ತಂಡ 41 ಬಾರಿ ಗೆಲುವು ತನ್ನದಾಗಿಸಿಕೊಂಡಿದೆ. ಇಲ್ಲಿ ಚೇಸಿಂಗ್​ಗೆ ಅನುಕೂಲವಾಗುತ್ತಿರುವುದು ಇಬ್ಬನಿ ಎಂಬುದು ವಿಶೇಷ. ಹೀಗಾಗಿ ಇಬ್ಬನಿಯ ಅನುಕೂಲ ಪಡೆದರೆ ಮಾತ್ರ ಬೃಹತ್ ಮೊತ್ತವನ್ನು ಚೇಸ್ ಮಾಡಬಹುದು. ಹೀಗಾಗಿ ಟಾಸ್ ಗೆಲ್ಲುವ ತಂಡ ಚೇಸಿಂಗ್ ಆಯ್ಕೆ ಮಾಡಿಕೊಂಡರೂ ಇಬ್ಬನಿ ಕೈಕೊಟ್ಟರೆ ಫಲಿತಾಂಶ ಬದಲಾಗಬಹುದು. ಇದಕ್ಕೆ ಸಾಕ್ಷಿಯೇ 81 ಪಂದ್ಯಗಳಲ್ಲಿ 40 ಪಂದ್ಯಗಳಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿರುವುದು.

ಇದನ್ನೂ ಓದಿ: IPL ಆಡಿದ್ದ 11 ಪಾಕಿಸ್ತಾನಿ ಆಟಗಾರರು ಯಾರು ಗೊತ್ತಾ?

ಇದನ್ನೂ ಓದಿ:  IPL 2022: ಇವರೇ RCB ಪರ ಹ್ಯಾಟ್ರಿಕ್ ವಿಕೆಟ್ ಪಡೆದ ಮೂವರು ಬೌಲರುಗಳು

ಇದನ್ನೂ ಓದಿ: IPL 2022: ಐಪಿಎಲ್​ನ ಆರಂಭಿಕ ಪಂದ್ಯಗಳಿಗೆ 23 ಸ್ಟಾರ್ ಆಟಗಾರರು ಅಲಭ್ಯ

ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ರಸ್ತೆ ಮಾಡುವುದರಿಂದ ಬಡವರ ಜೀವನ ಉದ್ದಾರ ಆಗ್ತದಾ: ಪರಮೇಶ್ವರ್ ಪ್ರಶ್ನೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಇಂಗ್ಲೆಂಡ್ ವರನ ಕೈ ಹಿಡಿದ ಬೇಲೂರಿನ ವಧು! ನಡೆಯಿತು ಅದ್ದೂರಿ ಮದುವೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
ಎಲಿಮಿನೇಟ್ ಆಗದಿದ್ದರೂ ರಕ್ಷಿತಾ ಶೆಟ್ಟಿಗೆ ಶುರುವಾಯ್ತು ಹೊಸ ಚಿಂತೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
Video: ಆರತಿ ಎತ್ತಿರೋ ಫುಟ್​ಪಾತ್​ ಮೇಲೆ ಗಾಡಿ ಓಡ್ಸವ್ರಿಗೆ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
ಸೈಕಲ್ ಸವಾರನಿಗೆ ಡಿಕ್ಕಿ ಹೊಡೆದು ತಿರುಗಿಯೂ ನೋಡದೆ ಹೋದ ಬೈಕ್ ಸವಾರ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
Video: ಅಮ್ಮಾ ನನ್ನ ಮೈಬಣ್ಣ ಬೇರೆ ಮಾಡೋಕೆ ಆಗಲ್ವಾ, ಕಣ್ಣೀರಿಟ್ಟ ಬಾಲಕಿ
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ವಿಷ್ಣು ತುಳಿಸಿ, ಹಾಗೂ ಲಕ್ಷ್ಮೀ ತುಳಸಿ ಎರೆಡೂ ಮನೆಯಲ್ಲಿರಬೇಕು ಯಾಕೆ?
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಇಂದು ಈ ರಾಶಿಯವರಿಗೆ ಐದು ಗ್ರಹಗಳ ಶುಭಫಲವಿರುತ್ತದೆ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಮದ್ಯ ಕರ್ನಾಟದಲ್ಲಿ ಶಮನೂರು ಸಾಮ್ರಾಜ್ಯ: ಹೆಲಿಕಾಪ್ಟರ್, ಮಿನಿ ವಿಮಾನ ಒಡೆಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ
ಟಿ20 ಕ್ರಿಕೆಟ್‌ನಲ್ಲಿ ವಿಕೆಟ್​ಗಳ ಶತಕ ಪೂರೈಸಿದ ಹಾರ್ದಿಕ್ ಪಾಂಡ್ಯ