AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಮುಂಬೈ ಅಂದ್ರೆ ಭಯ, ಅವರು ಫೈನಲ್​ಗೆ ಬರಬಾರ್ದು ಎಂದ ಸಿಎಸ್​ಕೆ ಬೌಲಿಂಗ್ ಕೋಚ್!

IPL 2023: ಉಭಯ ತಂಡಗಳು 4 ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, 2010 ಹೊರತುಪಡಿಸಿ ಚೆನ್ನೈ ಮೂರು ಬಾರಿ ಸೋಲನ್ನು ಎದುರಿಸಿದೆ.

IPL 2023: ಮುಂಬೈ ಅಂದ್ರೆ ಭಯ, ಅವರು ಫೈನಲ್​ಗೆ ಬರಬಾರ್ದು ಎಂದ ಸಿಎಸ್​ಕೆ ಬೌಲಿಂಗ್ ಕೋಚ್!
ಮುಂಬೈ ತಂಡ, ಡ್ವೇನ್ ಬ್ರಾವೋ
ಪೃಥ್ವಿಶಂಕರ
|

Updated on: May 25, 2023 | 5:12 PM

Share

ಕೇವಲ ಇನ್ನೊಂದು ಪಂದ್ಯ ಮುಗಿದರೆ 16ನೇ ಆವೃತ್ತಿಯ (IPL 2023 Final) ಎರಡು ಫೈನಲ್​ ತಂಡಗಳು ಯಾವುವು ಎಂಬುದಕ್ಕೆ ಸ್ಪಷ್ಟನೆ ಸಿಗಲಿದೆ. ಈಗಾಗಲೇ ಕ್ವಾಲಿಪೈಯರ್ 1 ರಲ್ಲಿ ಹಾಲಿ ಚಾಂಪಿಯನ್ ಗುಜರಾತ್ ತಂಡವನ್ನು ಮಣಿಸಿದ ಚೆನ್ನೈ (Chennai Super Kings vs Gujarat Titans) ನೇರವಾಗಿ ಫೈನಲ್ ಪ್ರವೇಶಿಸಿದೆ. ಇದೀಗ ಚೆನ್ನೈ ಎದುರು ಸೋತಿದ್ದ ಗುಜರಾತ್​ಗೆ ಇನ್ನೊಂದು ಅವಕಾಶವಿದ್ದು ನಾಳೆ ನಡೆಯಲ್ಲಿರುವ ಅಂದರೆ ಮೇ. 26 ರಂದು ನಡೆಯಲ್ಲಿರುವ ಎರಡನೇ ಕ್ವಾಲಿಫೈಯರ್ ಪಂದ್ಯದಲ್ಲಿ 5 ಬಾರಿಯ ಚಾಂಪಿಯನ್ ಮುಂಬೈ ತಂಡವನ್ನು ಎದುರಿಸಲಿದೆ. ಈ ಎರಡು ತಂಡಗಳ ನಡುವಿನ ಕಾಳಗದಲ್ಲಿ ಗೆದ್ದವರು ಫೈನಲ್​ನಲ್ಲಿ ಚೆನ್ನೈ ತಂಡವನ್ನು ಎದುರಿಸಲಿದ್ದಾರೆ. ಆದರೆ ಈ ಪಂದ್ಯಕ್ಕೂ ಮುನ್ನ ಸಿಎಸ್​ಕೆ ಪಾಳಯದಲ್ಲಿ ಭಯ ಶುರುವಾಗಿದ್ದು, ಫೈನಲ್​ಗೆ ಮುಂಬೈ ತಂಡ ಬರುವುದೇ ಬೇಡವೆಂಬ ಬೇಡಿಕೆಯನ್ನು ತಂಡದ ಬೌಲಿಂಗ್​ ಕೋಚ್ ಡ್ವೇನ್ ಬ್ರಾವೋ (Dwayne Bravo) ಇಟ್ಟಿದ್ದಾರೆ.

ನನಗೆ ಮುಂಬೈ ತಂಡವೆಂದರೆ ಭಯ

ಐಪಿಎಲ್‌ನ ಆರಂಭಿಕ ದಿನಗಳಲ್ಲಿ ಮುಂಬೈ ಇಂಡಿಯನ್ಸ್‌ ಪರ 3 ಸೀಸನ್‌ ಆಡಿ ಆ ನಂತರ ಚೆನ್ನೈ ಪರ ಬರೋಬ್ಬರಿ 10 ಸೀಸನ್ ಆಡಿದ್ದ ಡ್ವೇನ್ ಬ್ರಾವೋ ಈ ಮಾತುಗಳನ್ನು ಹೇಳಿರುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ವಾಸ್ತವವಾಗಿ ಗುಜರಾತ್ ವಿರುದ್ಧದ ಕ್ವಾಲಿಫೈಯರ್ ಪಂದ್ಯ ಮುಗಿದ ಬಳಿಕ ಸ್ಟಾರ್ ಸ್ಪೋರ್ಟ್ಸ್ ಸಂದರ್ಶನದಲ್ಲಿ ಮಾತನಾಡಿದ ಬ್ರಾವೋಗೆ ಫೈನಲ್‌ನಲ್ಲಿ ಯಾವ ತಂಡವನ್ನು ನೋಡಲು ಬಯಸುತ್ತೀರಿ ಎಂದು ಕೇಳಲಾಯಿತು. ಇದಕ್ಕೆ ತಮಾಷೆಯಾಗಿ ಉತ್ತರಿಸಿದ ಬ್ರಾವೋ, ನನಗೆ ಮುಂಬೈ ಇಂಡಿಯನ್ಸ್‌ ತಂಡವೆಂದರೆ ಭಯವಿದೆ. ತಂಡ ಬಲಿಷ್ಠವಾಗಿದೆ. ತಂಡದಲ್ಲಿ ಸಾಕಷ್ಟು ಮ್ಯಾಚ್​ ವಿನ್ನರ್​ಗಳಿದ್ದಾರೆ. ಹೀಗಾಗಿ ಮುಂಬೈ ತಂಡವನ್ನು ನಾನು ಫೈನಲ್​ನಲ್ಲಿ ನೋಡುವುದನ್ನು ಇಷ್ಟಪಡುವುದಿಲ್ಲ. ನನ್ನ ಸ್ನೇಹಿತ ಕೀರನ್ ಪೊಲಾರ್ಡ್‌ಗೂ ಇದರ ಬಗ್ಗೆ ತಿಳಿದಿದೆ. ಇನ್ನುಳಿದ ತಂಡಗಳಿಗೂ ಕೂಡ ಆಲ್‌ ದಿ ಬೆಸ್ಟ್‌. ಫೈನಲ್‌ಗೆ ಯಾವುದೇ ತಂಡ ಬಂದರೂ ನಾವು ಎದುರಿಸಲು ಸಿದ್ದರಿದ್ದೇವೆ ಎಂದು ಬ್ರಾವೋ ಹೇಳಿದ್ದಾರೆ.

ಫೈನಲ್‌ನಲ್ಲಿ ಮುಂಬೈ-ಚೆನ್ನೈ ದಾಖಲೆ ಹೇಗಿದೆ?

ಬ್ರಾವೋ ಭಯಕ್ಕೆ ಕಾರಣವೂ ಇದ್ದು, ಚೆನ್ನೈ ಗರಿಷ್ಠ ಬಾರಿ ಫೈನಲ್‌ಗೆ ಪ್ರವೇಶಿಸಿದ್ದು ನಾಲ್ಕು ಬಾರಿ ಚಾಂಪಿಯನ್ ಆಗಿದೆ. ಅಲ್ಲದೆ ಚೆನ್ನೈ ಫೈನಲ್​ನಲ್ಲಿ ಹಲವು ಬಾರಿ ಮುಂಬೈ ವಿರುದ್ಧ ಸೆಣಸಿದ್ದು ಗೆಲುವಿಗಿಂತ ಹೆಚ್ಚು ಸೋಲುಗಳನ್ನು ಕಂಡಿದೆ. ಉಭಯ ತಂಡಗಳು 4 ಬಾರಿ ಫೈನಲ್‌ನಲ್ಲಿ ಮುಖಾಮುಖಿಯಾಗಿದ್ದು, 2010 ಹೊರತುಪಡಿಸಿ ಚೆನ್ನೈ ಮೂರು ಬಾರಿ ಸೋಲನ್ನು ಎದುರಿಸಿದೆ. 2013, 2015 ಮತ್ತು 2019ರಲ್ಲಿ ಮುಂಬೈ ತಂಡ ಚೆನ್ನೈ ತಂಡವನ್ನು ಫೈನಲ್‌ನಲ್ಲಿ ಸೋಲಿಸಿ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ