IPL 2023 Start DATE: ಒಂದು ವಾರ ತಡವಾಗಿ ಆರಂಭವಾಗಲಿದೆ ಈ ಬಾರಿಯ ಐಪಿಎಲ್..!

| Updated By: ಪೃಥ್ವಿಶಂಕರ

Updated on: Dec 11, 2022 | 11:57 AM

IPL 2023 Start DATE: ಮಹಿಳಾ ಐಪಿಎಲ್‌ನ ಮೊದಲ ಆವೃತ್ತಿಯೂ ಮಾರ್ಚ್ 3 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 26 ರವರೆಗೆ ನಡೆಯಲಿದೆ. ಇದರಿಂದಾಗಿ ಐಪಿಎಲ್ 16ನೇ ಸೀಸನ್ 7-8 ದಿನಗಳ ವಿಳಂಬದೊಂದಿಗೆ ಆರಂಭವಾಗಲಿದೆ ಎಂದು ವರದಿಯಲ್ಲಿ ತಿಳಿಸಿದೆ.

IPL 2023 Start DATE: ಒಂದು ವಾರ ತಡವಾಗಿ ಆರಂಭವಾಗಲಿದೆ ಈ ಬಾರಿಯ ಐಪಿಎಲ್..!
IPL 2023
Image Credit source: insidesport
Follow us on

ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) 16 ನೇ ಸೀಸನ್ ಅಂದರೆ ಐಪಿಎಲ್ 2023 ಕ್ಕೆ ವೇದಿಕೆ ಸಿದ್ಧವಾಗಿದೆ. ಇದರ ಭಾಗವಾಗಿ ಇದೇ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಐಪಿಎಲ್ 16 ನೇ ಸೀಸನ್​ನ್ನ ಮಿನಿ ಹರಾಜು (mini auction) ಕೂಡ ನಡೆಯಲಿದೆ. ಆದರೆ ಇದಕ್ಕೂ ಮೊದಲು, ಲೀಗ್‌ನ ಆರಂಭದ ಕುರಿತು ಬಿಗ್ ಅಪ್​ಡೇಟ್​ ಹೊರಬಿದ್ದಿದ್ದು, ವರದಿಯ ಪ್ರಕಾರ, ಈ ಬಾರಿಯ ಐಪಿಎಲ್ (IPL 2023) ಏಪ್ರಿಲ್ 01 ರಿಂದ ಅಂದರೆ ಒಂದು ವಾರ ತಡವಾಗಿ ಪ್ರಾರಂಭವಾಗಲಿದೆ (ಈ ಹಿಂದೆ ಮಾರ್ಚ್​ 23 ರಿಂದ ಐಪಿಎಲ್ ಆರಂಭವಾಗಲಿದೆ ಎಂದು ಹೇಳಲಾಗಿತ್ತು). ವಾಸ್ತವವಾಗಿ, ಐಪಿಎಲ್​ ವಿಳಂಬಕ್ಕೆ ಕಾರಣವೂ ಇದ್ದು, ಈ ವರ್ಷದಿಂದ ಮಹಿಳಾ ಐಪಿಎಲ್ ಆರಂಭಿಸಲೂ ಬಿಸಿಸಿಐ (BCCI) ಮುಂದಾಗಿದೆ. ಇದರ ಅಂಗವಾಗಿ ಮುಂದಿನ ವರ್ಷದ ಮಾರ್ಚ್‌ನಲ್ಲಿ ಮಹಿಳಾ ಐಪಿಎಲ್‌ ನಡೆಯಲಿದೆ. ಅಲ್ಲದೆ ವರದಿಗಳ ಪ್ರಕಾರ, ಮಹಿಳಾ ಐಪಿಎಲ್‌ನ (Women’s IPL) ಮೊದಲ ಆವೃತ್ತಿಯೂ ಮಾರ್ಚ್ 3 ರಿಂದ ಪ್ರಾರಂಭವಾಗಲಿದ್ದು, ಮಾರ್ಚ್ 26 ರವರೆಗೆ ನಡೆಯಲಿದೆ. ಇದರಿಂದಾಗಿ ಐಪಿಎಲ್ 16ನೇ ಸೀಸನ್ 7-8 ದಿನಗಳ ವಿಳಂಬದೊಂದಿಗೆ ಆರಂಭವಾಗಲಿದೆ ಎಂದು ಇನ್ಸೈಡ್ ಸ್ಪೋರ್ಟ್ಸ್ ತನ್ನ ವರದಿಯಲ್ಲಿ ತಿಳಿಸಿದೆ

ಮಿನಿ ಹರಾಜಿನಲ್ಲಿ 991 ಆಟಗಾರರು

ಐಪಿಎಲ್ 2023 ಗಾಗಿ ನಡೆಯಲಿರುವ ಮಿನಿ ಹರಾಜಿನಲ್ಲಿ ಒಟ್ಟು 991 ಆಟಗಾರರು ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 714 ಭಾರತೀಯ ಆಟಗಾರರು ಮತ್ತು 277 ವಿದೇಶಿ ಆಟಗಾರರು ಸೇರಿದ್ದಾರೆ. ಈ ವಿದೇಶಿ ಆಟಗಾರರಲ್ಲಿ ಹೆಚ್ಚಿನವರು ಆಸ್ಟ್ರೇಲಿಯಾದವರು. ಅಂದರೆ ಈ ದೇಶದ 57 ಆಟಗಾರರು ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ, ದಕ್ಷಿಣ ಆಫ್ರಿಕಾದಿಂದ ಒಟ್ಟು 52 ಆಟಗಾರರು ಕಣದಲ್ಲಿದ್ದಾರೆ. ಈ ಪೈಕಿ ಒಟ್ಟು 185 ಆಟಗಾರರು ಕ್ಯಾಪ್ಡ್ ಆಟಗಾರರಾಗಿದ್ದರೆ, 786 ಅನ್‌ಕ್ಯಾಪ್ಡ್ ಆಟಗಾರರಾಗಿದ್ದಾರೆ. ಮಿನಿ ಹರಾಜು ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ನಡೆಯಲಿದೆ.

ಐಪಿಎಲ್​ಗೂ ಮುನ್ನ 6 ಸರಣಿ, 19 ಪಂದ್ಯಗಳನ್ನಾಡಲಿದೆ ಟೀಂ ಇಂಡಿಯಾ; ಇಲ್ಲಿದೆ ಪೂರ್ಣ ವೇಳಾಪಟ್ಟಿ

2 ಕೋಟಿ ರೂ. ಮೂಲ ಬೆಲೆಯಲ್ಲಿ 21 ಆಟಗಾರರು

ಮಿನಿ ಹರಾಜಿನಲ್ಲಿ ಒಟ್ಟು 21 ಆಟಗಾರರು 2 ಕೋಟಿ ಮೂಲ ಬೆಲೆಯಲ್ಲಿ ತಮ್ಮ ಹೆಸರನ್ನು ನೊಂದಣಿ ಮಾಡಿಕೊಂಡಿದ್ದಾರೆ. ಈ ಸ್ಟಾರ್ ಆಟಗಾರರಲ್ಲಿ ಕೇನ್ ವಿಲಿಯಮ್ಸನ್, ಬೆನ್ ಸ್ಟೋಕ್ಸ್, ನಾಥನ್ ಕೌಲ್ಟರ್-ನೈಲ್, ಕ್ಯಾಮೆರಾನ್ ಗ್ರೀನ್, ಟ್ರಾವಿಸ್ ಹೆಡ್, ಕ್ರಿಸ್ ಲಿನ್, ಟಾಮ್ ಬ್ಯಾಂಟನ್, ಸ್ಯಾಮ್ ಕರನ್, ಕ್ರಿಸ್ ಜೋರ್ಡಾನ್, ಟೈಮಲ್ ಮಿಲ್ಸ್, ಜೇಮೀ ಓವರ್‌ಟನ್, ಕ್ರೇಗ್ ಓವರ್‌ಟನ್, ಆದಿಲ್ ರಶೀದ್, ಫಿಲ್ ಸಾಲ್ಟ್, ಆಡಮ್ ಮಿಲ್ನೆ, ಜಿಮ್ಮಿ ನೀಶಮ್, ರಿಲೆ ರೋಸೋ, ರಾಸ್ಸಿ ವ್ಯಾನ್ ಡೆರ್ ಡ್ಯೂಸೆನ್, ಏಂಜೆಲೊ ಮ್ಯಾಥ್ಯೂಸ್, ನಿಕೋಲಸ್ ಪೂರನ್, ಜೇಸನ್ ಹೋಲ್ಡರ್ ಸೇರಿದ್ದಾರೆ.

1.5 ಕೋಟಿ ಮೂಲ ಬೆಲೆಯ ಆಟಗಾರರು

ಶಾನ್ ಅಬಾಟ್, ರೈಲಿ ಮೆರೆಡಿತ್, ಝೈ ರಿಚರ್ಡ್ಸನ್, ಆಡಮ್ ಝಂಪಾ, ಶಕೀಬ್ ಅಲ್ ಹಸನ್, ಹ್ಯಾರಿ ಬ್ರೂಕ್, ವಿಲ್ ಜ್ಯಾಕ್ಸ್, ಡೇವಿಡ್ ಮಲನ್, ಜೇಸನ್ ರಾಯ್, ಶೆರ್ಫೇನ್ ರುದರ್ಫೋರ್ಡ್

1 ಕೋಟಿ ಮೂಲ ಬೆಲೆಯ ಆಟಗಾರರು

ಭಾರತದ ಆಟಗಾರರ ಪೈಕಿ ಮಯಾಂಕ್ ಅಗರ್ವಾಲ್, ಮನೀಶ್ ಪಾಂಡೆ, ಕೇದಾರ್ ಜಾಧವ್ ಅವರಂತಹ ಆಯ್ದ ಆಟಗಾರರು 1 ಕೋಟಿ ಮೂಲ ಬೆಲೆಯಲ್ಲಿ ಹರಾಜಿಗೆ ಎಂಟ್ರಿಕೊಡಲಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 11:53 am, Sun, 11 December 22