IPL 2023 Auction: ಆರ್ಸಿಬಿ ಬಳಿ ಎಷ್ಟು ಹಣವಿದೆ?, ಎಷ್ಟು ಆಟಗಾರರನ್ನು ಖರೀದಿಸಬಹುದು?: ಇಲ್ಲಿದೆ ಮಾಹಿತಿ
Royal Challengers Bangalore: ಇಂದು ಕೇರಳದ ಕೊಚ್ಚಿಯಲ್ಲಿ ಐಪಿಎಲ್ 2023 ಮಿನಿ ಆಕ್ಷನ್ ನಡೆಯಲಿದೆ. ಆರ್ಸಿಬಿ ಖಾತೆಯಲ್ಲಿ ದೊಡ್ಡ ಮಟ್ಟದ ಹಣವಿಲ್ಲ ಎಂಬುದು ನಿಜ. ಬೆಂಗಳೂರು ಬಳಿ ಕೇವಲ 8.75 ಕೋಟಿ ರೂ. ಇದೆಯಷ್ಟೆ. ಇದರಲ್ಲೇ ತಂಡಕ್ಕೆ ಅಗತ್ಯವಿರುವ ಪ್ರಮುಖ ಆಟಗಾರರನ್ನು ಖರೀದಿಸಬೇಕಾಗಿದೆ.
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಮಿನಿ ಹರಾಜು (IPL Auction) ಪ್ರಕ್ರಿಯೆ ಇಂದು ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. ಎಲ್ಲಾ 10 ಫ್ರಾಂಚೈಸಿಗಳ ಮಾಲೀಕರು ಮತ್ತು ತಂಡದ ಅಧಿಕಾರಿಗಳು ಈಗಾಗಲೇ ಕೊಚ್ಚಿಗೆ ಬಂದಿಳಿದಿದ್ದಾರೆ. ಒಟ್ಟು 405 ಆಟಗಾರರ ಹೆಸರುಗಳು ಐಪಿಎಲ್ 2023ರ (IPL 2023) ಪಂದ್ಯಾವಳಿಗೂ ಮೊದಲು ಹರಾಜಾಗುವ ಅಂತಿಮ ಪಟ್ಟಿಯಲ್ಲಿವೆ. ಈ ಮೊದಲು ಮಿನಿ ಹರಾಜಿಗೆ 991 ಆಟಗಾರರು ಹೆಸರನ್ನು ನೋಂದಾಯಿಸಿದ್ದರು. ಇದರಲ್ಲಿ 405 ಆಟಗಾರರನ್ನಷ್ಟೇ ಶಾರ್ಟ್ ಲಿಸ್ಟ್ ಮಾಡಲಾದೆ. 273 ಭಾರತೀಯರು ಮತ್ತು 132 ವಿದೇಶಿ ಆಟಗಾರರು ಮತ್ತು ಸಹವರ್ತಿ ರಾಷ್ಟ್ರಗಳ ನಾಲ್ವರು ಆಟಗಾರರಿದ್ದಾರೆ. ಪ್ರತಿಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ದೊಡ್ಡ ಯೋಜನೆಯೊಂದಿಗೆ ಹರಾಜಿಗೆ ಸಿದ್ಧವಾಗಿದೆ.
ಆರ್ಸಿಬಿ ಖಾತೆಯಲ್ಲಿ ದೊಡ್ಡ ಮಟ್ಟದ ಹಣವಿಲ್ಲ ಎಂಬುದು ನಿಜ. ಬೆಂಗಳೂರು ಬಳಿ ಕೇವಲ 8.75 ಕೋಟಿ ರೂ. ಇದೆಯಷ್ಟೆ. ಇದರಲ್ಲೇ ತಂಡಕ್ಕೆ ಅಗತ್ಯವಿರುವ ಪ್ರಮುಖ ಆಟಗಾರರನ್ನು ಖರೀದಿಸಬೇಕಾಗಿದೆ. ಆರ್ಸಿಬಿಗೆ ಒಟ್ಟು ಏಳು ಆಟಗಾರರನ್ನು ಖರೀದಿಸುವ ಅವಕಾಶವಿದೆ. ಆದರೆ, ವಿದೇಶಿ ಪ್ಲೇಯರ್ಸ್ ಪೈಕಿ ಕೇವಲ ಇಬ್ಬರನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬೇಕು. ಹೀಗಾಗಿ ಈ ಬಾರಿಯ ಹರಾಜಿನಲ್ಲಿರುವ ಸ್ಟಾರ್ ಆಟಗಾರರಾದ ಸ್ಯಾಮ್ ಕುರನ್, ಬೆನ್ ಸ್ಟೋಕ್ಸ್, ಕ್ಯಾಮರೂನ್ ಗ್ರೀನ್ ಖರೀದಿಸುವ ಪ್ಲಾನ್ ಅನ್ನು ಕೈಬಿಟ್ಟಿದೆ.
ಬಲಿಷ್ಠವಾಗಬೇಕು ಬೌಲಿಂಗ್ ವಿಭಾಗ:
ಆರ್ಸಿಬಿ ಪ್ರತಿ ಸೀಸನ್ನಲ್ಲಿ ಎಡವುತ್ತಿರುವುದು ಬೌಲಿಂಗ್ ವಿಭಾಗದಲ್ಲಿ. ಈ ಬಾರಿ ಶ್ರೇಷ್ಠ ಬೌಲರ್ ಅನ್ನು ಖರೀದಿ ಮಾಡಿಲ್ಲ ಎಂದಾದರೆ ತಂಡಕ್ಕೆ ದೊಡ್ಡ ಹಿನ್ನಡೆ ಆಗುವುದು ಖಚಿತ. ಯಾಕೆಂದರೆ ಕಳೆದ ಸೀಸನ್ನಲ್ಲಿ ತಂಡಕ್ಕೆ ಬೌಲಿಂಗ್ನಲ್ಲಿ ಆಧಾರವಾಗಿದ್ದ ಜೋಶ್ ಹೇಜಲ್ವುಡ್ ಈ ಬಾರಿ ಆಡುವುದು ಅನುಮಾನ. ಮುಂದಿನ ಜೂನ್ನಲ್ಲಿ ಆ್ಯಶಸ್ ಸರಣಿಯಿದೆ. ಹೀಗಾಗಿ ಈ ಪ್ರತಿಷ್ಠಿತ ಸಿರೀಸ್ಗಾಗಿ ಹೇಜಲ್ವುಡ್ ಐಪಿಎಲ್ ತೊರೆಯುವ ಸಾಧ್ಯತೆ ಹೆಚ್ಚಿದೆ. ಜೊತೆಗೆ ಸ್ಪಿನ್ ವಿಭಾಗಕ್ಕೂ ಆರ್ಸಿಬಿ ಅನುಭವಿ ಆಟಗಾರನನ್ನು ಹುಡುಕಬೇಕಿದೆ. ವನಿಂದು ಹಸರಂಗ ತಂಡದಲ್ಲಿ ಇದ್ದಾರೆ ಆದರೂ ಇವರು ಇಂಜುರಿಗೆ ತುತ್ತಾದರೆ ಬ್ಯಾಕರ್ ಸ್ಪಿನ್ನರ್ನ ಅಗತ್ಯವಿದೆ. ಹೀಗಾಗಿ ಐರ್ಲೆಂಡ್ನ ಎಡಗೈ ವೇಗಿ ಜೋಷ್ ಲಿಟ್ಲ್ ಹಾಗೂ ಆ್ಯಡಂ ಜಂಪಾ ಆಥವಾ ಇಂಗ್ಲೆಂಡ್ನ ಆದಿಲ್ ರಶೀದ್ಗಾಗಿ ದುಡ್ಡು ಸುರಿಸೋ ಯೋಜನೆಯಲ್ಲಿದೆ.
Ramiz Raja: ಪಾಕ್ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸ್ಥಾನದಿಂದ ರಮೀಜ್ ರಾಜಾ ವಜಾ
ಮಧ್ಯಮ ಕ್ರಮಾಂಕಕ್ಕೆ ಯಾವ ಪ್ಲೇಯರ್:
ರಾಯಲ್ ಚಾಲೆಂಜರ್ಸ್ ತಂಡದ ಮಧ್ಯಮ ಕ್ರಮಾಂಕ ಕೂಡ ಬಲಿಷ್ಠವಾಗಬೇಕು. ಕೊಹ್ಲಿ, ಡುಪ್ಲೆಸಿಸ್, ರಜತ್ ಪಟಿದಾರ್ ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಮತ್ಯಾವ ಸ್ಟಾರ್ ಆಟಗಾರರಿಲ್ಲ. ಗ್ಲೆನ್ ಮ್ಯಾಕ್ಸ್ವೆಲ್ ಐಪಿಎಲ್ 2023 ವೇಳೆಗೆ ಫಿಟ್ ಆಗುವುದು ಕೂಡ ಅನುಮಾನವಾಗಿದೆ. ಬರ್ತ್ಡೇ ಪಾರ್ಟಿಯೊಂದರಲ್ಲಿ, ಮ್ಯಾಕ್ಸ್ವೆಲ್ ಕಾಲು ಮುರಿದುಕೊಂಡಿದ್ದು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಬ್ಯಾಟರ್ಗಳ ಸಾಲಿನಲ್ಲಿ ಆರ್ಸಿಬಿಗೆ ಮಯಾಂಕ್ ಅಗರ್ವಾಲ್ ಅಥವಾ ಮನೀಶ್ ಪಾಂಡೆ ಎಂಬ ಎರಡು ಆಯ್ಕೆಯಿದೆ.
ಎಷ್ಟು ಗಂಟೆಗೆ ಹರಾಜು?:
ಐಪಿಎಲ್ ಹರಾಜು ಪ್ರಕ್ರಿಯೆ ಶುಕ್ರವಾರದ ಮಧ್ಯಾಹ್ನ 2:30ಕ್ಕೆ ಪ್ರಾರಂಭವಾಗುತ್ತದೆ. ಸುಮಾರು ರಾತ್ರಿ 9:00ಕ್ಕೆ ಕೊನೆಗೊಳ್ಳುತ್ತದೆ. ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಐಪಿಎಲ್ ಹರಾಜನ್ನು ನೇರ ಪ್ರಸಾರ ಮಾಡಲಿದೆ. ಜಿಯೋ ಸಿನಿಮಾ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಸಂಪೂರ್ಣ ಹರಾಜು ಪ್ರಕ್ರಿಯೆಯನ್ನು ಉಚಿತವಾಗಿ ಲೈವ್ ಸ್ಟ್ರೀಮ್ ಮಾಡಲಾಗುತ್ತದೆ. ಭಾರತದಲ್ಲಿ ವಾಸಿಸುವ Airtel, Jio, BSNL ಮತ್ತು VI ಬಳಕೆದಾರರಿಗೂ ಉಚಿತ ಲೈವ್ ಸ್ಟ್ರೀಮಿಂಗ್ ಲಭ್ಯವಿರುತ್ತದೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ