IPL 2023: ಚೆನ್ನೈ- ಲಕ್ನೋ ತಂಡಕ್ಕೆ ಆಘಾತ; ಇಬ್ಬರು ಪ್ರಮುಖ ವೇಗಿಗಳು ಆಡುವುದು ಅನುಮಾನ!
IPL 2023: ಕಳೆದ ಸೀಸನ್ನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಇಬ್ಬರು ಎಡಗೈ ವೇಗದ ಬೌಲರ್‌ಗಳಾದ ಮುಖೇಶ್ ಚೌಧರಿ ಮತ್ತು ಮೊಹ್ಸಿನ್ ಖಾನ್ ಇಂಜುರಿಗೆ ತುತ್ತಾಗಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL 2023) ಪ್ರಾರಂಭವಾಗುವ ಮೊದಲೇ, ಕೆಲವು ಆಟಗಾರರು ಇಂಜುರಿಯಿಂದಾಗಿ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಜಸ್ಪ್ರೀತ್ ಬುಮ್ರಾ, ರಿಷಭ್ ಪಂತ್, ಜಾನಿ ಬೈರ್‌ಸ್ಟೋ, ಜೆ ರಿಚರ್ಡ್‌ಸನ್, ಶ್ರೇಯಸ್ ಅಯ್ಯರ್ (Jasprit Bumrah, Rishabh Pant, Jonny Bairstow, Jhe Richardson, Shreyas Iyer) ಅವರಂತಹ ಹಿರಿಯ ಆಟಗಾರರು ಗಾಯದಿಂದಾಗಿ ಇಡೀ ಲೀಗ್‌ನಿಂದ ಹೊರಗುಳಿದಿದ್ದಾರೆ. ಇದೀಗ ಇವರೊಂದಿಗೆ ಮತ್ತಿಬ್ಬರು ಯುವ ಆಟಗಾರರು ಈ ಪಟ್ಟಿಗೆ ಸೇರ್ಪಡೆಯಾಗುವ ಸಾಧ್ಯತೆಗಳಿವೆ. ಕಳೆದ ಸೀಸನ್ನಲ್ಲಿ ಐಪಿಎಲ್‌ಗೆ ಪದಾರ್ಪಣೆ ಮಾಡಿದ ಇಬ್ಬರು ಎಡಗೈ ವೇಗದ ಬೌಲರ್‌ಗಳಾದ ಮುಖೇಶ್ ಚೌಧರಿ ಮತ್ತು ಮೊಹ್ಸಿನ್ ಖಾನ್ (Mukesh Chaudhary and Mohsin Khan) ಇಂಜುರಿಗೆ ತುತ್ತಾಗಿದ್ದಾರೆ. ಹೀಗಾಗಿ ಈ ಯುವ ಆಟಗಾರರು ಐಪಿಎಲ್ 2023ರ ಸೀಸನ್ ಆಡುವುದು ಅನುಮಾನ ಎಂದು ಹೇಳಲಾಗುತ್ತಿದೆ. ಇಬ್ಬರೂ ವೇಗಿಗಳು ಗಾಯಗೊಂಡಿದ್ದು, ಇನ್ನೂ ಸಂಪೂರ್ಣವಾಗಿ ಫಿಟ್ ಆಗಿಲ್ಲ ಎಂದು ಆಯಾ ಫ್ರಾಂಚೈಸಿಗಳು ತಿಳಿಸಿವೆ. ಸದ್ಯ ಮುಖೇಶ್ ಚೌಧರಿ ಚೆನ್ನೈ ತಂಡವನ್ನು ಪ್ರತಿನಿಧಿಸುತ್ತಿದ್ದು, ಕಳೆದ ಆವೃತ್ತಿಯಲ್ಲಿ ಪರಿಣಾಮಕಾರಿ ಪ್ರದರ್ಶನ ನೀಡಿದ್ದರು. ಇನ್ನು ಮೊಹ್ಸಿನ್ ಖಾನ್ ಲಕ್ನೋ ಸೂಪರ್ಜೈಂಟ್ಸ್ ಪರ ಆಡುತ್ತಿದ್ದು, ರಾಹುಲ್ ಬಳಗದ ಪ್ರಮುಖ ಬೌಲಿಂಗ್ ಅಸ್ತ್ರವಾಗಿದ್ದಾರೆ.
13 ಪಂದ್ಯಗಳಲ್ಲಿ ಗರಿಷ್ಠ 16 ವಿಕೆಟ್
ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ 26 ವರ್ಷದ ಮುಖೇಶ್ ಚೌಧರಿ ಕಳೆದ ಸೀಸ್ನಲ್ಲಿ ಸಿಎಸ್‌ಕೆ ತಂಡದ ಆರಂಭಿಕ ಓವರ್ಗಳ ಬೌಲಿಂಗ್ ಜವಬ್ದಾರಿವಹಸಿಕೊಂಡಿದ್ದರು. ಕಳೆದ ಸೀಸನ್ನಲ್ಲಿ ಚೆನ್ನೈ ಪರ 13 ಪಂದ್ಯಗಳನ್ನು ಆಡಿದ್ದ ಚೌಧರಿ ಗರಿಷ್ಠ 16 ವಿಕೆಟ್ ಪಡೆದಿದ್ದರು. ತಮ್ಮ ಸ್ವಿಂಗ್ ಬೌಲಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸಿದ್ದ ಮುಖೇಶ್, ಕಳೆದ ಸೀಸನ್ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿಯಂತಹ ಅನುಭವಿಗಳ ವಿಕೆಟ್‌ಗಳನ್ನು ಕೂಡ ಪಡೆದಿದ್ದರು. ಇದೀಗ ಮುಖೇಶ್ ಇಂಜುರಿ ಬಗ್ಗೆ ಮಾಹಿತಿ ನೀಡಿರುವ ಸಿಎಸ್‌ಕೆ ಫ್ರಾಂಚೈಸಿ ಸಿಇಒ ಕಾಶಿ ವಿಶ್ವನಾಥ್, ಮುಖೇಶ್ ಪ್ರಸ್ತುತ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದು, ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ ಎಂದು ಕ್ರಿಕ್‌ಬಜ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ.
IPL 2023: ಐಪಿಎಲ್ ಇತಿಹಾಸದಲ್ಲಿ ಕನ್ನಡಿಗನ ಹೆಸರಿನಲ್ಲಿದೆ ಅದೊಂದು ವಿಶೇಷ ದಾಖಲೆ..!
ಒಂದು ವರ್ಷ ಯಾವುದೇ ಪಂದ್ಯಗಳನ್ನು ಆಡಿರಲಿಲ್ಲ
ಮತ್ತೊಂದೆಡೆ, ಲಕ್ನೋ ಸೂಪರ್ ಜೈಂಟ್ಸ್‌ನೊಂದಿಗೆ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಉತ್ತರ ಪ್ರದೇಶದ ವೇಗಿ ಮೊಹ್ಸಿನ್ ಖಾನ್ ಪ್ರಸ್ತುತ ಫಿಟ್‌ನೆಸ್‌ಗಾಗಿ ಹೆಣಗಾಡುತ್ತಿದ್ದಾರೆ. ಮೊಹ್ಸಿನ್ ಪ್ರಸ್ತುತ ಲಕ್ನೋ ತಂಡದ ವೈದ್ಯಕೀಯ ಸಿಬ್ಬಂಧಿಯ ಮೇಲ್ವಿಚಾರಣೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಈಗ ಹೊರಬಿದ್ದಿರುವ ಮಾಹಿತಿಯ ಪ್ರಕಾರ ಅವರು ಸಂಪೂರ್ಣ ಫಿಟ್ ಆಗಲು ಸಮಯ ಹಿಡಿಯುತ್ತದೆಯಂತೆ. ಕಳೆದ ಸೀಸನ್ನಲ್ಲಿ ಲಕ್ನೋ ಪರ 9 ಪಂದ್ಯಗಳನ್ನಾಡಿದ್ದ ಮೊಹ್ಸಿನ್ ಖಾನ್, 14 ವಿಕೆಟ್ ಪಡೆಯುವುದರೊಂದಿಗೆ ತಂಡದ ಎರಡನೇ ಅತ್ಯಂತ ಯಶಸ್ವಿ ಬೌಲರ್ ಎನಿಸಿಕೊಂಡಿದ್ದರು. ಆದರೆ ಆ ಬಳಿಕ ಗಾಯದ ಸಮಸ್ಯೆಯಿಂದ ಕ್ರಿಕೆಟ್‌ನಿಂದ ದೂರ ಉಳಿದಿದ್ದ ಮೊಹ್ಸಿನ್ ಖಾನ್, ಒಂದು ವರ್ಷ ಯಾವುದೇ ಪಂದ್ಯಗಳನ್ನು ಆಡಿರಲಿಲ್ಲ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:31 pm, Sat, 25 March 23