NZ vs SL: 8 ಬ್ಯಾಟರ್ಸ್, 33 ರನ್; ಕಿವೀಸ್ ದಾಳಿಗೆ ತತ್ತರಿಸಿದ ಲಂಕಾಗೆ 198 ರನ್‌ಗಳ ಹೀನಾಯ ಸೋಲು!
NZ vs SL: ಇದು ಈ ವರ್ಷ ಏಕದಿನದಲ್ಲಿ ಶ್ರೀಲಂಕಾದ ಎರಡನೇ ಕಳಪೆ ಪ್ರದರ್ಶನವಾಗಿದೆ . ಇದಕ್ಕೂ ಮುನ್ನ ಜನವರಿಯಲ್ಲಿ ಭಾರತ ವಿರುದ್ಧ ತಂಡ 73 ರನ್‌ಗಳಿಗೆ ಆಲೌಟ್ ಆಗಿತ್ತು.
ಟೆಸ್ಟ್ ಸರಣಿಯಲ್ಲಿ ಸಿಂಹಳಿಯರನ್ನು 2-0 ಅಂತರದಲ್ಲಿ ಮಣಿಸಿ ವೈಟ್ ವಾಶ್ ಮಾಡಿದ್ದ ಕಿವೀಸ್ ಪಡೆ (New Zealand), ಇಂದಿನಿಂದ ಆರಂಭವಾಗಿರುವ ಏಕದಿನ ಸರಣಿಯಲ್ಲೂ ಶುಭಾರಂಭ ಮಾಡಿದೆ. ಇಂದು ನಡೆದ ಮೊದಲ ಏಕದಿನ ಪಂದ್ಯದಲ್ಲಿ ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿರುವ ನ್ಯೂಜಿಲೆಂಡ್ (New Zealand beat Sri Lanka) ಸರಣಿಯಲ್ಲಿ 1-0 ಅಂತರದ ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಕಿವೀಸ್ ತಂಡ ನೀಡಿದ 275 ರನ್‌ಗಳ ಗುರಿಗೆ ಉತ್ತರವಾಗಿ ಶ್ರೀಲಂಕಾ ತಂಡ ಕೇವಲ 76 ರನ್‌ಗಳಿಗೆ ಆಲೌಟ್ ಆಗುವುದರೊಂದಿಗೆ 198 ರನ್‌ಗಳ ಬೃಹತ್ ಅಂತರದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ತಂಡ 49.3 ಓವರ್‌ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 274 ರನ್ ಗಳಿಸಿತು. ಇದಕ್ಕೆ ಉತ್ತರವಾಗಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳು ಕಿವೀಸ್ ದಾಳಿಗೆ ತತ್ತರಿಸಿ, ಕೇವಲ 19.5 ಓವರ್‌ಗಳಲ್ಲಿ 76 ರನ್‌ಗಳಿಗೆ ಆಲೌಟ್ ಆಯಿತು. 31 ರನ್ ನೀಡಿ 5 ವಿಕೆಟ್ ಕಬಳಿಸಿದ ಹೆನ್ರಿ ಶಿಪ್ಲಿ (Henry Shipley) ನ್ಯೂಜಿಲೆಂಡ್ ಗೆಲುವಿನ ಹೀರೋ ಎನಿಸಿಕೊಂಡರು.
ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಕಿವೀಸ್ ತಂಡದ ಪರ ಆರಂಭಿಕ ಫಿನ್ ಅಲೆನ್ ಗರಿಷ್ಠ 51 ರನ್ ಗಳಿಸಿದರು. ಇವರಲ್ಲದೆ ರಚಿನ್ ರವೀಂದ್ರ 49 ರನ್ ಗಳಿಸಿದರು. ಗ್ಲೆನ್ ಪಿಲಿಪ್ಸ್ 39 ರನ್‌ಗಳ ಇನ್ನಿಂಗ್ಸ್ ಆಡಿದರೆ, ವಿಲ್ ಯುಂಗ್ 26 ರನ್‌ಗಳ ಕೊಡುಗೆ ನೀಡಿದರು. ಇನ್ನುಳಿದಂತೆ ತಂಡದ ಮತ್ತ್ಯಾವ ಆಟಗಾರನೂ ಹೇಳಿಕೊಳ್ಳುವಂತಹ ಇನ್ನಿಂಗ್ಸ್ ಆಡಲಿಲ್ಲ. ಹೀಗಾಗಿ ಕಿವೀಸ್ ತಂಡ ಕೂಡ ಪೂರ್ಣ 50 ಓವರ್‌ಗಳನ್ನು ಆಡದೆ 49.3 ಓವರ್‌ಗಳಲ್ಲಿ ಆಲೌಟ್ ಆಯಿತು. ಶ್ರೀಲಂಕಾ ಪರ ಚಮಿಕಾ ಕರುಣರತ್ನೆ ಗರಿಷ್ಠ 4 ವಿಕೆಟ್ ಪಡೆದರು.
‘ನಿಮಗೇನು ಬೇಕು?’ ಪಂತ್ ಬಗ್ಗೆ ಪ್ರಶ್ನಿಸಿದಕ್ಕೆ ಗರಂ ಆದ ನಟಿ ಊರ್ವಶಿ; ವಿಡಿಯೋ ನೋಡಿ
ಇಸ್ಪೀಟೆಲೆಗಳಂತೆ ಚದುರಿದ ಶ್ರೀಲಂಕಾ ತಂಡ
ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡದ ಆರಂಭ ಅತ್ಯಂತ ಕಳಪೆಯಾಗಿತ್ತು. ಪ್ರವಾಸಿ ತಂಡ 4 ಓವರ್‌ಗಳಲ್ಲಿ 14 ರನ್‌ಗಳಿಗೆ 2 ವಿಕೆಟ್ ಕಳೆದುಕೊಂಡಿತು. ಇದರ ನಂತರ 10 ಓವರ್‌ಗಳಲ್ಲಿ 31 ರನ್‌ಗಳಿಗೆ ಅರ್ಧ ತಂಡ ಪೆವಿಲಿಯನ್ ಸೇರಿಕೊಂಡಿತು. ಏಂಜೆಲೊ ಮ್ಯಾಥ್ಯೂಸ್ ಒಂದು ತುದಿಯಲ್ಲಿ ಇನ್ನಿಂಗ್ಸ್ ನಿಭಾಯಿಸಲು ಪ್ರಯತ್ನಿಸುತ್ತಿದ್ದರು. ಆದರೆ ಅವರ ರೂಪದಲ್ಲಿ ಶ್ರೀಲಂಕಾ 46 ರನ್‌ಗಳಿಗೆ ಆರನೇ ಹೊಡೆತವನ್ನು ಅನುಭವಿಸಿತು. ತಮ್ಮ ಇನ್ನಿಂಗ್ಸ್ನಲ್ಲಿ 18 ರನ್ ಬಾರಿಸಿದ ಮ್ಯಾಥ್ಯೂಸ್ ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಮ್ಯಾಥ್ಯೂಸ್ ಔಟಾಗುತ್ತಿದ್ದಂತೆ ಇಡೀ ತಂಡ 19.5 ಓವರ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು.
8 ಬ್ಯಾಟ್ಸ್‌ಮನ್, 33 ರನ್
ಶ್ರೀಲಂಕಾ ಪರ 8 ಬ್ಯಾಟ್ಸ್‌ಮನ್‌ಗಳು ಒಟ್ಟಾಗಿ 33 ರನ್ ಗಳಿಸಲಷ್ಟೇ ಶಕ್ತರಾದರು. ಕುಸಾಲ್ ಮೆಂಡಿಸ್ ಮತ್ತು ನಾಯಕ ದಸುನ್ ಶನಕ ಖಾತೆ ತೆರೆಯಲೂ ಸಾಧ್ಯವಾಗಲಿಲ್ಲ. ಮೆಂಡಿಸ್ 16 ಎಸೆತಗಳನ್ನು ಎದುರಿಸಿ ಡಕ್‌ಗೆ ಔಟಾದರೆ, ನಾಯಕ ಶನಕ ಕೂಡ ಗೋಲ್ಡನ್ ಡಕ್‌ಗೆ ಔಟಾದರು. ಇದು ಈ ವರ್ಷ ಏಕದಿನದಲ್ಲಿ ಶ್ರೀಲಂಕಾದ ಎರಡನೇ ಕಳಪೆ ಪ್ರದರ್ಶನವಾಗಿದೆ . ಇದಕ್ಕೂ ಮುನ್ನ ಜನವರಿಯಲ್ಲಿ ಭಾರತ ವಿರುದ್ಧ ತಂಡ 73 ರನ್‌ಗಳಿಗೆ ಆಲೌಟ್ ಆಗಿತ್ತು.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:41 pm, Sat, 25 March 23