AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: ಸಂಬಳದ ವಿಚಾರದಲ್ಲಿ ತಮ್ಮ ತಂಡದ ನಾಯಕರನ್ನೇ ಮೀರಿಸಿದ ಕ್ರಿಕೆಟಿಗರಿವರು..!

IPL 2023: ಈ ಬಾರಿಯ ಐಪಿಎಲ್​ನ ಮತ್ತೊಂದು ಗಮನಾರ್ಹ ವಿಷಯವೆಂದರೆ ಎಂಎಸ್ ಧೋನಿ, ರೋಹಿತ್ ಶರ್ಮಾಗಿಂತ ಹೆಚ್ಚು ಸಂಬಳ ಪಡೆಯುವ ಮೂಲಕ ಹಲವು ಆಟಗಾರರು ದಾಖಲೆ ಬರೆದರು.

IPL 2023: ಸಂಬಳದ ವಿಚಾರದಲ್ಲಿ ತಮ್ಮ ತಂಡದ ನಾಯಕರನ್ನೇ ಮೀರಿಸಿದ ಕ್ರಿಕೆಟಿಗರಿವರು..!
ಹೆಚ್ಚು ವೇತನ ಪಡೆದ ಆಟಗಾರರು
Follow us
ಪೃಥ್ವಿಶಂಕರ
|

Updated on:May 29, 2023 | 4:27 PM

ಇಂಡಿಯನ್ ಪ್ರೀಮಿಯರ್ ಲೀಗ್​ನ 16 ನೇ ಆವೃತ್ತಿಯ ಫೈನಲ್ (IPL 2023 Final) ಪಂದ್ಯ ಇಂದು ಅಂದರೆ, ಮೇ 29 ರಂದು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ (Narendra Modi Stadium) ನಡೆಯುತ್ತಿದೆ. ನಿಗದಿಯಂತೆ ಈ ಪಂದ್ಯ ಮೇ 28 ರಂದು ಅಂದರೆ, ನಿನ್ನೆ ನಡೆಯಬೇಕಿತ್ತು. ಆದರೆ ಮಳೆಯಿಂದಾಗಿ ಪಂದ್ಯವನ್ನು ಮೀಸಲು ದಿನಕ್ಕೆ ಮುಂದೂಡಬೇಕಾಯಿತು. ಈ ಫೈನಲ್ ಪಂದ್ಯದಲ್ಲಿ 4 ಬಾರಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ (CSK vs GT) ತಂಡಗಳು ಮುಖಾಮುಖಿಯಾಗುತ್ತಿವೆ. ಉಭಯ ತಂಡಗಳಲ್ಲಿ ಯಾವ ತಂಡ ಗೆದ್ದರೂ ಅದು ದಾಖಲೆಯಾಗಲಿದೆ. ಏತನ್ಮಧ್ಯೆ, ಈ ಬಾರಿಯ ಐಪಿಎಲ್​ ಹಲವು ದಾಖಲೆಗಳಿಗೆ ಸಾಕ್ಷಿಯಾಗಿತ್ತು. ಹರಾಜಿನಲ್ಲಿ ಆಟಗಾರರ ವೇತನದಿಂದ ಹಿಡಿದು, ದುಬಾರಿ ಸಂಭಾವನೆ ಪಡೆದ ಆಟಗಾರರ ಪ್ರದರ್ಶನದವರೆಗೆ ಸಾಕಷ್ಟು ಸದ್ದು ಮಾಡಿತ್ತು. ಅದರಲ್ಲೂ ಈ ಬಾರಿಯ ಐಪಿಎಲ್​ನ ಮತ್ತೊಂದು ಗಮನಾರ್ಹ ವಿಷಯವೆಂದರೆ ಎಂಎಸ್ ಧೋನಿ, ರೋಹಿತ್ ಶರ್ಮಾ (MS Dhoni and Rohit Sharma) ಗಿಂತ ಹೆಚ್ಚು ಸಂಬಳ ಪಡೆಯುವ ಮೂಲಕ ಹಲವು ಆಟಗಾರರು ದಾಖಲೆ ಬರೆದರು. ಹಾಗಿದ್ದರೆ ಯಾವ ತಂಡದ ಆಟಗಾರರು ತಮ್ಮ ತಂಡದ ನಾಯಕನಿಗಿಂತ ಹೆಚ್ಚಿನ ಸಂಬಳ ಪಡೆದರು ಎಂಬುದರ ವಿವರ ಇಲ್ಲಿದೆ.

ಚೆನ್ನೈ ಸೂಪರ್ ಕಿಂಗ್ಸ್

ನಾಯಕ: ಎಂಎಸ್ ಧೋನಿ (ಸಂಭಾವನೆ – 12 ಕೋಟಿ)

ಹೆಚ್ಚಿನ ಸಂಭಾವನೆ ಪಡೆದ ಆಟಗಾರರು: ಬೆನ್ ಸ್ಟೋಕ್ಸ್ (16.25 ಕೋಟಿ), ರವೀಂದ್ರ ಜಡೇಜಾ (16 ಕೋಟಿ), ದೀಪಕ್ ಚಹಾರ್ (14 ಕೋಟಿ)

ಪಂಜಾಬ್ ಕಿಂಗ್ಸ್

ನಾಯಕ: ಶಿಖರ್ ಧವನ್ (ಸಂಭಾವನೆ – 8.25 ಕೋಟಿ)

ಹೆಚ್ಚಿನ ಸಂಭಾವನೆ ಪಡೆದ ಆಟಗಾರರು: ಸ್ಯಾಮ್ ಕರನ್ (18.5 ಕೋಟಿ), ಲಿಯಾಮ್ ಲಿವಿಂಗ್‌ಸ್ಟನ್ (11.5 ಕೋಟಿ), ಕಗಿಸೊ ರಬಾಡ (9.25 ಕೋಟಿ), ಶಾರುಖ್ ಖಾನ್ (9 ಕೋಟಿ).

ಕೋಲ್ಕತ್ತಾ ನೈಟ್ ರೈಡರ್ಸ್

ನಾಯಕ: ಶ್ರೇಯಸ್ ಅಯ್ಯರ್ (ಸಂಭಾವನೆ – 12.25 ಕೋಟಿ)

ಹೆಚ್ಚು ಸಂಭಾವನೆ ಪಡೆದ ಆಟಗಾರರು: ಆಂಡ್ರೆ ರಸೆಲ್ (16 ಕೋಟಿ)

ರಾಯಲ್ ಚಾಲೆಂಜರ್ಸ್ ಬೆಂಗಳೂರು

ನಾಯಕ: ಫಾಫ್ ಡು ಪ್ಲೆಸಿಸ್ (ಸಂಬಳ – 7 ಕೋಟಿ)

ಹೆಚ್ಚಿನ ಸಂಭಾವನೆ ಪಡೆದ ಆಟಗಾರರು: ವಿರಾಟ್ ಕೊಹ್ಲಿ (15 ಕೋಟಿ), ಗ್ಲೆನ್ ಮ್ಯಾಕ್ಸ್‌ವೆಲ್ (11 ಕೋಟಿ), ಹರ್ಷಲ್ ಪಟೇಲ್ (10.75 ಕೋಟಿ), ವನಿಂದು ಹಸರಂಗ (10.75 ಕೋಟಿ), ಜೋಶ್ ಹ್ಯಾಜಲ್‌ವುಡ್ (7.75 ಕೋಟಿ)

ದೆಹಲಿ ಕ್ಯಾಪಿಟಲ್ಸ್

ನಾಯಕ: ಡೇವಿಡ್ ವಾರ್ನರ್ (ಸಂಭಾವನೆ – 6.25 ಕೋಟಿ)

ಹೆಚ್ಚಿನ ಸಂಭಾವನೆ ಪಡೆದ ಆಟಗಾರರು: ಅಕ್ಷರ್ ಪಟೇಲ್ (12 ಕೋಟಿ), ಪೃಥ್ವಿ ಶಾ (8 ಕೋಟಿ), ಮಿಚೆಲ್ ಮಾರ್ಷ್ (6.5 ಕೋಟಿ), ಎನ್ರಿಚ್ ನೋಕಿಯಾ (6.25 ಕೋಟಿ)

ಮುಂಬೈ ಇಂಡಿಯನ್ಸ್

ನಾಯಕ: ರೋಹಿತ್ ಶರ್ಮಾ (ಸಂಭಾವನೆ – 16 ಕೋಟಿ)

ಹೆಚ್ಚಿನ ಸಂಭಾವನೆ ಪಡೆದ ಆಟಗಾರರು: ಕ್ಯಾಮರೂನ್ ಗ್ರೀನ್ (17.5 ಕೋಟಿ)

ಸನ್ ರೈಸರ್ಸ್ ಹೈದರಾಬಾದ್

ನಾಯಕ: ಏಡೆನ್ ಮಾರ್ಕ್ರಾಮ್ (ಸಂಭಾವನೆ – 2.6 ಕೋಟಿ)

ಹೆಚ್ಚಿನ ಸಂಭಾವನೆ ಪಡೆದ ಆಟಗಾರರು – ಹ್ಯಾರಿ ಬ್ರೂಕ್ (13.25 ಕೋಟಿ), ವಾಷಿಂಗ್ಟನ್ ಸುಂದರ್ (8.75 ಕೋಟಿ), ರಾಹುಲ್ ತ್ರಿಪಾಠಿ (8.5 ಕೋಟಿ), ಮಯಾಂಕ್ ಅಗರ್ವಾಲ್ (8.25 ಕೋಟಿ), ಅಭಿಷೇಕ್ ಶರ್ಮಾ (6.5 ಕೋಟಿ), ಹೆನ್ರಿಚ್ ಕ್ಲಾಸೆನ್ (5.25 ಕೋಟಿ), ಭುವನೇಶ್ವರ್ ಕುಮಾರ್ ( 4.2 ಕೋಟಿ), ಮಾರ್ಕೊ ಯಾನ್ಸೆನ್ (4.2 ಕೋಟಿ), ಕಾರ್ತಿಕ್ ತ್ಯಾಗಿ (4 ಕೋಟಿ), ಅಬ್ದುಲ್ ಸಮದ್ (4 ಕೋಟಿ), ಉಮ್ರಾನ್ ಮಲಿಕ್ (4 ಕೋಟಿ), ಟಿ ನಟರಾಜನ್ (4 ಕೋಟಿ)

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:25 pm, Mon, 29 May 23