RCB vs KKR: ಟಾಸ್ ವೇಳೆ ತಪ್ಪು ಗ್ರಹಿಕೆ: ಆಕ್ರೋಶ ವ್ಯಕ್ತಪಡಿಸಿದ ಕೆಕೆಆರ್ ನಾಯಕ
IPL 2023: RCB vs KKR- ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬೌಲಿಂಗ್ ಆಯ್ದುಕೊಂಡರು.

IPL 2023: RCB vs KKR: ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಆರ್ಸಿಬಿ ಹಾಗೂ ಕೆಕೆಆರ್ (RCB vs KKR) ತಂಡಗಳು ಮುಖಾಮುಖಿಯಾಗಿದೆ. ಈ ಪಂದ್ಯದ ಆರಂಭಕ್ಕೂ ಮುನ್ನ ನಡೆದ ಟಾಸ್ ಪ್ರಕ್ರಿಯೆಯು ಇದೀಗ ವಿವಾದಕ್ಕೆ ಕಾರಣವಾಗಿದೆ. ಕೆಕೆಆರ್ ತಂಡದ ನಾಯಕ ನಿತೀಶ್ ರಾಣಾ ಟಾಸ್ ಹಾಕಿದ್ದರು. ಇತ್ತ ನಾಣ್ಯವನ್ನು ಪರಿಶೀಲಿಸಿದ ಮ್ಯಾಚ್ ರೆಫರಿ ಶಕ್ತಿ ಸಿಂಗ್, ಹೆಡ್ಸ್ ಆಗಿದ್ದು ಕೆಕೆಆರ್ ಟಾಸ್ ಗೆದ್ದಿದೆ ಎಂದರು. ಆದರೆ ಇದೇ ವೇಳೆ ಫಾಫ್ ಡುಪ್ಲೆಸಿಸ್ ನಾನು ಹೆಡ್ಸ್ ಅಂದಿರುವುದಾಗಿ ತಿಳಿಸಿದ್ದಾರೆ. ಇದರಿಂದ ಕೆಲ ಕ್ಷಣ ಗೊಂದಲವಾಯಿತು. ಇದಾಗ್ಯೂ ಕಮೆಂಟೇಟರ್ ಸಂಜಯ್ ಮಂಜ್ರೇಕರ್ ಆರ್ಸಿಬಿ ನಾಯಕ ಹೆಡ್ಸ್ ಅಂದಿರುವುದನ್ನು ಸ್ಪಷ್ಟಪಡಿಸಿದರು. ಹೀಗಾಗಿ ರೆಫರಿ ಆರ್ಸಿಬಿ ಟಾಸ್ ವಿನ್ನರ್ ಎಂದರು.
ಅತ್ತ ಕೆಕೆಆರ್ ನಾಯಕ ನಿತೀಶ್ ರಾಣಾ ಸಂಜಯ್ ಮಂಜ್ರೇಕರ್ ಜೊರೆ ವಾಗ್ವಾದಕ್ಕಿಳಿಯಲು ಮುಂದಾದರು. ಅಲ್ಲದೆ ಆಕ್ರೋಶವನ್ನು ವ್ಯಕ್ತಪಡಿಸುತ್ತಾ ಮುಂದೆ ಸಾಗಿದರು. ಆ ಬಳಿಕ ಮಾತನಾಡಿದ ಫಾಫ್ ಡುಪ್ಲೆಸಿಸ್ ನಾನು ಹೆಡ್ಸ್ ಅಂದಿರುವುದು. ಆದರೆ ಉಚ್ಚಾರಣೆ ತಪ್ಪು ಗ್ರಹಿಕೆಯಿಂದ ಗೊಂದಲ ಉಂಟಾಗಿದೆ ಎಂದರು. ಅಲ್ಲದೆ ನಾವು ಈ ಪಂದ್ಯದಲ್ಲಿ ಬೌಲ್ ಮಾಡುತ್ತೇವೆ. ಏಕೆಂದರೆ ಕಳೆದ ರಾತ್ರಿ ಇಬ್ಬನಿ ಇತ್ತು. ಎರಡನೇ ಇನ್ನಿಂಗ್ಸ್‌ನಲ್ಲಿ ಅದು ಸ್ಕಿಡ್ ಆಗಲಿದೆ ಎಂದು ಭಾವಿಸುತ್ತೇವೆ ಎಂದು ತಿಳಿಸಿದರು. ಹಾಗೆಯೇ ಪ್ಲೇಯಿಂಗ್ ಇಲೆವೆನ್ನಲ್ಲಿ ಒಂದು ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದ ಡುಪ್ಲೆಸಿಸ್, ಈ ಪಂದ್ಯದಲ್ಲಿ ರೀಸ್ ಟೋಪ್ಲಿ ಕಣಕ್ಕಿಳಿಯುತ್ತಿಲ್ಲ. ಬದಲಾಗಿ ಡೇವಿಡ್ ವಿಲ್ಲಿ ಆಡಲಿದ್ದಾರೆ ಎಂದರು.
ಇದೀಗ ಆರ್ಸಿಬಿ ಹಾಗೂ ಕೆಕೆಆರ್ ನಡುವಣ ಟಾಸ್ ಪ್ರಕ್ರಿಯೆ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅಷ್ಟೇ ಅಲ್ಲದೆ ಗೊಂದಲಕ್ಕೆ ಕಾರಣವಾಗಿದ್ದ ಪ್ರಕ್ರಿಯೆಯ ಬಗ್ಗೆ ಕೆಕೆಆರ್ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಏಕೆಂದರೆ ಮತ್ತೊಮ್ಮೆ ಟಾಸ್ ಹಾಕುವ ಅವಕಾಶ ಇದ್ದರೂ, ಗೊಂದಲದೊಂದಿಗೆ ರೆಫರಿ ಟಾಸ್ ಪ್ರಕ್ರಿಯೆ ಮುಗಿಸಿರುವುದು ಉತ್ತಮ ನಡೆಯಲ್ಲ ಎಂಬ ವಾದವನ್ನು ಕೆಕೆಆರ್ ಫ್ಯಾನ್ಸ್ ಮುಂದಿಡುತ್ತಿದ್ದಾರೆ.
#RCB have won the toss and elect to bowl first against #KKR at the Eden Gardens.
Live – https://t.co/V0OS7tFZTB #TATAIPL #KKRvRCB #IPL2023 pic.twitter.com/dmdLoz53QN
— IndianPremierLeague (@IPL) April 6, 2023
ಉಭಯ ತಂಡಗಳು ಹೀಗಿವೆ:
ಕೊಲ್ಕತ್ತಾ ನೈಟ್ ರೈಡರ್ಸ್: ನಿತೀಶ್ ರಾಣಾ (ನಾಯಕ), ರಹಮಾನುಲ್ಲಾ ಗುರ್ಬಾಝ್ (ವಿಕೆಟ್ ಕೀಪರ್), ಮನ್ದೀಪ್ ಸಿಂಗ್, ರಿಂಕು ಸಿಂಗ್, ಆಂಡ್ರೆ ರಸೆಲ್, ಸುಯಶ್ ಶರ್ಮಾ, ಸುನಿಲ್ ನರೈನ್, ಶಾರ್ದೂಲ್ ಠಾಕೂರ್, ಟಿಮ್ ಸೌಥಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡುಪ್ಲೆಸಿ (ನಾಯಕ), ವಿರಾಟ್ ಕೊಹ್ಲಿ, ಗ್ಲೆನ್ ಮ್ಯಾಕ್ಸ್‌ವೆಲ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮೈಕಲ್ ಬ್ರೇಸ್‌ವೆಲ್, ಶಹಬಾಝ್ ಅಹ್ಮದ್, ಡೇವಿಡ್ ವಿಲ್ಲಿ, ಹರ್ಷಲ್ ಪಟೇಲ್, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಆಕಾಶ್ ದೀಪ್.




