AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2023: 11ರ ಬದಲು 15 ಆಟಗಾರರ ಹೆಸರು; ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ? ಇಲ್ಲಿದೆ ವಿವರ

Impact Player: ಈ ನಿಯಮದಡಿಯಲ್ಲಿ ಪ್ರತಿ ತಂಡದ ನಾಯಕರು ಟಾಸ್ ವೇಳೆ ತಮ್ಮ ತಂಡದ ಆಡುವ ಇಲೆವೆನ್ ಬಳಗವನ್ನು ಹೆಸರಿಸುವಾಗಲೇ ಹೆಚ್ಚುವರಿಯಾಗಿ ಇನ್ನು ನಾಲ್ಕು ಆಟಗಾರರ ಹೆಸರನ್ನು ನೀಡಿರಬೇಕು.

IPL 2023: 11ರ ಬದಲು 15 ಆಟಗಾರರ ಹೆಸರು; ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ? ಇಲ್ಲಿದೆ ವಿವರ
ಇಂಪ್ಯಾಕ್ಟ್ ಪ್ಲೇಯರ್ ನಿಯಮ
Follow us
ಪೃಥ್ವಿಶಂಕರ
|

Updated on:Mar 30, 2023 | 4:01 PM

16ನೇ ಆವೃತ್ತಿಯ ಐಪಿಎಲ್ (IPL 2023) ಆರಂಭಕ್ಕೆ ಇನ್ನೊಂದೆ ದಿನ ಬಾಕಿ ಉಳಿದಿದೆ. ಮಾ. 31 ರಿಂದ ಆರಂಭವಾಗುವ ಈ ಮಿಲಿಯಾನ್ ಡಾಲರ್ ಟೂರ್ನಿ, ಬರೋಬ್ಬರಿ 2 ತಿಂಗಳ ಕಾಲ ಇಡೀ ಕ್ರಿಕೆಟ್ ಜಗತ್ತನ್ನು ಕ್ರಿಕೆಟ್ ಸಾಗರದಲ್ಲಿ ಮುಳುಗಲಿದೆ. ಇಷ್ಟು ಸಾಲದೆಂಬಂತೆ ಈ ಟೂರ್ನಿಯ ಕುತೂಹಲವನ್ನು ಮತ್ತಷ್ಟು ಹೆಚ್ಚಿಸುವ ಸಲುಬಾಗಿ ಬಿಸಿಸಿಐ (BCCI) ಹಲವು ಹೊಸ ನಿಮಯಗಳನ್ನು ಜಾರಿಗೆ ತಂದಿದೆ. ಹಾಲಿ ಚಾಂಪಿಯನ್ ಗುಜರಾತ್ ಟೈಟಾನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ (Gujarat Titans vs Chennai Super Kings) ನಡುವಿನ ಪಂದ್ಯದಿಂದ ಈ ಕೆಲವು ಹೊಸ ನಿಯಮಗಳು ಜಾರಿಯಾಗಲಿವೆ. ಅದರಲ್ಲಿ ಪ್ರಮುಖ ನಿಯಮವೆಂದರೆ ಇಂಪ್ಯಾಕ್ಟ್ ಪ್ಲೇಯರ್ (Impact Player). ಈ ನಿಯಮವನ್ನು ಈ ವರ್ಷ ಮುಕ್ತಾಯಗೊಂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಸಿಸಿಐ ಪ್ರಯೋಗಿಸಿ ಯಶಸ್ಸು ಕಂಡಿತ್ತು. ಹೀಗಾಗಿ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲೂ ಈ ನಿಯಮವನನ್ನು ಜಾರಿಗೆ ತರಲಾಗಿದೆ.

ಏನಿದು ಇಂಪ್ಯಾಕ್ಟ್ ಪ್ಲೇಯರ್ ನಿಯಮ?

ಇಂಪ್ಯಾಕ್ಟ್ ಪ್ಲೇಯರ್ ಎಂದರೆ ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ಉಭಯ ತಂಡಗಳು ತಮ್ಮ ತಂಡದಲ್ಲಿನ ಒಬ್ಬ ಆಟಗಾರನನ್ನು ಬದಲಿಸುವ ಅವಕಾಶ ಪಡೆಯುವುದಾಗಿದೆ. ನಿಯಮದ ಪ್ರಕಾರ ತಂಡಗಳು ತಾವು ಘೋಷಿಸಿರುವ ತಂಡದಲ್ಲಿ ಒಬ್ಬ ಬೌಲರ್ ಬದಲಿಗೆ ಒಬ್ಬ ಬ್ಯಾಟ್ಸ್‌ಮನ್ ಅಥವಾ ಬ್ಯಾಟ್ಸ್​ಮನ್ ಬದಲಿಗೆ ಬೌಲರನ್ನು ತಂಡಕ್ಕೆ ಸೇರಿಸಿಕೊಳ್ಳಬಹುದಾಗಿದೆ. ಈ ನಿಯಮ ಭಾರತಕ್ಕೆ ಹೊಸದಾಗಿದ್ದರೂ ಕ್ರಿಕೆಟ್ ಲೋಕದಲ್ಲಿ ಈಗಾಗಲೇ ಚಾಲ್ತಿಯಲ್ಲಿದೆ. ಈ ಹಿಂದೆ ಬಿಗ್​ಬ್ಯಾಶ್ ಟಿ20 ಲೀಗ್​​ನಲ್ಲಿ ಕೂಡ ಇದನ್ನು ಅಳವಡಿಸಲಾಗಿತ್ತು. ಈ ಆಯ್ಕೆಯ ಮೂಲಕ ಎರಡೂ ತಂಡಗಳು ತಮ್ಮ ತಂತ್ರ ಮತ್ತು ಅವಶ್ಯಕತೆಗೆ ಅನುಗುಣವಾಗಿ ಪಂದ್ಯದ ಮಧ್ಯೆ ಆಟಗಾರನನ್ನು ಬದಲಿಬಹುದಾಗಿದೆ. ಹಾಗಂತ ಈ ನಿಯಮವನ್ನು ಬಳಸಲೇಬೇಕೆಂದಿಲ್ಲ. ಈ ಆಯ್ಕೆಯನ್ನು ಪ್ರಯೋಗಿಸುವುದು ತಂಡಕ್ಕೆ ಬಿಟ್ಟ ವಿಷಯ.

IPL 2023: ಐಪಿಎಲ್​ನಲ್ಲಿ ಅತಿ ಹೆಚ್ಚು ಕ್ಯಾಚ್ ಹಿಡಿದಿರುವ ಟೀಂ ಇಂಡಿಯಾ ಕ್ರಿಕೆಟಿಗರಿವರು

ಈ ನಿಯಮದಡಿಯಲ್ಲಿ ಪ್ರತಿ ತಂಡದ ನಾಯಕರು ಟಾಸ್ ವೇಳೆ ತಮ್ಮ ತಂಡದ ಆಡುವ ಇಲೆವೆನ್ ಬಳಗವನ್ನು ಹೆಸರಿಸುವಾಗಲೇ ಹೆಚ್ಚುವರಿಯಾಗಿ ಇನ್ನು ನಾಲ್ಕು ಆಟಗಾರರ ಹೆಸರನ್ನು ನೀಡಿರಬೇಕು. ಪಂದ್ಯ ಆರಂಭವಾದ ಬಳಿಕ 14 ಓವರ್​ಗಳ ಒಳಗೆ ಈ ನಿಯಮದಡಿಯಲ್ಲಿ ಒಬ್ಬ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಬಹುದಾಗಿದೆ. ಒಂದು ವೇಳೆ ಒಬ್ಬ ಆಟಗಾರ ಇಂಪ್ಯಾಕ್ಟ್ ಪ್ಲೇಯರ್ ಆಗಿ ತಂಡ ಸೇರಿಕೊಂಡರೆ ಆತನ ಬದಲು ಮತ್ತೊಬ್ಬ ಆಟಗಾರ ತಂಡವನ್ನು ತೊರೆಯಬೇಕಾಗುತ್ತದೆ. ಅಲ್ಲದೆ ಪಂದ್ಯದ ನಡುವೆ ಈ ನಿಯಮವನ್ನು ಬಳಸಿಕೊಳ್ಳುವ ಮೊದಲು ತಂಡದ ನಾಯಕ ಅಂಪೈರ್ ಬಳಿ ಈ ಬಗ್ಗೆ ಮಾಹಿತಿ ನೀಡಬೇಕಾಗುತ್ತದೆ.

ವಿದೇಶಿ ಆಟಗಾರರಿಗೆ ಈ ನಿಯಮ ಹೇಗೆ ಅನ್ವಯವಾಗುತ್ತದೆ?

ಒಂದು ತಂಡ ತಾನು ಆಡುವ ಪ್ಲೇಯಿಂಗ್ ಇಲೆವೆನ್​ನಲ್ಲಿ ಕೇವಲ ಮೂವರು ವಿದೇಶಿ ಆಟಗಾರರಿಗೆ ಸ್ಥಾನ ನೀಡಿದ್ದು, ಆ ಬಳಿಕ ಬೇಕಿದ್ದರೆ ವಿದೇಶಿ ಆಟಗಾರನನ್ನು ಇಂಪ್ಯಾಕ್ಟ್ ಪ್ಲೇಯರ್ ನಿಯಮದಡಿಯಲ್ಲಿ ತಂಡಕ್ಕೆ ಸೇರಿಸಿಕೊಳ್ಳಬಹುದು. ಆದರೆ ಈಗಾಗಲೇ ತಂಡದಲ್ಲಿ 4 ವಿದೇಶಿ ಆಟಗಾರರು ಆಡುತ್ತಿದ್ದು, ಮತ್ತೊಬ್ಬ ವಿದೇಶಿ ಆಟಗಾರನನ್ನು ಈ ನಿಯಮದಡಿಯಲ್ಲಿ ಸೇರಿಸಿಕೊಳ್ಳುವಂತಿಲ್ಲ. ಬಿಸಿಸಿಐನ ಈ ನಿರ್ಧಾರಕ್ಕೆ ದೊಡ್ಡ ಕಾರಣವೆಂದರೆ, ಐಪಿಎಲ್‌ನ ಆರಂಭದಿಂದಲೂ ಕೇವಲ 4 ವಿದೇಶಿ ಆಟಗಾರರಿಗೆ ತಂಡದಲ್ಲಿ ಆಡುವ ಅವಕಾಶ ನೀಡಬೇಕೆಂಬ ನಿಯಮ ಜಾರಿ ಇದೆ. ಇದರಡಿಯಲ್ಲಿ ಯಾವುದೇ ತಂಡವು 4 ಕ್ಕಿಂತ ಹೆಚ್ಚು ವಿದೇಶಿ ಆಟಗಾರರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸುವಂತಿಲ್ಲ.

ಇಂಪ್ಯಾಕ್ಟ್ ಪ್ಲೇಯರ್ ಇತಿಮಿತಿಗಳು

  1. ಈ ನಿಯಮದಡಿಯಲ್ಲಿ ಬರುವ ಆಟಗಾರನನ್ನು ತಂಡದ ನಾಯಕನಾಗಿ ಬಳಸಿಕೊಳ್ಳಲು ಸಾಧ್ಯವಿಲ್ಲ.
  2. ಇನ್ನಿಂಗ್ಸ್ ಪ್ರಾರಂಭವಾಗುವ ಮೊದಲು ಅಥವಾ ಓವರ್ ಮುಗಿದ ನಂತರ ಇಂಪ್ಯಾಕ್ಟ್ ಪ್ಲೇಯರ್​ನನ್ನು ಕಣಕ್ಕಿಳಿಸಬೇಕು.
  3. ಇನ್ನು ಬ್ಯಾಟಿಂಗ್ ಮಾಡುವ ತಂಡದ ವಿಚಾರಕ್ಕೆ ಬಂದರೆ, ವಿಕೆಟ್ ಪತನದ ನಂತರ ಅಥವಾ ಯಾವುದೇ ಬ್ಯಾಟರ್ ರಿಟೈರ್ಡ್ ಹರ್ಟ್ ಆದಲ್ಲಿ ಇದನ್ನು ಬಳಸಬಹುದಾಗಿದೆ.
  4. ಅಲ್ಲದೆ ಒಬ್ಬ ಆಟಗಾರ ಇಂಜುರಿಗೊಂಡು ಪಂದ್ಯದ ಹೊರನಡೆದರೆ ಆತನ ಬದಲಿಯಾಗಿ ಮತ್ತೊಬ್ಬ ಆಟಗಾರನನ್ನು ಆಡಿಸಬಹುದು.
  5. ಇಂಪ್ಯಾಕ್ಟ್ ಪ್ಲೇಯರ್​ಗೆ ಅವಕಾಶ ಮಾಡಿಕೊಟ್ಟು ತಂಡದಿಂದ ಹೊರಹೋದ ಆಟಗಾರನಿಗೆ ಮತ್ತೊಮ್ಮೆ ಆ ಪಂದ್ಯದಲ್ಲಿ ಆಡುವ ಅವಕಾಶ ಇರುವುದಿಲ್ಲ. ಆತ ರನ್ನರ್ ಆಗಿ ಅಥವಾ ಫೀಲ್ಡರ್ ಆಗಿಯೂ ಕಣಕ್ಕಿಳಿಯುವಂತಿಲ್ಲ.
  6. ಒಂದು ವೇಳೆ 20 ಓವರ್​ಗಳ ಪಂದ್ಯ ಮಳೆಯಿಂದಾಗಿ ಅಥವಾ ಇತರೆ ಕಾರಣಗಳಿಂದ 10 ಓವರ್ ಅಥವಾ ಅದಕ್ಕಿಂತ ಕಡಿಮೆ ಓವರ್​ಗಳಿಗೆ ಸೀಮಿತವಾದ್ದಲ್ಲಿ ಆಗ ಈ ನಿಯಮವನ್ನು ಬಳಸಿಕೊಳ್ಳುವಂತಿಲ್ಲ. ಟಾಸ್ ವೇಳೆ ನಾಯಕ ನೀಡಿದ 11 ಆಟಗಾರರ ಪಟ್ಟಿಯಲ್ಲಿ ಯಾರು ಸ್ಥಾನ ಪಡೆದಿರುತ್ತಾರೋ ಆ ಆಟಗಾರರೇ ಆಡಬೇಕಾಗುತ್ತದೆ.
  7. ಒಬ್ಬ ಬೌಲರ್​ ಬದಲಿಗೆ ಮತ್ತೊಬ್ಬ ಬೌಲರ್ ಅನ್ನು ಕರೆತಂದರೆ, ತಂಡದಿಂದ ಹೊರಹೋದ ಬೌಲರ್ ಎಷ್ಟು ಓವರ್ ಮಾಡಿದ್ದನೆಂಬುದನ್ನು ಪರಿಗಣಿಸಲಾಗುವುದಿಲ್ಲ. ಅಂದರೆ ಬದಲಿಯಾಗಿ ಬಂದ ಬೌಲರ್​ ಸಂಪೂರ್ಣ 4 ಓವರ್​ಗಳನ್ನು ಬೌಲ್ ಮಾಡುವ ಅವಕಾಶ ಹೊಂದಿರುತ್ತಾನೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Thu, 30 March 23

ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ಮಂಡಿನೋವಿನ ಸಮಸ್ಯೆಯ ನಂತರ ಸಿದ್ದರಾಮಯ್ಯ ನಡಿಗೆ ಶೈಲಿ ಬದಲಾಗಿದೆ
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ರಾಕೇಶ್ ಪೂಜಾರಿ ಸಾವಿನ ಬಗ್ಗೆ ದುನಿಯಾ ವಿಜಯ್ ಮಾತು
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ನತದೃಷ್ಟ ಮಗುವಿಗೆ ತಂದೆಯಿಲ್ಲ, ಕುಟುಂಬದಲ್ಲಿ ಮೂವರಿಗೆ ಹುಟ್ಟುಕಿವುಡು: ಸಂಸದ
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಕಟ್ಟಡದೊಳಗೆ ಅಡಗಿದ್ದ ಜೈಶ್ ಉಗ್ರರ ಎನ್​ಕೌಂಟರ್ ನಡೆದಿದ್ದು ಹೇಗೆ?
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಸುಮಾರು ಮೂರು ಲಕ್ಷ ಜನ ಸಾಧನಾ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ: ಈಶ್ವರ್
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮಗಳ ಸಾವಿಗೆ ಸೇಡು ತೀರಿಸಿಕೊಂಡ ಅಪ್ಪ: ಕೊಲೆ ಮಾಡುತ್ತಿರುವ ಭಯಾನಕ ವಿಡಿಯೋ!
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಮೀನುಗಾರಿಕೆ ಕ್ಷೇತ್ರದ ಪ್ರಗತಿ: ಪ್ರಧಾನಿ ಮೋದಿ ಸಭೆ
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಸೋಶಿಯಲ್ ಮಿಡಿಯಾದಲ್ಲಿ ವೃಥಾ ಕಾಮೆಂಟ್ ಮಾಡುವವರ ಮೇಲೆ ಕೇಸ್: ಉಮಾ ಪ್ರಶಾಂತ್
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ಕಡಲೂರಿನ ಕಾರ್ಖಾನೆ ದುರಂತ; ಟ್ಯಾಂಕ್ ಸ್ಫೋಟಗೊಂಡು 20 ಜನರಿಗೆ ಗಾಯ
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು
ತಿರಂಗಾ ಯಾತ್ರೆಯಲ್ಲಿ ಮಾಜಿ ಯೋಧರ ಕೈಹಿಡಿದು ಹೆಜ್ಜೆಹಾಕಿದ ನಾಯಕರು