IPL 2024: ಮುಂಬೈಗೆ ಹಾರಿದ ಹಾರ್ದಿಕ್; ಗುಜರಾತ್ ತಂಡದ ನೂತನ ನಾಯಕ ಯಾರು ಗೊತ್ತಾ?

IPL 2024: ಗುಜರಾತ್ ಟೈಟಾನ್ಸ್ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಹಾರ್ದಿಕ್ ಅವರ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದೆ. ಇದರೊಂದಿಗೆ ತನ್ನ ತಂಡದ ನೂತನ ನಾಯಕನನ್ನೂ ಸಹ ಆಯ್ಕೆ ಮಾಡಿದೆ. ಅದರಂತೆ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಯುವ ಬ್ಯಾಟರ್ ಶುಭ್​ಮನ್ ಗಿಲ್ ಅವರನ್ನು ಆಯ್ಕೆ ಮಾಡಿದೆ.

IPL 2024: ಮುಂಬೈಗೆ ಹಾರಿದ ಹಾರ್ದಿಕ್; ಗುಜರಾತ್ ತಂಡದ ನೂತನ ನಾಯಕ ಯಾರು ಗೊತ್ತಾ?
ಗುಜರಾತ್ ಟೈಟಾನ್ಸ್
Follow us
ಪೃಥ್ವಿಶಂಕರ
|

Updated on: Nov 27, 2023 | 3:26 PM

ಕಳೆದ ಎರಡು-ಮೂರು ದಿನಗಳಿಂದ ಹರಿದಾಡುತ್ತಿದ್ದ ಸುದ್ದಿ ಇದೀಗ ನಿಜವಾಗಿದೆ. ಗುಜರಾತ್ ಟೈಟಾನ್ಸ್ (Gujarat Titans) ತಂಡದ ನಾಯಕ ಹಾರ್ದಿಕ್ ಪಾಂಡ್ಯ (Hardik Pandya) ತಮ್ಮ ತಂಡಕ್ಕೆ ವಿದಾಯ ಹೇಳಿದ್ದು, ಇದೀಗ ಮುಂಬೈ ಇಂಡಿಯನ್ಸ್​ಗೆ (Mumbai Indians) ಸೇರ್ಪಡೆಯಾಗಿದ್ದಾರೆ. ಸೋಮವಾರ, ಗುಜರಾತ್ ಟೈಟಾನ್ಸ್ ತನ್ನ ಟ್ವಿಟರ್ ಹ್ಯಾಂಡಲ್ ಮೂಲಕ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ್ದು, ಹಾರ್ದಿಕ್ ಅವರ ಮುಂದಿನ ಪ್ರಯಾಣಕ್ಕೆ ಶುಭ ಹಾರೈಸಿದೆ. ಇದರೊಂದಿಗೆ ತನ್ನ ತಂಡದ ನೂತನ ನಾಯಕನನ್ನೂ ಸಹ ಆಯ್ಕೆ ಮಾಡಿದೆ. ಅದರಂತೆ ಹಾರ್ದಿಕ್ ಪಾಂಡ್ಯ ಸ್ಥಾನಕ್ಕೆ ಯುವ ಬ್ಯಾಟರ್ ಶುಭ್​ಮನ್ ಗಿಲ್ ( Shubman Gill) ಅವರನ್ನು ಆಯ್ಕೆ ಮಾಡಿದೆ. ಅಂದರೆ ಹಾರ್ದಿಕ್ ಪಾಂಡ್ಯ ನಿರ್ಗಮನದ ನಂತರ ಗುಜರಾತ್ ಟೈಟಾನ್ಸ್‌ ತಂಡದ ನಾಯಕನಾಗಿ ಶುಭಮನ್ ಗಿಲ್ ಐಪಿಎಲ್ 2024 ರಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ತಂಡದ 2ನೇ ನಾಯಕ ಗಿಲ್

ವಾಸ್ತವವಾಗಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಹೋಗುತ್ತಾರೆ ಎಂಬ ವದಂತಿಗಳು ಇದ್ದಾಗಿನಿಂದ ಗಿಲ್ ಅವರನ್ನು ನಾಯಕರನ್ನಾಗಿ ಮಾಡಲಾಗುತ್ತದೆ ಎಂಬ ಊಹಾಪೋಹಗಳು ಪ್ರಾರಂಭವಾಗಿದ್ದವು. ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್‌ಗೆ ಸೇರ್ಪಡೆಯಾಗುವ ಸುದ್ದಿ ಅಧಿಕೃತವಾಗುತ್ತಿದ್ದಂತೆ, ಗುಜರಾತ್ ಟೈಟಾನ್ಸ್‌ನ ಹೊಸ ನಾಯಕನಾಗಿ ಶುಭ್​ಮನ್ ಗಿಲ್ ಕೂಡ ಆಯ್ಕೆಯಾಗಿದ್ದಾರೆ. ಇದರೊಂದಿಗೆ ಶುಭ್​ಮನ್ ಗಿಲ್ ಈ ತಂಡದ ಎರಡನೇ ನಾಯಕರಾಗಲಿದ್ದಾರೆ. ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ಅಮೋಘ ಪ್ರದರ್ಶನ ನೀಡಿತ್ತು. ಕಳೆದ ಎರಡು ಸೀಸನ್‌ಗಳಲ್ಲಿ ಅಥವಾ ಐಪಿಎಲ್‌ನ ಎಲ್ಲಾ ಸೀಸನ್‌ಗಳಲ್ಲಿ ಈ ತಂಡವು ಫೈನಲ್‌ಗೆ ತಲುಪಿದೆ.

ಅಧಿಕೃತವಾಗಿ ಮುಂಬೈ ಸೇರಿದ ಹಾರ್ದಿಕ್ ಪಾಂಡ್ಯ; ಆರ್​ಸಿಬಿಗೆ ಕಾಲಿಟ್ಟ ಆಸೀಸ್ ಆಲ್​ರೌಂಡರ್ ಗ್ರೀನ್..!

ಒತ್ತಡಕ್ಕೆ ಸಿಲುಕುತ್ತಾರಾ ಗಿಲ್

ಹಾರ್ದಿಕ್ ಪಾಂಡ್ಯ ತಮ್ಮ ನಾಯಕತ್ವದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಮೊದಲ ಆವೃತ್ತಿಯಲ್ಲೇ ಚಾಂಪಿಯನ್ ಮಾಡಿದ್ದರು. ಆದರೆ ಎರಡನೇ ಆವೃತ್ತಿಯಲ್ಲಿ ಅಂದರೆ ಕಳೆದ ವರ್ಷ, ಈ ತಂಡವು ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ಸೋಲನ್ನು ಎದುರಿಸಬೇಕಾಯಿತು. ಇದೀಗ ಗುಜರಾತ್ ಟೈಟಾನ್ಸ್ ತಂಡದ ನಾಯಕತ್ವವಹಿಸಿಕೊಂಡಿರುವ ಗಿಲ್​ಗೆ ಹಾರ್ದಿಕ್​ರಂತೆ ತಂಡವನ್ನು ಯಶಸ್ಸಿನತ್ತ ಕೊಂಡೊಯ್ಯಬೇಕಾದ ಒತ್ತಡ ಎದುರಾಗಿದೆ.

ರಶೀದ್​ಗೆ ಕೈತಪ್ಪಿದ ಅವಕಾಶ

ಅಚ್ಚರಿಯ ಸಂಗತಿ ಎಂದರೆ, ಗುಜರಾತ್ ಟೈಟಾನ್ಸ್ ತಂಡದ ಉಪನಾಯಕರೂ ಆಗಿದ್ದರೂ ರಶೀದ್ ಖಾನ್ ಅವರನ್ನು ನಾಯಕನನ್ನಾಗಿ ಮಾಡಲಾಗಿಲ್ಲ. ಹಾರ್ದಿಕ್ ಅನುಪಸ್ಥಿತಿಯಲ್ಲಿ ರಶೀದ್ ಹಲವು ಪಂದ್ಯಗಳಲ್ಲಿ ಗುಜರಾತ್ ತಂಡದ ಜವಾಬ್ದಾರಿಯನ್ನು ವಹಿಸಿಕೊಂಡು ಗೆಲುವಿನತ್ತ ಮುನ್ನಡೆಸಿದ್ದರು. ಇದರ ಹೊರತಾಗಿಯೂ ಫ್ರಾಂಚೈಸಿ ಗಿಲ್ ಅವರನ್ನು ನಾಯಕನನ್ನಾಗಿ ಮಾಡಿದೆ. ಐಪಿಎಲ್‌ನ ಮುಂದಿನ ಆವೃತ್ತಿಯಲ್ಲಿ ರಶೀದ್ ಆಡುವುದಿಲ್ಲ ಎಂಬ ಸಸ್ಪೆನ್ಸ್ ಇದಕ್ಕೆ ಬಹುಶಃ ಒಂದು ದೊಡ್ಡ ಕಾರಣವಾಗಿದೆ. ರಶೀದ್ ಖಾನ್ ಅವರು ಇತ್ತೀಚೆಗೆ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಇದರಿಂದಾಗಿ ಅವರು ಪ್ರಸ್ತುತ ಕ್ರಿಕೆಟ್‌ನಿಂದ ದೂರವಿದ್ದಾರೆ. ಅಲ್ಲದೆ ಅವರು ಐಪಿಎಲ್ ಆಡುವುದು ಕೂಡ ಅನುಮಾನವಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮುಡಾ ಪ್ರಕರಣದಲ್ಲಿ ಲೋಕಾಯುಕ್ತವೇ ಅಪರಾಧಿ ಸ್ಥಾನದಲ್ಲಿದೆ: ಸ್ನೇಹಮಯಿ ಕೃಷ್ಣ
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಮಹಾರಾಜನಾಗಿ ದರ್ಪ ತೋರಿದ್ರು; ಉಳಿದವರ ಉಪವಾಸ ಕೆಡವಿ ತಾನು ಊಟ ಮಾಡಿದ ಮಂಜು
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
ಕಾರ್ತಿಕ ಮಾಸದ ಕೊನೆ ಸೋಮವಾರ ಶಿವನ ಆರಾಧನೆ ಹೇಗೆ ಮಾಡುವುದು? ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
Daily Horoscope: ಕಾರ್ತಿಕ ಮಾಸದ ಕೊನೆ ಸೋಮವಾರ ದಿನ ಭವಿಷ್ಯ ತಿಳಿಯಿರಿ
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಭೈರತಿ ರಣಗಲ್: ಶಿವಮೊಗ್ಗದಲ್ಲಿ ಫ್ಯಾನ್ಸ್ ಜತೆ ಸಂಭ್ರಮಿಸಿದ ಶಿವರಾಜ್​ಕುಮಾರ್
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಬಿಜೆಪಿ ಸೋಲಿಗೆ ಯತ್ನಾಳ್​ನ ಹರಕು ಬಾಯಿ ಕಾರಣ: ರೇಣುಕಾಚಾರ್ಯ ವಾಗ್ದಾಳಿ
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಸುದೀಪ್​ ಹೇಳಿದ ಒಂದೇ ಮಾತಿಗೆ ಉಗ್ರಂ ಮಂಜು, ಗೌತಮಿ ನಡುವಿನ ಸ್ನೇಹ ಕಟ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಅಂಬರೀಶ್ ಪುಣ್ಯಸ್ಮರಣೆ, ಸಮಾಧಿಗೆ ಪೂಜೆ ಮಾಡಿದ ಸುಮಲತಾ ಅಂಬರೀಶ್
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ
ಮೊಮ್ಮಗ ನಿಖಿಲ್ ಸೋಲಿನ ಬಗ್ಗೆ ದೇವೇಗೌಡರ ಮೊದಲ ಪ್ರತಿಕ್ರಿಯೆ ಹೇಗಿತ್ತು ನೋಡಿ