IPL 2024: ಆರ್​ಸಿಬಿ ಬೌಲಿಂಗ್ ದಾಳಿಯನ್ನು ಗೇಲಿ ಮಾಡಿ ನಕ್ಕ ಅಯ್ಯರ್..! ವಿಡಿಯೋ ವೈರಲ್

|

Updated on: Apr 22, 2024 | 6:26 PM

IPL 2024: ವಿಡಿಯೋದಲ್ಲಿರುವಂತೆ ವೆಂಕಟೇಶ್ ಅಯ್ಯರ್ ಮೊದಲು, ಆರ್​ಸಿಬಿ ಇಡೀ ಪಂದ್ಯಾವಳಿಯಲ್ಲೇ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅವರನ್ನು ಎದುರಿಸುವುದು ಸಾಕಷ್ಟು ಸವಾಲಿನದ್ದಾಗಿದೆ ಎಂದಿದ್ದಾರೆ. ಆದರೆ, ಈ ಹೇಳಿಕೆ ನೀಡಿದ ಕೆಲವೇ ಸೆಕೆಂಡ್​ಗಳ ನಂತರ ಅಯ್ಯರ್ ನಗಲು ಆರಂಭಿಸಿದ್ದಾರೆ

IPL 2024: ಆರ್​ಸಿಬಿ ಬೌಲಿಂಗ್ ದಾಳಿಯನ್ನು ಗೇಲಿ ಮಾಡಿ ನಕ್ಕ ಅಯ್ಯರ್..! ವಿಡಿಯೋ ವೈರಲ್
ವೆಂಕಟೇಶ್ ಅಯ್ಯರ್
Follow us on

2024 ರ ಐಪಿಎಲ್​ನಲ್ಲೂ (IPL 2024) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಸ್ಥಿತಿ ಬದಲಾಗಲಿಲ್ಲ. ಪ್ರತಿ ಬಾರಿಯಂತೆ ಈ ಬಾರಿಯೂ ತಂಡ ನಿರಾಸೆಯೊಂದಿಗೆ ಟೂರ್ನಿಯಿಂದ ಹೊರಬಿದ್ದಿದೆ. ಕಳೆದೆರಡು ಆವೃತ್ತಿಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ಯಶಸ್ವಿಯಾಗಿದ್ದ ಆರ್​ಸಿಬಿ, ಈ ಬಾರಿ ಲೀಗ್​ ಹಂತದಲ್ಲೇ ತನ್ನ ಪಯಣ ಮುಗಿಸಿದೆ. ಪ್ರತಿ ಸೀಸನ್‌ನಂತೆ ಈ ಸೀಸನ್​ನಲ್ಲೂ ಆರ್‌ಸಿಬಿ ತನ್ನ ದುರ್ಬಲ ಬೌಲಿಂಗ್​ನಿಂದಾಗಿ ಲೀಗ್​ನಿಂದ ಹೊರಬೀಳಬೇಕಾಯಿತು. ಇದೀಗ ಹರಾಜಿನಲ್ಲಿ ಉತ್ತಮ ವೇಗಿಗಳನ್ನು ಖರೀದಿಸಲು ಮುಂದಾಗದ ಆರ್​ಸಿಬಿ ಮ್ಯಾನೇಜ್‌ಮೆಂಟ್ ವಿರುದ್ಧ ಅಭಿಮಾನಿಗಳು ಕಿಡಿ ಕಾರುತ್ತಿದ್ದಾರೆ. ಇದೆಲ್ಲದರ ನಡುವೆ ಕೆಕೆಆರ್ ತಂಡದ ಆಟಗಾರ ವೆಂಕಟೇಶ್ ಅಯ್ಯರ್ (Venkatesh Iyer), ಆರ್​ಸಿಬಿ ಬೌಲಿಂಗ್ ದಾಳಿಯ ಬಗ್ಗೆ ಲೇವಡಿ ಮಾಡಿರುವ ವಿಡಿಯೋವೊಂದು ಬಾರಿ ವೈರಲ್ ಆಗುತ್ತಿದೆ.

ವೆಂಕಟೇಶ್ ಅಯ್ಯರ್ ಲೇವಡಿ

36 ನೇ ಐಪಿಎಲ್‌ ಪಂದ್ಯದಲ್ಲಿ ಕೆಕೆಆರ್ ಮತ್ತು ಆರ್​ಸಿಬಿ ಮುಖಾಮುಖಿಯಾಗಿದ್ದವು. ಈ ಪಂದ್ಯವನ್ನು ಕೆಕೆಆರ್ ಒಂದು ರನ್‌ನಿಂದ ಗೆದ್ದುಕೊಂಡಿತು. ಈ ಸೋಲಿನೊಂದಿಗೆ ಆರ್‌ಸಿಬಿಯ ಪ್ಲೇಆಫ್‌ನ ಕನಸು ಬಹುತೇಕ ಭಗ್ನವಾದಂತಿದೆ. ಈ ಪಂದ್ಯಕ್ಕೂ ಮುನ್ನ ಕೆಕೆಆರ್‌ನ ಸ್ಫೋಟಕ ಬ್ಯಾಟ್ಸ್‌ಮನ್ ವೆಂಕಟೇಶ್ ಅಯ್ಯರ್ ಆರ್‌ಸಿಬಿಯ ಬೌಲಿಂಗ್ ದಾಳಿಯ ಬಗ್ಗೆ ಮಾತನಾಡಿರುವ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

Breaking: ಅಂಪೈರ್ ಜೊತೆ ವಾಗ್ವಾದ; ಕೊಹ್ಲಿ ವಿರುದ್ಧ ಕ್ರಮಕೈಗೊಂಡ ಬಿಸಿಸಿಐ..!

ಈ ವಿಡಿಯೋದಲ್ಲಿ ವೆಂಕಟೇಶ್ ಅಯ್ಯರ್ ಆರ್​ಸಿಬಿ ಬೌಲಿಂಗ್ ವಿಭಾಗದ ಬಗ್ಗೆ ಮಾತನಾಡಿರುವುದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿರುವಂತೆ ವೆಂಕಟೇಶ್ ಅಯ್ಯರ್ ಮೊದಲು, ‘ಆರ್​ಸಿಬಿ ಇಡೀ ಪಂದ್ಯಾವಳಿಯಲ್ಲೇ ಅತ್ಯುತ್ತಮ ಬೌಲಿಂಗ್ ದಾಳಿಯನ್ನು ಹೊಂದಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಅವರನ್ನು ಎದುರಿಸುವುದು ಸಾಕಷ್ಟು ಸವಾಲಿನದ್ದಾಗಿದೆ ಎಂದಿದ್ದಾರೆ’. ಆದರೆ, ಈ ಹೇಳಿಕೆ ನೀಡಿದ ಕೆಲವೇ ಸೆಕೆಂಡ್​ಗಳ ನಂತರ ಅಯ್ಯರ್ ನಗಲು ಆರಂಭಿಸಿದ್ದಾರೆ.

ಇದೀಗ ಅಯ್ಯರ್ ಅವರ ವರ್ತನೆಯನ್ನು ನೋಡಿದ ನೆಟ್ಟಿಗರು, ಅಯ್ಯರ್ ಬೇಕಂತಲೇ ಆರ್​ಸಿಬಿ ಬೌಲಿಂಗ್ ವಿಭಾಗವನ್ನು ಲೇವಡಿ ಮಾಡಿದ್ದಾರೆ ಎಂದಿದ್ದಾರೆ. ಇನ್ನು ಈ ವಿಡಿಯೋ ನೋಡಿದ ಆರ್​ಸಿಬಿ ಅಭಿಮಾನಿಗಳು ಅಯ್ಯರ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಮುಂದಿನ ದಿನಗಳಲ್ಲಿ ಈ ಘಟನೆ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದನ್ನು ಕಾದುನೋಡಬೇಕಿದೆ.

ಆರ್‌ಸಿಬಿಗೆ ಏಕೈಕ ಗೆಲುವು

ಇನ್ನು ಈ ಆವೃತ್ತಿಯಲ್ಲಿ ಆರ್​ಸಿಬಿ ಪ್ರದರ್ಶನದ ಬಗ್ಗೆ ಹೇಳುವುದಾದರೆ.. ತಂಡ ಇದುವರೆಗೆ 8 ಪಂದ್ಯಗಳನ್ನು ಆಡಿದೆ. ಇದರಲ್ಲಿ ಕೇವಲ ಒಂದು ಪಂದ್ಯವನ್ನು ಮಾತ್ರ ಗೆದ್ದಿದೆ. ಉಳಿದಂತೆ ಏಳು ಪಂದ್ಯಗಳಲ್ಲಿ ಸೋತಿದ್ದು, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:18 pm, Mon, 22 April 24