IPL 2025: 1574 ಆಟಗಾರರು: ಐಪಿಎಲ್​ ಮೆಗಾ ಹರಾಜಿಗೆ ಶಾರ್ಟ್​ ಲಿಸ್ಟ್​ ಮಾಡುವುದು ಹೇಗೆ?

IPL 2025 Mega Auction: ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಐಪಿಎಲ್ ಮೆಗಾ ಹರಾಜಿಗಾಗಿ ಬರೋಬ್ಬರಿ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇವರಲ್ಲಿ 1,165 ಭಾರತೀಯ ಆಟಗಾರರಿದ್ದರೆ, 409 ವಿದೇಶಿ ಆಟಗಾರರಿದ್ದಾರೆ.

IPL 2025: 1574 ಆಟಗಾರರು: ಐಪಿಎಲ್​ ಮೆಗಾ ಹರಾಜಿಗೆ ಶಾರ್ಟ್​ ಲಿಸ್ಟ್​ ಮಾಡುವುದು ಹೇಗೆ?
IPL 2025
Follow us
ಝಾಹಿರ್ ಯೂಸುಫ್
|

Updated on: Nov 07, 2024 | 8:32 AM

ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) 18ನೇ ಆವೃತ್ತಿಯ ಹರಾಜಿಗಾಗಿ ದಿನಾಂಕ ನಿಗದಿಯಾಗಿದೆ. ನವೆಂಬರ್ 24 ಮತ್ತು 25 ರಂದು ನಡೆಯಲಿರುವ ಹರಾಜಿಗಾಗಿ 1574 ಆಟಗಾರರು ಹೆಸರು ನೀಡಿದ್ದಾರೆ. ಆದರೆ ಹರಾಜಿಗೆ ಹೆಸರು ನೀಡಿರುವ ಎಲ್ಲಾ ಆಟಗಾರರ ಹೆಸರು ಮೆಗಾ ಆಕ್ಷನ್​ ಪಟ್ಟಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಬದಲಾಗಿ 500 ರಿಂದ 700 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ.

ಅಂದರೆ ಇಲ್ಲಿ 1574 ಆಟಗಾರರ ಹೆಸರುಗಳನ್ನು ಶಾರ್ಟ್ ಲೀಸ್ಟ್​ ಮಾಡಲಾಗುತ್ತದೆ. ಈ ಮೂಲಕ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಿದ್ದಾರೆ. ಇಲ್ಲಿ ಹರಾಜಿಗೂ ಮುನ್ನ ಫೈನಲ್ ಲಿಸ್ಟ್​ ಅನ್ನು ಸಿದ್ಧಪಡಿಸುವುದು 10 ಫ್ರಾಂಚೈಸಿಗಳು ಎಂಬುದು ವಿಶೇಷ.

ಶಾರ್ಟ್ ಲಿಸ್ಟ್ ಮಾಡುವುದು ಹೇಗೆ?

ಐಪಿಎಲ್​ ಹರಾಜಿಗಾಗಿ ಹೆಸರು ನೀಡಿದ ಎಲ್ಲಾ ಆಟಗಾರರ ಪಟ್ಟಿಯನ್ನು 10 ಫ್ರಾಂಚೈಸಿಗಳಿಗೆ ನೀಡಲಾಗುತ್ತದೆ. ಆ ಬಳಿಕ ಹತ್ತು ಫ್ರಾಂಚೈಸಿಗಳು ಬಿಡ್ ಮಾಡಲು ಇಚ್ಛಿಸುವ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸುತ್ತಾರೆ. 10 ತಂಡಗಳ ಟಾರ್ಗೆಟ್ ಲಿಸ್ಟ್​ನಲ್ಲಿ ಸ್ಥಾನ ಪಡೆಯದ ಆಟಗಾರರನ್ನು ಹರಾಜಿನಿಂದ ಹೊರಗಿಡಲಾಗುತ್ತದೆ. ಇಲ್ಲಿ 10 ತಂಡಗಳಲ್ಲಿ ಯಾವುದೇ ಒಂದು ತಂಡ ಒಬ್ಬ ಆಟಗಾರನ ಮೇಲೆ ಆಸಕ್ತಿ ತೋರಿಸಿದ್ದರೂ, ಆತನ ಹೆಸರನ್ನು ಹರಾಜಿಗೆ ಪರಿಗಣಿಸಲಾಗುತ್ತದೆ.

ಉದಾಹರಣೆಗೆ– 10 ತಂಡಗಳಲ್ಲಿ 9 ಟೀಮ್​ಗಳು ದೇವದತ್ತ್ ಪಡಿಕ್ಕಲ್ ಅವರನ್ನು ಶಾರ್ಟ್​ ಲೀಸ್ಟ್​ನಲ್ಲಿ ಪರಿಗಣಿಸಿಲ್ಲ ಎಂದಿಟ್ಟುಕೊಳ್ಳೋಣ, ಇದೇ ವೇಳೆ ಆರ್​ಸಿಬಿ ಮಾಡಿದ ಅಂತಿಮ ಪಟ್ಟಿಯಲ್ಲಿ ದೇವದತ್ತ್ ಪಡಿಕ್ಕಲ್ ಹೆಸರು ಕಾಣಿಸಿಕೊಂಡರೆ ಅವರನ್ನು ಹರಾಜು ಪಟ್ಟಿಗೆ ಪರಿಗಣಿಸಲಾಗುತ್ತದೆ.

ಅಂದರೆ ಇಲ್ಲಿ 10 ತಂಡಗಳು ಸಲ್ಲಿಸಿದ ಆಟಗಾರರ ಪಟ್ಟಿಯಲ್ಲಿ ಕಾಣಿಸಿಕೊಳ್ಳದವರನ್ನು ಮಾತ್ರ ಹರಾಜು ಪಟ್ಟಿಯಿಂದ ಕೈ ಬಿಡಲಾಗುತ್ತದೆ. ಅದರಂತೆ 1574 ಆಟಗಾರರಿಂದ ಈ ಬಾರಿ 500 ರಿಂದ 700 ಆಟಗಾರರು ಮಾತ್ರ ಮೆಗಾ ಆಕ್ಷನ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಶಾರ್ಟ್ ಲಿಸ್ಟ್​ ಸಿದ್ಧವಾದ ಬಳಿಕ ಕೆಲ ಆಟಗಾರರನ್ನು ಸೇರ್ಪಡೆಗೊಳಿಸಲು ಕೂಡ ಅವಕಾಶವಿದೆ. ಅಂದರೆ ಹರಾಜಿಗೂ ಮುನ್ನ ಕೆಲ ಫ್ರಾಂಚೈಸಿಗಳು ಶಾರ್ಟ್ ಲಿಸ್ಟ್​ ಪಟ್ಟಿಯಲ್ಲಿರದ ಆಟಗಾರರ ಬಿಡ್ಡಿಂಗ್​​ಗೆ ಆಸಕ್ತಿ ತೋರಿಸಿದರೆ ಅವರ ಹೆಸರನ್ನು ಹರಾಜಿಗೂ ಮುನ್ನ ಅಂತಿಮ ಪಟ್ಟಿಗೆ ಸೇರ್ಪಡೆಗೊಳಿಸಬಹುದು. ಇದಾದ ಬಳಿಕ ಹರಾಜು ಪ್ರಕ್ರಿಯೆ ನಡೆಯಲಿದೆ. ಹೀಗಾಗಿ ಶಾರ್ಟ್ ಲಿಸ್ಟ್​ ಮಾಡಿದ ಬಳಿಕ ಕೆಲ ಆಟಗಾರರ ಹೆಸರುಗಳು ಅದೃಷ್ಟದ ಮೇಲೂ ಹರಾಜಿನಲ್ಲಿ ಕಾಣಿಸಿಕೊಳ್ಳಬಹುದು.

204 ಆಟಗಾರರಿಗೆ ಮಾತ್ರ ಅವಕಾಶ:

ಈ ಬಾರಿಯ ಐಪಿಎಲ್​ನಲ್ಲಿ ಕೇವಲ 204 ಆಟಗಾರರಿಗೆ ಮಾತ್ರ ಅವಕಾಶ ದೊರೆಯಲಿದೆ. ಅಂದರೆ ಪ್ರತಿ ತಂಡಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಮಾತ್ರ ಹರಾಜು ನಡೆಯಲಿದೆ. ಐಪಿಎಲ್ ನಿಯಮದಂತೆ ಪ್ರತಿ ತಂಡಗಳು ಕನಿಷ್ಠ 18 ಆಟಗಾರರನ್ನು ಹೊಂದಿರಲೇಬೇಕು. ಇನ್ನು ಗರಿಷ್ಠ 25 ಆಟಗಾರರನ್ನು ಹೊಂದಬಹುದು. ಇದಾಗ್ಯೂ 25 ಆಟಗಾರರನ್ನು ಖರೀದಿಸಲೇಬೇಕೆಂಬ ನಿಯಮವಿಲ್ಲ.

ಇದನ್ನೂ ಓದಿ: IPL 2025: ಐಪಿಎಲ್ ಮೆಗಾ ಹರಾಜಿಗೆ ಇಟಲಿ ಆಟಗಾರ ಎಂಟ್ರಿ

ಇತ್ತ ಪ್ರತಿ ತಂಡಗಳು ತಮ್ಮ ಪರ್ಸ್​ಗೆ ಅನುಗುಣವಾಗಿ ಕೆಲ ಆಟಗಾರರಿಗೆ ಮಾತ್ರ ಬಿಡ್ಡಿಂಗ್ ಮಾಡಬಹುದು. ಉದಾಹರಣೆಗೆ- ಕೆಕೆಆರ್ ತಂಡದಲ್ಲಿ ಈಗಾಗಲೇ 6 ಆಟಗಾರರಿದ್ದಾರೆ. ಇನ್ನು 12 ಆಟಗಾರರನ್ನು ಖರೀದಿಸಿ 18 ಸದಸ್ಯರ ತಂಡವನ್ನು ಕಟ್ಟಬಹುದು. ಹೀಗಾಗಿ 204 ಸ್ಥಾನಗಳು ಖಾಲಿಯಿದ್ದರೂ, 204 ಆಟಗಾರರಿಗೆ ಅವಕಾಶ ಸಿಗುತ್ತೆ ಎಂದು ಹೇಳಲಾಗುವುದಿಲ್ಲ.

ಮೈಸೂರು ಜಿಲ್ಲೆಯಲ್ಲಿ 13 ವರ್ಷಗಳ ನಂತರ ತೆರೆದ ದೇಗುಲದ ಬಾಗಿಲು
ಮೈಸೂರು ಜಿಲ್ಲೆಯಲ್ಲಿ 13 ವರ್ಷಗಳ ನಂತರ ತೆರೆದ ದೇಗುಲದ ಬಾಗಿಲು
ಪ್ರಮುಖರೇ ನಾಮಿನೇಟ್​; ಯಾರಿಗೆ ಈ ವಾರ ಗೇಟ್ ಪಾಸ್?
ಪ್ರಮುಖರೇ ನಾಮಿನೇಟ್​; ಯಾರಿಗೆ ಈ ವಾರ ಗೇಟ್ ಪಾಸ್?
ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ
ಮಕ್ಕಳ ಮೇಲೆ ಗ್ರಹಗಳ ಪ್ರಭಾವ ಹೇಗಿರುತ್ತೆ ? ವಿಡಿಯೋ ನೋಡಿ
Daily Horoscope: ಈ ರಾಶಿಯವರಿಗೆ ಇಂದು ಹೆಚ್ಚಿನ ಧನ ಪ್ರಾಪ್ತಿಯಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಹೆಚ್ಚಿನ ಧನ ಪ್ರಾಪ್ತಿಯಾಗಲಿದೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ದರ್ಶನ್ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆಗೆ ಪೊಲೀಸರ ಬಿಗಿ ಭದ್ರತೆ
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಆಸ್ಪತ್ರೆಯೊಳಗೆ ಜೋರಾಗಿ ಹಾಡು ಹಾಕಿ ನರ್ಸ್​ಗಳ ಡ್ಯಾನ್ಸ್
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ಗುಲ್ಮಾರ್ಗ್​ನಲ್ಲಿ ತಾಜಾ ಹಿಮಪಾತ; ಕುಣಿದು ಕುಪ್ಪಳಿಸಿದ ಪ್ರವಾಸಿಗರು
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ದತ್ತಜಯಂತಿ: ಶೋಭಾಯಾತ್ರೆಯ ಮನಮೋಹಕ ದೃಶ್ಯ ಡ್ರೋನ್​ನಲ್ಲಿ ಕಂಡಿದ್ದು ಹೀಗೆ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಬಿಜೆಪಿ ಅಧಿಕಾರದಲ್ಲಿದ್ದಾಗ ಯತ್ನಾಳ್ ಯಾಕೆ ವಕ್ಫ್ ವಿಷಯ ಮಾತಾಡಲಿಲ್ಲ: ಸಚಿವ
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು
ಕ್ಲಾಸ್​ ರೂಂನಲ್ಲೇ ಶಿಕ್ಷಕನಿಗೆ ಚಾಕುವಿನಿಂದ ಇರಿದ ವಿದ್ಯಾರ್ಥಿಗಳು