AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

IPL 2025: RCB ಖರೀದಿಸಲೇಬೇಕಾದ 4 ಆಟಗಾರರನ್ನು ಹೆಸರಿಸಿದ ABD

IPL 2025 RCB: ಐಪಿಎಲ್ ಮೆಗಾ ಹರಾಜಿಗೂ ಮುನ್ನ ಆರ್​ಸಿಬಿ ಮೂವರನ್ನು ರಿಟೈನ್ ಮಾಡಿಕೊಂಡಿದೆ. ಅದರಂತೆ ಇದೀಗ ತಂಡದಲ್ಲಿ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಯಶ್ ದಯಾಳ್ ಉಳಿದುಕೊಂಡಿದ್ದಾರೆ. ಇನ್ನು ಮೆಗಾ ಹರಾಜಿನ ಮೂಲಕ ಆರ್​ಸಿಬಿ ಖರೀದಿಸಬೇಕಾದ ನಾಲ್ವರು ಬೌಲರ್​ಗಳನ್ನು ಎಬಿ ಡಿವಿಲಿಯರ್ಸ್ ಹೆಸರಿಸಿದ್ದಾರೆ.

ಝಾಹಿರ್ ಯೂಸುಫ್
|

Updated on: Nov 07, 2024 | 10:31 AM

Share
ಐಪಿಎಲ್ ಇತಿಹಾಸದಲ್ಲೇ ಕಪ್ ಗೆಲ್ಲದ ಕೆಲವೇ ಕೆಲವು ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕೂಡ ಒಂದು. ಕಳೆದ 17 ವರ್ಷಗಳಲ್ಲಿ ಆರ್​ಸಿಬಿ ಕಪ್ ಗೆಲ್ಲದಿರಲು ಮುಖ್ಯ ಕಾರಣ ಬೌಲರ್​ಗಳು ಎಂದರೆ ತಪ್ಪಾಗಲಾರದು. ಏಕೆಂಧರೆ ಪ್ರತಿ ಸೀಸನ್​ನಲ್ಲೂ ಆರ್​ಸಿಬಿ ಬಲಿಷ್ಠ ದಾಂಡಿಗರೊಂದಿಗೆ ಕಣಕ್ಕಿಳಿಯುವ ಆರ್​ಸಿಬಿ ಪಡೆಯಲ್ಲಿ ಉತ್ತಮ ಬೌಲರ್​ಗಳ ಕೊರತೆ ಎದ್ದು ಕಾಣುತ್ತಿತ್ತು.

1 / 7
ಹೀಗಾಗಿಯೇ ಈ ಬಾರಿ ಆರ್​ಸಿಬಿ ಪ್ರಮುಖ ಬೌಲರ್​ಗಳ ಖರೀದಿಗೆ ಒತ್ತು ನೀಡಬೇಕೆಂದು ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್​ಸಿಬಿ ಖರೀದಿಸಲೇಬೇಕಾದ ನಾಲ್ವರು ಬೌಲರ್​ಗಳನ್ನು ಸಹ ಎಬಿಡಿ ಹೆಸರಿಸಿದ್ದಾರೆ. ಅವರೆಂದರೆ...

2 / 7
ಯುಜ್ವೇಂದ್ರ ಚಹಲ್: ಐಪಿಎಲ್ ಮೆಗಾ ಹರಾಜಿನ ಮೂಲಕ ಆರ್​ಸಿಬಿ ಯುಜ್ವೇಂದ್ರ ಚಹಲ್​ ಅವರನ್ನು ಖರೀದಿಸಲೇಬೇಕು. ಏಕೆಂದರೆ ಐಪಿಎಲ್​ನಲ್ಲಿ 160 ಪಂದ್ಯಗಳಿಂದ 205 ವಿಕೆಟ್ ಕಬಳಿಸಿರುವ ಚಹಲ್ ಆಯ್ಕೆಯಿಂದ ಆರ್​ಸಿಬಿ ತನ್ನ ಸ್ಪಿನ್ ವಿಭಾಗವನ್ನು ಬಲಿಷ್ಠಗೊಳಿಸಬಹುದು ಎಂದು ಎಬಿ ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.

3 / 7
ಕಗಿಸೊ ರಬಾಡ: ಆರ್​ಸಿಬಿ ತನ್ನ ವೇಗದ ಬೌಲಿಂಗ್ ವಿಭಾಗವನ್ನು ಬಲಪಡಿಸಲು ಸೌತ್ ಆಫ್ರಿಕಾ ವೇಗಿ ಕಗಿಸೊ ರಬಾಡ ಅವರನ್ನು ಆಯ್ಕೆ ಮಾಡಬೇಕು. ರಬಾಡ 80	ಐಪಿಎಲ್​ ಪಂದ್ಯಗಳಿಂದ 117 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಅವರ ಆಯ್ಕೆಯು ಆರ್​ಸಿಬಿ ತಂಡದ ಬಲವನ್ನು ಹೆಚ್ಚಿಸಲಿದೆ ಎಂದು ಎಬಿಡಿ ತಿಳಿಸಿದ್ದಾರೆ.

4 / 7
ರವಿಚಂದ್ರನ್ ಅಶ್ವಿನ್: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಅನುಭವಿ ಬೌಲರ್​ನ ಅವಶ್ಯಕತೆ ಕೂಡ ಇದೆ. ಇದಕ್ಕಾಗಿ ಅನುಭವಿ ಆಲ್​ರೌಂಡರ್ ರವಿಚಂದ್ರನ್ ಅಶ್ವಿನ್ ಅವರನ್ನು ಖರೀದಿಸಬೇಕು. ಈ ಮೂಲಕ ಚಹಲ್-ಅಶ್ವಿನ್ ಜೋಡಿಯೊಂದಿಗೆ ಆರ್​ಸಿಬಿ ಸ್ಪಿನ್ ವಿಭಾಗವನ್ನು ಬಲಪಡಿಸಿಕೊಳ್ಳಬಹುದು ಎಂದು ಎಬಿಡಿ ಅಭಿಪ್ರಾಯಪಟ್ಟಿದ್ದಾರೆ.

5 / 7
ಭುವನೇಶ್ವರ್ ಕುಮಾರ್: ಕಗಿಸೊ ರಬಾಡಗೆ ಜೋಡಿಯಾಗಿ ಆರ್​ಸಿಬಿ ಭಾರತೀಯ ಬೌಲರ್​ ಆಗಿ ಭುವನೇಶ್ವರ್ ಕುಮಾರ್ ಅವರನ್ನು ಆಯ್ಕೆ ಮಾಡಬೇಕು. ಅನುಭವಿ ವೇಗಿಯಾಗಿರುವ ಭುವಿ ಐಪಿಎಲ್​ನಲ್ಲಿ ಈಗಾಗಲೇ 181 ವಿಕೆಟ್ ಕಬಳಿಸಿದ್ದಾರೆ. ಹೀಗಾಗಿ ಅವರ ಆಗಮನದಿಂದಾಗಿ ಆರ್​ಸಿಬಿ ಬೌಲಿಂಗ್ ಲೈನಪ್ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ಎಬಿ ಡಿವಿಲಿಯರ್ಸ್ ತಿಳಿಸಿದ್ದಾರೆ.

6 / 7
ಅಂದರೆ ಎಬಿ ಡಿವಿಲಿಯರ್ಸ್ ಪ್ರಕಾರ, ಆರ್​ಸಿಬಿ ತಂಡವು ಬೌಲಿಂಗ್ ಲೈನಪ್ ಬಲಿಷ್ಠಗೊಳಿಸಬೇಕಿದ್ದರೆ ಕಗಿಸೊ ರಬಾಡ, ಭುವನೇಶ್ವರ್ ಕುಮಾರ್, ಯುಜ್ವೇಂದ್ರ ಚಹಲ್ ಹಾಗೂ ರವಿಚಂದ್ರನ್ ಅಶ್ವಿನ್ ಅವರನ್ನು ಖರೀದಿಸಲೇಬೇಕು. ಈ ಮೂಲಕ ಆರ್​ಸಿಬಿ ಬಲಿಷ್ಠ ಪ್ಲೇಯಿಂಗ್ ಇಲೆವೆನ್ ರೂಪಿಸಿಕೊಳ್ಳಬಹುದು ಎಂದು ಎಬಿಡಿ ತಿಳಿಸಿದ್ದಾರೆ.

7 / 7
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​

ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ

‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್

ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ

ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ

ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ

ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ

ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್

ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್