IPL 2025: 3 ಕ್ಯಾಚ್ ಕೈಚೆಲ್ಲಿದ ಸಿಎಸ್​ಕೆ; ಸ್ಫೋಟಕ ಅರ್ಧಶತಕ ಚಚ್ಚಿದ ರಜತ್ ಪಾಟಿದರ್

|

Updated on: Mar 28, 2025 | 10:02 PM

CSK's Shocking Fielding: ಇಂಡಿಯನ್ ಪ್ರೀಮಿಯರ್ ಲೀಗ್ 2025ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಕಳಪೆ ಫಿಲ್ಡಿಂಗ್ ಎಲ್ಲರನ್ನೂ ಆಶ್ಚರ್ಯಗೊಳಿಸಿದೆ. ರಜತ್ ಪಟಿದಾರ್ ಅವರ ಮೂರು ಕ್ಯಾಚ್‌ಗಳನ್ನು ಕೇವಲ ನಾಲ್ಕು ರನ್​ಗಳ ಅಂತರದಲ್ಲಿ ಕೈಬಿಡಲಾಗಿದೆ.ಶಿಸ್ತುಬದ್ಧವಾದ ಆಟಕ್ಕೆ ಹೆಸರುವಾಸಿಯಾಗಿರುವ ಸಿಎಸ್​ಕೆ ತಂಡದಿಂದ ಈ ರೀತಿಯಾದ ಪ್ರದರ್ಶನ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.

IPL 2025: 3 ಕ್ಯಾಚ್ ಕೈಚೆಲ್ಲಿದ ಸಿಎಸ್​ಕೆ; ಸ್ಫೋಟಕ ಅರ್ಧಶತಕ ಚಚ್ಚಿದ ರಜತ್ ಪಾಟಿದರ್
Csk Team
Follow us on

ಇಂಡಿಯನ್ ಪ್ರೀಮಿಯರ್ ಲೀಗ್ 2025 (IPL 2025) ರ 8 ನೇ ಪಂದ್ಯದಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಫಿಲ್ಡರ್​ಗಳ ಕಳಪೆ ಫಿಲ್ಡಿಂಗ್ ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಶಿಸ್ತುಬದ್ಧ ಆಟಕ್ಕೆ ಹೆಸರು ವಾಸಿಯಾಗಿರುವ ಸಿಎಸ್​ಕೆ ತಂಡ ಈ ರೀತಿಯ ಕಳಪೆ ಫಿಲ್ಡಿಂಗ್ ಮಾಡುತ್ತದೆ ಎಂಬುದನ್ನು ಯಾರು ನಿರೀಕ್ಷಿಸಿರಲಿಲ್ಲ. ವಾಸ್ತವವಾಗಿ, ಚೆನ್ನೈನ 3 ಆಟಗಾರರು ಕೇವಲ 4 ರನ್‌ಗಳ ಅಂತರದಲ್ಲಿ ಆರ್​ಸಿಬಿ ಕ್ಯಾಪ್ಟನf ರಜತ್ ಪಟಿದಾರ್ ಅವರ 3 ಕ್ಯಾಚ್‌ಗಳನ್ನು ಕೈಬಿಟ್ಟರು. ಇದನ್ನು ನೋಡಿ ಅಭಿಮಾನಿಗಳೆಲ್ಲರೂ ಅಚ್ಚರಿಗೊಂಡರು. ವಿಕೆಟ್ ಕೀಪರ್ ಧೋನಿ ಕೂಡ ಆಘಾತಕ್ಕೊಳಗಾಗಿದಂತೆ ಕಾಣುತ್ತಿದ್ದರು. ಕ್ರಿಕೆಟ್ ಮೈದಾನದಲ್ಲಿ ಕ್ಯಾಚ್‌ಗಳನ್ನು ಕೈಚೆಲ್ಲುವುದು ಸರ್ವೆಸಾಮಾನ್ಯ. ಆದರೆ ಒಬ್ಬ ಬ್ಯಾಟ್ಸ್‌ಮನ್‌ನ 3 ಕ್ಯಾಚ್‌ಗಳನ್ನು ಕೈಚೆಲ್ಲುವುದು ನಿಜಕ್ಕೂ ಆಶ್ಚರ್ಯಕರ.

ಹ್ಯಾಟ್ರಿಕ್ ಕ್ಯಾಚ್ ಡ್ರಾಪ್

ಚೆನ್ನೈ ಆಟಗಾರರು ಕ್ಯಾಚ್‌ಗಳನ್ನು ಬಿಡುವ ಪ್ರವೃತ್ತಿ 12ನೇ ಓವರ್‌ನಿಂದಲೇ ಪ್ರಾರಂಭವಾಯಿತು. ರವೀಂದ್ರ ಜಡೇಜಾ ಬೌಲಿಂಗ್‌ನಲ್ಲಿ ರಜತ್ ಪಾಟಿದಾರ್ ಅವರ ಮೊದಲ ಕ್ಯಾಚ್ ಮಿಸ್ ಆಯಿತು. ಚೆಂಡು ಲಾಂಗ್ ಆಫ್ ಕಡೆಗೆ ಗಾಳಿಯಲ್ಲಿ ಹೋಯಿತು, ಅದು ತುಂಬಾ ಸುಲಭವಾದ ಕ್ಯಾಚ್ ಆಗಿತ್ತು. ಆದರೆ ಅಲ್ಲೆ ನಿಂತಿದ್ದ ಹೂಡಾ ಸುಲಭ ಕ್ಯಾಚ್ ಕೈಚೆಲ್ಲಿದರು. ಆ ಬಳಿಕ 13ನೇ ಓವರ್‌ನಲ್ಲಿ ನೂರ್ ಅಹ್ಮದ್ ಎಸೆತದಲ್ಲಿ ರಜತ್ ಪಾಟಿದಾರ್ ಅವರ ಎರನೇ ಕ್ಯಾಚ್ ಮಿಸ್ ಆಯಿತು. ಈ ಬಾರಿ ರಾಹುಲ್ ತ್ರಿಪಾಠಿ ಈ ಕ್ಯಾಚ್ ಅನ್ನು ಕೈಬಿಟ್ಟರು. ಆದರೆ ಈ ಕ್ಯಾಚ್ ಕೊಂಚ ಕಷ್ಟಕರವಾಗಿತ್ತು.

ಇದನ್ನೂ ಓದಿ
0.14 ಸೆಕೆಂಡ್​ನಲ್ಲಿ ಸಾಲ್ಟ್​ಗೆ ಪೆವಿಲಿಯನ್ ಹಾದಿ ತೋರಿಸಿದ ಧೋನಿ
17 ವರ್ಷಗಳ ನಂತರ ಚೆನ್ನೈನಲ್ಲಿ ಗೆದ್ದ ಆರ್​ಸಿಬಿ
ಚೆನ್ನೈನಲ್ಲೂ ಕೊಹ್ಲಿ ಫ್ಯಾನ್ಸ್​ದೇ ಹವಾ; ವಿಡಿಯೋ ನೋಡಿ
ಆರ್‌ಸಿಬಿಯನ್ನು ಮತ್ತೊಮ್ಮೆ ಗೇಲಿ ಮಾಡಿದ ರಾಯುಡು

ಇದಾದ ಬಳಿಕ ನೂರ್ ಅಹ್ಮದ್ ಅವರ ಅದೇ ಓವರ್‌ನಲ್ಲಿ ರಜತ್ ಪಾಟಿದಾರ್ ಅವರ ಮೂರನೇ ಕ್ಯಾಚ್ ಕೈತಪ್ಪಿತು. ಈ ಬಾರಿ ರಜತ್ ಅವರ ಕ್ಯಾಚ್ ಅನ್ನು ಖಲೀಲ್ ಅಹ್ಮದ್ ಬಿಟ್ಟರು. ನೂರ್ ಅವರ ಎಸೆತವನ್ನು ಬಿಗ್ ಶಾಟ್ ಆಡುವ ರಜತ್ ಯತ್ನಿಸಿದರು. ಆದರೆ ಚೆಂಡು ಬ್ಯಾಟ್​ನ ಅಂಚಿಗೆ ತಾಗಿ ಶಾರ್ಟ್ ಥರ್ಡ್​ನಲ್ಲಿ ನಿಂತಿದ್ದ ಖಲೀಲ್ ಕಡೆಗೆ ಹೋಯಿತು. ಆದರೆ ಖಲೀಲ್​ಗೆ ಈ ಕ್ಯಾಚ್​ ಹಿಡಿಯಲು ಸಾಧ್ಯವಾಗಲಿಲ್ಲ.

ಕೊಹ್ಲಿ ಹೆಲ್ಮೆಟ್‌ಗೆ ಬಡಿದ ಪತಿರಾನ ಮಾರಕ ಬೌನ್ಸರ್; ಮುಂದಿನ 2 ಎಸೆತಗಳಲ್ಲಿ ತಿರುಗೇಟು ಕೊಟ್ಟ ವಿರಾಟ್

196 ರನ್ ಕಲೆಹಾಕಿದ ಆರ್​ಸಿಬಿ

ಈ ಮೂರು ಜೀವದಾನವನ್ನು ಸಂಪೂರ್ಣವಾಗಿ ಬಳಸಿಕೊಂಡ ರಜತ್ ಪಟಿದಾರ್ ಸಿಕ್ಸರ್ ಮತ್ತು ಬೌಂಡರಿಗಳ ಮಳೆಗರೆದರು. ಹೀಗಾಗಿ ಕೇವಲ 30 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಅಂತಿಮವಾಗಿ ರಜತ್ 32 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್​ಗಳ ಸಹಿತ 51 ರನ್​ಗಳ ಇನ್ನಿಂಗ್ಸ್ ಆಡಿದರು. ಪಂದ್ಯದ ಬಗ್ಗೆ ಹೇಳುವುದಾದರೆ.. ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ 20 ಓವರ್‌ಗಳಲ್ಲಿ 196 ರನ್‌ಗಳ ಬೃಹತ್ ಸ್ಕೋರ್ ಗಳಿಸಿತು. ರಜತ್ ಪಟಿದಾರ್ 32 ಎಸೆತಗಳಲ್ಲಿ 51 ರನ್ ಗಳಿಸಿದರೆ, ಫಿಲಿಪ್ ಸಾಲ್ಟ್ 16 ಎಸೆತಗಳಲ್ಲಿ 32 ರನ್ ಕಲೆಹಾಕಿದರು. ಟಿಮ್ ಡೇವಿಡ್ 8 ಎಸೆತಗಳಲ್ಲಿ 22 ರನ್ ಗಳಿಸಿ ಅಜೇಯರಾಗುಳಿದರು. ಕೊನೆಯ ಓವರ್‌ನಲ್ಲಿ ಅವರು ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:58 pm, Fri, 28 March 25