Fact Check: ಚಾಹಲ್- ಧನಶ್ರೀ ವಿಚ್ಛೇದನದ ಹಾರ್ದಿಕ್ ಪಾಂಡ್ಯ ಶಾಕಿಂಗ್ ಹೇಳಿಕೆ?: ವೈರಲ್ ವಿಡಿಯೋದ ಸತ್ಯ ಏನು?
Yuzvendra Chahal and Dhanashree Verma divorce: ಹಾರ್ದಿಕ್ ಪಾಂಡ್ಯ ತಮ್ಮ ಮಾಜಿ ತಂಡದ ಸಹ ಆಟಗಾರ ಯುಜ್ವೇಂದ್ರ ಚಾಹಲ್ ಮತ್ತು ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಅವರ ವಿಚ್ಛೇದನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತುದೆ. ಹಾರ್ದಿಕ್ ನಿಜಕ್ಕೂ ಚಹಲ್-ಧನಶ್ರೀ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರ?.

ಬೆಂಗಳೂರು (ಮಾ. 28): ಟೀಮ್ ಇಂಡಿಯಾದ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ (Yuzvendra Chahal) ಮತ್ತು ಧನಶ್ರೀ ವರ್ಮಾ ಅವರಿಗೆ ಮಾರ್ಚ್ 20, 2025 ರಂದು ಬಾಂದ್ರಾ ಕೌಟುಂಬಿಕ ನ್ಯಾಯಾಲಯವು ವಿಚ್ಛೇದನವನ್ನು ನೀಡಿತು. ಇದರ ಬೆನ್ನಲ್ಲೇ ಈಗ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಬಳಕೆದಾರರು ಹಾರ್ದಿಕ್ ತಮ್ಮ ಮಾಜಿ ತಂಡದ ಸಹ ಆಟಗಾರ ಯುಜ್ವೇಂದ್ರ ಚಾಹಲ್ ಮತ್ತು ಅವರ ಮಾಜಿ ಪತ್ನಿ ಧನಶ್ರೀ ವರ್ಮಾ ಅವರ ವಿಚ್ಛೇದನದ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಹಾರ್ದಿಕ್ ನಿಜಕ್ಕೂ ಚಹಲ್-ಧನಶ್ರೀ ವಿಚ್ಛೇದನದ ಬಗ್ಗೆ ಮಾತನಾಡಿದ್ದಾರ?.
ವೈರಲ್ ಆಗುತ್ತಿರುವುದೇನು?:
ಮಾರ್ಚ್ 22 ರಂದು, ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ವಿಡಿಯೋವನ್ನು ಹಂಚಿಕೊಂಡಿದ್ದು, ಅವರು ಧನಶ್ರೀ ವರ್ಮಾ ಅವರಿಂದ ಚಾಹಲ್ ಬೇರ್ಪಟ್ಟ ಬಗ್ಗೆ ಮಾತನಾಡಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ವಿಡಿಯೋದಲ್ಲಿ, ಪಾಂಡ್ಯ ಹೀಗೆ ಹೇಳುವುದನ್ನು ಕೇಳಬಹುದು: ‘‘ನನಗೆ ಯಾರೋ ಒಬ್ಬರು ಯುಜಿ ಬಗ್ಗೆ ಕೇಳಿದರು. ಜನರು ಅವರನ್ನು ಮೋಜಿನ ಅಥವಾ ತುಂಬಾ ಹಗುರವಾದ ವ್ಯಕ್ತಿ ಎಂದು ನೋಡುತ್ತಾರೆ. ಆದರೆ ಅವರ ವಿಚ್ಛೇದನದ ನಂತರ ಅವರು ಅನುಭವಿಸಿದ್ದು ತುಂಬಾ ಕಠಿಣವಾಗಿತ್ತು. ಸಂಬಂಧ ಕೊನೆಗೊಂಡಾಗ ಅದು ಎಂದಿಗೂ ಸುಲಭವಲ್ಲ. ಯಾರಿಗಾದರೂ ಆ ನೋವನ್ನು ಒಳಗೆ ಹೊತ್ತುಕೊಳ್ಳುವುದು ತುಂಬಾ ಕಷ್ಟಕರವಾಗಿರುತ್ತದೆ. ಅವರು ಕಷ್ಟಪಡುವುದನ್ನು ನಾನು ನೋಡಿದೆ’’ ಎಂದು ಹೇಳಿದ್ದಾರೆ.
View this post on Instagram
ಹಾರ್ದಿಕ್ ಪಾಂಡ್ಯ ನಿಜಕ್ಕೂ ಈ ಮಾತು ಹೇಳಿದ್ದಾರಾ?:
ಈ ಕುರಿತು ಟಿವಿ9 ಕನ್ನಡ ತನಿಖೆ ನಡೆಸಿದಾಗ ಮೂಲ ವೀಡಿಯೊ ಏಪ್ರಿಲ್ 20, 2023 ರಂದು ಅಪ್‌ಲೋಡ್ ಮಾಡಲಾದ ಗುಜರಾತ್ ಟೈಟಾನ್ಸ್ ಪಾಡ್‌ಕ್ಯಾಸ್ಟ್‌ನಿಂದ ಬಂದಿದೆ ಎಂದು ಕಂಡುಬಂದಿದೆ. ಪಾಡ್‌ಕ್ಯಾಸ್ಟ್‌ನಲ್ಲಿ, ಪಾಂಡ್ಯ ಗುಜರಾತ್ ಟೈಟಾನ್ಸ್‌ಗೆ ಸೇರುವ ತಮ್ಮ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ. ಇದಲ್ಲದೆ, ಇಡೀ ಸಂಚಿಕೆಯಲ್ಲಿ ಚಾಹಲ್ ಅವರ ವಿಚ್ಛೇದನದ ಬಗ್ಗೆ ಅವರು ಯಾವುದೇ ವಿಚಾರ ಪ್ರಸ್ತಾಪ ಮಾಡಿಲ್ಲ.
ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ಈ ಹೇಳಿಕೆಯನ್ನು ಗೂಗಲ್‌ನಲ್ಲಿ ಕಸ್ಟಮೈಸ್ ಮಾಡಿದ ಕೀವರ್ಡ್ ಹುಡುಕಾಟ ನಡೆಸಿದ್ದೇವೆ. ಆದಾಗ್ಯೂ, ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರು ಯುಜ್ವೇಂದ್ರ ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ಬಗ್ಗೆ ಹೇಳಿಕೆ ನೀಡಿದ್ದಾರೆ ಎಂಬ ಯಾವುದೇ ವಿಶ್ವಾಸಾರ್ಹ ವರದಿಗಳು ನಮಗೆ ಕಂಡುಬಂದಿಲ್ಲ. ಓರ್ವ ಸ್ಟಾರ್ ಆಟಗಾರ ಈ ವಿಚಾರದ ಬಗ್ಗೆ ಮಾತನಾಡಿದ್ದರೆ ಅದು ದೊಡ್ಡ ಹೆಡ್ಲೈನ್ ಆಗಿರುತ್ತಿತ್ತು. ಆದರೆ, ಅಂತಹ ಯಾವುದೇ ವರದಿ ನಮಗೆ ಸಿಕ್ಕಿಲ್ಲ.
CSK vs RCB Playing XI: ಟಾಸ್ ಗೆದ್ದ ಸಿಎಸ್ಕೆ: ಆರ್ಸಿಬಿ ಪ್ಲೇಯಿಂಗ್ ಇಲೆವೆನ್ ಇಲ್ಲಿದೆ ನೋಡಿ
ಇದೇವೇಳೆ ನಾವು ವೈರಲ್ ಆಗುತ್ತಿರುವ ವಿಡಿಯೋಕ್ಕೆ ಹಲವಾರು ಬಳಕೆದಾರರು ಇದು ನಕಲಿ ಅಥವಾ AI- ರಚಿತ ಎಂದು ಕಾಮೆಂಟ್ ಮಾಡಿರುವುದನ್ನು ಗಮನಿಸಿದ್ದೇವೆ. ಇದಲ್ಲದೆ, ವಿಡಿಯೋದಲ್ಲಿ ಪಾಂಡ್ಯ ಗುಜರಾತ್ ಟೈಟಾನ್ಸ್ ತಂಡದ ಜೆರ್ಸಿಯನ್ನು ಧರಿಸಿರುವುದನ್ನು ಕಾಣಬಹುದು. ಚಹಲ್-ಧನಶ್ರೀ ವಿಚ್ಛೇದನ ಇತ್ತೀಚೆಗಷ್ಟೆ ಆಗಿದೆ. ಹಾರ್ದಿಕ್ ಗುಜರಾತ್ ತಂಡ ತ್ಯಜಿಸಿ ಒಂದು ವರ್ಷ ಕಳೆದಿದೆ. ಈ ಮಾಹಿತಿಯ ಆಧಾರದ ಮೇಲೆ ನಾವು ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಏಪ್ರಿಲ್ 20, 2023 ರಂದು ಗುಜರಾತ್ ಟೈಟಾನ್ಸ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾದ ವಿಡಿಯೋದ ವಿಸ್ತೃತ ಆವೃತ್ತಿಯನ್ನು ಕಂಡುಕೊಂಡಿದ್ದೇವೆ.
ವಿಡಿಯೋದ ಶೀರ್ಷಿಕೆ ಹೀಗಿದೆ: ‘‘ಗುಜರಾತ್ ಟೈಟಾನ್ಸ್ | ಜಿಕೆ ಮೀಟರ್ಸ್ ಜಿಟಿ ಪಾಡ್‌ಕ್ಯಾಸ್ಟ್ | ಸಂಚಿಕೆ 2 (ಭಾಗ 1)’’.
ಈ ವಿಡಿಯೋದ 5:23 ಸಮಯದ ಸ್ಟ್ಯಾಂಪ್‌ನಲ್ಲಿ, ಹಾರ್ದಿಕ್ ಪಾಂಡ್ಯ ಅವರು ಗುಜರಾತ್ ಟೈಟಾನ್ಸ್ ಮತ್ತು ಅವರಿಗೆ ಸ್ಥಾನ ನೀಡಿದ ಇತರ ಹೊಸ ಫ್ರಾಂಚೈಸಿಗಳ ಬಗ್ಗೆ ಮಾತನಾಡುವುದನ್ನು ಕೇಳಬಹುದು. ಈ ವಿಡಿಯೋವನ್ನು ನಾವು ಎಚ್ಚರಿಕೆಯಿಂದ ಗಮನಿಸಿದ್ದೇವೆ. ಅವರು ಚಾಹಲ್ ಮತ್ತು ಧನಶ್ರೀ ವರ್ಮಾ ಅವರ ವಿಚ್ಛೇದನದ ಬಗ್ಗೆ ಎಲ್ಲೂ ಚರ್ಚಿಸಲಿಲ್ಲ.
ಹೀಗಾಗಿ ಹಾರ್ದಿಕ್ ಪಾಂಡ್ಯ ಅವರು ಚಾಹಲ್ ಧನಶ್ರೀ ವರ್ಮಾ ಅವರಿಂದ ಬೇರ್ಪಟ್ಟ ಬಗ್ಗೆ ಮಾತನಾಡಿದ್ದಾರೆ ಎಂದು ವೈರಲ್ ಆಗುತ್ತಿರುವ ವಿಡಿಯೋವನ್ನು ತಿರುಚಲಾಗಿದೆ ಎಂದು ನಮ್ಮ ತನಿಖೆಯಿಂದ ತಿಳಿದುಬಂದಿದೆ. ಮೂಲ ವಿಡಿಯೋದಲ್ಲಿ ಪಾಂಡ್ಯ ಗುಜರಾತ್ ಟೈಟಾನ್ಸ್‌ಗೆ ಸೇರಿದ ತನ್ನ ಪ್ರಯಾಣದ ಬಗ್ಗೆ ಮಾತನಾಡಿದ್ದಾರೆ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ