ಕೊಹ್ಲಿ ಹೆಲ್ಮೆಟ್‌ಗೆ ಬಡಿದ ಪತಿರಾನ ಮಾರಕ ಬೌನ್ಸರ್; ಮುಂದಿನ 2 ಎಸೆತಗಳಲ್ಲಿ ತಿರುಗೇಟು ಕೊಟ್ಟ ವಿರಾಟ್
IPL 2025 CSK vs RCB: ಐಪಿಎಲ್ 2025 ರ 8ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 196 ರನ್ ಗಳಿಸಿದೆ. ಆದರೆ ಆರಂಭದಿಂದಲೂ ಚೆನ್ನೈ ಬೌಲರ್‌ಗಳು ವಿರಾಟ್ ಕೊಹ್ಲಿಗೆ ಮುಕ್ತವಾಗಿ ಆಡಲು ಅವಕಾಶ ಕೊಡಲಿಲ್ಲ. ಆದರೆ ಪತಿರಾನನ ಬೌನ್ಸರ್‌ಗೆ ಕೊಹ್ಲಿ ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ಎದುರೇಟು ನೀಡಿದರು.

ಐಪಿಎಲ್ 2025 (IPL 2025) ರ 8ನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (CSK vs RCB) ನಡುವೆ ನಡೆಯಿತು. ಚೆಪಾಕ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 196 ರನ್ಗಳ ಬೃಹತ್ ಮೊತ್ತ ಕಲೆಹಾಕಿತು. ಮೊದಲ ಓವರ್‌ನಿಂದಲೇ ಸಿಎಸ್‌ಕೆ ಬೌಲರ್‌ಗಳು ಮತ್ತು ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳ ನಡುವೆ ತೀವ್ರ ಪೈಪೋಟಿ ಕಂಡುಬಂದಿತು. ಚೆನ್ನೈ ಬೌಲರ್‌ಗಳು ವಿರಾಟ್ ಕೊಹ್ಲಿಯನ್ನು ವಿಶೇಷವಾಗಿ ಗುರಿಯಾಗಿಸಿಕೊಂಡಿದ್ದರು. ಹೀಗಾಗಿ ಕೊಹ್ಲಿಗೆ ಆರಂಭದಿಂದಲೂ ಮುಕ್ತವಾಗಿ ಬ್ಯಾಟಿಂಗ್ ಮಾಡಲು ಸಾಧ್ಯವಾಗಲಿಲ್ಲ.
ಇದೇ ಒತ್ತಡದಲ್ಲಿದ್ದ ಕೊಹ್ಲಿಗೆ 11 ನೇ ಓವರ್‌ನ ಮೊದಲ ಎಸೆತದಲ್ಲಿ ಮತಿಶಾ ಪತಿರಾನ ಎಸೆದ ಬೌನ್ಸರ್ ಆಘಾತ ನೀಡಿತು. ಘಾತುಕ ವೇಗದಲ್ಲಿ ಬಂದ ಚೆಂಡು ಕೊಹ್ಲಿಯ ಹೆಲ್ಮೆಟ್‌ಗೆ ಬಡಿಯಿತು. ಇದರಿಂದ ರೊಚ್ಚಿಗೆದ್ದ ಕೊಹ್ಲಿ ಮುಂದಿನ ಎಸೆತದಲ್ಲೇ ಸಿಕ್ಸರ್ ಬಾರಿಸಿದರು. ನಂತರ ಮೂರನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ತಿರುಗೇಟು ನೀಡಿದರು.
1st ball – 😮💨 2nd ball – 6️⃣
That’s what it’s like facing the GEN GOLD! ❤
Classy counter from #ViratKohli! 🙌🏻
Watch LIVE action ➡ https://t.co/MOqwTBm0TB#IPLonJioStar 👉 #CSKvRCB | LIVE NOW on Star Sports 1, Star Sports 1 Hindi, Star Sports 3 & JioHotstar! pic.twitter.com/MzSQTD1zQc
— Star Sports (@StarSportsIndia) March 28, 2025
ಮುಂದಿನ ಎಸೆತದಲ್ಲಿ ಸಿಕ್ಸರ್
ವಿರಾಟ್ ಕೊಹ್ಲಿ ಏಟಿಗೆ ಎದುರೇಟು ನೀಡುವುದಕ್ಕೆ ಹೆಸರುವಾಸಿ. ಅವರು ಸಿಎಸ್‌ಕೆ ವಿರುದ್ಧವೂ ಅದೇ ರೀತಿ ಮಾಡಿದರು. 22 ವರ್ಷದ ಶ್ರೀಲಂಕಾದ ಯುವ ಬೌಲರ್ ಮತಿಶಾ ಪತಿರಾನ ಮೊದಲ ಎಸೆತದಲ್ಲೇ ಬೌನ್ಸರ್ ಹಾಕಿ ಕೊಹ್ಲಿಯನ್ನು ಕೆರಳಿಸಿದರು. ಮುಂದಿನ ಎಸೆತದಲ್ಲಿ, ಅವರು ಮತ್ತೊಮ್ಮೆ ಬೌನ್ಸರ್ ಎಸೆಯುವ ಮೂಲಕ ಕೊಹ್ಲಿಯನ್ನು ಮತ್ತೊಮ್ಮೆ ಕೆಣಕಿದರು. ಆದರೆ ಈ ಬೌನ್ಸರ್‌ಗೆ ಸಿದ್ಧರಾಗಿದ್ದ ಕೊಹ್ಲಿ ಆ ಎಸೆತವನ್ನು ಬೌಂಡರಿಯ ಆಚೆಗೆ ಸಿಕ್ಸರ್‌ಗೆ ಕಳುಹಿಸಿದರು. ಇದಾದ ನಂತರ ಕೊಹ್ಲಿ ಮುಂದಿನ ಎಸೆತವನ್ನು ಬೌಂಡರಿ ಬಾರಿಸಿ ಪತಿರಾನಗೆ ಪ್ರತ್ಯುತ್ತರ ನೀಡಿದರು.
ಕೊಹ್ಲಿ ಆಟಕ್ಕೆ ಕಡಿವಾಣ
ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಆರಂಭಿಕ ಪಂದ್ಯದಲ್ಲಿ ಅಬ್ಬರಿಸಿದ್ದ ಕೊಹ್ಲಿ 36 ಎಸೆತಗಳಲ್ಲಿ 59 ರನ್ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅವರು ರನ್ಗಾಗಿ ಪರದಾಡಬೇಕಾಯಿತು. ಪವರ್ ಪ್ಲೇನಲ್ಲೂ ಕೊಹ್ಲಿಗೆ ಬಿಗ್ ಶಾಟ್ ಬಾರಿಸಲು ಸಾಧ್ಯವಾಗಲಿಲ್ಲ. 10 ಓವರ್‌ಗಳ ಅಂತ್ಯದ ವೇಳೆಗೆ, ಅವರು 22 ಎಸೆತಗಳನ್ನು ಆಡಿ ಕೇವಲ 16 ರನ್ ಕಲೆಹಾಕಿದ್ದರು. ಪತಿರಾನ ವಿರುದ್ಧ 1 ಬೌಂಡರಿ ಮತ್ತು 1 ಸಿಕ್ಸರ್ ಬಾರಿಸುವ ಮೂಲಕ ಇನ್ನಿಂಗ್ಸ್ ಅನ್ನು ವೇಗಗೊಳಿಸಲು ಅವರು ಪ್ರಯತ್ನಿಸಿದರು. ಆದರೆ 13 ನೇ ಓವರ್‌ನಲ್ಲಿ ನೂರ್ ಅಹ್ಮದ್‌ಗೆ ಬಲಿಯಾದರು. ಈ ಪಂದ್ಯದಲ್ಲಿ ಕೊಹ್ಲಿ 30 ಎಸೆತಗಳಲ್ಲಿ ಕೇವಲ 31 ರನ್ ಗಳಿಸಲಷ್ಟೇ ಶಕ್ತರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:31 pm, Fri, 28 March 25