IPL 2025: ಆರ್‌ಸಿಬಿ ಜೋಕರ್ ತಂಡವಾ?; ಮತ್ತೊಮ್ಮೆ ಗೇಲಿ ಮಾಡಿದ ಅಂಬಟಿ ರಾಯುಡು
RCB vs CSK IPL 2025: 2025ರ ಐಪಿಎಲ್‌ನಲ್ಲಿ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಪಂದ್ಯಕ್ಕೂ ಮುನ್ನ, ಮಾಜಿ ಸಿಎಸ್‌ಕೆ ಆಟಗಾರರಾದ ಅಂಬಟಿ ರಾಯುಡು ಮತ್ತು ಎಸ್. ಬದ್ರಿನಾಥ್ ಅವರು ಆರ್‌ಸಿಬಿಯ ಟ್ರೋಫಿ ಬರಗಾಲವನ್ನು ವ್ಯಂಗ್ಯವಾಗಿ ಉಲ್ಲೇಖಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಆರ್‌ಸಿಬಿ ಟ್ರೋಫಿ ಗೆಲ್ಲುವ ಬಗ್ಗೆ ಅವರು ತಮಾಷೆಯಾಗಿ ಚರ್ಚಿಸಿದ್ದಾರೆ.

2025 ರ ಐಪಿಎಲ್ನ (IPL 2025) 8ನೇ ಪಂದ್ಯ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ (RCB vs CSK) ನಡುವಿನ ಪಂದ್ಯವು ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಾಜಿ ಕ್ರಿಕೆಟಿಗರಾದ ಅಂಬಟಿ ರಾಯುಡು (Ambati Rayudu) ಮತ್ತು ಎಸ್ ಬದ್ರಿನಾಥ್, ಟ್ರೋಫಿ ಗೆಲ್ಲುವ ಆರ್‌ಸಿಬಿಯ ಕನಸನ್ನು ಅಣಕಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊವೊಂದರಲ್ಲಿ, ಇಬ್ಬರೂ ಮಾಜಿ ಆಟಗಾರರು ಆರ್‌ಸಿಬಿ ದೀರ್ಘಕಾಲದವರೆಗೆ ಟ್ರೋಫಿಯನ್ನು ಗೆಲ್ಲದಿರುವ ಬಗ್ಗೆ ತಮಾಷೆಯಾಗಿ ಚರ್ಚಿಸುತ್ತಿರುವುದನ್ನು ನಾವು ಕಾಣಬಹುದಾಗಿದೆ.
ವೈರಲ್ ಆಗಿರುವ ಈ ವಿಡಿಯೋದಲ್ಲಿ ‘ಈ ವರ್ಷ ಆರ್‌ಸಿಬಿ ತನ್ನ ಟ್ರೋಫಿಯ ಬರಗಾಲವನ್ನು ನೀಗಿಸಲು ಸಾಧ್ಯವಾಗುತ್ತದೆಯೇ ಎಂದು ಬದರಿನಾಥ್ ತಮಾಷೆಯಾಗಿ ರಾಯುಡು ಬಳಿ ಪ್ರಶ್ನೆ ಕೇಳಿದ್ದಾರೆ. ಇದನ್ನು ಕೇಳಿದ ಕೂಡಲೇ ಇಬ್ಬರೂ ಆಟಗಾರರು ನಗಲು ಆರಂಭಿಸಿದ್ದಾರೆ. ಆ ಬಳಿಕ ಈ ಪ್ರಶ್ನೆಗೆ ಉತ್ತರಿಸಿರುವ ರಾಯುಡು, ‘ಆರ್‌ಸಿಬಿ ಟ್ರೋಫಿ ಗೆಲ್ಲುವುದಕ್ಕೆ ಮಾಡುವ ಹೋರಾಟವನ್ನು ನೋಡಿ ನಾನು ಯಾವಾಗಲೂ ಆನಂದಿಸುತ್ತೇನೆ ಎಂದಿದ್ದಾರೆ.
ಆರ್‌ಸಿಬಿಯನ್ನು ಗೇಲಿ ಮಾಡಿದ ರಾಯುಡು
ಮುಂದುವರೆದು ಮಾತನಾಡಿರುವ ರಾಯುಡು, ‘ಒಂದು ದಿನ ಆರ್‌ಸಿಬಿ ಟ್ರೋಫಿ ಗೆಲ್ಲಬೇಕೆಂದು ನಾನು ಬಯಸುತ್ತೇನೆ, ಆದರೆ ಈ ವರ್ಷ ಅಲ್ಲ!’. ವಾಸ್ತವವಾಗಿ, ಐಪಿಎಲ್‌ಗೆ ನಿರಂತರವಾಗಿ ನಿರೀಕ್ಷೆಗಳನ್ನು ಹೆಚ್ಚಿಸುವ ಆದರೆ ಅವುಗಳನ್ನು ಪೂರೈಸಲು ಸಾಧ್ಯವಾಗದ ತಂಡ ಬೇಕು. ಇದು ಪಂದ್ಯಾವಳಿಯನ್ನು ಇನ್ನಷ್ಟು ಮೋಜಿನಿಂದ ಕೂಡಿಸುತ್ತದೆ!’ ಎಂದಿದ್ದಾರೆ. ರಾಯುಡು ಅವರ ಈ ಕಾಮೆಂಟ್ ಮತ್ತೆ ಆರ್‌ಸಿಬಿ ಅಭಿಮಾನಿಗಳು ಕೆರಳುವಂತೆ ಮಾಡಿದೆ.
These ex-CSK clowns are now groveling for clout and crumbs of relevance through a “trophyless” RCB 😭😭😭😭😭😭 😭
These two washed-up jokers strut around like they’ve smashed 100 Tests for India and bagged a cabinet full of ICC trophies pic.twitter.com/qtkPjPVCAm
— Thalaiban (@Thalaiban) March 27, 2025
ಎರಡೂ ತಂಡಗಳ ಪ್ರದರ್ಶನ ಹೇಗಿದೆ?
ಈ ಸೀಸನ್ನ ಮೊದಲ ಪಂದ್ಯದಲ್ಲಿ ಸಿಎಸ್‌ಕೆ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿದರೆ, ಆರ್‌ಸಿಬಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿತು. ಹೀಗಾಗಿ ಎರಡೂ ತಂಡಗಳ ಮೇಲೆ ನಿರೀಕ್ಷೆ ಮತ್ತಷ್ಟು ಹೆಚ್ಚಿಸಿದೆ. ಇನ್ನೊಂದು ಅಚ್ಚರಿಯ ವಿಷಯವೆಂದರೆ ಬೆಂಗಳೂರು ತಂಡವು ಕಳೆದ 17 ವರ್ಷಗಳಿಂದ ಚೆನ್ನೈ ತಂಡವನ್ನು ಅದರ ತವರಿನಲ್ಲಿ ಸೋಲಿಸಲು ಸಾಧ್ಯವಾಗಿಲ್ಲ. ಹೀಗಾಗಿ ಈ ಬಾರಿ ಫಲಿತಾಂಶ ಏನಾಗುತ್ತದೆ ಎಂಬುದು ಕುತೂಹಲಕಾರಿಯಾಗಿದೆ.
IPL 2025 Points Table: ದಿಢೀರ್ ಅಗ್ರಸ್ಥಾನಕ್ಕೇರಿದ ಆರ್‌ಸಿಬಿ: ಪಾಯಿಂಟ್ಸ್ ಟೇಬಲ್ನಲ್ಲಿ ಬಿಗ್ ಚೇಂಜ್
ಬೆಂಗಳೂರು ವಿರುದ್ಧ ಚೆನ್ನೈ ಪ್ರಾಬಲ್ಯ
ಇಲ್ಲಿಯವರೆಗೆ, ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ 33 ಪಂದ್ಯಗಳು ನಡೆದಿದ್ದು, ಚೆನ್ನೈ 21 ಬಾರಿ ಗೆದ್ದಿದ್ದರೆ, ಬೆಂಗಳೂರು ಕೇವಲ 11 ಪಂದ್ಯಗಳನ್ನು ಗೆದ್ದಿದೆ. ಒಂದು ಪಂದ್ಯದಲ್ಲಿ ಫಲಿತಾಂಶ ಬಂದಿಲ್ಲ. ಕಳೆದ ವರ್ಷ, ಐಪಿಎಲ್ 2024 ರಲ್ಲಿ ಉಭಯ ತಂಡಗಳ ನಡುವಿನ ಕೊನೆಯ ಗುಂಪು ಹಂತದ ಪಂದ್ಯದಲ್ಲಿ, ಆರ್‌ಸಿಬಿ ಸಿಎಸ್‌ಕೆ ತಂಡವನ್ನು 24 ರನ್‌ಗಳಿಂದ ಸೋಲಿಸಿತು. ಈ ಬಾರಿ ಚೆನ್ನೈ ನೆಲದಲ್ಲಿ ಆರ್‌ಸಿಬಿ ತನ್ನ ಸೋಲಿನ ಸರಣಿಯನ್ನು ಮುರಿಯಲು ಸಾಧ್ಯವಾಗುತ್ತದೆಯೇ ಅಥವಾ ಸಿಎಸ್‌ಕೆ ಮತ್ತೊಮ್ಮೆ ತನ್ನ ಪ್ರಾಬಲ್ಯವನ್ನು ಉಳಿಸಿಕೊಳ್ಳುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ