IPL 2025: 2025 ರ ಐಪಿಎಲ್ ವೇಳಾಪಟ್ಟಿಯಲ್ಲಿ ಹಠಾತ್ ಬದಲಾವಣೆ
KKR vs LSG IPL 2025 Match Postponed: ಐಪಿಎಲ್ 2025ರ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದ ದಿನಾಂಕವನ್ನು ಬದಲಾಯಿಸಲಾಗಿದೆ. ಏಪ್ರಿಲ್ 6 ರಂದು ನಡೆಯಬೇಕಿದ್ದ ಪಂದ್ಯವನ್ನು ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ. ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ ಕೋಲ್ಕತ್ತಾ ಪೊಲೀಸರ ವಿನಂತಿಯ ಮೇರೆಗೆ ಈ ಬದಲಾವಣೆ ಮಾಡಲಾಗಿದೆ. ಪಂದ್ಯದ ಸ್ಥಳದಲ್ಲಿ ಯಾವುದೇ ಬದಲಾವಣೆ ಇಲ್ಲ. ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿಯೇ ನಡೆಯಲಿದೆ.

ಐಪಿಎಲ್ 2025 (IPL 2025) ರ ವೇಳಾಪಟ್ಟಿಯಲ್ಲಿ ಹಠಾತ್ ಬದಲಾವಣೆಯಾಗಿದೆ. ಹಲವು ದಿನಗಳಿಂದ ಕೇಳಿಬರುತ್ತಿದ್ದ ವದಂತಿ ಇದೀಗ ನಿಜವಾಗಿದ್ದು, ಎರಡು ಬಲಿಷ್ಠ ತಂಡಗಳ ನಡುವಿನ ಹೈವೋಲ್ಟೇಜ್ ಪಂದ್ಯದ ದಿನಾಂಕವನ್ನು ಬದಲಾಯಿಸಿರುವುದಾಗಿ ಬಿಸಿಸಿಐ (BCCI) ಅಧಿಕೃತ ಮಾಹಿತಿ ನೀಡಿದೆ. ವಾಸ್ತವವಾಗಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (KKR vs LSG) ನಡುವಿನ ಪಂದ್ಯದ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಈ ಪಂದ್ಯದ ದಿನಾಂಕವನ್ನು ಬದಲಾಯಿಸಲಾಗಿದೆ. ಪೂರ್ವ ನಿಗದಿಯಂತೆ, ಏಪ್ರಿಲ್ 6 ರಂದು ನಡೆಯಬೇಕಿದ್ದ ಪಂದ್ಯವನ್ನು ಏಪ್ರಿಲ್ 8 ರಂದು ನಡೆಸುವುದಾಗಿ ಬಿಸಿಸಿಐ ತಿಳಿಸಿದೆ. ಅಂದರೆ ಪಂದ್ಯದ ದಿನಾಂಕವನ್ನು ಬದಲಾಯಿಸಲಾಗಿದೆಯಾದರೂ ಸ್ಥಳದಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಪಂದ್ಯದ ದಿನಾಂಕದಲ್ಲಿ ಬದಲಾವಣೆ
ಐಪಿಎಲ್ 2025 ರ 19 ನೇ ಪಂದ್ಯವು ಹಾಲಿ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ನಡೆಯಲಿದೆ. ಈ ಪಂದ್ಯ ಏಪ್ರಿಲ್ 6 ರಂದು ಕೋಲ್ಕತ್ತಾದ ತವರು ಮೈದಾನ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಬೇಕಿತ್ತು. ಆದರೆ ಏಪ್ರಿಲ್ 6 ರಂದು ರಾಮನವಮಿ ಹಬ್ಬದ ಹಿನ್ನೆಲೆಯಲ್ಲಿ, ಈ ಪಂದ್ಯದ ವೇಳಾಪಟ್ಟಿಯನ್ನು ಬದಲಾಯಿಸುವಂತೆ ಕೋಲ್ಕತ್ತಾ ಪೊಲೀಸರು ಬಿಸಿಸಿಐಗೆ ಕೇಳಿಕೊಂಡಿದ್ದರು. ನಗರದಲ್ಲಿ ನಡೆಯಲಿರುವ ಉತ್ಸವದ ಭದ್ರತಾ ವ್ಯವಸ್ಥೆಗಳನ್ನು ಉಲ್ಲೇಖಿಸಿ ಕೋಲ್ಕತ್ತಾ ಪೊಲೀಸರು ಈ ಬದಲಾವಣೆಯನ್ನು ಕೋರಿದ್ದರು. ಅಂದಿನಿಂದ, ಬಿಸಿಸಿಐ ಒಳಗೆ ಇದರ ಬಗ್ಗೆ ನಿರಂತರ ಚರ್ಚೆ ನಡೆಯುತ್ತಿತ್ತು.
🚨 News 🚨
Match No. 19 of #TATAIPL 2025 between #KKR and #LSG at Eden Gardens, Kolkata has been rescheduled from Sunday, April 6th to Tuesday, April 8th at 3.30 PM IST.
Read to know more 🔽
— IndianPremierLeague (@IPL) March 28, 2025
ಬಿಸಿಸಿಐ ನಿರ್ಧಾರ ತೆಗೆದುಕೊಳ್ಳುವ ಮೊದಲು, ಈ ಪಂದ್ಯವನ್ನು ಕೋಲ್ಕತ್ತಾದ ಬದಲು ಗುವಾಹಟಿಯಲ್ಲಿ ನಡೆಸಲಾಗುವುದು ಎಂಬ ಊಹಾಪೋಹಗಳು ಮತ್ತು ವದಂತಿಗಳು ನಿರಂತರವಾಗಿ ಹರಡುತ್ತಿದ್ದವು. ಆದರೆ ಬಿಸಿಸಿಐ, ಬಂಗಾಳ ಕ್ರಿಕೆಟ್ ಸಂಸ್ಥೆ ಮತ್ತು ಕೋಲ್ಕತ್ತಾ ಸರ್ಕಾರ ಇಂತಹ ವದಂತಿಗಳನ್ನು ತಿರಸ್ಕರಿಸಿ, ಪಂದ್ಯವನ್ನು ಕೋಲ್ಕತ್ತಾದಲ್ಲಿ ಮಾತ್ರ ನಡೆಸಲಾಗುವುದು ಎಂದು ಹೇಳಿದ್ದವು. ಶುಕ್ರವಾರ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದ ಸಂದರ್ಭದಲ್ಲಿ ಬಿಸಿಸಿಐ ತನ್ನ ನಿರ್ಧಾರವನ್ನು ಪ್ರಕಟಿಸಿದ್ದು, ಪಂದ್ಯದ ಸ್ಥಳದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೇಳಿದೆ. ಆದರೆ ಏಪ್ರಿಲ್ 6 ರ ಭಾನುವಾರದ ಬದಲು ಈ ಪಂದ್ಯವು ಏಪ್ರಿಲ್ 8 ರ ಮಂಗಳವಾರ ನಡೆಯಲಿದೆ. ಆದಾಗ್ಯೂ, ಮಂಗಳವಾರ ಈ ಪಂದ್ಯವು ಮಧ್ಯಾಹ್ನ 3.30 ಕ್ಕೆ ಪ್ರಾರಂಭವಾಗಲಿದೆ.
ಈ ಮೊದಲು ಈ ಪಂದ್ಯ ಭಾನುವಾರ ಮಧ್ಯಾಹ್ನ 3.30ಕ್ಕೆ ನಡೆಯಬೇಕಿತ್ತು. ಆದರೆ ಈಗ ಈ ಬದಲಾವಣೆಯಿಂದಾಗಿ, ಏಪ್ರಿಲ್ 6 ರ ಭಾನುವಾರದಂದು ಡಬಲ್ ಹೆಡರ್ ಬದಲಿಗೆ ಒಂದೇ ಒಂದು ಪಂದ್ಯ ನಡೆಯಲಿದೆ. ಪೂರ್ವ ನಿರ್ಧಾರಿತ ವೇಳಾಪಟ್ಟಿಯ ಪ್ರಕಾರ, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಅಹಮದಾಬಾದ್‌ನಲ್ಲಿ ಸಂಜೆ 7.30 ಕ್ಕೆ ಏಕೈಕ ಪಂದ್ಯ ನಡೆಯಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:18 pm, Fri, 28 March 25