
ಡೆಲ್ಲಿ ಕ್ಯಾಪಿಟಲ್ಸ್ (DC) ಸೇರಿದ ನಂತರ ಕನ್ನಡಿಗ ಕೆಎಲ್ ರಾಹುಲ್ (KL Rahul) ಅವರ ಆಟ ಸಂಪೂರ್ಣವಾಗಿ ಬದಲಾಗಿದೆ. ಈ ಸೀಸನ್‌ನಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿರುವ ರಾಹುಲ್, ಪ್ರತಿ ಪಂದ್ಯದಲ್ಲೂ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ಇಂದು ನಡೆದ ಗುಜರಾತ್ ಟೈಟನ್ಸ್ (GT) ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದಿದ್ದ ರಾಹುಲ್, ಈ ಸೀಸನ್‌ನಲ್ಲಿ ತಮ್ಮ ಮೊದಲ ಶತಕ ಸಿಡಿಸಿ ಮಿಂಚಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಸೀಸನ್ನ 60ನೇ ಪಂದ್ಯದಲ್ಲಿ ರಾಹುಲ್ 60 ಎಸೆತಗಳಲ್ಲಿ ಶತಕ ಪೂರೈಸಿದರು. ಇದರೊಂದಿಗೆ 3 ವರ್ಷಗಳ ನಂತರ ರಾಹುಲ್ ಐಪಿಎಲ್‌ನಲ್ಲಿ ಶತಕದ ಬರ ನೀಗಿಸಿಕೊಂಡಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಕಳಪೆಯಾಗಿತ್ತು. ಫಾಫ್ ಡು ಪ್ಲೆಸಿಸ್ ಅವರನ್ನು ಅರ್ಷದ್ ಖಾನ್ ಕೇವಲ 5 ರನ್‌ಗಳಿಗೆ ಔಟ್ ಮಾಡಿದರು. ಇದಾದ ನಂತರ, ಆರಂಭಿಕ ಆಟಗಾರನಾಗಿ ಮೈದಾನಕ್ಕೆ ಬಂದಿದ್ದ ಕೆ.ಎಲ್. ರಾಹುಲ್ ಇನ್ನಿಂಗ್ಸ್ ಜವಾಬ್ದಾರಿ ವಹಿಸಿಕೊಂಡು ಅಭಿಷೇಕ್ ಪೊರೆಲ್ ಜೊತೆಗೂಡಿ ಎರಡನೇ ವಿಕೆಟ್‌ಗೆ 90 ರನ್‌ಗಳ ಜೊತೆಯಾಟ ನಡೆಸಿದರು. ಇದೇ ವೇಳೆ ರಾಹುಲ್ 35 ಎಸೆತಗಳಲ್ಲಿ ಈ ಸೀಸನ್ನ ನಾಲ್ಕನೇ ಅರ್ಧಶತಕವನ್ನು ಪೂರೈಸಿದರು. ಇದರೊಂದಿಗೆ ಟಿ20 ಕ್ರಿಕೆಟ್‌ನಲ್ಲಿ 8 ಸಾವಿರ ರನ್‌ಗಳನ್ನು ಸಹ ಪೂರ್ಣಗೊಳಿಸಿದರು.
𝘽𝙖𝙩 𝙧𝙖𝙞𝙨𝙚𝙙. 𝙈𝙤𝙢𝙚𝙣𝙩 𝙤𝙬𝙣𝙚𝙙 🌟
KL Rahul soaks in the applause after a stunning 💯
Updates ▶ https://t.co/4flJtatmxc #TATAIPL | #DCvGT | @DelhiCapitals | @klrahul pic.twitter.com/xVuEzXaa9u
— IndianPremierLeague (@IPL) May 18, 2025
35 ಎಸೆತಗಳಲ್ಲಿ ಅರ್ಧಶತಕ ಪೂರೈಸಿದ ರಾಹುಲ್ ಇನ್ನಿಂಗ್ಸ್‌ನ 19 ನೇ ಓವರ್‌ನಲ್ಲಿ ತಮ್ಮ ಶತಕವನ್ನು ಪೂರ್ಣಗೊಳಿಸಿದರು. 60ನೇ ಎಸೆತದಲ್ಲಿ ಬೌಂಡರಿ ಬಾರಿಸುವ ಮೂಲಕ ರಾಹುಲ್ ತಮ್ಮ ಐಪಿಎಲ್ ವೃತ್ತಿಜೀವನದ 5ನೇ ಶತಕವನ್ನು ಪೂರ್ಣಗೊಳಿಸಿದರು. ರಾಹುಲ್ ಅವರ ಈ ಇನ್ನಿಂಗ್ಸ್ನಲ್ಲಿ 12 ಬೌಂಡರಿ ಮತ್ತು 4 ಸಿಕ್ಸರ್‌ಗಳು ಸೇರಿದ್ದವು. ರಾಹುಲ್ ಅವರ ಶತಕದ ವಿಶೇಷವೆಂದರೆ ಐಪಿಎಲ್ 2025 ರಲ್ಲಿ ಶತಕ ಗಳಿಸಿದ ಮೊದಲ ಬಲಗೈ ಬ್ಯಾಟ್ಸ್‌ಮನ್ ಎನಿಸಿಕೊಂಡರು. ಇದಕ್ಕೂ ಮೊದಲು, ಪ್ರಸ್ತುತ ಸೀಸನ್‌ನಲ್ಲಿ ದಾಖಲಾದ ಎಲ್ಲಾ ನಾಲ್ಕು ಶತಕಗಳು ಎಡಗೈ ಬ್ಯಾಟ್ಸ್‌ಮನ್‌ಗಳದ್ದಾಗಿದ್ದವು.
IPL 2025: ಮತ್ತೊಂದು ಗೆಲ್ಲುವ ಪಂದ್ಯ ಕೈಚೆಲ್ಲಿದ ರಾಜಸ್ಥಾನ್; ಆರ್ಸಿಬಿಗೆ ಹೆಚ್ಚಿದ ಸಂಕಷ್ಟ
ರಾಹುಲ್ 65 ಎಸೆತಗಳಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್‌ಗಳಿಂದ ಅಜೇಯ 112 ರನ್ ಬಾರಿಸಿ ಪೆವಿಲಿಯನ್ಗೆ ಮರಳಿದರು. ಈ ಶತಕದೊಂದಿಗೆ ರಾಹುಲ್ 3 ವರ್ಷಗಳ ಕಾಯುವಿಕೆಗೂ ಅಂತ್ಯ ಹಾಡಿದರು. ಇದಕ್ಕೂ ಮೊದಲು, ಐಪಿಎಲ್ 2022 ರ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿ 2 ಶತಕ ಬಾರಿಸಿದ್ದರು. ಒಟ್ಟಾರೆಯಾಗಿ, ಇದು ರಾಹುಲ್ ಅವರ ಐಪಿಎಲ್ ವೃತ್ತಿಜೀವನದಲ್ಲಿ 5 ನೇ ಶತಕವಾಗಿದೆ. ಈ ಮೂಲಕ ರಾಹುಲ್ ಐಪಿಎಲ್‌ನಲ್ಲಿ ಅತಿ ಹೆಚ್ಚು ಶತಕ ಗಳಿಸಿದವರಲ್ಲಿ ಗಿಲ್ (4) ಅವರನ್ನು ಹಿಂದಿಕ್ಕಿದರು. ಈ ಪಟ್ಟಿಯಲ್ಲಿ ರಾಹುಲ್ ಈಗ ನಾಲ್ಕನೇ ಸ್ಥಾನಕ್ಕೆ ಬಂದಿದ್ದಾರೆ. ಈ ವಿಚಾರದಲ್ಲಿ ರಾಹುಲ್‌ಗಿಂತ ವಿರಾಟ್ ಕೊಹ್ಲಿ (8), ಜೋಸ್ ಬಟ್ಲರ್ (7) ಮತ್ತು ಕ್ರಿಸ್ ಗೇಲ್ (6) ಇದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:46 pm, Sun, 18 May 25