IPL 2025: ಬ್ಯಾಟಿಂಗ್ ಕ್ರಮಾಂಕ ಮತ್ತೆ ಬದಲು; ಐಪಿಎಲ್‌ನಲ್ಲೂ ರಾಹುಲ್ ಸಾಂದರ್ಭಿಕ ಶಿಶು
KL Rahul: ಐಪಿಎಲ್ 2025ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಕೆಎಲ್ ರಾಹುಲ್ ಮತ್ತೆ ಇನ್ನಿಂಗ್ಸ್ ಆರಂಭಿಸುವ ಸಾಧ್ಯತೆ ಹೆಚ್ಚಾಗಿದೆ. ವಿದೇಶಿ ಆಟಗಾರರ ಅಲಭ್ಯತೆಯಿಂದಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ. ರಾಹುಲ್ ಈ ಸೀಸನ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ತಲುಪಲು ಉಳಿದ ಪಂದ್ಯಗಳನ್ನು ಗೆಲ್ಲಬೇಕಾಗಿದೆ. ರಾಹುಲ್ ಅವರ ಪ್ರದರ್ಶನ ತಂಡದ ಯಶಸ್ಸಿಗೆ ನಿರ್ಣಾಯಕವಾಗಿದೆ.

ಐಪಿಎಲ್ 2025 (IPL 2025) ರ ಪುನರಾರಂಭಕ್ಕೆ ಎಲ್ಲಾ ತಂಡಗಳು ತಮ್ಮ ಸಿದ್ಧತೆಗಳನ್ನು ತೀವ್ರಗೊಳಿಸಿವೆ. ಟಾಪ್ 7 ತಂಡಗಳು ಪ್ಲೇಆಫ್‌ಗೆ ಪ್ರವೇಶಿಸಲು ಸಜ್ಜಾಗಿವೆ. ಅಭ್ಯಾಸದ ಜೊತೆಗೆ, ಎಲ್ಲಾ ತಂಡಗಳು ಸಹ ಹೊಸ ಹೊಸ ಬದಲಾವಣೆಗಳೊಂದಿಗೆ ಕಣಕ್ಕಿಳಿಯುತ್ತಿವೆ. ಇದಕ್ಕೆ ಕಾರಣ ಕೆಲವು ತಂಡಗಳಿಗೆ ಎದುರಾಗಿರುವ ವಿದೇಶಿ ಆಟಗಾರರ ಅಲಭ್ಯತೆ. ಅದರ ಭಾಗವಾಗಿ ಮೇ 18 ರಂದು ಗುಜರಾತ್ ಟೈಟನ್ಸ್ ವಿರುದ್ಧದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ಕೂಡ ಸಾಕಷ್ಟು ಬದಲಾವಣೆಗಳೊಂದಿಗೆ ಕಣಕ್ಕಿಳಿಯಲಿದೆ. ಅಂದರೆ ಡೆಲ್ಲಿ ಬ್ಯಾಟಿಂಗ್ ವಿಭಾಗದಲ್ಲಿ ಬದಲಾವಣೆಗಳಾಗುತ್ತಿದ್ದು, ಕನ್ನಡಿಗ ಕೆಎಲ್ ರಾಹುಲ್ (KL Rahul) ಮತ್ತೊಮ್ಮೆ ಸಾಂದರ್ಭಿಕ ಶಿಶುವಾಗಲಿದ್ದಾರೆ.
ರಾಹುಲ್ಗೆ ಮತ್ತೆ ಓಪನಿಂಗ್ ಜವಾಬ್ದಾರಿ
ಭಾನುವಾರ ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಟಾರ್ ಬ್ಯಾಟ್ಸ್‌ಮನ್ ಕೆಎಲ್ ರಾಹುಲ್ ಇನ್ನಿಂಗ್ಸ್ ಆರಂಭಿಸುವುದನ್ನು ಕಾಣಬಹುದು. ಇದಕ್ಕೂ ಮೊದಲು ರಾಹುಲ್ ಕಳೆದ ಸೀಸನ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಪರ ಆರಂಭಿಕರಾಗಿ ಆಡುತ್ತಿದ್ದರು, ಆದರೆ ಈ ಸೀಸನ್‌ನಲ್ಲಿ ಅವರ ಬ್ಯಾಟಿಂಗ್ ಕ್ರಮಾಂಕ ಹಲವು ಬಾರಿ ಬದಲಾಗಿದೆ. ಇಲ್ಲಿಯವರೆಗೆ ಆಡಿರುವ 10 ಪಂದ್ಯಗಳಲ್ಲಿ, ಕೆಎಲ್ ರಾಹುಲ್ ಒಮ್ಮೆ ಇನ್ನಿಂಗ್ಸ್ ಆರಂಭಿಸಿದ್ದು, ಎರಡು ಬಾರಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ್ದಾರೆ ಮತ್ತು ಏಳು ಪಂದ್ಯಗಳಲ್ಲಿ ನಾಲ್ಕನೇ ಸ್ಥಾನದಲ್ಲಿ ಬ್ಯಾಟ್ ಬೀಸಿದ್ದಾರೆ.
ಈ ಸೀಸನ್‌ನಲ್ಲಿ ರಾಹುಲ್ ಮಧ್ಯಮ ಕ್ರಮಾಂಕದಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಮತ್ತೊಮ್ಮೆ ತಂಡದ ಆಡಳಿತವು ಅವರ ಬ್ಯಾಟಿಂಗ್ ಕ್ರಮಾಂಕವನ್ನು ಬದಲಾಯಿಸುವ ಸಾಧ್ಯತೆಗಳಿವೆ. ಇದಕ್ಕೆ ಕಾರಣ ಡಿಸಿ ಓಪನರ್ ಜ್ಯಾಕ್ ಫ್ರೇಸರ್ ಮೆಕ್‌ಗರ್ಕ್ ಭಾರತಕ್ಕೆ ಬರದಿರುವುದು. ವೈಯಕ್ತಿಕ ಕಾರಣಗಳಿಂದಾಗಿ ಅವರು ಈ ಲೀಗ್‌ನ ಮುಂಬರುವ ಪಂದ್ಯಗಳಲ್ಲಿ ಆಡುವುದಿಲ್ಲ. ಇದರ ಜೊತೆಗೆ ಆರಂಭಿಕರಾಗಿ ಆಡುತ್ತಿರುವ ಫಾಫ್ ಡು ಪ್ಲೆಸಿಸ್ ಈ ಪಂದ್ಯಕ್ಕೆ ಲಭ್ಯರಿರುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ರಾಹುಲ್ ಮತ್ತೆ ಸಮಸ್ಯೆ ನಿವಾರಕನಾಗಬೇಕಾಗಬಹುದು. ಈ ಸೀಸನ್‌ನಲ್ಲಿ ಆಡಿರುವ 10 ಪಂದ್ಯಗಳ 10 ಇನ್ನಿಂಗ್ಸ್‌ಗಳಲ್ಲಿ ರಾಹುಲ್ 47.62 ಸರಾಸರಿಯಲ್ಲಿ 381 ರನ್ ಗಳಿಸಿದ್ದಾರೆ, ಇದರಲ್ಲಿ ಮೂರು ಅರ್ಧಶತಕಗಳು ಸೇರಿವೆ.
ಪ್ರಸಿದ್ಧ ಕಂಪನಿಗೆ ಕನ್ನಡಿಗ ಕೆಎಲ್ ರಾಹುಲ್ ರಾಯಭಾರಿ
ಡಿಸಿಗೆ ಪ್ರತಿ ಪಂದ್ಯ ಗೆಲ್ಲುವುದು ಮುಖ್ಯ
ಈ ಸೀಸನ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತವಾಗಿ ಆರಂಭಿಸಿತು, ಆದರೆ ಆ ನಂತರ ತಂಡವು ಎಡವಿತು. ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಸೋತಿರುವ ಡೆಲ್ಲಿ ಕ್ಯಾಪಿಟಲ್ಸ್ ಇದುವರೆಗೆ 11 ಪಂದ್ಯಗಳನ್ನು ಆಡಿದ್ದು, 6 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತಿದೆ. ಒಂದು ಪಂದ್ಯ ರದ್ದಾಗಿದ್ದು, ಒಟ್ಟು 13 ಅಂಕಗಳ ಜೊತೆಗೆ ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಹೀಗಾಗಿ ಪ್ಲೇಆಫ್ ತಲುಪಲು ಡೆಲ್ಲಿ ತಂಡ ಯಾವುದೇ ಬೆಲೆಯಲ್ಲಾದರೂ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಬೇಕಾಗುತ್ತದೆ. ಒಂದು ವೇಳೆ ತಂಡವು ಒಂದೇ ಒಂದು ಪಂದ್ಯವನ್ನು ಸೋತರೂ, ಪ್ಲೇಆಫ್ ತಲುಪುವ ಅದರ ಆಸೆ ಮಸುಕಾಗಬಹುದು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
