IPL 2025 Final: ಚಾಂಪಿಯನ್ ಆರ್​ಸಿಬಿಗೆ ಸಿಕ್ಕಿದ್ದು ಎಷ್ಟು ಕೋಟಿ? ಪಂಜಾಬ್ ಪಾಲಾಗಿದ್ದು ಎಷ್ಟು?

IPL 2025 prize money : ಐಪಿಎಲ್ 2025 ರ ಫೈನಲ್‌ನಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್‌ಗಳಿಂದ ಸೋಲಿಸಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಚೊಚ್ಚಲ ಟ್ರೋಫಿ ಎತ್ತಿ ಹಿಡಿದಿರುವ ಆರ್‌ಸಿಬಿಗೆ ಆಯೋಜಕರಿಂದ 20 ಕೋಟಿ ರೂ.ಬಹುಮಾನ ಸಿಕ್ಕರೆ, ರನ್ನರ್ ಅಪ್ ಪಂಜಾಬ್‌ಗೆ 13 ಕೋಟಿ ರೂ. ಬಹುಮಾನ ಸಿಕ್ಕಿದೆ.

IPL 2025 Final: ಚಾಂಪಿಯನ್ ಆರ್​ಸಿಬಿಗೆ ಸಿಕ್ಕಿದ್ದು ಎಷ್ಟು ಕೋಟಿ? ಪಂಜಾಬ್ ಪಾಲಾಗಿದ್ದು ಎಷ್ಟು?
Virat Kohli

Updated on: Jun 04, 2025 | 12:35 AM

ಐಪಿಎಲ್ 2025 (IPL 2025) ರ ಫೈನಲ್‌ನಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ (RCB vs PBKS) ತಂಡವನ್ನು 6 ರನ್‌ಗಳಿಂದ ಸೋಲಿಸಿ ಚೊಚ್ಚಲ ಐಪಿಎಲ್ ಟ್ರೋಫಿಯನ್ನು ಎತ್ತಿಹಿಡಿದೆ. ಈ ಪ್ರಶಸ್ತಿ ಸುತ್ತಿನ ಹೋರಾಟದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 190 ರನ್‌ ಕಲೆಹಾಕಿತು. ಇದಕ್ಕೆ ಪ್ರತಿಕ್ರಿಯೆಯಾಗಿ ಗುರಿ ಬೆನ್ನಟ್ಟಿದ ಪಂಜಾಬ್ ತಂಡ ಕೇವಲ 184 ರನ್‌ಗಳಿಸಲಷ್ಟೇ ಶಕ್ತವಾಯಿತು. ಇದರ ಪರಿಣಾಮವಾಗಿ ಆರ್‌ಸಿಬಿ ಮೊದಲ ಬಾರಿಗೆ ಐಪಿಎಲ್ ಗೆಲ್ಲುವ ಸೌಭಾಗ್ಯವನ್ನು ಪಡೆದುಕೊಂಡಿತು. ಐಪಿಎಲ್‌ನಲ್ಲಿ ಈ ಐತಿಹಾಸಿಕ ಗೆಲುವಿನೊಂದಿಗೆ, ಆರ್‌ಸಿಬಿಯ 17 ವರ್ಷಗಳ ಟ್ರೋಫಿ ಬರ ಕೊನೆಗೊಂಡಿದೆ. ಐಪಿಎಲ್ ಟ್ರೋಫಿ ಗೆದ್ದ ಆರ್‌ಸಿಬಿಗೆ ಎಷ್ಟು ಹಣ ಸಿಕ್ಕಿತು ಎಂಬುದನ್ನು ನೋಡುವುದಾದರೆ..

ಆರ್‌ಸಿಬಿಗೆ ಸಿಕ್ಕಿದ್ದೆಷ್ಟು?ಪಂಜಾಬ್​ಗೆ ಎಷ್ಟು?

ಐಪಿಎಲ್ 2025 ಟ್ರೋಫಿ ಗೆದ್ದ ನಂತರ, ಆರ್‌ಸಿಬಿಗೆ ಬಹುಮಾನದ ಮೊತ್ತವಾಗಿ 20 ಕೋಟಿ ರೂ. ಸಿಗಲಿದೆ. ಮತ್ತೊಂದೆಡೆ, ರನ್ನರ್ ಅಪ್ ಪಂಜಾಬ್ ಕಿಂಗ್ಸ್ ತಂಡಕ್ಕೂ 13 ಕೋಟಿ ರೂ.ಗಳು ಬಹುಮಾನವಾಗಿ ಸಿಗಲಿದೆ. ಹಾಗೆಯೇ ಕ್ವಾಲಿಫೈಯರ್ ಆಡಿದ ಮುಂಬೈ ಇಂಡಿಯನ್ಸ್ ತಂಡಕ್ಕೆ 7 ಕೋಟಿ ರೂ ಸಿಕ್ಕರೆ, ಎಲಿಮಿನೇಟರ್ ಆಡಿದ ಗುಜರಾತ್ ಟೈಟನ್ಸ್ ತಂಡಕ್ಕೆ 6.5 ಕೋಟಿ ರೂ. ಬಹುಮಾನ ಸಿಕ್ಕಿದೆ.

ಆರ್‌ಸಿಬಿ ಗೆಲುವಿನ ಹೀರೋ ಯಾರು?

ಈ ಟೂರ್ನಿಯಲ್ಲಿ ಆರ್‌ಸಿಬಿ ಗೆಲುವಿನ ಕೀರ್ತಿ ಪ್ರತಿಯೊಬ್ಬ ಆಟಗಾರನಿಗೂ ಸಲ್ಲುತ್ತದೆ. ಇದಕ್ಕೆ ಪೂರಕವಾಗಿ ತಂಡದ 9 ವಿಭಿನ್ನ ಆಟಗಾರರು ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೆ ಈ ಸೀಸನ್‌ನಲ್ಲಿ ತವರಿನಲ್ಲಿ ಆಡಿದ ಎಲ್ಲಾ ಪಂದ್ಯಗಳನ್ನು ಗೆದ್ದ ಆರ್‌ಸಿಬಿ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲ ತಂಡ ಎಂಬ ದಾಖಲೆ ಬರೆದಿದೆ. ಆರ್‌ಸಿಬಿಯ ಗೆಲುವಿನಲ್ಲಿ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೂಡ ದೊಡ್ಡ ಕೊಡುಗೆ ನೀಡಿದ್ದು, ಆರ್​ಸಿಬಿ ಪರ ಅತಿ ಹೆಚ್ಚು ಅಂದರೆ 657 ರನ್ ಗಳಿಸಿದ ಆಟಗಾರನೆನಿಸಿಕೊಂಡಿದ್ದಾರೆ. ಇದು ಮಾತ್ರವಲ್ಲದೆ ವಿರಾಟ್ ಕೊಹ್ಲಿ ಈ ಸೀಸನ್‌ನಲ್ಲಿ 8 ಅರ್ಧಶತಕಗಳನ್ನು ಬಾರಿಸಿದ್ದಾರೆ.

IPL 2025 Final: ನನ್ನ ಹೃದಯ, ನನ್ನ ಆತ್ಮ…; ಆರ್​​ಸಿಬಿ ಗೆದ್ದ ಬಳಿಕ ಭಾವುಕರಾದ ಕೊಹ್ಲಿ ಹೇಳಿದ್ದೇನು?

ವಿರಾಟ್ ಕೊಹ್ಲಿಯಂತೆಯೇ ತಂಡದ ಪರ ಅಮೋಘ ಪ್ರದರ್ಶನ ನೀಡಿದ ಮತ್ತೊಬ್ಬ ಆರಂಭಿಕ ಫಿಲ್ ಸಾಲ್ಟ್ 403 ರನ್ ಗಳಿಸಿದರೆ, ನಾಯಕ ರಜತ್ ಪಾಟಿದಾರ್ 312, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಿತೇಶ್ ಶರ್ಮಾ 261 ರನ್ ಗಳಿಸಿದ್ದಾರೆ. ಇನ್ನು ಬೌಲಿಂಗ್ ಬಗ್ಗೆ ಮಾತನಾಡುವುದಾದರೆ.. ಅನುಭವಿ ವೇಗಿ ಹೇಜಲ್‌ವುಡ್ ಅತಿ ಹೆಚ್ಚು 22 ವಿಕೆಟ್‌ಗಳನ್ನು ಪಡೆದರೆ ಕೃನಾಲ್ ಪಾಂಡ್ಯ ಮತ್ತು ಭುವನೇಶ್ವರ ಕುಮಾರ್ ತಲಾ 17 ವಿಕೆಟ್‌ಗಳನ್ನು ಪಡೆದರು. ಮತ್ತೊಬ್ಬ ವೇಗಿ ಯಶ್ ದಯಾಳ್ 13 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:31 am, Wed, 4 June 25