ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧ ಗುಜರಾತ್ ಟೈಟಾನ್ಸ್ ತಂಡವು ಜಯಭೇರಿ ಬಾರಿಸಿದೆ. ಈ ಗೆಲುವಿನ ರೂವಾರಿಗಳೆಂದರೆ ಮೊಹಮ್ಮದ್ ಸಿರಾಜ್ ಹಾಗೂ ಜೋಸ್ ಬಟ್ಲರ್ (Jos Buttler). ಬೌಲಿಂಗ್ನಲ್ಲಿ ಸಿರಾಜ್ ಪರಾಕ್ರಮ ಮರೆದರೆ ಬ್ಯಾಟಿಂಗ್ನಲ್ಲಿ ಜೋಸ್ ಬಟ್ಲರ್ ಜೋಶ್ ತೋರಿಸಿದ್ದರು. ವಿಶೇಷ ಎಂದರೆ ಆರ್ಸಿಬಿ ವಿರುದ್ಧ ಜೋಸ್ ಬಟ್ಲರ್ ಅಬ್ಬರಿಸುತ್ತಿರುವುದು ಇದೇ ಮೊದಲೇನಲ್ಲ.
ಈ ಹಿಂದೆ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬೌಲರ್ಗಳ ಬೆಂಡೆತ್ತಿದ ಇತಿಹಾಸ ಜೋಸ್ ಬಟ್ಲರ್ ಹಿಂದಿದೆ. ಹೀಗೆ ಬೆಂಡೆತ್ತುವ ಮೂಲಕ ಈವರೆಗೆ ಬಟ್ಲರ್ 589 ರನ್ ಕಲೆಹಾಕಿದ್ದಾರೆ.
RCB ವಿರುದ್ಧ ಜೋಸ್ ಬಟ್ಲರ್ ಈವರೆಗೆ 17 ಇನಿಂಗ್ಸ್ ಆಡಿದ್ದಾರೆ. ಈ ವೇಳೆ 382 ಎಸೆತಗಳನ್ನು ಎದುರಿಸಿ ಬರೋಬ್ಬರಿ 589 ರನ್ ಬಾರಿಸಿದ್ದಾರೆ. ಅಂದರೆ ಆರ್ಸಿಬಿ ವಿರುದ್ಧ ಜೋಸ್ ಬಟ್ಲರ್ 53.20ರ ಸರಾಸರಿಯಲ್ಲಿ ರನ್ ಕಲೆಹಾಕುತ್ತಾ ಬಂದಿದ್ದಾರೆ.
ಇನ್ನು ಆರ್ಸಿಬಿ ವಿರುದ್ಧದ 17 ಇನಿಂಗ್ಸ್ಗಳಲ್ಲಿ ಜೋಸ್ ಬಟ್ಲರ್ 154.18ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿದ್ದಾರೆ. ಈ ವೇಳೆ ಬಟ್ಲರ್ ಬ್ಯಾಟ್ನಿಂದ ಸಿಡಿದಿರುವ ಸಿಕ್ಸರ್ಗಳ ಸಂಖ್ಯೆ 32. ಹಾಗೆಯೇ 48 ಫೋರ್ಗಳನ್ನು ಸಹ ಬಾರಿಸಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಜೋಸ್ ಬಟ್ಲರ್ ಈವರೆಗೆ 2 ಭರ್ಜರಿ ಶತಕ ಹಾಗೂ 3 ಅರ್ಧಶತಕಗಳನ್ನು ಸಹ ಬಾರಿಸಿದ್ದಾರೆ.
ಈ ಮೂಲಕ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ಬ್ಯಾಟರ್ಗಳಲ್ಲಿ ಒಬ್ಬರಾಗಿ ಜೋಸ್ ಬಟ್ಲರ್ ಕಾಣಿಸಿಕೊಂಡಿದ್ದಾರೆ.
The Curvv Super Striker of the Match between Royal Challengers Bengaluru and Gujarat Titans goes to Jos Buttler.#TATAIPL | #RCBvGT | #CurvvSuperStriker | @TataMotors_Cars pic.twitter.com/PX5txS8S5g
— IndianPremierLeague (@IPL) April 2, 2025
ಇನ್ನು ಐಪಿಎಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅತ್ಯಧಿಕ ರನ್ ಕಲೆಹಾಕಿದ ದಾಖಲೆ ಡೇವಿಡ್ ವಾರ್ನರ್ ಹೆಸರಿನಲ್ಲಿದೆ. ಆರ್ಸಿಬಿ ವಿರುದ್ಧ 24 ಇನಿಂಗ್ಸ್ ಆಡಿರುವ ವಾರ್ನರ್ 605 ಎಸೆತಗಳನ್ನು ಎದುರಿಸಿ 985 ರನ್ ಬಾರಿಸಿದ್ದಾರೆ.
ಈ ವೇಳೆ ಡೇವಿಡ್ ವಾರ್ನರ್ ಬ್ಯಾಟ್ನಿಂದ 9 ಅರ್ಧಶತಕಗಳು ಹಾಗೂ 2 ಶತಕಗಳು ಮೂಡಿಬಂದಿವೆ. ಅದರಲ್ಲೂ ಆರ್ಸಿಬಿ ವಿರುದ್ಧ ಐಪಿಎಲ್ನಲ್ಲಿ 50 ಕ್ಕಿಂತ ಹೆಚ್ಚು ಸಿಕ್ಸ್ ಸಿಡಿಸಿದ ಏಕೈಕ ಬ್ಯಾಟರ್ ಆಗಿ ಡೇವಿಡ್ ವಾರ್ನರ್ ಗುರುತಿಸಿಕೊಂಡಿದ್ದಾರೆ.
ಇದನ್ನೂ ಓದಿ: IPL 2025: ಹೀನಾಯ ಅತ್ಯಂತ ಹೀನಾಯ ದಾಖಲೆ ಬರೆದ RCB
ಡೇವಿಡ್ ವಾರ್ನರ್ 24 ಇನಿಂಗ್ಸ್ಗಳಿಂದ 55 ಸಿಕ್ಸ್ ಸಿಡಿಸಿದರೆ, ಇದೀಗ ಜೋಸ್ ಬಟ್ಲರ್ 32 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಈ ಮೂಲಕ ವಾರ್ನರ್ ಬಳಿಕ ಬಟ್ಲರ್ ಆರ್ಸಿಬಿ ಬೌಲರ್ಗಳನ್ನು ಬೆಂಡೆತ್ತುವ ಕಾಯಕಕ್ಕೆ ಕೈಹಾಕಿದ್ದಾರೆ.