Sign In

By signing in or creating an account, you agree with Associated Broadcasting Company's Terms & Conditions and Privacy Policy.

Rohit Sharma: ಈಗ ನಾನು ನಾಯಕನಲ್ಲ, ಎಲ್ಲವೂ ಬದಲಾಗಿವೆ: ರೋಹಿತ್ ಶರ್ಮಾ

IPL 2025 Mumbai Indians: ಈ ಬಾರಿಯ ಐಪಿಎಲ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡವು ಈವರೆಗೆ ಮೂರು ಪಂದ್ಯಗಳನ್ನಾಡಿದೆ. ಈ ವೇಳೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಗುಜರಾತ್ ಟೈಟಾನ್ಸ್ ವಿರುದ್ಧ ಸೋತಿರುವ ಮುಂಬೈ ಇಂಡಿಯನ್ಸ್ ತಂಡವು ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಗೆಲುವು ದಾಖಲಿಸಿದೆ. ಇನ್ನು ಮುಂಬೈ ಇಂಡಿಯನ್ಸ್ ತನ್ನ ನಾಲ್ಕನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.

Rohit Sharma: ಈಗ ನಾನು ನಾಯಕನಲ್ಲ, ಎಲ್ಲವೂ ಬದಲಾಗಿವೆ: ರೋಹಿತ್ ಶರ್ಮಾ
Rohit Sharma
Follow us
ಝಾಹಿರ್ ಯೂಸುಫ್
|

Updated on: Apr 03, 2025 | 12:09 PM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದ ಅತ್ಯಂತ ಯಶಸ್ವಿ ನಾಯಕರಲ್ಲಿ ರೋಹಿತ್ ಶರ್ಮಾ (Rohit Sharma) ಕೂಡ ಒಬ್ಬರು. ಮುಂಬೈ ಇಂಡಿಯನ್ಸ್ ತಂಡವನ್ನು 5 ಬಾರಿ ಚಾಂಪಿಯನ್ ಪಟ್ಟಕ್ಕೇರಿಸಿದ ಹಿಟ್​ಮ್ಯಾನ್ ಈಗ ತಂಡದಲ್ಲಿ ಕೇವಲ ಬ್ಯಾಟರ್​ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಕಳೆದ ಮೂರು ಪಂದ್ಯಗಳಲ್ಲಿ ಎರಡು ಬಾರಿ ಅವರನ್ನು ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಸಲಾಗಿತ್ತು. ಇದಾಗ್ಯೂ ಮುಂಬೈ ಇಂಡಿಯನ್ಸ್ ಕಡೆಯಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ ಎಂಬುದೇ ಸತ್ಯ. ಮೊದಲೆರಡು ಪಂದ್ಯಗಳಲ್ಲಿ ಹೀನಾಯವಾಗಿ ಸೋತಿದ್ದ ಮುಂಬೈ ಪಡೆ ಮೂರನೇ ಪಂದ್ಯದಲ್ಲಿ ಮಾತ್ರ ಗೆಲುವು ದಾಖಲಿಸಿದೆ. ಅದು ಸಹ ತವರು ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮಾತ್ರ.

ಇದರ ನಡುವೆ ರೋಹಿತ್ ಶರ್ಮಾ ಅವರಿಗಿರುವ ನಾಯಕತ್ವದ ಅನುಭವವನ್ನು ಮುಂಬೈ ಇಂಡಿಯನ್ಸ್ ತಂಡ ಬಳಸಿಕೊಳ್ಳುತ್ತಿಲ್ಲವಾ ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ. ಏಕೆಂದರೆ ರೋಹಿತ್ ಶರ್ಮಾ ಅವರನ್ನು ಬ್ಯಾಟಿಂಗ್​ಗಾಗಿ ಮಾತ್ರ ಕಣಕ್ಕಿಳಿಸಲಾಗುತ್ತಿದೆ. ಇಂತಹದೊಂದು ನಡೆಯ ನಡುವೆ ರೋಹಿತ್ ಶರ್ಮಾ ನೀಡಿರುವ ಸಂದರ್ಶನವು ಇದೀಗ ಭಾರೀ ವೈರಲ್ ಆಗಿದೆ.

ಜಿಯೋಸ್ಟಾರ್‌ ಜೊತೆ ಮಾತನಾಡಿದ ರೋಹಿತ್ ಶರ್ಮಾ, ನಾನು ಐಪಿಎಲ್​ನಲ್ಲಿ ಆಡಲು ಆರಂಭಿಸಿದಾಗಿನಿಂದ ಬಹಳಷ್ಟು ವಿಷಯಗಳು ಬದಲಾಗಿದೆ. ನಾನು ಆಗ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದೆ. ಈಗ ಓಪನಿಂಗ್ ಮಾಡುತ್ತೇನೆ.

ಇದನ್ನೂ ಓದಿ
Image
ಯುಜ್ವೇಂದ್ರ ಚಹಲ್-ಧನಶ್ರೀ ವರ್ಮಾ ವಿಚ್ಛೇದನಕ್ಕೆ ಇದುವೇ ಅಸಲಿ ಕಾರಣ
Image
RCB ದಾಖಲೆ ಧೂಳೀಪಟ ಮಾಡಿದ ಡೆಲ್ಲಿ ಬಾಯ್ಸ್
Image
David Warner: ಡೇವಿಡ್ ವಾರ್ನರ್​ಗೆ ಒಲಿದ ನಾಯಕತ್ವ..!
Image
VIDEO: ಎಂಎಸ್ ಧೋನಿ ಎಂಟ್ರಿಗೆ ಕಿವಿ ಮುಚ್ಚಿ ಕೂತ ನೀತಾ ಅಂಬಾನಿ

ಅಲ್ಲದೆ ನಾನು ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿ ಕಣಕ್ಕಿಳಿಯುತ್ತಿದ್ದೆ. ಆದರೀಗ ಕೇವಲ ಆಟಗಾರ ಅಷ್ಟೇ. ಎಲ್ಲವೂ ಬದಲಾಗಿದೆ. ಈ ಬದಲಾವಣೆಯ ಹೊರತಾಗಿಯೂ ನನ್ನ ಮನಸ್ಥಿತಿಯು ಮೊದಲಿನಂತೇ ಇದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ನನ್ನೊಂದಿಗೆ ಚಾಂಪಿಯನ್​ಶಿಪ್ ಗೆದ್ದಂತಹ ತಂಡದ ಸದಸ್ಯರು ಈಗ ಕೋಚಿಂಗ್ ಪಾತ್ರಗಳಲ್ಲಿದ್ದಾರೆ. ಅವರ ಪಾತ್ರಗಳು ಬದಲಾಗಿವೆ. ನನ್ನ ಪಾತ್ರ ಕೂಡ ಬಹಳಷ್ಟು ಬದಲಾಗಿವೆ. ಆದರೆ ನಮ್ಮೆಲ್ಲರ ಮನಸ್ಥಿತಿ ಒಂದೇ ಆಗಿರುತ್ತದೆ. ಈ ತಂಡಕ್ಕಾಗಿ ನಾನು ಏನು ಮಾಡಬೇಕೆಂದಿದ್ದೇನೆ ಎಂಬುದರಲ್ಲಿ ಯಾವುದೇ ಬದಲಾವಣೆಯಾಗಿಲ್ಲ.

ನನ್ನ ಗುರಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಮ್ಯಾಚ್ ಗೆಲ್ಲಿಸಿಕೊಡುವುದು. ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿ ಟ್ರೋಫಿ ಎತ್ತಿ ಹಿಡಿಯುವುದು. ಇಂತಹ ಪ್ರದರ್ಶನಕ್ಕೆ ಮುಂಬೈ ಇಂಡಿಯನ್ಸ್ ತಂಡ ಹೆಸರುವಾಸಿ. ನಾವು ಹಲವು ವರ್ಷ ಟ್ರೋಫಿಗಳನ್ನು ಗೆದ್ದಿದ್ದೇವೆ ಮತ್ತು ಯಾರೂ ನಂಬದ ಸಂದರ್ಭಗಳಲ್ಲಿ ಪಂದ್ಯಗಳನ್ನು ತಿರುಗಿಸಿ ಗೆದ್ದಿದ್ದೀವೆ. ಇಂತಹ ಪ್ರದರ್ಶನದಿಂದಲೇ ಇಂದಿಗೂ ಮುಂಬೈ ಇಂಡಿಯನ್ಸ್ ಫೇಮಸ್ ಎಂಬುದು ನನ್ನ ಭಾವನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಪ್ರಸ್ತುತ ತಂಡದಲ್ಲಿ ಟ್ರೆಂಟ್ ಬೌಲ್ಟ್ ನಂತಹ ಅನುಭವಿ ಆಟಗಾರರಿದ್ದಾರೆ. ನ್ಯೂಝಿಲೆಂಡ್ ನಾಯಕ ಮಿಚೆಲ್ ಸ್ಯಾಂಟ್ನರ್ ಕೂಡ ನಮ್ಮ ತಂಡದಲ್ಲಿದ್ದಾರೆ. ವಿಲ್ ಜಾಕ್ಸ್ ಮತ್ತು ರೀಸ್ ಟಾಪ್ಲಿಯಂತಹ ಆಟಗಾರರು, ರಯಾನ್ ರಿಕಲ್ಟನ್​ನಂತಹ ಯುವ ಆಟಗಾರರು ಕೂಡ ನಮ್ಮ ಬಳಗದಲ್ಲಿದ್ದಾರೆ.

ಈ ಆಟಗಾರರಲ್ಲಿ ಪ್ರತಿಯೊಬ್ಬರು ವಿಭಿನ್ನತೆಯನ್ನು ಹೊಂದಿದ್ದಾರೆ. ಅಲ್ಲದೆ ಅವರು ದೊಡ್ಡ ಮಟ್ಟದಲ್ಲಿ ಪ್ರಭಾವ ಬೀರಬಲ್ಲ ಆಟಗಾರರು. ಇವರೊಂದಿಗೆ ನಮ್ಮಲ್ಲಿ ಉತ್ತಮ ಸಾಮರ್ಥ್ಯವನ್ನು ಹೊಂದಿರುವ ಅನೇಕ ಯುವ ಭಾರತೀಯ ಆಟಗಾರರಿದ್ದಾರೆ. ನಾನು ಅವರೊಂದಿಗೆ ಆಡುವುದನ್ನು ಎದುರು ನೋಡುತ್ತಿದ್ದೇನೆ ಎಂದರು.

ಇದನ್ನೂ ಓದಿ: IPL 2025: ಹೀನಾಯ ಅತ್ಯಂತ ಹೀನಾಯ ದಾಖಲೆ ಬರೆದ RCB

ಅಷ್ಟೇ ಅಲ್ಲದೆ ಈ ಬಾರಿಯ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಬೇಕೆಂದಿದ್ದೇನೆ. ಈ ಪ್ರದರ್ಶನದೊಂದಿಗೆ ಐಪಿಎಲ್ ಟ್ರೋಫಿಯನ್ನು ಗೆದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೆ ಕೀರ್ತಿ ತರುವುದು ನನ್ನ ಗುರಿ ಎಂದು ರೋಹಿತ್ ಶರ್ಮಾ ಇದೇ ವೇಳೆ ತಿಳಿಸಿದ್ದಾರೆ.