IPL 2025: ಹರಾಜಿನಲ್ಲಿ ಪಡೆದ ಹಣದ ಜೊತೆಗೆ ಪ್ರತಿ ಪಂದ್ಯಕ್ಕೂ 7.5 ಲಕ್ಷ ರೂ. ವೇತನ..!

|

Updated on: Mar 20, 2025 | 8:03 PM

BCCI's IPL 2025 Bonanza: ಬಿಸಿಸಿಐ 2025ರ ಐಪಿಎಲ್‌ನಲ್ಲಿ ಆಟಗಾರರಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂಪಾಯಿಗಳನ್ನು ಪಂದ್ಯ ಶುಲ್ಕವಾಗಿ ನೀಡುವುದಾಗಿ ಘೋಷಿಸಿದೆ. ಇದು ಹರಾಜಿನಲ್ಲಿ ಪಡೆದ ಮೊತ್ತಕ್ಕೆ ಹೆಚ್ಚುವರಿಯಾಗಿದೆ. ಹರಾಜಿನಲ್ಲಿ ಕಡಿಮೆ ಬೆಲೆಗೆ ಖರೀದಿಸಲ್ಪಟ್ಟ ಆಟಗಾರರಿಗೆ ಇದು ಉಪಯುಕ್ತವಾಗಲಿದೆ. ಇದರ ಜೊತೆಗೆ ರಾತ್ರಿ ಪಂದ್ಯಗಳಲ್ಲಿ ಎರಡು ಹೊಸ ಚೆಂಡುಗಳು ಮತ್ತು ಬೌಲರ್‌ಗಳಿಗೆ ಎಂಜಲು ಲೇಪನ ಮಾಡಲು ಅನುಮತಿ ಕೂಡ ನೀಡಲಾಗಿದೆ.

IPL 2025: ಹರಾಜಿನಲ್ಲಿ ಪಡೆದ ಹಣದ ಜೊತೆಗೆ ಪ್ರತಿ ಪಂದ್ಯಕ್ಕೂ 7.5 ಲಕ್ಷ ರೂ. ವೇತನ..!
ಆರ್​ಸಿಬಿ ತಂಡ
Follow us on

2025 ರ ಐಪಿಎಲ್ (IPL 2025), ಪ್ರತಿಯೊಬ್ಬ ಆಟಗಾರನ ಮೇಲೂ ಹಣದ ಸುರಿ ಮಳೆ ಸುರಿಸುವ ಆವೃತ್ತಿಯಾಗಿದೆ. ಈ ಮೊದಲು ನಡೆದಿದ್ದ ಮೆಗಾ ಹರಾಜಿನಲ್ಲಿ ಪ್ರತಿಯೊಬ್ಬ ಆಟಗಾರನಿಗೂ ನಿರೀಕ್ಷೆಗು ಮೀರಿದ ಹಣ ಸಿಕ್ಕಿತ್ತು. ಇದೀಗ ಆಟಗಾರರ ಖುಷಿಯನ್ನು ದುಪ್ಪಟ್ಟಾಗಿಸಿರುವ ಬಿಸಿಸಿಐ (BCCI), ಪ್ರತಿಯೊಬ್ಬ ಆಟಗಾರನಿಗೆ ಪ್ರತಿ ಪಂದ್ಯಕ್ಕೆ 7.5 ಲಕ್ಷ ರೂ. (ಸುಮಾರು US$9000) ಪಂದ್ಯ ಶುಲ್ಕವನ್ನು ನೀಡುವುದಾಗಿ ಘೋಷಿಸಿದೆ. ಇದರರ್ಥ ಆಟಗಾರರಿಗೆ ಫ್ರಾಂಚೈಸಿಯು ಪ್ರತಿ ಪಂದ್ಯಕ್ಕೂ ಅವರ ಒಪ್ಪಂದದ ಮೊತ್ತಕ್ಕಿಂತ ಹೆಚ್ಚಿನ ಹಣವನ್ನು ಹೆಚ್ಚುವರಿಯಾಗಿ ಪಾವತಿಸುತ್ತದೆ. ಇದಕ್ಕಾಗಿ ಈ ಸೀಸನ್​ನಲ್ಲಿ ಪ್ರತಿ ತಂಡವು ಪಂದ್ಯ ಶುಲ್ಕವಾಗಿ 12.60 ಕೋಟಿ ರೂ. (ಸುಮಾರು 1 ಮಿಲಿಯನ್ ಅಮೆರಿಕನ್ ಡಾಲರ್) ಹಣವನ್ನು ಬಿಸಿಸಿಐನಿಂದ ಪಡೆಯಲಿದೆ.

ಈ ಆಟಗಾರರಿಗೆ ಮಾತ್ರ ಪಂದ್ಯ ಶುಲ್ಕ

ಬಿಸಿಸಿಐನಿಂದ ಇದೀಗ ಸಿಗುತ್ತಿರುವ 12.60 ಕೋಟಿ ರೂ. ಹಣವು ಪ್ರತಿ ಫ್ರಾಂಚೈಸಿಯ ಹರಾಜು ಬಜೆಟ್ (ಹರಾಜು ಪರ್ಸ್) ನಿಂದ ಪ್ರತ್ಯೇಕವಾಗಿರುತ್ತದೆ. ಇನ್ನು ಈ12.60 ಕೋಟಿ ರೂ.ಗಳನ್ನು ಹೇಗೆ ಹಂಚಲಾಗುತ್ತದೆ ಎಂಬುದನ್ನು ನೋಡುವುದಾದರೆ.. ತಂಡದ ಪಟ್ಟಿಯಲ್ಲಿ ಸೇರಿಸಲಾದ 12 ಆಟಗಾರರಿಗೆ ಪ್ರತಿ ಪಂದ್ಯಕ್ಕೆ ಹೆಚ್ಚುವರಿಯಾಗಿ 7.5 ಲಕ್ಷ ರೂ.ಗಳನ್ನು ನೀಡಲಾಗುತ್ತದೆ. ಇದರರ್ಥ ತಂಡವು ಪ್ರತಿ ಪಂದ್ಯಕ್ಕೆ 90 ಲಕ್ಷ ರೂ. (12 ಆಟಗಾರರು x 7.5 ಲಕ್ಷ ರೂ.) ಖರ್ಚು ಮಾಡಬೇಕಾಗುತ್ತದೆ. ಇದನ್ನು 14 ಪಂದ್ಯಗಳಿಂದ ಗುಣಿಸಿದರೆ, ಈ ಮೊತ್ತವು 12.60 ಕೋಟಿ ರೂ. ಆಗುತ್ತದೆ. ಆದರೆ ಪಂದ್ಯದ ಭಾಗವಾಗದ ಆಟಗಾರರಿಗೆ ಈ ಪಂದ್ಯ ಶುಲ್ಕ ಸಿಗುವುದಿಲ್ಲ. 12 ಆಟಗಾರರ ಬಳಗದಲ್ಲಿರದ ಆಟಗಾರರು ಹರಾಜಿನ ಸಮಯದಲ್ಲಿ ನಿರ್ಧರಿಸಿದ ಹಣವನ್ನು ಮಾತ್ರ ಪಡೆಯಲಿದ್ದಾರೆ.

ಕಡಿಮೆ ಬೆಲೆ ಪಡೆದ ಆಟಗಾರರಿಗೆ ನೆರವು

ಈ ನಿಯಮದಿಂದಾಗಿ ಕಡಿಮೆ ಮೊತ್ತಕ್ಕೆ ಅಂದರೆ 30 ಲಕ್ಷ ಅಥವಾ 50 ಲಕ್ಷ ರೂ.ಗಳಿಗೆ ಖರೀದಿಸಲ್ಪಟ್ಟ ಆಟಗಾರರಿಗೆ ಸಹಕಾರಿಯಾಗಲಿದೆ. ಅಲ್ಲದೆ ಅವರ ಉತ್ತಮ ಪ್ರದರ್ಶನದ ಆಧಾರದ ಮೇಲೆ ನಿರಂತರವಾಗಿ ಪಂದ್ಯಗಳನ್ನು ಆಡುವವರಿಗೆ ಪ್ರಯೋಜನಕಾರಿಯಾಗಲಿದೆ. ಈ ಮೊದಲು ಪ್ರತಿಯೊಬ್ಬ ಆಟಗಾರನು ಹರಾಜಿನಲ್ಲಿ ಪಡೆದಿದ್ದ ಹಣವನ್ನಷ್ಟೇ ಪಡೆಯುತ್ತಿದ್ದನು. ಆದರೆ ಈಗ ಈ ನಿಯಮದಿಂದ ಅವರಿಗೆ ಸಿಗುವ ಹಣದ ಪ್ರಮಾಣವು ಹೆಚ್ಚಾಗುತ್ತದೆ. ಬಿಸಿಸಿಐನ ಈ ಹೆಜ್ಜೆ ಆಟಗಾರರನ್ನು ಪ್ರೋತ್ಸಾಹಿಸುವುದು ಮತ್ತು ಕಡಿಮೆ ಮೊತ್ತ ಆಟಗಾರರಿಗೆ ಪ್ರಯೋಜನವನ್ನು ನೀಡುವುದಲ್ಲದೆ, ತಂಡಗಳ ಪ್ರದರ್ಶನವನ್ನು ಸುಧಾರಿಸುವ ನಿರೀಕ್ಷೆಯಿದೆ.

ಇದನ್ನೂ ಓದಿ
2ನೇ ಇನ್ನಿಂಗ್ಸ್​ನಲ್ಲಿ ಬೌಲಿಂಗ್ ಮಾಡುವ ತಂಡಕ್ಕೆ ಬಿಸಿಸಿಐ ಬಂಪರ್ ಗಿಫ್ಟ್
ಐಪಿಎಲ್​ಗಾಗಿ 5 ವರ್ಷಗಳ ನಿಷೇಧವನ್ನು ರದ್ದುಗೊಳಿಸಿದ ಬಿಸಿಸಿಐ
ನೂತನ ಟ್ರಾವೆಲ್ ಜೆರ್ಸಿಯಲ್ಲಿ ಮಿರಮಿರ ಮಿಂಚಿದ ಆರ್​ಸಿಬಿ ಬಾಯ್ಸ್
ಬೆಂಗಳೂರಿನಲ್ಲಿ ಆರ್​ಸಿಬಿ vs ಡೆಲ್ಲಿ ಫೈಟ್; ಪಂದ್ಯದ ಟಿಕೆಟ್ ಮಾರಾಟ

IPL 2025: ಬ್ಯಾಟ್ಸ್‌ಮನ್​ಗಳ ಅಬ್ಬರಕ್ಕೆ ಬ್ರೇಕ್ ಹಾಕಿ ಬೌಲರ್‌ಗಳ ಬೆನ್ನಿಗೆ ನಿಂತ ಬಿಸಿಸಿಐ

ಬಿಸಿಸಿಐನ ಈ ನಿಯಮದ ಹೊರತಾಗಿ, ಇನ್ನೂ ಎರಡು ನಿಯಮಗಳನ್ನು ಈ ಬಾರಿಯ ಐಪಿಎಲ್​ನಲ್ಲಿ ಜಾರಿಗೆ ತಂದಿದೆ. ಹಗಲು-ರಾತ್ರಿ ಪಂದ್ಯಗಳ ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ಹೊಸ ಚೆಂಡುಗಳನ್ನು ಬಳಸಬೇಕೆಂಬ ನಿಯಮವನ್ನು ಬಿಸಿಸಿಐ ಮಾಡಿದೆ. ಇಷ್ಟೇ ಅಲ್ಲ, ಬೌಲರ್‌ಗಳು ಬೌಲಿಂಗ್ ಸಮಯದಲ್ಲಿ ಚೆಂಡಿನ ಮೇಲೆ ಎಂಜಲು ಲೇಪನ ಮಾಡುವುದಕ್ಕೂ ಅವಕಾಶ ನೀಡಲಾಗಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ