IPL 2025 Playoffs Schedule: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದೆ ಈ ಮೈದಾನ

TATA IPL 2025 Final: ಐಪಿಎಲ್ 2025ರ ಲೀಗ್ ಹಂತದ 70 ಪಂದ್ಯಗಳ ನಂತರ ಪ್ಲೇಆಫ್‌ ನಡೆಯಲಿದೆ. ಮೊದಲ ಅರ್ಹತಾ ಪಂದ್ಯವು ಮೇ 29 ರಂದು ನ್ಯೂ ಚಂಡೀಗಢದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಅಗ್ರ ಎರಡು ತಂಡಗಳ ನಡುವೆ ನಡೆಯಲಿದೆ. ಇದರ ನಂತರ, ಮೇ 30 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.

IPL 2025 Playoffs Schedule: ಐಪಿಎಲ್ ಪ್ಲೇಆಫ್ ವೇಳಾಪಟ್ಟಿ ಪ್ರಕಟ: ಫೈನಲ್ ಪಂದ್ಯಕ್ಕೆ ಸಜ್ಜಾಗುತ್ತಿದೆ ಈ ಮೈದಾನ
Ipl 2025 Playoffs Schedule

Updated on: May 20, 2025 | 7:13 PM

ಬೆಂಗಳೂರು (ಮೇ. 20): ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಇಂಡಿಯನ್ ಪ್ರೀಮಿಯರ್ ಲೀಗ್ 2025 ರ (Indian Premier League) ಪ್ಲೇಆಫ್‌ಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. 70 ಲೀಗ್ ಪಂದ್ಯಗಳ ನಂತರ, ಈ ಪಂದ್ಯವು ನ್ಯೂ ಚಂಡೀಗಢದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಲ್ಲಿ ಕ್ವಾಲಿಫೈಯರ್ 1 ಮತ್ತು ಎಲಿಮಿನೇಟರ್ ಪಂದ್ಯಗಳನ್ನು ಆಯೋಜಿಸಲಾಗಿದೆ. ಹಾಗೆಯೆ ಐಪಿಎಲ್ 2025 ಫೈನಲ್ ಪಂದ್ಯ ನಡೆಯುವ ಸ್ಥಳವನ್ನು ಘೋಷಿಸಲಾಗಿದೆ. ಅಂತಿಮ ಪ್ರಶಸ್ತಿ ಕಾದಾಟ ಪಂದ್ಯ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಇಲ್ಲಿಯೇ ಕ್ವಾಲಿಫೈಯರ್ 2 ಪಂದ್ಯವನ್ನು ಆಯೋಜಿಸಲಿದೆ.

ಮತ್ತೊಂದೆಡೆ ಕೆಟ್ಟ ಹವಾಮಾನದಿಂದಾಗಿ, ಆರ್‌ಸಿಬಿ ಮತ್ತು ಸನ್‌ರೈಸರ್ಸ್ ನಡುವಿನ ಪಂದ್ಯವನ್ನು ಲಕ್ನೋಗೆ ಸ್ಥಳಾಂತರಿಸಲಾಗಿದೆ. ಇಂದಿನಿಂದ ಉಳಿದ ಎಲ್ಲ ಪಂದ್ಯಗಳಿಗೆ ಒಂದು ಗಂಟೆ ಹೆಚ್ಚುವರಿ ಸಮಯ ನೀಡಲಾಗುವುದು ಎಂದುಕೂಡ ಬಿಸಿಸಿಐ ಹೇಳಿದೆ. ಲೀಗ್ ಹಂತದ 70 ಪಂದ್ಯಗಳ ನಂತರ ಪ್ಲೇಆಫ್‌ ನಡೆಯಲಿದೆ. ಮೊದಲ ಅರ್ಹತಾ ಪಂದ್ಯವು ಮೇ 29 ರಂದು ನ್ಯೂ ಚಂಡೀಗಢದ ಪಿಸಿಎ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಂದ್ಯವು ಅಗ್ರ ಎರಡು ತಂಡಗಳ ನಡುವೆ ನಡೆಯಲಿದೆ. ಇದರ ನಂತರ, ಮೇ 30 ರಂದು ಎಲಿಮಿನೇಟರ್ ಪಂದ್ಯ ನಡೆಯಲಿದೆ.

ಇದನ್ನೂ ಓದಿ
ಪಂತ್ ಮಾತ್ರವಲ್ಲ LSG ದೋಣಿಯನ್ನು ಮುಳುಗಿಸಿದ್ದು ಈ 5 ಆಟಗಾರರು
IPLನಿಂದ ಲಕ್ನೋ ಔಟ್: ಪಂದ್ಯದ ಬಳಿಕ ವಿಚಿತ್ರ ಹೇಳಿಕೆ ನೀಡಿದ ರಿಷಭ್ ಪಂತ್
ಐದನೇ ತಂಡವಾಗಿ ಲೀಗ್​ನಿಂದ ಹೊರಬಿದ್ದ ಲಕ್ನೋ
ಒಂದಂಕಿಗೆ ಸುಸ್ತಾದ ಪಂತ್; ಕೋಪಗೊಂಡ ಮಾಲೀಕ

 

ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣವು ಎರಡನೇ ಕ್ವಾಲಿಫೈಯರ್ ಮತ್ತು ಅಂತಿಮ ಪಂದ್ಯವನ್ನು ಆಯೋಜಿಸಲಿದೆ. ಜೂನ್ 1 ರಂದು ಕ್ವಾಲಿಫೈಯರ್ 2 ನಡೆಯಲಿದೆ. ಈ ಪಂದ್ಯವು ಕ್ವಾಲಿಫೈಯರ್ 1 ರಲ್ಲಿ ಸೋತ ತಂಡ ಮತ್ತು ಎಲಿಮಿನೇಟರ್ ಗೆದ್ದ ತಂಡದ ನಡುವೆ ನಡೆಯಲಿದೆ. ಜೂನ್ 3 ರಂದು ಅಂತಿಮ ಪಂದ್ಯ ನಡೆಯಲಿದೆ. ಈ ಪಂದ್ಯದಲ್ಲಿ ಐಪಿಎಲ್ 18 ನೇ ಸೀಸನ್‌ನ ವಿಜೇತರು ಯಾರು ಎಂಬುದು ನಿರ್ಧಾರ ಆಗಲಿದೆ.

LSG: ಪಂತ್ ಮಾತ್ರವಲ್ಲ ಲಕ್ನೋ ಸೂಪರ್‌ ಜೇಂಟ್ಸ್ ದೋಣಿಯನ್ನು ಮುಳುಗಿಸಿದ್ದು ಈ 5 ಆಟಗಾರರು

ಐಪಿಎಲ್ ಆಡಳಿತ ಮಂಡಳಿಯಿಂದ ದೊಡ್ಡ ನಿರ್ಧಾರ

ಈ ಹಿಂದೆ ಹೈದರಾಬಾದ್ ಮತ್ತು ಕೋಲ್ಕತ್ತಾ ಕ್ರೀಡಾಂಗಣದಲ್ಲಿ ಪ್ಲೇಆಫ್‌ ಪಂದ್ಯಗಳು ನಡೆಯಬೇಕಿತ್ತು. ಆದರೆ ಪಂದ್ಯಾವಳಿಯಲ್ಲಿ ಒಂದು ವಾರದ ವಿರಾಮದ ನಂತರ, ಸ್ಥಳವನ್ನು ಬದಲಾಯಿಸಲಾಗಿದೆ. ಹವಾಮಾನ ಮತ್ತು ಇತರ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಐಪಿಎಲ್ ಆಡಳಿತ ಮಂಡಳಿ ಈ ದೊಡ್ಡ ನಿರ್ಧಾರ ತೆಗೆದುಕೊಂಡಿದೆ. ಮತ್ತೊಂದು ಬದಲಾವಣೆ ಕೂಡ ಮಾಡಲಾಗಿದೆ. ಆರ್‌ಸಿಬಿ ಮತ್ತು ಸನ್‌ರೈಸರ್ಸ್ ನಡುವೆ ನಡುವೆ ಬೆಂಗಳೂರಿನಲ್ಲಿ ನಡೆಯಬೇಕಿದ್ದ ಪಂದ್ಯ ಲಕ್ನೋದಲ್ಲಿ ಆಯೋಜಿಸಲಾಗಿದೆ. ಬೆಂಗಳೂರಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ಪಂದ್ಯವು ಈಗ ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕಾನಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಇನ್ನು ಪಂದ್ಯಗಳ ಸಮಯದಲ್ಲೂ ಬದಲಾವಣೆ ಮಾಡಲಾಗಿದೆ. ಲೀಗ್ ಹಂತದ ಉಳಿದ ಪಂದ್ಯಗಳಲ್ಲಿ ಒಂದು ಗಂಟೆ ಹೆಚ್ಚುವರಿ ಸಮಯ ನೀಡಲಾಗುವುದು. ಈ ನಿಯಮ ಮೇ 20 ರಿಂದ ಜಾರಿಗೆ ಬಂದಿದೆ. ಹೀಗಾಗಿ ಮುಂದಿನ ಪಂದ್ಯಗಳು ಇನ್ನಷ್ಟು ರೋಮಾಂಚನಕಾರಿಯಾಗಿರುತ್ತವೆ. ಹವಾಮಾನವನ್ನು ಗಮನದಲ್ಲಿಟ್ಟುಕೊಂಡು ಪ್ಲೇಆಫ್‌ಗಳಿಗೆ ಹೊಸ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ. ಬಿಸಿಸಿಐ ಪಂದ್ಯಗಳನ್ನು ಯಾವುದೇ ಅಡೆತಡೆಯಿಲ್ಲದೆ ನಡೆಸಬೇಕೆಂದು ಈ ನಿರ್ಧಾರ ತೆಗೆದುಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ