
ಐಪಿಎಲ್ 2026 (IPL 2026) ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡಕ್ಕೆ ಇಂದು ಮಾಡು ಇಲ್ಲವೇ ಮಡಿ ಪಂದ್ಯವಿದೆ. ಲೀಗ್ ಹಂತದಲ್ಲಿ ಅಂತಿಮ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಆಡಲಿರುವ ಕೆಕೆಆರ್ ಈ ಪಂದ್ಯವನ್ನು ಭಾರಿ ಅಂತರದಿಂದ ಗೆಲ್ಲಬೇಕು. ಆಗ ಮಾತ್ರ ಪ್ಲೇಆಫ್ಗೇರುವ ಅವಕಾಶ ಹೊಂದಿರುತ್ತದೆ. ಹೀಗಿರುವಾಗ ಕೆಕೆಆರ್ ಬಲಿಷ್ಠ ಪ್ಲೇಯಿಂಗ್ 11 ಕಟ್ಟಿಕೊಂಡು ಕಣಕ್ಕಿಳಿಯಬೇಕಾಗುತ್ತದೆ. ಆದರೆ ಈ ಪಂದ್ಯಕ್ಕೂ ಮುನ್ನ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ವೇಗಿ ಮಥಿಶಾ ಪತಿರಾನ ಮಂಡಿರಜ್ಜು ಗಾಯದಿಂದಾಗಿ ತಂಡದಿಂದಲೇ ಹೊರಬಿದ್ದಿದ್ದಾರೆ. ಹೀಗಾಗಿ ಅವರ ಸ್ಥಾನದಲ್ಲಿ ಬದಲಿ ಆಟಗಾರನಾಗಿ ಕರ್ನಾಟಕದ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಲುವ್ನಿತ್ ಸಿಸೋಡಿಯಾ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ.
ಇತ್ತೀಚೆಗೆ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ವೇಳೆ ಮಥಿಶಾ ಪತಿರಾನ ಗಾಯಗೊಂಡಿದ್ದರು. ಕೇವಲ 1.2 ಓವರ್ ಬೌಲಿಂಗ್ ಮಾಡಿದ ನಂತರ ಅವರು ಮೈದಾನದಿಂದ ಹೊರನಡೆಯಬೇಕಾಯಿತು. ಇದು ಕೊಲ್ಕತ್ತಾ ಪರ ಪತಿರಾನ ಅವರ ಚೊಚ್ಚಲ ಪಂದ್ಯವೂ ಆಗಿತ್ತು. ಆದಾಗ್ಯೂ, ಮೊದಲನೇ ಪಂದ್ಯದಲ್ಲೇ ಮತ್ತೆ ಗಾಯಕ್ಕೆ ತುತ್ತಾದ ಪತಿರಾನ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಅಂತಿಮ ಲೀಗ್ ಪಂದ್ಯವನ್ನು ಆಡದೆ ತಂಡದಿಂದ ಹೊರಬಿದ್ದಿದ್ದಾರೆ.
ಕಳೆದ ಹರಾಜಿನಲ್ಲಿ ಕೆಕೆಆರ್, ಮಥಿಶಾ ಪತಿರಾನಗೆ 18 ಕೋಟಿ ನೀಡಿ ತಂಡಕ್ಕೆ ಖರೀದಿ ಮಾಡಿತ್ತು. ತಂಡವು ಡೆತ್ ಓವರ್ಗಳಲ್ಲಿ ಅವರನ್ನು ಮಾರಕ ಅಸ್ತ್ರವಾಗಿ ಬಳಸಲು ಬಯಸಿತ್ತು. ಆದರೆ ಗಾಯದಿಂದಾಗಿ ಪತಿರಾನ ಇಡೀ ಆವೃತ್ತಿಯಲ್ಲಿ ಒಂದು ಪಂದ್ಯಕ್ಕಿಂತ ಹೆಚ್ಚಿನ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಟಿ20 ವಿಶ್ವಕಪ್ ಸಮಯದಲ್ಲಿ ಉಂಟಾದ ಎಡಗಾಲಿನ ಗಾಯದಿಂದ ಪತಿರಾನ ಪಂದ್ಯಾವಳಿಯಿಂದ ಹೊರಬಿದ್ದಿದ್ದರು. ಇದರ ಪರಿಣಾಮವಾಗಿ, ಮಥಿಶಾ ಪತಿರಾನ ಐಪಿಎಲ್ 2026 ರ ಆರಂಭದಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಎನ್ಒಸಿ ಪಡೆಯಲು ಸಾಧ್ಯವಾಗಲಿಲ್ಲ. ಆ ನಂತರ ಎನ್ಒಸಿ ಪಡೆದು ತಂಡ ಸೇರಿಕೊಂಡಿದ್ದ ಪತಿರಾನ ಒಂದು ಪಂದ್ಯದ ಬಳಿಕ ತಂಡದಿಂದ ಹೊರಬಿದ್ದಿದ್ದಾರೆ.
MI vs RR IPL 2026 Live Score: ಮುಂಬೈ 4ನೇ ವಿಕೆಟ್ ಪತನ
ಲುವ್ನಿತ್ ಸಿಸೋಡಿಯಾ ಎಡಗೈ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಆಗಿದ್ದು, ಅವರು ಕರ್ನಾಟಕ ಪರ 15 ಟಿ20 ಪಂದ್ಯಗಳನ್ನು ಆಡಿದ್ದಾರೆ, ಆದರೆ ಇನ್ನೂ ಐಪಿಎಲ್ಗೆ ಪಾದಾರ್ಪಣೆ ಮಾಡಿಲ್ಲ. ಪತಿರಾನ ಸ್ಥಾನದಲ್ಲಿ ಅವರನ್ನು ಸೇರಿಸಿಕೊಳ್ಳುವುದು ಒಂದೇ ರೀತಿಯ ಬದಲಿಯಲ್ಲ, ಏಕೆಂದರೆ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ವೇಗದ ಬೌಲರ್ ಅನ್ನು ಬದಲಾಯಿಸುತ್ತಿದ್ದಾರೆ. ಸಿಸೋಡಿಯಾ ಈ ಹಿಂದೆ ಆರ್ಸಿಬಿ ಮತ್ತು ಕೆಕೆಆರ್ ಎರಡೂ ತಂಡಗಳಲ್ಲಿ ಕಾಣಿಸಿಕೊಂಡಿದ್ದರು. ಆದರೆ ಆಡುವ ಅವಕಾಶ ಸಿಕ್ಕಿರಲಿಲ್ಲ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ