MI vs RR IPL 2026 Highlights: ಕೊನೆಯ ಲೀಗ್ ಪಂದ್ಯದಲ್ಲೂ ಸೋತ ಮುಂಬೈ
Mumbai Indians vs Rajasthan Royals, IPL 2026 Highlights: ಐಪಿಎಲ್ 2026 ರ 69 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 30 ರನ್‌ಗಳಿಂದ ಸೋಲಿಸಿ ಪ್ಲೇಆಫ್ ತಲುಪಿತು. ಪ್ಲೇಆಫ್ಗೇರಿರುವ ರಾಜಸ್ಥಾನ್ ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ.

ಐಪಿಎಲ್ 2026 ರ 69 ನೇ ಪಂದ್ಯದಲ್ಲಿ, ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 30 ರನ್‌ಗಳಿಂದ ಸೋಲಿಸಿ ಪ್ಲೇಆಫ್ ತಲುಪಿತು. ಪ್ಲೇಆಫ್ಗೇರಿರುವ ರಾಜಸ್ಥಾನ್ ಎಲಿಮಿನೇಟರ್‌ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 205 ರನ್ ಗಳಿಸಿತು. 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 9 ವಿಕೆಟ್‌ಗಳಿಗೆ 175 ರನ್ ಗಳಿಸಲಷ್ಟೇ ಶಕ್ತವಾಯಿತು.
LIVE NEWS & UPDATES
-
MI vs RR IPL 2026: ಪ್ಲೇಆಫ್‌ಗೆ ಅರ್ಹತೆ ಪಡೆದ ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 30 ರನ್‌ಗಳಿಂದ ಸೋಲಿಸಿ ಪ್ಲೇಆಫ್‌ಗೆ ಅರ್ಹತೆ ಪಡೆಯಿತು. 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಮುಂಬೈ ಇಂಡಿಯನ್ಸ್, 9 ವಿಕೆಟ್‌ಗಳಿಗೆ 175 ರನ್ ಗಳಿಸಲಷ್ಟೇ ಶಕ್ತವಾಯಿತು.
-
MI vs RR IPL 2026: ಸೂರ್ಯಕುಮಾರ್ ಯಾದವ್ ಔಟ್
ಸೂರ್ಯಕುಮಾರ್ ಯಾದವ್ ಕೂಡ ಔಟಾದರು, ನಾಂಡ್ರೆ ಬರ್ಗರ್ ಅದ್ಭುತ ಕ್ಯಾಚ್ ಹಿಡಿದರು. ಹೀಗಾಗಿ, ಮುಂಬೈ ತನ್ನ ಎಂಟನೇ ವಿಕೆಟ್ ಕಳೆದುಕೊಂಡಿತು.
-
-
MI vs RR IPL 2026: ಹಾರ್ದಿಕ್ ಪಾಂಡ್ಯ ಕೂಡ ಔಟ್
ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ನಡುವಿನ ಪಾಲುದಾರಿಕೆಯನ್ನು ಜೋಫ್ರಾ ಆರ್ಚರ್ ಮುರಿದರು. ಹಾರ್ದಿಕ್ (34) ಅವರನ್ನು ಔಟ್ ಮಾಡುವ ಮೂಲಕ ಆರ್ಚರ್ ತಮ್ಮ ಮೂರನೇ ವಿಕೆಟ್ ಪಡೆದರು.
-
MI vs RR IPL 2026: ಸೂರ್ಯ ಅರ್ಧಶತಕ
ಕೊನೆಯ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಅರ್ಧಶತಕ ಬಾರಿಸಿದರು. 32 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಸೂರ್ಯನಿಗೆ ಎರಡನೇ ಅರ್ಧಶತಕವಾಗಿತ್ತು.
-
MI vs RR IPL 2026: ಸೂರ್ಯ-ಜಾಕ್ಸ್ ಜೊತೆಯಾಟ
ಕೇವಲ 38 ರನ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡ ನಂತರ, ಸೂರ್ಯಕುಮಾರ್ ಯಾದವ್ ಮತ್ತು ವಿಲ್ ಜಾಕ್ಸ್ ಇನ್ನಿಂಗ್ಸ್‌ನ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾರೆ ಮತ್ತು 50 ಕ್ಕೂ ಹೆಚ್ಚು ರನ್‌ಗಳ ಪಾಲುದಾರಿಕೆಯನ್ನು ಮಾಡಿದ್ದಾರೆ.
-
-
MI vs RR IPL 2026: ತಿಲಕ್ ವರ್ಮಾ ಔಟ್
ಪವರ್‌ಪ್ಲೇನಲ್ಲಿ ಮುಂಬೈ ತಂಡ ನಾಲ್ಕನೇ ವಿಕೆಟ್ ಕಳೆದುಕೊಂಡು ಸೋಲಿನ ಭೀತಿಯಲ್ಲಿದೆ. ಆರನೇ ಓವರ್‌ನಲ್ಲಿ ತಿಲಕ್ ವರ್ಮಾ ಅವರನ್ನು ಬ್ರಿಜೇಶ್ ಶರ್ಮಾ (3) ಬೌಲ್ಡ್ ಮಾಡಿದರು.
-
MI vs RR IPL 2026: ನಮನ್ ಧೀರ್ ಬೌಲ್ಡ್
ಜೋಫ್ರಾ ಆರ್ಚರ್ ಮತ್ತೊಮ್ಮೆ ಮುಂಬೈಗೆ ಹೊಡೆತ ನೀಡಿದರು, ಈ ಬಾರಿ ನಮನ್ ಧೀರ್ ಅವರನ್ನು ಔಟ್ ಮಾಡಿದರು. ಆರ್ಚರ್ ಇನಿಂಗ್ಸ್ನ ಮೂರನೇ ಓವರ್‌ನಲ್ಲಿ ಧೀರ್ (6) ಅವರನ್ನು ಬೌಲ್ಡ್ ಮಾಡಿದರು.
-
MI vs RR IPL 2026: ರೋಹಿತ್ ಶರ್ಮಾ ಔಟ್
ಜೋಫ್ರಾ ಆರ್ಚರ್ ಅವರ ಅದ್ಭುತ ಎಸೆತದಿಂದ ಮೊದಲ ಓವರ್‌ನಲ್ಲಿ ರೋಹಿತ್ ಶರ್ಮಾ ರನ್ ಗಳಿಸದೆ ಔಟಾದರು.
-
MI vs RR IPL 2026: ರಾಜಸ್ಥಾನದ ಇನ್ನಿಂಗ್ಸ್ ಅಂತ್ಯ
ರಾಜಸ್ಥಾನ ತಂಡವು 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 205 ರನ್ ಗಳಿಸಿದೆ. ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್ ಮತ್ತು ರವೀಂದ್ರ ಜಡೇಜಾ ಕೊನೆಯ ಐದು ಓವರ್‌ಗಳಲ್ಲಿ ಅವಶ್ಯಕ ರನ್ ಕಲೆಹಾಕಿದರು. ಕಳಪೆ ಆರಂಭದ ಹೊರತಾಗಿಯೂ ರಾಜಸ್ಥಾನವು 200 ರ ಗಡಿ ದಾಟಲು ಸಹಾಯ ಮಾಡಿದರು.
-
MI vs RR IPL 2026: ಫೆರೇರಾ ಔಟ್
ರಾಜಸ್ಥಾನ ತಂಡವು ಡೊನೊವನ್ ಫೆರೀರಾ (18) ಅವರನ್ನು ಸಹ ಕಳೆದುಕೊಂಡಿತು. ದೀಪಕ್ ಚಾಹರ್ ರಾಜಸ್ಥಾನದ ಆರನೇ ವಿಕೆಟ್ ಉರುಳಿಸಿದರು.
-
MI vs RR IPL 2026: ಶನಕ ರನ್ ಔಟ್
ರಾಜಸ್ಥಾನದ ಇನ್ನಿಂಗ್ಸ್ ಚೇತರಿಕೆ ಕಾಣುತ್ತಿದ್ದ ಹೊತ್ತಲ್ಲೇ ದಾಸುನ್ ಶನಕ ರನೌಟ್ ಆಗಿದ್ದಾರೆ. ಶನಕ 15 ಎಸೆತಗಳಲ್ಲಿ 29 ರನ್ ಗಳಿಸಿದರು.
-
MI vs RR IPL 2026: 10 ಓವರ್‌ಗಳು ಪೂರ್ಣ
ರಾಜಸ್ಥಾನದ ಇನ್ನಿಂಗ್ಸ್‌ನ 10 ಓವರ್‌ಗಳು ಕಳೆದಿದ್ದು, ತಂಡವು 94 ರನ್‌ಗಳನ್ನು ಗಳಿಸಿದೆ. ದಾಸುನ್ ಶನಕ ಮತ್ತು ಧ್ರುವ್ ಜುರೆಲ್ ಸುಮಾರು 40 ರನ್‌ಗಳ ಜೊತೆಯಾಟವನ್ನಾಡಿದ್ದಾರೆ.
-
MI vs RR IPL 2026: ಪರಾಗ್ ಕೂಡ ಔಟ್
ರಾಜಸ್ಥಾನ ತಂಡವು ಪವರ್‌ಪ್ಲೇನಲ್ಲಿ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಕಳಪೆ ಆರಂಭವನ್ನು ಪಡೆಯಿತು. ನಾಯಕ ರಿಯಾನ್ ಪರಾಗ್ ಆರನೇ ಓವರ್‌ನ ಕೊನೆಯ ಎಸೆತದಲ್ಲಿ ಅಲ್ಲಾ ಗಜನ್‌ಫರ್ ಎಸೆದಲ್ಲಿ ಔಟಾದರು.
-
MI vs RR IPL 2026: ಸೂರ್ಯವಂಶಿ 4 ರನ್ ಬಾರಿಸಿ ಔಟ್
ವೈಭವ್ ಸೂರ್ಯವಂಶಿ 4 ರನ್ ಬಾರಿಸಿ ಔಟಾದರು. ಐದನೇ ಓವರ್‌ನ ಮೊದಲ ಎಸೆತದಲ್ಲಿ ದೀಪಕ್ ಚಹಾರ್ ವೈಭವ್ ಅವರನ್ನು ಔಟ್ ಮಾಡಿದರು.
-
MI vs RR IPL 2026: ಜೈಸ್ವಾಲ್ ಔಟ್
ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಮೊದಲ ವಿಕೆಟ್ ಕಳೆದುಕೊಂಡಿತು. ಯಶಸ್ವಿ ಜೈಸ್ವಾಲ್ (27) ಔಟಾದರು.
-
MI vs RR IPL 2026: ಮುಂಬೈ ಇಂಡಿಯನ್ಸ್
ನಮನ್ ಧೀರ್, ರಿಯಾನ್ ರಿಕಲ್ಟನ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ವಿಲ್ ಜಾಕ್ಸ್, ಕಾರ್ಬಿನ್ ಬಾಷ್, ದೀಪಕ್ ಚಾಹರ್, ಶಾರ್ದೂಲ್ ಠಾಕೂರ್, ಅಲ್ಲಾ ಗಜನ್ಫರ್, ರಘು ಶರ್ಮಾ
-
MI vs RR IPL 2026: ರಾಜಸ್ಥಾನ್
ಯಶಸ್ವಿ ಜೈಸ್ವಾಲ್, ವೈಭವ್ ಸೂರ್ಯವಂಶಿ, ಧ್ರುವ ಜುರೆಲ್, ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ಶುಭಂ ದುಬೆ, ರವೀಂದ್ರ ಜಡೇಜಾ, ನಾಂದ್ರೆ ಬರ್ಗರ್, ದಸುನ್ ಶಾನಕ, ಜೋಫ್ರಾ ಆರ್ಚರ್, ಯಶ್ ರಾಜ್ ಪುಂಜಾ, ಬ್ರಿಜೇಶ್ ಶರ್ಮಾ
-
MI vs RR IPL 2026: ಟಾಸ್ ಗೆದ್ದ ಮುಂಬೈ
ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ದುಕೊಂಡಿದೆ.
Published On - May 24,2026 3:02 PM




