ಐಪಿಎಲ್ ಆರಂಭಕ್ಕೆ ಕೆಲವೇ ದಿನ ಇರುವಾಗ ಪ್ರಮುಖ ನಿಯಮಗಳಲ್ಲಿ ಬದಲಾವಣೆ

ಮಾರ್ಚ್ 28ರಂದು ಐಪಿಎಲ್ ಆರಂಭವಾಗುತ್ತಿದ್ದು, ಬಿಸಿಸಿಐ ಪ್ರಮುಖ ನಿಯಮಗಳನ್ನು ಬದಲಾಯಿಸಿದೆ. ಪಂದ್ಯದ ದಿನಗಳಲ್ಲಿ ತಂಡಗಳಿಗೆ ಅಭ್ಯಾಸ ಸೆಷನ್, ಫಿಟ್‌ನೆಸ್ ಪರೀಕ್ಷೆ ನಿಷಿದ್ಧ. ಪಿಚ್ ರಕ್ಷಣೆ ಇದರ ಮುಖ್ಯ ಉದ್ದೇಶ. ಕುಟುಂಬದವರಿಗೆ ಮೈದಾನ ಪ್ರವೇಶ ನಿರ್ಬಂಧ, ಆದರೆ ನಿಗದಿತ ಜಾಗದಲ್ಲಿ ವೀಕ್ಷಿಸಬಹುದು .

ಐಪಿಎಲ್ ಆರಂಭಕ್ಕೆ ಕೆಲವೇ ದಿನ ಇರುವಾಗ ಪ್ರಮುಖ ನಿಯಮಗಳಲ್ಲಿ ಬದಲಾವಣೆ
ಆರ್​​ಸಿಬಿ

Updated on: Mar 24, 2026 | 1:35 PM

ಮಾರ್ಚ್ 28ರಿಂದ ಐಪಿಎಲ್ ಆರಂಭ ಆಗುತ್ತಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ಸ್ ಆರ್​​​ಸಿಬಿ ತಂಡ ಹೈದರಾಬಾದ್ ತಂಡವನ್ನು ಎದುರಿಸಲಿದೆ. ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ಈ ಪಂದ್ಯ ನಡೆಯಲಿದೆ. ಕ್ರಿಕೆಟ್ ಆರಂಭಕ್ಕೂ ಕೆಲವೇ ದಿನ ಮೊದಲು ಬಿಸಿಸಿಐ ನಿಯಮಗಳಲ್ಲಿ ಕೆಲವು ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಇದು ಈ ಬಾರಿಯ ಸೀಸನ್ ಮೇಲೆ ಸಾಕಷ್ಟು ಪ್ರಭಾವ ಬೀರುವ ಸಾಧ್ಯತೆ ಇದೆ.

ತಂಡಗಳು ತಮ್ಮ ಪಂದ್ಯದ ದಿನಗಳಲ್ಲಿ ಪ್ರ್ಯಾಕ್ಟಿಸ್ ಸೆಷನ್ ನಡೆಸಲು ಅನುಮತಿಸಲಾಗುವುದಿಲ್ಲ ಎಂದು ಬಿಸಿಸಿಐ ಹೇಳಿದೆ. ಪಂದ್ಯಕ್ಕಾಗಿ ಪಿಚ್ ರಕ್ಷಣೆ ಮಾಡೋದು ಇದರ ಪ್ರಮುಖ ಉದ್ದೇಶ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ, ಬಿಸಿಸಿಐ ಅಭ್ಯಾಸ ಪ್ರದೇಶದಲ್ಲಿ ಎರಡು ನೆಟ್‌ಗಳನ್ನು ನಿರ್ಮಾಣ ಮಾಡಲಿದೆ. ಎರಡು ತಂಡಗಳು ಒಂದೇ ಸ್ಥಳದಲ್ಲಿ ಏಕಕಾಲದಲ್ಲಿ ಅಭ್ಯಾಸ ಮಾಡುತ್ತಿದ್ದರೆ, ಎರಡೂ ತಂಡಕ್ಕೆ ತಲಾ ಎರಡು ಪಿಚ್​​​ಗಳನ್ನು ನೀಡಲಾಗುವುದು.

ತಂಡಗಳು ತಮ್ಮ ಎದುರಾಳಿ ತಂಡಗಳಿಗೆ ಮೀಸಲಿಟ್ಟ ಜಾಗವನ್ನು ಬಳಸುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅವು ಖಾಲಿ ಇದ್ದರೂ ಸಹ ಅದನ್ನು ಬಳಸುವಂತಿಲ್ಲ. ನ್ಯಾಯ ಕಾಪಾಡಿಕೊಳ್ಳುವುದು ಇದರ ಮುಖ್ಯ ಉದ್ದೇಶ. ಪಂದ್ಯದ ದಿನಗಳಲ್ಲಿ ತಂಡಗಳು ತಮ್ಮ ಆಟಗಾರರಿಗೆ ಫಿಟ್‌ನೆಸ್ ಪರೀಕ್ಷೆಗಳನ್ನು ನಡೆಸಲು ಅನುಮತಿ ಇಲ್ಲ.

ಇದನ್ನೂ ಓದಿ: ಐಪಿಎಲ್ 2026ರಲ್ಲಿ ನಿವೃತ್ತಿ ಘೋಷಿಸಲಿದ್ದಾರೆ ಈ ಐದು ಆಟಗಾರರು?u

ಐಪಿಎಲ್ ಸಮಯದಲ್ಲಿ ಆಟಗಾರರ ಕುಟುಂಬದವರ ಇರುವಿಕೆ ಬಗ್ಗೆಯೂ ಕೆಲವು ಮಾರ್ಗಸೂಚಿ ಹೊರಡಿಸಿದೆ. ತಂಡಗಳು ತಂಡದ ಬಸ್ ಮೂಲಕ ಮಾತ್ರ ಮೈದಾನಕ್ಕೆ ಪ್ರಯಾಣಿಸಲು ಅವಕಾಶ ಇದೆ. ಕುಟುಂಬದವರು, ಸ್ನೇಹಿತರು ತರಬೇತಿ ಅವಧಿಯಲ್ಲಿ ಆಟದ ಮೈದಾನಕ್ಕೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ನಿಗದಿಪಡಿಸಿದ ಜಾಗದಲ್ಲಿ ನಿಂತು ಅಭ್ಯಾಸವನ್ನು ವೀಕ್ಷಿಸಬಹುದು. ಆಟಗಾರರು ಡ್ರೆಸ್-ಕೋಡ್ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us