AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈಭವ್ ಪಾಲಿಗೆ IPL 2026 ಕಠಿಣ ಸವಾಲು: ಶಿಖರ್ ಧವನ್ ಎಚ್ಚರಿಕೆ

Vaibhav Suryavanshi: ವೈಭವ್ ಸೂರ್ಯವಂಶಿ ಐಪಿಎಲ್ 2025 ರಲ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದರು. 7 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದ ಅವರು  36 ಸರಾಸರಿಯಲ್ಲಿ 252 ರನ್ ಗಳಿಸಿದ್ದರು. ಈ ವೇಳೆ ಅವರ ಬ್ಯಾಟ್​ನಿಂದ ಒಂದು ಶತಕ ಮತ್ತು ಅರ್ಧಶತಕ ಮೂಡಿಬಂದಿತ್ತು. ಇದೀಗ ಟೀಮ್ ಇಂಡಿಯಾ ಅಂಡರ್ 19 ತಂಡದ ಪರ ಕಣಕ್ಕಿಳಿಯುತ್ತಿರುವ ವೈಭವ್ ಸೂರ್ಯವಂಶಿ ಇಂಗ್ಲೆಂಡ್ ವಿರುದ್ಧ 48, 46 ಮತ್ತು 86 ರನ್‌ಗಳ ಇನ್ನಿಂಗ್ಸ್‌ಗಳನ್ನು ಆಡಿದ್ದಾರೆ. 

ವೈಭವ್ ಪಾಲಿಗೆ IPL 2026 ಕಠಿಣ ಸವಾಲು: ಶಿಖರ್ ಧವನ್ ಎಚ್ಚರಿಕೆ
Shikhar Dhawan - Vaibhav Suryavanshi
ಝಾಹಿರ್ ಯೂಸುಫ್
|

Updated on: Jul 05, 2025 | 1:24 PM

Share

ಭಾರತದ ಯುವ ದಾಂಡಿಗ ವೈಭವ್ ಸೂರ್ಯವಂಶಿ ಇಂಗ್ಲೆಂಡ್‌ನಲ್ಲಿ ಸಿಕ್ಸರ್‌ಗಳ ಮಳೆ ಸುರಿಸುತ್ತಿದ್ದಾರೆ. ಇಂಗ್ಲೆಂಡ್ ಅಂಡರ್-19 ತಂಡದ ವಿರುದ್ಧ ಏಕದಿನ ಸರಣಿಯನ್ನು ಆಡುತ್ತಿರುವ ವೈಭವ್ ಕಳೆದ ಮೂರು ಪಂದ್ಯಗಳಲ್ಲೂ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅಲ್ಲದೆ ಈವರೆಗೆ 17 ಸಿಕ್ಸ್ ಸಿಡಿಸಿ ಸಂಚಲನ ಸೃಷ್ಟಿಸಿದ್ದಾರೆ. ಇದಕ್ಕೂ ಮುನ್ನ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ (ಐಪಿಎಲ್ 2025) ತಮ್ಮ ವೈಭವೋಪೋತ ಬ್ಯಾಟಿಂಗ್​ ಅನ್ನು ತೆರೆದಿಟ್ಟಿದ್ದರು. ಈ ಭರ್ಜರಿ ಬ್ಯಾಟಿಂಗ್​ ಅನ್ನು ಶ್ಲಾಘಿಸಿರುವ ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್​, ವೈಭವ್ ಸೂರ್ಯವಂಶಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಶಿಖರ್ ಧವನ್ ಹೇಳಿದ್ದೇನು?

ಖಾಸಗಿ ಚಾನೆಲ್​ವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಶಿಖರ್ ಧವನ್, ವೈಭವ್ ಸೂರ್ಯವಂಶಿ  ಅವರ ಈಗ ವಯಸ್ಸು ಎಷ್ಟು, 13-14? ಈ ವಯಸ್ಸಿನಲ್ಲಿ ಐಪಿಎಲ್ ಆಡುವುದು ದೊಡ್ಡ ವಿಷಯ. ದೊಡ್ಡ ಹೊಡೆತಗಳನ್ನು ಹೊಡೆಯುವಾಗ ಅವರ ಆತ್ಮವಿಶ್ವಾಸವನ್ನು ನೋಡಿದಾಗ, ನನಗೆ ತುಂಬಾ ಆಶ್ಚರ್ಯವಾಗುತ್ತದೆ ಎಂದರು.

ಐಪಿಎಲ್‌ನಿಂದಾಗಿ, ಈಗ ಪ್ರತಿಯೊಂದು ಮಗುವೂ 5ನೇ ವಯಸ್ಸಿನಿಂದಲೇ ಕ್ರಿಕೆಟ್ ಟೂರ್ನಿ ಆಡುವ ಕನಸು ಕಾಣುತ್ತಿದೆ. ವೈಭವ್ ಈ ಕನಸನ್ನು ನನಸಾಗಿಸಿದ್ದಾರೆ. ಇದಕ್ಕಾಗಿ ನಾನು ಅವರನ್ನು ಮತ್ತು ಅವರ ಕುಟುಂಬವನ್ನು ಅಭಿನಂದಿಸುತ್ತೇನೆ. ಕ್ರಿಕೆಟ್‌ನಲ್ಲಿರುವ ನಮಗೆಲ್ಲರಿಗೂ ಇದು ತುಂಬಾ ಹೆಮ್ಮೆಯ ವಿಷಯ. ಆದರೆ ಇದು ಇಲ್ಲಿಗೆ ಕೊನೆಯಾಗುತ್ತಿಲ್ಲ ಎಂಬುದರ ಬಗ್ಗೆ ಎಚ್ಚರಿಕೆ ಇರಬೇಕು.

ಏಕೆಂದರೆ ವೈಭವ್ ತಮ್ಮ ಸ್ಫೋಟಕ ಬ್ಯಾಟಿಂಗ್‌ನಿಂದಾಗಿ ಪ್ರಸಿದ್ಧರಾಗಿದ್ದಾರೆ. ಖ್ಯಾತಿ ಮತ್ತು ಹಣವನ್ನು ನಿಭಾಯಿಸುವುದು ಸವಾಲಿನ ಕೆಲಸ. ಈ ಹಿಂದೆ  ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಮಾಜಿ ಭಾರತೀಯ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ಇದ್ದರು. ಹೀಗಾಗಿ ಯುವ ದಾಂಡಿಗ ಅವರ ಕಂಟ್ರೋಲ್​ನಲ್ಲಿ ಇದ್ದರು. ಐಪಿಎಲ್ 2025 ರ ಸಮಯದಲ್ಲಿ ವೈಭವ್ ಅವರನ್ನು ಎಲ್ಲಿಯೂ ಅಲೆದಾಡಲು ಬಿಡಲಿಲ್ಲ.

ರಾಹುಲ್​ ದ್ರಾವಿಡ್ ಮತ್ತು ವಿಕ್ರಮ್ ರಾಥೋಡ್ ಉತ್ತಮ ಕ್ರಿಕೆಟಿಗರನ್ನು ರೂಪಿಸುವುದಲ್ಲದೆ, ವ್ಯಕ್ತಿತ್ವದ ಬೆಳವಣಿಗೆಯತ್ತ ಕೂಡ ಗಮನ ಕೊಡುತ್ತಾರೆ. ಹೀಗಾಗಿ ಆರಂಭದಲ್ಲೇ ವೈಭವ್  ಉತ್ತಮ ವ್ಯಕ್ತಿಗಳ ನಡುವಿನಲ್ಲಿದ್ದರು ಎನ್ನಬಹುದು. ಆದರೆ ಮುಂದಿನ ಸೀಸನ್​ನಲ್ಲಿ ಅವರು ಯಾವ ತಂಡದ ಪರ ಆಡಲಿದ್ದಾರೆ ಎಂಬುದು ಗೊತ್ತಿಲ್ಲ. ಅದರಲ್ಲೂ ಅವರು ದ್ವಿತೀಯ ಸೀಸನ್​ ಆಡುವುದು ಸುಲಭವಲ್ಲ.

ಇದನ್ನೂ ಓದಿ: ಯಶಸ್ವಿ ಜೈಸ್ವಾಲ್ ಆರ್ಭಟಕ್ಕೆ ದ್ರಾವಿಡ್, ಸೆಹ್ವಾಗ್ ದಾಖಲೆಗಳೇ ಧೂಳೀಪಟ

ನನ್ನ ಪ್ರಕಾರ, ಐಪಿಎಲ್ 2026 ವೈಭವ್ ಸೂರ್ಯವಂಶಿಗೆ ತುಂಬಾ ಕಷ್ಟಕರವಾಗಲಿದೆ. ಏಕೆಂದರೆ ಈಗ ಬೌಲರ್‌ಗಳು ಅವರ ಶಕ್ತಿ ಏನೆಂದು ತಿಳಿದಿದ್ದಾರೆ. ಅವರು ವೈಭವ್ ವಿರುದ್ಧ ಉತ್ತಮ ತಂತ್ರವನ್ನು ರೂಪಿಸುತ್ತಾರೆ. ಅವರು ಈ ಸವಾಲುಗಳನ್ನು ಎದುರಿಸಬೇಕು ಮತ್ತು ಮುಂದುವರಿಯಬೇಕು. ಅವರು ತಮ್ಮ ಮಾನಸಿಕ ಆರೋಗ್ಯವನ್ನು ಹೇಗೆ ನೋಡಿಕೊಳ್ಳುತ್ತಾರೆ ಎಂಬುದು ಮುಂದೆ ಬಹಳ ಮುಖ್ಯವಾಗುತ್ತದೆ. ವೈಭವ್ ಈ ಎಲ್ಲ ವಿಷಯಗಳನ್ನು ಹೇಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಅವರ ಬೆಳವಣಿಗೆ ಇರಲಿದೆ ಎಂದು ಶಿಖರ್ ಧವನ್ ಹೇಳಿದ್ದಾರೆ.

ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
ಶಾಮನೂರು ಶಿವಶಂಕರಪ್ಪನವರಿಗೆ ಏನಾಗಿತ್ತು?ಆಸ್ಪತ್ರೆ ಮುಖ್ಯಸ್ಥ ಹೇಳಿದ್ದಿಷ್ಟು
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
‘ಮಾರ್ಕ್’-‘45’ ಒಂದೇ ದಿನ ಬಿಡುಗಡೆ: ಸುದೀಪ್ ಹೇಳಿದ್ದೇನು?
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ರಾಜಕೀಯಕ್ಕೆ ಬಂದ್ರೆ ಸ್ಟೈಲ್ ಆಗಿ ಬರ್ತೀನಿ: ಸುದೀಪ್
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ