IPL 2026: ಕೊನೆ ಕ್ಷಣದ ಬದಲಾವಣೆ… ಕನ್ನಡಿಗ ಸೇರಿದಂತೆ 19 ಆಟಗಾರರ ಹೆಸರು ಸೇರ್ಪಡೆ

IPL Auction 2026:ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಹರಾಜು ಪ್ರಕ್ರಿಯೆ ಡಿಸೆಂಬರ್ 16 ರಂದು ನಡೆಯಲಿದೆ. ಅಬುಧಾಬಿಯ ಇತಿಹಾದ್ ಅರೇನಾದಲ್ಲಿ ನಡೆಯಲಿರುವ ಈ ಮಿನಿ ಆಕ್ಷನ್​ನಲ್ಲಿ ಒಟ್ಟು 369 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ ಆಟಗಾರರ ಸಂಪೂರ್ಣ ಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

IPL 2026: ಕೊನೆ ಕ್ಷಣದ ಬದಲಾವಣೆ... ಕನ್ನಡಿಗ ಸೇರಿದಂತೆ 19 ಆಟಗಾರರ ಹೆಸರು ಸೇರ್ಪಡೆ
Kl Shrijit

Updated on: Dec 16, 2025 | 9:58 AM

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್-19ರ ಮಿನಿ ಹರಾಜಿಗೂ ಮುನ್ನ ಆಕ್ಷನ್ ಪಟ್ಟಿಯಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದೆ. ಈ ಹಿಂದೆ ಪ್ರಕಟಿಸಿದ್ದ 350 ಆಟಗಾರರ ಪಟ್ಟಿಗೆ 19 ಮಂದಿಯನ್ನು ಮತ್ತೆ ಸೇರ್ಪಡೆಗೊಳಿಸಲಾಗಿದೆ. ಹೀಗೆ ಸೇರ್ಪಡೆಗೊಂಡ ಆಟಗಾರರಲ್ಲಿ ಕರ್ನಾಟಕದ ವಿಕೆಟ್ ಕೀಪರ್ ಬ್ಯಾಟರ್ ಕೆಎಲ್ ಶ್ರೀಜಿತ್ ಕೂಡ ಇರುವುದು ವಿಶೇಷ.

ಶ್ರೀಜಿತ್ ಕಳೆದ ಸೀಸನ್​ನಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕೆ ಆಯ್ಕೆಯಾಗಿದ್ದರು. ಇದಾಗ್ಯೂ ಅವರಿಗೆ ಆಡಲು ಅವಕಾಶ ಸಿಕ್ಕಿರಲಿಲ್ಲ. ಇನ್ನು ಈ ಬಾರಿ ಪ್ರಕಟಿಸಿದ ಮೊದಲ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿರಲಿಲ್ಲ.

ಇದೀಗ ಪರಿಷ್ಕೃತ ಪಟ್ಟಿಯಲ್ಲಿ ಕೆಎಲ್ ಶ್ರೀಜಿತ್, ಆರ್​ಸಿಬಿ ಮಾಜಿ ಆಟಗಾರರಾದ ಸ್ವಸ್ತಿಕ್ ಚಿಕಾರ, ಝಿಂಬಾಬ್ವೆ ವೇಗಿ ಬ್ಲೆಸಿಂಗ್ ಮುಝರಬಾನಿ, ಆಸ್ಟ್ರೇಲಿಯಾ ಆಟಗಾರ ಕ್ರಿಸ್ ಗ್ರೀನ್ ಹೆಸರುಗಳು ಕಾಣಿಸಿಕೊಂಡಿದೆ.

ಹರಾಜು ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡ 19 ಆಟಗಾರರು:

  1. ಮಣಿಶಂಕರ್ ಮುರಾಸಿಂಗ್ (30 ಲಕ್ಷ ರೂ.)
  2. ಸ್ವಸ್ತಿಕ್ ಚಿಕಾರ (30 ಲಕ್ಷ ರೂ.)
  3. ಎಥಾನ್ ಬಾಷ್ (75 ಲಕ್ಷ ರೂ.)
  4. ವಿರಂದೀಪ್ ಸಿಂಗ್ (30 ಲಕ್ಷ ರೂ.)
  5. ಚಾಮಾ ಮಿಲಿಂದ್ (30 ಲಕ್ಷ ರೂ.)
  6. ಕೆಎಲ್ ಶ್ರೀಜಿತ್ (30 ಲಕ್ಷ ರೂ.)
  7. ಕ್ರೀಸ್ ಗ್ರೀನ್ (75 ಲಕ್ಷ ರೂ.)
  8. ರಾಹುಲ್ ರಾಜ್ (30 ಲಕ್ಷ ರೂ.)
  9. ವಿರಾಟ್ ಸಿಂಗ್ (30 ಲಕ್ಷ ರೂ.)
  10. ಅಭಿಮನ್ಯು ಈಶ್ವರನ್ (30 ಲಕ್ಷ ರೂ.)
  11. ತ್ರಿಪುರೇಶ್ ಸಿಂಗ್ (30 ಲಕ್ಷ ರೂ.)
  12. ಕೈಲ್ ವೆರ್ರೆನ್ (1.25 ಕೋಟಿ ರೂ.)
  13. ಬ್ಲೆಸ್ಸಿಂಗ್ ಮುಝರಬಾನಿ (75 ಲಕ್ಷ ರೂ.)
  14. ಬೆನ್ ಸಿಯರ್ಸ್ (1.50 ಕೋಟಿ ರೂ.)
  15. ರಾಜೇಶ್ ಮೊಹಂತಿ (30 ಲಕ್ಷ ರೂ.)
  16. ಸ್ವಸ್ತಿಕ್ ಸಮಲ್ (30 ಲಕ್ಷ ರೂ.)
  17. ಸೂರಜ್ ಸಂಗರಾಜು (30 ಲಕ್ಷ ರೂ.)
  18. ತನ್ಮಯ್ ಅಗರ್ವಾಲ್ (30 ಲಕ್ಷ ರೂ.)
  19. ಸರನ್ಶ್ ಜೈನ್ (30 ಲಕ್ಷ ರೂ.)

369 ಆಟಗಾರರು:

ಈ ಬಾರಿಯ ಹರಾಜಿನಲ್ಲಿ ಒಟ್ಟು 369 ಆಟಗಾರರ ಹೆಸರು ಕಾಣಿಸಿಕೊಳ್ಳಲಿದೆ. ಈ 369 ಆಟಗಾರರಲ್ಲಿ 251 ಭಾರತೀಯರು ಮತ್ತು 118 ವಿದೇಶಿ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಟೀಮ್ ಇಂಡಿಯಾ ಪರ ಆಡಿದ 16 ಆಟಗಾರರಿದ್ದಾರೆ. ಇನ್ನುಳಿದ 235 ಆಟಗಾರರು ದೇಶೀಯ ಟೂರ್ನಿ ಆಡಿದ ಕ್ರಿಕೆಟಿಗರು.

ಹಾಗೆಯೇ 115 ವಿದೇಶೀ ಆಟಗಾರರಲ್ಲಿ ರಾಷ್ಟ್ರೀಯ ತಂಡದ ಪರ ಆಡಿದ ಆಟಗಾರರ ಸಂಖ್ಯೆ 99. ಇನ್ನು ರಾಷ್ಟ್ರೀಯ ತಂಡದ ಪರ ಕಣಕ್ಕಿಳಿಯದ 16 ವಿದೇಶಿ ಆಟಗಾರರು ಕೂಡ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಆಟಗಾರರ ಮೂಲ ಬೆಲೆ ಎಷ್ಟು?

ಐಪಿಎಲ್ ಹರಾಜಿನಲ್ಲಿ ಕಾಣಿಸಿಕೊಳ್ಳಲಿರುವ 369 ಆಟಗಾರರಲ್ಲಿ 40 ಮಂದಿ ತಮ್ಮ ಮೂಲ ಬೆಲೆ 2 ಕೋಟಿ ರೂ. ಎಂದು ಘೋಷಿಸಿದ್ದಾರೆ. ಇನ್ನು 10 ಆಟಗಾರರ ಬೇಸ್ ಪ್ರೈಸ್ 1.50 ಕೋಟಿ ರೂ. ಹಾಗೆಯೇ 4 ಆಟಗಾರರು 1.25 ಕೋಟಿ ರೂ. ಮೂಲ ಬೆಲೆ ಘೋಷಿಸಿದ್ದಾರೆ.

ಇದನ್ನೂ ಓದಿ: IPL 2026 Auction: ಯಾವ ತಂಡ ಎಷ್ಟು ಆಟಗಾರರನ್ನು ಖರೀದಿಸಬಹುದು? ಇಲ್ಲಿದೆ ಮಾಹಿತಿ

17 ಆಟಗಾರರು 1 ಕೋಟಿ ರೂ. ಮೂಲ ಬೆಲೆಯೊಂದಿಗೆ ಕಾಣಿಸಿಕೊಂಡರೆ, 44 ಆಟಗಾರರು ತಮ್ಮ ಆರಂಭಿಕ ಬೆಲೆ 75 ಲಕ್ಷ ರೂ. ಎಂದು ತಿಳಿಸಿದ್ದಾರೆ. ಹಾಗೆಯೇ 50 ಲಕ್ಷ ರೂ. ಮೂಲ ಬೆಲೆ ಹೊಂದಿರುವ 4 ಆಟಗಾರರು, 40 ಲಕ್ಷ ರೂ. ಮೂಲ ಬೆಲೆ ಘೋಷಿಸಿರುವ 7 ಆಟಗಾರರು ಈ ಪಟ್ಟಿಯಲ್ಲಿದ್ದಾರೆ.