IPL Auction 2026 Highlights: 77 ಆಟಗಾರರ ಖರೀದಿಯೊಂದಿಗೆ ಅಂತ್ಯಗೊಂಡ ಮಿನಿ ಹರಾಜು

IPL Auction 2026 Highlights in Kannada: ಐಪಿಎಲ್ 2026 ಸೀಸನ್‌ಗಾಗಿ ಮಿನಿ ಹರಾಜು ಮುಗಿದಿದ್ದು, ಲಭ್ಯವಿರುವ 77 ಸ್ಥಾನಗಳಲ್ಲಿ 77 ಸ್ಥಾನಗಳು ಭರ್ತಿಯಾಗಿವೆ. ಇದರರ್ಥ ಒಂಬತ್ತು ಫ್ರಾಂಚೈಸಿಗಳು ತಲಾ 25 ಆಟಗಾರರ ತಂಡಗಳನ್ನು ಪೂರ್ಣಗೊಳಿಸಿವೆ. ಏತನ್ಮಧ್ಯೆ, ಸರಿಸುಮಾರು 300 ಆಟಗಾರರು ಮುಂದಿನ ಸೀಸನ್‌ವರೆಗೆ ಕಾಯಬೇಕಾಗುತ್ತದೆ.

IPL Auction 2026 Highlights: 77 ಆಟಗಾರರ ಖರೀದಿಯೊಂದಿಗೆ ಅಂತ್ಯಗೊಂಡ ಮಿನಿ ಹರಾಜು
Ipl Auction 2026

Updated on: Dec 16, 2025 | 9:45 PM

ಐಪಿಎಲ್ 2026 ರ ಮಿನಿ ಹರಾಜು ಪೂರ್ಣಗೊಂಡಿದೆ. ಎಲ್ಲಾ 10 ಫ್ರಾಂಚೈಸಿಗಳು ಒಟ್ಟು 77 ಸ್ಥಾನಗಳಿಗೆ ಬಿಡ್ ಮಾಡಿದ್ದವು. ಕುತೂಹಲಕಾರಿಯಾಗಿ 77 ಸ್ಥಾನಗಳು ಭರ್ತಿಯಾಗಿದ್ದು ಎಲ್ಲಾ ತಂಡಗಳು ಮುಂಬರುವ ಸೀಸನ್​ಗಾಗಿ ಸಂಪೂರ್ಣವಾಗಿ ಸಿದ್ಧವಾಗಿವೆ. 77 ಆಟಗಾರರಲ್ಲಿ, ಒಟ್ಟು 29 ವಿದೇಶಿ ಆಟಗಾರರ ಖರೀದಿಯಾಗಿದೆ. ಎಲ್ಲಾ 10 ತಂಡಗಳು ಒಟ್ಟಾಗಿ 215.45 ಕೋಟಿ ರೂ. ಖರ್ಚು ಮಾಡಿವೆ. ಈ ಹರಾಜಿನಲ್ಲಿ ಕ್ಯಾಮರೂನ್ ಗ್ರೀನ್ ಅತಿ ಹೆಚ್ಚು ಬೆಲೆಗೆ ಮಾರಾಟವಾದರು. ಗ್ರೀನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 25.20 ಕೋಟಿ ರೂ.ಗೆ ಖರೀದಿಸಿತು. ಈ ಮಧ್ಯೆ, ಕೆಕೆಆರ್ ಮಥಿಶಾ ಪತಿರಾನ ಅವರನ್ನು 18 ಕೋಟಿ ರೂ.ಗೆ ತಂಡಕ್ಕೆ ಸೇರಿಸಿಕೊಂಡಿತು.

LIVE NEWS & UPDATES

The liveblog has ended.
  • 16 Dec 2025 09:37 PM (IST)

    ಮಿನಿ ಹರಾಜು ಅಂತ್ಯ

    ಐಪಿಎಲ್ 2026 ಸೀಸನ್‌ಗಾಗಿ ಮಿನಿ ಹರಾಜು ಮುಗಿದಿದ್ದು, ಲಭ್ಯವಿರುವ 77 ಸ್ಥಾನಗಳಲ್ಲಿ 76 ಸ್ಥಾನಗಳು ಭರ್ತಿಯಾಗಿವೆ. ಇದರರ್ಥ ಒಂಬತ್ತು ಫ್ರಾಂಚೈಸಿಗಳು ತಲಾ 25 ಆಟಗಾರರ ತಂಡಗಳನ್ನು ಪೂರ್ಣಗೊಳಿಸಿವೆ. ಡೆಲ್ಲಿ ಕ್ಯಾಪಿಟಲ್ಸ್ ಮಾತ್ರ ತಮ್ಮ ತಂಡದಲ್ಲಿ 24 ಆಟಗಾರರನ್ನು ಹೊಂದಿದೆ. ಏತನ್ಮಧ್ಯೆ, ಸರಿಸುಮಾರು 300 ಆಟಗಾರರು ಮುಂದಿನ ಸೀಸನ್‌ವರೆಗೆ ಕಾಯಬೇಕಾಗುತ್ತದೆ.

  • 16 Dec 2025 09:15 PM (IST)

    ಆರ್‌ಸಿಬಿ ಸೇರಿದ ವಿಕಿ ಓಸ್ಟ್ವಾಲ್

    ಆರ್‌ಸಿಬಿ ತಂಡ ಅನ್‌ಕ್ಯಾಪ್ಡ್ ಸ್ಪಿನ್ನರ್ ವಿಕಿ ಓಸ್ಟ್ವಾಲ್ ಅವರನ್ನು 30 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತು.


  • 16 Dec 2025 08:53 PM (IST)

    ಜ್ಯಾಕ್ ಎಡ್ವರ್ಡ್ಸ್ ಹೈದರಾಬಾದ್​ಗೆ

    ಆಸ್ಟ್ರೇಲಿಯಾದ ಆಲ್‌ರೌಂಡರ್ ಜ್ಯಾಕ್ ಎಡ್ವರ್ಡ್ಸ್ ಅವರನ್ನು ಸನ್‌ರೈಸರ್ಸ್ ಹೈದರಾಬಾದ್ 3 ಕೋಟಿಗೆ ಖರೀದಿಸಿದೆ.

  • 16 Dec 2025 08:43 PM (IST)

    ಪಂಜಾಬ್ ತಂಡಕ್ಕೆ ಪ್ರವೀಣ್ ದುಬೆ

    ಪಂಜಾಬ್ ಕಿಂಗ್ಸ್ ತಂಡ ಅನ್‌ಕ್ಯಾಪ್ಡ್ ಸ್ಪಿನ್ನರ್ ಪ್ರವೀಣ್ ದುಬೆ ಅವರನ್ನು 30 ಲಕ್ಷ ರೂ.ಗೆ ಖರೀದಿಸಿದೆ.

  • 16 Dec 2025 08:42 PM (IST)

    ದೆಹಲಿ ತಂಡಕ್ಕೆ ಎನ್‌ಗಿಡಿ

    ದಕ್ಷಿಣ ಆಫ್ರಿಕಾದ ವೇಗಿ ಲುಂಗಿ ಎನ್‌ಗಿಡಿ ಅವರನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡವು 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿದೆ .

  • 16 Dec 2025 08:35 PM (IST)

    ಲಕ್ನೋ ಸೇರಿದ ಜೋಶ್ ಇಂಗ್ಲಿಸ್

    ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟ್ಸ್‌ಮನ್ ಜೋಶ್ ಇಂಗ್ಲಿಸ್ ಅವರನ್ನು ಲಕ್ನೋ 8.60 ಕೋಟಿಗೆ ಖರೀದಿಸಿದೆ.

  • 16 Dec 2025 08:34 PM (IST)

    ಆರ್‌ಸಿಬಿ ಸೇರಿದ ಜೋರ್ಡಾನ್ ಕಾಕ್ಸ್

    ಇಂಗ್ಲೆಂಡ್ ಬ್ಯಾಟ್ಸ್‌ಮನ್ ಜೋರ್ಡಾನ್ ಕಾಕ್ಸ್ ಅವರನ್ನು ಆರ್‌ಸಿಬಿ 75 ಲಕ್ಷ ರೂ. ಮೂಲ ಬೆಲೆಗೆ ಖರೀದಿಸಿತು.

  • 16 Dec 2025 08:34 PM (IST)

    ಸಿಎಸ್‌ಕೆ ತಂಡಕ್ಕೆ ರಾಹುಲ್ ಚಹಾರ್

    ಲೆಗ್ ಸ್ಪಿನ್ನರ್ ರಾಹುಲ್ ಚಹಾರ್ ಅವರನ್ನು ಸಿಎಸ್‌ಕೆ 5.20 ಕೋಟಿಗೆ ಖರೀದಿಸಿತು.

  • 16 Dec 2025 08:33 PM (IST)

    ಕೆಕೆಆರ್ ಸೇರಿದ ರಚಿನ್

    ನ್ಯೂಜಿಲೆಂಡ್‌ನ ರಚಿನ್ ರವೀಂದ್ರ ಕೂಡ ಹೊಸ ತಂಡವನ್ನು ಪಡೆದುಕೊಂಡಿದ್ದು, ಈ ಬಾರಿ ಕೋಲ್ಕತ್ತಾ ಅವರನ್ನು 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿದೆ.

  • 16 Dec 2025 08:18 PM (IST)

    13 ಕೋಟಿಗೆ ಮಾರಾಟವಾದ ಲಿವಿಂಗ್‌ಸ್ಟೋನ್

    ಮೊದಲ ಸುತ್ತಿನಲ್ಲಿ ಹರಾಜಾಗದೆ ಉಳಿದಿದ್ದ ಇಂಗ್ಲೆಂಡ್​ನ ಸ್ಫೋಟಕ ಆಲ್​ರೌಂಡರ್ ಲಿವಿಂಗ್‌ಸ್ಟೋನ್ ಅವರನ್ನು SRH 13 ಕೋಟಿಗೆಖರೀದಿಸಿತು.

  • 16 Dec 2025 08:04 PM (IST)

    ಸಿಎಸ್‌ಕೆ ಸೇರಿದ ಸರ್ಫರಾಜ್

    75 ಲಕ್ಷ ರೂಗಳಿಗೆ ಸರ್ಫರಾಜ್ ಖಾನ್ ಅವರನ್ನು ಸಿಎಸ್​ಕೆ ಫ್ರಾಂಚೈಸಿ ಖರೀದಿಸಿದೆ.

  • 16 Dec 2025 07:20 PM (IST)

    ಕೂಪರ್ ಕಾನೋಲಿ ಪಂಜಾಬ್‌ಗೆ

    ಆಸ್ಟ್ರೇಲಿಯಾದ ಯುವ ಆಲ್‌ರೌಂಡರ್ ಕೂಪರ್ ಕಾನೋಲಿ ಕೂಡ ಐಪಿಎಲ್‌ಗೆ ಪಾದಾರ್ಪಣೆ ಮಾಡಿದರು. ಪಂಜಾಬ್ ಕಿಂಗ್ಸ್ ಅವರನ್ನು 3 ಕೋಟಿಗೆ ಖರೀದಿಸಿತು. ಈ ಹರಾಜಿನಲ್ಲಿ ಇದು ಫ್ರಾಂಚೈಸಿಯ ಮೊದಲ ಖರೀದಿಯಾಗಿದೆ.

  • 16 Dec 2025 07:15 PM (IST)

    ಆರ್​ಸಿಬಿಗೆ ಮಂಗೇಶ್ ಯಾದವ್

    ಮಧ್ಯಪ್ರದೇಶದ ಎಡಗೈ ವೇಗದ ಬೌಲರ್ ಮಂಗೇಶ್ ಯಾದವ್ ಅವರನ್ನು ಆರ್‌ಸಿಬಿ 5.20 ಕೋಟಿಗೆ ಖರೀದಿಸಿತು. ರಜತ್ ಪಾಟಿದಾರ್ ನಾಯಕತ್ವದಲ್ಲಿ ಎಂಪಿ ತಂಡದ ಪರ ಆಡುವ ಮಂಗೇಶ್ ಈ ಬಾರಿ ಆರ್​ಸಿಬಿ ಪರ ಆಡಲಿದ್ದಾರೆ.

  • 16 Dec 2025 07:02 PM (IST)

    ಆರ್‌ಸಿಬಿ ಸೇರಿದ ಸಾತ್ವಿಕ್ ದೇಸ್ವಾಲ್

    30 ಲಕ್ಷ ರೂ. ಮೂಲ ಬೆಲೆಗೆ ಆರ್‌ಸಿಬಿ ಸೇರಿದ ಸಾತ್ವಿಕ್ ದೇಸ್ವಾಲ್

  • 16 Dec 2025 06:44 PM (IST)

    ಜೇಸನ್ ಹೋಲ್ಡರ್ ಭರ್ಜರಿ ಬೇಡಿಕೆ

    ಗುಜರಾತ್ ಟೈಟಾನ್ಸ್ ತಂಡವು ವೆಸ್ಟ್ ಇಂಡೀಸ್‌ನ ಅನುಭವಿ ಆಲ್‌ರೌಂಡರ್ ಜೇಸನ್ ಹೋಲ್ಡರ್ ಅವರನ್ನು 7 ಕೋಟಿಗೆ ಖರೀದಿಸಿದೆ.

  • 16 Dec 2025 06:42 PM (IST)

    ದೆಹಲಿ ಸೇರಿದ ನಿಸ್ಸಾಂಕ

    ಶ್ರೀಲಂಕಾದ ಸ್ಟಾರ್ ಬ್ಯಾಟ್ಸ್‌ಮನ್ ಪಾತುಮ್ ನಿಸ್ಸಾಂಕಾ ಅವರನ್ನು ದೆಹಲಿ ಕ್ಯಾಪಿಟಲ್ಸ್ 4 ಕೋಟಿಗೆ ಖರೀದಿಸಿದೆ. ನಿಸ್ಸಾಂಕಾ ಮೊದಲ ಬಾರಿಗೆ ಐಪಿಎಲ್‌ನಲ್ಲಿ ಆಡಲಿದ್ದಾರೆ.

  • 16 Dec 2025 05:54 PM (IST)

    ರಾಜಸ್ಥಾನ ಸೇರಿದ ವಿಘ್ನೇಶ್

    ಕಳೆದ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಹಿಟ್ ಆಗಿದ್ದ ಸ್ಪಿನ್ನರ್ ವಿಘ್ನೇಶ್ ಪುತ್ತೂರ್ ಅವರನ್ನು ಈ ಬಾರಿ ರಾಜಸ್ಥಾನ ರಾಯಲ್ಸ್ 30 ಲಕ್ಷ ರೂ.ಗೆ ಖರೀದಿಸಿತು.

  • 16 Dec 2025 05:32 PM (IST)

    ಕೆಕೆಆರ್​ಗೆ ಕಾರ್ತಿಕ್ ತ್ಯಾಗಿ

    ಈ ಹಿಂದೆ ಐಪಿಎಲ್‌ನಲ್ಲಿ ಆಡಿರುವ ವೇಗದ ಬೌಲರ್ ಕಾರ್ತಿಕ್ ತ್ಯಾಗಿ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್ 30 ಲಕ್ಷ ಮೂಲ ಬೆಲೆಗೆ ಖರೀದಿಸಿತು .

  • 16 Dec 2025 05:24 PM (IST)

    ಲಕ್ನೋಗೆ ಮುಕುಲ್ ಚೌಧರಿ

    ಲಕ್ನೋ ಸೂಪರ್ ಜೈಂಟ್ಸ್ ತಂಡವು 21 ವರ್ಷದ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ಮುಕುಲ್ ಚೌಧರಿ ಅವರನ್ನು 2.60 ಕೋಟಿ ರೂಪಾಯಿಗಳಿಗೆ ಖರೀದಿಸಿದೆ.

  • 16 Dec 2025 05:16 PM (IST)

    ಕಾರ್ತಿಕ್ ಶರ್ಮಾಗೆ 14.20 ಕೋಟಿ

    19 ವರ್ಷದ ರಾಜಸ್ಥಾನ ವಿಕೆಟ್ ಕೀಪರ್ ಕಾರ್ತಿಕ್ ಶರ್ಮಾ ಅವರ ಮೂಲ ಬೆಲೆ 30 ಲಕ್ಷ ರೂ.

    ಬಿಡ್ಡಿಂಗ್ ಆರಂಭಿಸಿದ ಮುಂಬೈ.

    ಲಕ್ನೋ ಎಂಟ್ರಿ, 2 ಕೋಟಿ ಗಡಿ ದಾಟಿದ ಬಿಡ್.

    ಸಿಎಸ್‌ಕೆ ಮತ್ತು ಕೆಕೆಆರ್ ನಡುವೆ ಫೈಟ್

    8 ಕೋಟಿ ತಲುಪಿದ ಕಾರ್ತಿಕ್‌ ಅವರ ಬಿಡ್.

    13.20 ಕೋಟಿಗೆ ಬಿಡ್ ಮಾಡಿದ ಎಸ್​ಆರ್​ಹೆಚ್.

    14.20 ಕೋಟಿಗೆ ಸಿಎಸ್‌ಕೆ ಸೇರಿದ ಕಾರ್ತಿಕ್ ಶರ್ಮಾ.

  • 16 Dec 2025 05:01 PM (IST)

    ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಪ್ರಶಾಂತ್ ವೀರ್

    ಪ್ರಶಾಂತ್ ವೀರ್ ಐಪಿಎಲ್ ಇತಿಹಾಸದಲ್ಲಿ ಅತ್ಯಂತ ದುಬಾರಿ ಅನ್‌ಕ್ಯಾಪ್ಡ್ ಆಟಗಾರ ಎನಿಸಿಕೊಂಡಿದ್ದಾರೆ.

    SRH ಮತ್ತು CSK ನಡುವೆ ಬಿಡ್ಡಿಂಗ್ ಆರಂಭ

    SRH 13 ಕೋಟಿ ಬಿಡ್ ಮಾಡಿದೆ.

    13.8 ಕೋಟಿ ತಲುಪಿದ ಸಿಎಸ್‌ಕೆ.

    14.20 ಕೋಟಿಗೆ ಖರೀದಿಸಿದ ಚೆನ್ನೈ.

  • 16 Dec 2025 04:49 PM (IST)

    ಆಕಿಬ್ ದಾರ್‌ಗೆ 8.4 ಕೋಟಿ

    ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲಿಂಗ್ ಆಲ್‌ರೌಂಡರ್ ಆಕಿಬ್ ದಾರ್ 30 ಲಕ್ಷ ಮೂಲ ಬೆಲೆಯೊಂದಿಗೆ ಹರಾಜಿನಲ್ಲಿದ್ದಾರೆ.

    ಬಿಡ್ಡಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್.

    ರಾಜಸ್ಥಾನ್ ರಾಯಲ್ಸ್ ಎಂಟ್ರಿ.

    1 ಕೋಟಿ ದಾಟಿದ ತಕ್ಷಣ ರಾಜಸ್ಥಾನ ಔಟ್.

    ಆರ್​ಸಿಬಿ ಎಂಟ್ರಿ, 2 ಕೋಟಿ ತಲುಪಿದ ಬಿಡ್.

    ಆರ್‌ಸಿಬಿ ಔಟ್, ಹೈದರಾಬಾದ್ ಇನ್.

    8.40 ಕೋಟಿಗೆ ಖರೀದಿಸಿದ ಡೆಲ್ಲಿ ಕ್ಯಾಪಿಟಲ್ಸ್

  • 16 Dec 2025 04:45 PM (IST)

    ಮಾರಾಟವಾಗದೆ ಉಳಿದ ಸ್ಟಾರ್ ಆಟಗಾರರು

    ಲಿಯಾಮ್ ಲಿವಿಂಗ್‌ಸ್ಟನ್

    ರಚಿನ್ ರವೀಂದ್ರ

    ಮ್ಯಾಟ್ ಹೆನ್ರಿ

    ಜೇಮೀ ಸ್ಮಿತ್

    ಜೆರಾಲ್ಡ್ ಕೋಟ್ಜಿಯಾ

    ಪೃಥ್ವಿ ಶಾ

    ಸರ್ಫರಾಜ್ ಖಾನ್

    ಮಹಿಷ ತೀಕ್ಷಣಾ

    ಗಸ್ ಅಟ್ಕಿನ್ಸನ್

    ಜೇಕ್ ಫ್ರೇಸರ್-ಮೆಕ್‌ಗುರ್ಕ್

    ಡೆವೊನ್ ಕಾನ್ವೇ

    ಜಾನಿ ಬೈರ್‌ಸ್ಟೋವ್

    ರಹಮಾನುಲ್ಲಾ ಗುರ್ಬಾಜ್

  • 16 Dec 2025 04:37 PM (IST)

    ಇಲ್ಲಿಯವರೆಗೆ ದುಬಾರಿ ಬೆಲೆಗೆ ಮಾರಾಟವಾದ ಆಟಗಾರರು

    ಇಲ್ಲಿಯವರೆಗೆ, ಹರಾಜಿನಲ್ಲಿ ಕೇವಲ 12 ಆಟಗಾರರನ್ನು ಮಾತ್ರ ಖರೀದಿಸಲಾಗಿದೆ. ಅದರಲ್ಲಿ 4 ಆಟಗಾರರು ಅಧಿಕ ಮೊತ್ತ ಪಡೆದಿದ್ದಾರೆ.

    ಕ್ಯಾಮೆರಾನ್ ಗ್ರೀನ್ – 25.20 ಕೋಟಿ, ಕೆಕೆಆರ್

    ಮತಿಶಾ ಪತಿರ್ನಾ – 18 ಕೋಟಿ, ಕೆಕೆಆರ್

    ರವಿ ಬಿಷ್ಣೋಯ್ – 7.20 ಕೋಟಿ, ರಾಜಸ್ಥಾನ್ ರಾಯಲ್ಸ್

    ವೆಂಕಟೇಶ್ ಅಯ್ಯರ್ – 7 ಕೋಟಿ, ಆರ್‌ಸಿಬಿ

  • 16 Dec 2025 04:16 PM (IST)

    ರವಿ ಬಿಷ್ಣೋಯ್ ಸರದಿ

    ರವಿ ಬಿಷ್ಣೋಯ್ ಮೂಲ ಬೆಲೆ 2 ಕೋಟಿ ರೂ.

    ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಬಿಡ್ಡಿಂಗ್.

    ಬಿಷ್ಣೋಯ್ ಬೆಲೆ 5 ಕೋಟಿಗೂ ಮೀರಿದೆ.

    ರಾಜಸ್ಥಾನ 6 ಕೋಟಿ ರೂ.ಗೆ ಬಿಡ್ ಮಾಡಿದೆ.

    ರಾಜಸ್ಥಾನ ಮತ್ತು ಹೈದರಾಬಾದ್ 7 ಕೋಟಿ ರೂ.ಗೂ ಹೆಚ್ಚು ಬಿಡ್ ಮಾಡಿವೆ.

    7.20 ಕೋಟಿಗೆ ರಾಜಸ್ಥಾನ್ ರಾಯಲ್ಸ್ ಸೇರಿದ ರವಿ.

  • 16 Dec 2025 04:13 PM (IST)

    ಲಕ್ನೋ ಸೇರಿದ ಆಫ್ರಿಕಾ ವೇಗಿ

    ದಕ್ಷಿಣ ಆಫ್ರಿಕಾದ ವೇಗಿ ಅನ್ರಿಚ್ ನೋಕಿಯಾ ಅವರನ್ನು 2 ಕೋಟಿ ರೂ. ಮೂಲ ಬೆಲೆಗೆ ಖರೀದಿಸಿದ ಲಕ್ನೋ

  • 16 Dec 2025 04:06 PM (IST)

    ಮಥೀಶ ಪತಿರಾನಗೆ ಜಾಕ್​ಪಾಟ್

    ಮಥೀಶ ಪತಿರಾನ ಮೂಲ ಬೆಲೆ 2 ಕೋಟಿ ರೂ.

    ಬಿಡ್ಡಿಂಗ್ ಆರಂಭಿಸಿದ ಡೆಲ್ಲಿ ಕ್ಯಾಪಿಟಲ್ಸ್.

    ಲಕ್ನೋ ಆಗಮನ.

    ದೆಹಲಿ-ಲಕ್ನೋ ನಡುವೆ ಕದನ ಆರಂಭ, 5 ಕೋಟಿ ರೂ. ದಾಟಿದ ಬಿಡ್‌.

    10 ಕೋಟಿ ರೂ.ವರೆಗೆ ಬಿಡ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್

    15 ಕೋಟಿ ರೂ.ಗಳನ್ನು ದಾಟಿದ ಎರಡೂ ತಂಡಗಳ ನಡುವಿನ ಬಿಡ್ಡಿಂಗ್

    18 ಕೋಟಿಯೊಂದಿಗೆ ಕೆಕೆಆರ್ ಸೇರಿದ ಪತಿರಾನ

  • 16 Dec 2025 03:59 PM (IST)

    ಆರ್‌ಸಿಬಿಗೆ ಜಾಕೋಬ್ ಡಫ್ಫಿ

    ನ್ಯೂಜಿಲೆಂಡ್ ವೇಗದ ಬೌಲರ್ ಜಾಕೋಬ್ ಡಫ್ಫಿ ಅವರನ್ನು ಆರ್‌ಸಿಬಿ 2 ಕೋಟಿ ಮೂಲ ಬೆಲೆಗೆ ಖರೀದಿಸಿದೆ.

  • 16 Dec 2025 03:35 PM (IST)

    ಡೆಲ್ಲಿ ಸೇರಿದ ಡಕೆಟ್

    ಇಂಗ್ಲೆಂಡ್‌ನ ಸ್ಫೋಟಕ ಆರಂಭಿಕ ಆಟಗಾರ ಬೆನ್ ಡಕೆಟ್ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಅವರನ್ನು ದೆಹಲಿ ಕ್ಯಾಪಿಟಲ್ಸ್ ₹2 ಕೋಟಿ ಮೂಲ ಬೆಲೆಗೆ ಖರೀದಿಸಿದೆ.

  • 16 Dec 2025 03:27 PM (IST)

    ಮುಂಬೈಗೆ ಮರಳಿದ ಡಿ ಕಾಕ್

    ದಕ್ಷಿಣ ಆಫ್ರಿಕಾದ ಅನುಭವಿ ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಮೂಲ ಬೆಲೆ 1 ಕೋಟಿ ರೂ,ಗೆ ಮುಂಬೈ ಇಂಡಿಯನ್ಸ್ ತಂಡಕ್ಕೆ ಮರಳಿದ್ದಾರೆ.

  • 16 Dec 2025 03:24 PM (IST)

    ಹರಾಜಿನಲ್ಲಿ ವೆಂಕಟೇಶ್ ಅಯ್ಯರ್

    ವೆಂಕಟೇಶ್ ಅಯ್ಯರ್ ಅವರ ಮೂಲ ಬೆಲೆ 2 ಕೋಟಿ.

    ಬಿಡ್ಡಿಂಗ್ ಆರಂಭಿಸಿದ ಲಕ್ನೋ

    2.40 ಕೋಟಿ ಬಿಡ್ ಮಾಡಿದ ಗುಜರಾತ್ ಟೈಟನ್ಸ್

    ಗುಜರಾತ್ ನಿರ್ಗಮನದ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಂಟ್ರಿ.

    ಕೆಕೆಆರ್ ಮತ್ತು ಆರ್​ಸಿಬಿ ನಡುವೆ ಪೈಪೋಟಿ

    7 ಕೋಟಿಗೆ ಆರ್​ಸಿಬಿ ಸೇರಿದ ಅಯ್ಯರ್

  • 16 Dec 2025 03:10 PM (IST)

    ಆಲ್‌ರೌಂಡರ್‌ಗಳ ಸೆಟ್

    ಮೂಲ ಬೆಲೆ 2 ಕೋಟಿ ರೂಗಳೊಂದಿಗೆ ಹರಾಜಿಗೆ ಬಂದಿದ್ದ ಇಂಗ್ಲೆಂಡ್ ವೇಗಿ ಗಸ್ ಅಟ್ಕಿನ್ಸನ್ ಅನ್​ಸೋಲ್ಡ್

    ರಚಿನ್ ರವೀಂದ್ರ (ಮೂಲ ಬೆಲೆ 2 ಕೋಟಿ) – ಸದ್ಯಕ್ಕೆ ಮಾರಾಟವಾಗಿಲ್ಲ.

    ಲಿಯಾಮ್ ಲಿವಿಂಗ್‌ಸ್ಟೋನ್ (ಮೂಲ ಬೆಲೆ 2 ಕೋಟಿ) – ಸದ್ಯಕ್ಕೆ ಮಾರಾಟವಾಗಿಲ್ಲ.

    ವಿಯಾನ್ ಮುಲ್ಡರ್ ಮೂಲ ಬೆಲೆ 1 ಕೋಟಿ, ಮಾರಾಟವಾಗಲಿಲ್ಲ

  • 16 Dec 2025 02:55 PM (IST)

    25.20 ಕೋಟಿಗೆ ಕೆಕೆಆರ್ ಪಾಲಾದ ಗ್ರೀನ್

    2 ಕೋಟಿ ರೂಪಾಯಿ ಮೂಲ ಬೆಲೆಯೊಂದಿಗೆ ಹರಾಜಿಗೆ ಬಂದ ಗ್ರೀನ್​ಗಾಗಿ ಮುಂಬೈ ಇಂಡಿಯನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳ ನಡುವೆ ಪೈಪೋಟಿ ಶುರುವಾಯಿತು. ಆ ಬಳಿಕ ಕೆಕೆಆರ್ ಹಾಗೂ ಸಿಎಸ್​ಕೆ ಜಿದ್ದಿಗೆ ಬಿದ್ದಿವೆ.

    ಮುಂಬೈ ಇಂಡಿಯನ್ಸ್ ಬಿಡ್ಡಿಂಗ್ ಆರಂಭಿಸಿತು.

    ಇದಾದ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಎಂಟ್ರಿಕೊಟ್ಟಿದೆ.

    ರಾಜಸ್ಥಾನ ರಾಯಲ್ಸ್ ಮತ್ತು ಕೋಲ್ಕತ್ತಾ ನಡುವೆ ಪೈಪೋಟಿ.

    ಸುಮಾರು 13.50 ಕೋಟಿ ರೂ.ಗೆ ಬಿಡ್ ನಂತರ ಹಿಂದೆ ಸರಿದ ರಾಜಸ್ಥಾನ

    ರಾಜಸ್ಥಾನ ತಂಡ ಹಿಂದೆ ಸರಿದ ತಕ್ಷಣ ಚೆನ್ನೈ ಸೂಪರ್ ಕಿಂಗ್ಸ್ ಎಂಟ್ರಿ.

    ಗ್ರೀನ್ ಮೇಲಿನ ಬಿಡ್ 19 ಕೋಟಿ ದಾಟಿದೆ.

    ಪ್ರಸ್ತುತ ಬಿಡ್ 25 ಕೋಟಿ ರೂ ದಾಟಿದೆ.

    ಅಂತಿಮವಾಗಿ 25.20 ಕೋಟಿಗೆ ಕೆಕೆಆರ್ ಪಾಲಾದ ಗ್ರೀನ್

  • 16 Dec 2025 02:52 PM (IST)

    ಕಾನ್ವೇ ಅನ್​ಸೋಲ್ಡ್

    ನಿರೀಕ್ಷೆಯಂತೆ ನ್ಯೂಜಿಲೆಂಡ್‌ನ ಆರಂಭಿಕ ಆಟಗಾರ ಡೆವೊನ್ ಕಾನ್ವೇ ಕೂಡ ಮೊದಲ ಸುತ್ತಿನಲ್ಲಿ ಮಾರಾಟವಾಗಲಿಲ್ಲ. ಅವರ ಮೂಲ ಬೆಲೆ ₹2 ಕೋಟಿ.

  • 16 Dec 2025 02:42 PM (IST)

    ಡೆಲ್ಲಿ ಸೇರಿದ ಮಿಲ್ಲರ್

    ಮೂಲ ಬೆಲೆ 2 ಕೋಟಿ ರೂಗಳಿಗೆ ಡೇವಿಡ್ ಮಿಲ್ಲರ್ ಡೆಲ್ಲಿ ತಂಡವನ್ನು ಸೇರಿಕೊಂಡಿದ್ದಾರೆ.

  • 16 Dec 2025 02:42 PM (IST)

    ಜ್ಯಾಕ್ ಫ್ರೇಸರ್ ಮೆಕ್‌ಗರ್ಕ್ ಅನ್​ಸೋಲ್ಡ್

    ಮೂಲ ಬೆಲೆ 2 ಕೋಟಿ ರೂಗಳೊಂದಿಗೆ ಹರಾಜಿಗೆ ಬಂದ ಜ್ಯಾಕ್ ಫ್ರೇಸರ್ ಮೆಕ್‌ಗರ್ಕ್ ಅನ್​ಸೋಲ್ಡ್ ಆಗಿದ್ದಾರೆ.

  • 16 Dec 2025 01:51 PM (IST)

    ಮಿನಿ ಹರಾಜನ್ನು ಎಲ್ಲಿ ವೀಕ್ಷಿಸಬಹುದು?

    ಐಪಿಎಲ್ 2026 ರ ಮಿನಿ ಹರಾಜನ್ನು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಚಾನೆಲ್‌ಗಳಲ್ಲಿ ನೇರ ಪ್ರಸಾರ ಮಾಡಲಾಗುವುದು. ಹಾಗೆಯೇ ಲೈವ್ ಸ್ಟ್ರೀಮಿಂಗ್ ಜಿಯೋ ಹಾಟ್‌ಸ್ಟಾರ್ ಅಪ್ಲಿಕೇಶನ್​ನಲ್ಲಿ ಲಭ್ಯವಿರುತ್ತದೆ.

  • 16 Dec 2025 01:33 PM (IST)

    ಮಿನಿ ಹರಾಜು ಎಷ್ಟು ಗಂಟೆಗೆ ಪ್ರಾರಂಭ?

    ಐಪಿಎಲ್ ಮಿನಿ ಹರಾಜು ಅಬುಧಾಬಿಯಲ್ಲಿ ಭಾರತೀಯ ಕಾಲಮಾನ ಮಧ್ಯಾಹ್ನ 2:30 ಕ್ಕೆ ಆರಂಭವಾಗಲಿದೆ.

  • Published On - 1:29 pm, Tue, 16 December 25